ಕೊರೊನಾ ಸದ್ದು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144- 3 ನಿರ್ಬಂಧಕಾಜ್ಞೆ ಜಾರಿ
Published
5 years agoon
By
Adminಕೊರೊನಾ ಸದ್ದು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144- 3 ನಿರ್ಬಂಧಕಾಜ್ಞೆ ಜಾರಿ
ಮಂಗಳೂರು : ಕೋವಿಡ್- 19 ಕೋರೊನಾ ವೈರಾಣು ಕಾಯಿಲೆ 2019 ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ ಸಮಾರಂಭಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆ, ಉತ್ಸವ, ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಜನಸಂದಣಿ ಸೇರುವ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆಯಿರುವ ಕಾರಣದಿಂದ ಸರ್ಕಾರದ ಆದೇಶದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಮಾರ್ಚ್ 17 ರಿಂದ ಮುಂದಿನ ಆದೇಶ ಜಾರಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಸಿ.ಆರ್.ಪಿ.ಸಿ ಸೆಕ್ಷನ್ 144(3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳಲ್ಲಿ ಕೇವಲ ದೇವಸ್ಥಾನಗಳ ಸಿಬ್ಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಲಾಗಿದೆ. ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನವನ್ನು ಹೊರೆತು ಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿದೆ ಹಾಗೂ ದೇವಸ್ಥಾನಗಳಿಗೆ ಬರುವ ಸಾರ್ವಜನಿಕರಿಗೆ ತಂಗಲು ಅವಕಾಶ ಇರುವುದಿಲ್ಲ.
ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದೆಂದು ಸೂಚಿಸಲಾಗಿದೆ, ಬೇಸಿಗೆ ಶಿಬಿರ ಸಮಾರಂಭಗಳು, ವಿಚಾರ ಸಂಕಿರಣಗಳು ಮತ್ತಿತರ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದಂತೆ ಆದೇಶಿಸಲಾಗಿದೆ, ಬೀಚ್‍ಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಮದುವೆ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಯೋಜಿಸಲು ಸೂಚಿಸಲಾಗಿದೆ. ಪಿ.ಜಿ. ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಶಿಕ್ಷಣ ಸಂಸ್ಥೆಗಳು ಕೋವಿಡ್-19 ರ ಹಿನ್ನೆಲೆಯಲ್ಲಿ ರಜೆ ಘೋಷಿಸಿದ್ದಲ್ಲಿ ತಮ್ಮ ತಮ್ಮ ಮನೆಗಳಿಗೆ ವಾಪಾಸು ಹೋಗಲು ಸಲಹೆ ನೀಡಬೇಕು. ಒಂದು ವೇಳೆ ಯಾರಾದರೂ ಪಿ.ಜಿ. ಮತ್ತು ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಬಯಸಿದ್ದಲ್ಲಿ ಅಂತಹವರಿಗೆ ಪಿಜಿ ಹಾಗೂ ವಸತಿ ನಿಲಯಗಳು ಮಾಲಿಕರು/ವ್ಯವಸ್ಥಾಪಕರು ಕರ್ನಾಟಕ ಸರಕಾರವು ನೀಡುರುವ ಸಲಹೆಗಳಂತೆ ವೈಯಕ್ತಿಕ ಸ್ವಚ್ಚತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.
ನಿಯತಕಾಲಿಕವಾಗಿ ಪಿ.ಜಿ. ವಸತಿ ನಿಲಯಗಳಲ್ಲಿ ವಾಸಿಸುವವರಿಗೆ ಅನಾನುಕೂಲವಾಗದಂತೆ ಹಾಗೂ ಯಾವುದೇ ಸೋಂಕು ಹರಡದಂತೆ ಕೋಣೆಗಳಲ್ಲಿ ಜನದಟ್ಟಣೆಯನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಪಿ.ಜಿ./ವಸತಿ ನಿಲಯಗಳ ಆವರಣಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಚತೆ ಕಾಪಾಡಲು ನೀಡಲಾದ ನಿರ್ದೇಶನಗಳನ್ನು ಅನುಸರಿಸದೇ ಕೋವಿಡ್ – 19 ಹರಡಲು ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮಗಳನ್ನು ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
You may like
LATEST NEWS
ಕ್ರಿಕೆಟಿಗ ಮನೀಶ್ ಪಾಂಡೆ ದಾಂಪತ್ಯ ಜೀವನದಲ್ಲಿ ಬಿರುಕು?
