Wednesday, October 5, 2022

ಕೊರೊನಾ Update : ದಕ್ಷಿಣ ಕನ್ನಡ 173, ಉಡುಪಿ 217 ಪಾಸಿಟಿವ್‌..!

ಕೊರೊನಾ Update : ದಕ್ಷಿಣ ಕನ್ನಡ 173, ಉಡುಪಿ 217 ಪಾಸಿಟಿವ್‌..!

ಕರ್ನಾಟಕದಲ್ಲಿ ಕೋವಿಡ್​​-19: ಇಂದು 6805 ಕೇಸ್​, 1.58 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 11 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ದ್ವಿಶತಕ ದಾಟಿದೆ.

ಒಟ್ಟು 201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ಜಿಲ್ಲೆಯಲ್ಲಿ 173 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3398 ಆಗಿದೆ.

ಇದುವರೆಗೆ ಒಟ್ಟು 6715 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಕೊರೊನಾಗೆ ಚಿಕಿತ್ಸೆ ಪಡೆದು 107 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 3116 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ದಾಖಲಾದ ಪಾಸಿಟಿವ್‌ ಪ್ರಕರಣದಲ್ಲಿ 83 ಐಎಲ್‌ಐ, 13 ಸಾರಿ, 23 ಪ್ರಾಥಮಿಕ ಸಂಪರ್ಕದ, 50 ತನಿಖಾ ಹಂತದಲ್ಲಿರುವ ಹಾಗೂ 4 ಅಂತಾರಜ್ಯ ಪ್ರಯಾಣದ ಸೋಂಕಿತರು ಇದ್ದಾರೆ.

ಅಲ್ಲದೆ ಇಂದು ಪತ್ತೆಯಾದ 173 ಸೋಂಕಿತರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲೇ ಅತೀ ಹೆಚ್ಚು 119 ಮಂದಿ ಸೋಂಕಿತರು ಇದ್ದರೆ, ಮೂಡುಬಿದಿರೆಯಲ್ಲಿ 4, ಮೂಲ್ಕಿಯಲ್ಲಿ 1, ಬಂಟ್ವಾಳದಲ್ಲಿ 21, ಬೆಳ್ತಂಗಡಿಯಲ್ಲಿ 4, ಪುತ್ತೂರಿನಲ್ಲಿ 13, ಕಡಬದಲ್ಲಿ 2, ಸುಳ್ಯದಲ್ಲಿ 5 ಹಾಗೂ ಇತರ ಜಿಲ್ಲೆಗಳಲ್ಲಿ ನಾಲ್ಕು ಮಂದಿ ಕೊರೊನಾ ರೋಗಿಗಳು ಪತ್ತೆಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದೂ ಕೊರೊನಾ ಆಘಾತಕಾರಿ ವರದಿ ನೀಡಿದೆ. ಉಡುಪಿಯಲ್ಲಿ ಇಂದು 217 ಕೊರೋನ ಪಾಸಿಟಿವ್ ವರದಿಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 5353ಕ್ಕೆ ಏರಿಕೆಯಾಗಿದೆ.

ಅಲ್ಲದೆ ಕೋವಿಡ್ 19 ನಿಂದ ಇಂದು 6 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 50 ಆಗಿದೆ.

ಇದಲ್ಲದೆ ಇಂದು ಜಿಲ್ಲೆಯಲ್ಲಿ 85 ಮಂದಿ‌ ಡಿಸ್ಜಾರ್ಜ್ ಆಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ‌3157 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸದ್ಯ ಜಿಲ್ಲೆಯಲ್ಲಿ