Published
12 minutes agoon
10/01/2025By
NEWS DESK3ಮಂಗಳೂರು : ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಈ ಇಬ್ಬರೂ ಪರಸ್ಪರ ಇನ್ ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಆಟಗಾರರ ಡಿವೋರ್ಸ್ ಪರ್ವ ಜಾಸ್ತಿಯಾಗಿದೆ. ಶಿಖರ್ ಧವನ್, ಯಜ್ವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಸಂಬಂಧ ಕೊನೆಗೊಂಡಿತು. ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿಯೂ ಕೇಳಿ ಬರುತ್ತಿದೆ. ಇದರ ನಡುವೆ ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಅವರ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿಯೂ ಬಿರುಕು ಮೂಡಿದ್ದು, ಇಬ್ಬರೂ ದೂರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿವೋರ್ಸ್ ಗೆ ಮುಂದಾದ್ರ ಕನ್ನಡಿಗ ಮನೀಶ್ ಪಾಂಡೆ
ಕನ್ನಡಿಗ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ವದಂತಿ ಇಷ್ಟು ವೇಗವಾಗಿ ಎಲ್ಲೆಡೆ ಹಬ್ಬಲು ಕಾರಣವೂ ಇದ್ದು, ಈ ಸ್ಟಾರ್ ಜೋಡಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಈ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಇಬ್ಬರು ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈಗ ಹಬ್ಬಿರುವ ವದಂತಿಗೆ ಈ ಸ್ಟಾರ್ ದಂಪತಿಗಳು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಅದು ನಿಜವಾಗಿರಬಹುದು… ಡಿವೋರ್ಸ್ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಚಹಲ್ !
ಪಾಂಡೆ-ಆಶ್ರಿತಾ ದಾಂಪತ್ಯ ಜೀವನ:
ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕನ್ನಡಿಗರಾಗಿರುವ ಈ ಜೋಡಿ ಇಬ್ಬರೂ ಕರ್ನಾಟಕದವರಾಗಿದ್ದಾರೆ. ಪಾಂಡೆ ಪತ್ನಿ ಅವರು ಮಂಗಳೂರಿನವರಾಗಿದ್ದು, ಆಶ್ರಿತಾ ತಮಿಳು ಮತ್ತು ತುಳು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.
ಇನ್ನು, ಕಳೆದ ಬಾರಿ ಐಪಿಎಲ್ 2024ರ ವೇಳೆ ಆಶ್ರಿತಾ ಅವರು ಪಾಂಡೆ ಬೆಂಬಲಿಸಲು ಒಮ್ಮೆಯೂ ಮೈದಾನಕ್ಕೆ ಬಂದಿರಲಿಲ್ಲ. ಅಲ್ಲದೇ ಮನೀಶ್ ಪಾಂಡೆ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಅಲ್ಲದೇ ತಂಡವು ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ ಆಶ್ರಿತಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ.
ಮನೀಶ್ ವೃತ್ತಿಜೀವನ
ಇನ್ನು ಮನೀಶ್ ಪಾಂಡೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2015ರಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮನೀಶ್ ಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಅಲ್ಪಾವಧಿಯಲ್ಲೇ ಕೊನೆಗೊಂಡಿತು. ಭಾರತದ ಪರ ಇದುವರೆಗೆ 29 ಏಕದಿನ ಪಂದ್ಯಗಳನ್ನಾಡಿರುವ ಮನೀಶ್ ಇದರಲ್ಲಿ 566 ರನ್ ಕಲೆಹಾಕಿದ್ದರೆ, 39 ಟಿ20 ಪಂದ್ಯಗಳಲ್ಲಿ 709 ರನ್ ಗಳಿಸಿದ್ದಾರೆ. ದೇಶೀ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಮನೀಶ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಗೆ ತಂಡದಿಂದ ಕೈಬಿಡಲಾಗಿತ್ತು.
LATEST NEWS
ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಶ*ವ ಪತ್ತೆ!
Published
36 minutes agoon
10/01/2025By
NEWS DESK4ಮಂಗಳೂರು/ಮೀರತ್ : ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶ*ವವಾಗಿ ಪತ್ತೆಯಾದ ಘಟನೆ ಉತ್ತರಪ್ರದೇಶದ ಮೀರತ್ ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.
ಮೊಯಿನ್, ಅವರ ಪತ್ನಿ ಅಸ್ಮಾ, ಮೂವರು ಹೆಣ್ಣು ಮಕ್ಕಳಾದ ಅಫ್ಸಾ(8), ಅಜೀಜಾ(4), ಆದಿಬಾ(1) ಮೃ*ತಪಟ್ಟವರು. ಮೃ*ತದೇಹಗಳನ್ನು ಪೊಲೀಸರು ಮ*ರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃ*ತ ಮೊಯಿನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಆತ ಹಾಗೂ ಆತನ ಆಸ್ಮಾ ಬುಧವಾರ ನಾಪತ್ತೆಯಾಗಿದ್ದರು. ಅಲ್ಲದೇ, ಮನೆಯ ಹೊರಗಿನಿಂದ ಬೀಗ ಜಡಿಯಲಾಗಿತ್ತು. ಮನೆಯ ಮೇಲ್ಛಾವಣಿಯ ಮೂಲಕ ಪೊಲೀಸರು ಒಳಗೆ ಪ್ರವೇಶಿಸಿದಾಗ ಶ*ವಗಳು ಪತ್ತೆಯಾಗಿವೆ.
ಮೂರು ಮಕ್ಕಳ ಶ*ವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಮೊಹಿನ್ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಲಾಗಿತ್ತು ಎಂದು ತಿಳಿದುಬಂದಿದೆ. ವಿಧಿ ವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಶಾಲೆಗಳಿಗೆ ಬಾಂ*ಬ್ ಬೆದರಿಕೆ; 12ನೇ ತರಗತಿ ವಿದ್ಯಾರ್ಥಿಯ ಬಂಧನ
ಹಳೆಯ ದ್ವೇಷದ ಹಿನ್ನೆಲೆ ಕೊ*ಲೆ ನಡೆದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುಟುಂಬವು ಇತ್ತೀಚೆಗಷ್ಟೇ ಆ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿಯಲಿದೆ.
LATEST NEWS
ವಿವಾಹವಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ; ಬ್ರೋಕರ್‌ಗಳೂ ನಾಪತ್ತೆ
Published
47 minutes agoon
10/01/2025ಮಂಗಳೂರು/ಮುಧೋಳ: ಮದುವೆ ವಯಸ್ಸು ಮೀರಿ ಹೆಣ್ಣು ಸಿಗದ ಕೊರಗಿನಲ್ಲಿದ್ದ ಯುವಕನಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿ ಪತ್ತಿ ಹಾಗೂ ಮದುವೆ ಮಾಡಿಸಿದ್ದ ಬ್ರೋಕರ್‌ಗಳು ನಾಪತ್ತೆಯಾದ ಘಟನೆ ಮುಧೋಳ ಸಮೀಪದ ಬಿದರಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನೊಬ್ಬನಿಂದ 4ಲಕ್ಷ ರೂ. ಪಡೆದ ವಂಚಕರ ಗುಂಪು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ವಿವಾಹಿತ ಮಹಿಳೆ ಹಾಗೂ ಹಣ ಪಡೆದ ಬ್ರೋಕರ್ ಗಳು ಪರಾರಿಯಾಗಿದ್ದು, ಮೋಸಹೋಗಿರುವ ಯುವಕ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ದೊರೆಕಿಸಿಕೊಡುವಂತೆ ಅಂಗಲಾಚುತ್ತಿದ್ದಾನೆ.
ಬಿದರಿ ಗ್ರಾಮದ ಸೋಮಶೇಖರ ಗುಲಗಾಲಜಂಬಗಿ ಎಂಬಾತ ಕಳೆದ ವರ್ಷ ತನ್ನ ಮದುವೆ ಮಾಡಿಸುವಂತೆ ಬ್ರೋಕರ್ ಗಳಿಗೆ ನಾಲ್ಕು ಲಕ್ಷ ರೂ. ನೀಡಿದ್ದ ಹಣ ಪಡೆದ ಬ್ರೋಕರ್ ಗಳು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಸೋಮಶೇಖರನ ಮದುವೆಯನ್ನು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳೆ ಸೋಮಶೇಖರನನ್ನು ಬಿಟ್ಟು ಹೊರಟುಹೋಗಿದ್ದಾಳೆ. ಈ ಬಗ್ಗೆ ವಿಚಾರಿಸಲು ಸೋಮಶೇಖರ ಬ್ರೋಕರ್ ಗಳನ್ನು ಸಂಪರ್ಕಿಸಲು ಮುಂದಾದಾಗ ಅವರು ನಾಪತ್ತೆಯಾಗಿದ್ದಾರೆ. ಪತ್ನಿ ಹಾಗೂ ಹಣ ಎರಡನ್ನೂ ಕಳೆದುಕೊಂಡು ಕಂಗಾಲಾಗಿರುವ ಸೋಮಶೇಖರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮಧುಮಗಳ ಮೂರನೇ ಮದುವೆ :
ಸೋಮಶೇಖರನನ್ನು ವಿವಾಹವಾಗಿರುವ ಮಹಿಳೆ ಶಿವಮೊಗ್ಗ ಮೂಲದವಳಿದ್ದು, ಈ ಹಿಂದಯೇ ಆಕೆಗೆ ಎರಡು ಮದುವೆಯಾಗಿ ಮಕ್ಕಳಿರುವುದಾಗಿ ತಿಳಿದುಬಂದಿದೆ. ಹಣ ಹಾಗೂ ಚಿನ್ನಾಭರಣದ ಆಸೆಗಾಗಿ ಯುವಕನ ಜೀವನದಲ್ಲಿ ಚೆಲ್ಲಾಟವಾಡಿರುವ ಮಹಿಳೆಗಾಗಿ ಬಲೆ ಬೀಸಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ. ಘಟನೆ ನಡೆದು ಒಂದುವರ್ಷ ಕಳೆದರೂ ಆರೋಪಿತರು ಹಣ ಮರಳಿಸದಿದ್ದಾಗ ಸೋಮಶೇಖರ ಅವರು ಮದುವೆಯಾಗಿರುವ ಮಂಜುಳಾ ಎ., ಸತ್ಯಪ್ಪ ಶಿರೂರ, ಸಂಜು ಮಾಳಿ, ರವಿ ಅರಭಾವಿ, ಲಕ್ಷ್ಮಿ ಗೋಲಭಾವಿ, ನಾಗವ್ವ ಆಚಾರಿ, ಸಿದ್ದಪ್ಪ ಸೂರ್ಯವಂಶಿ ಅವರ ವಿರುದ್ದ ದೂರು ದಾಖಲಿಸಿದ್ದಾರೆ.
ಸಾಲ ಮಾಡಿ ನೀಡಿದ ಹಣ :
ಮದುವೆಯಾಗಿ ಹೊಸ ಜೀವನ ರೂಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸಾಲಸೋಲ ಮಾಡಿ ಹಣ ನೀಡಿರುವೆ ಇದೀಗ ವಂಚನೆಗೊಳಗಾಗಿ ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಯುವಕನ ಪೋಷಕರು ತಮ್ಮ ಅಸಾಯಕತೆ ಹೊರಹಾಕಿದರು ಎಂದು ಯುವಕ ಸಂತಾಪ ವ್ಯಕ್ತಪಡಿಸಿದ್ದಾನೆ. ಹೇಗಾದರೂ ಮಾಡಿ ಮದುವೆಯಾಗಿ ಸುಂದರ ಜೀವನದ ಕನಸ್ಸು ಕಂಡಿದ್ದ ಯುವಕ ತನ್ನ ಸಂಬಂಧಿಕರನ್ನು ನಂಬಿ ತನಗರಿವಿಲ್ಲದಂತೆ ಟ್ರ್ಯಾಪ್ ಬಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆರೋಪಿತರಲ್ಲಿ ಸಂಜು ಮಾಳಿ ಎಂಬಾತ ಸೋಮಶೇಖರನ ದೂರದ ಸಂಬಂಧಿ. ಸಂಬಂಧಿಕರನ್ನು ನಂಬಿ ಹಣ ನೀಡಿರುವ ಯುವಕನಿಗೆ ಇತ್ತ ಮಡದಿಯೂ ಇಲ್ಲ ಅತ್ತ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಸಿಗದೆ ವಯಸ್ಸಾದವರನ್ನು ಗುರಿಯಾಗಿಸಿಕೊಂಡು ವಂಚಿಸುವ ಗುಂಪಿನಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಜೊಲ್ಲೆಯಲ್ಲಿಯೇ ಮೊದಲ ಇದು ಮೊದಲ ಪ್ರಕರಣವಾಗಿದ್ದು, ಇಂತಹ ವಂಚನೆ ಗುಂಪಿನಿಂದ ಇದೇ ರೀತಿ ಪಕ್ಕದ ಜಿಲ್ಲೆಗಳಲ್ಲೂ ಕೃತ್ಯಗಳು ನಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.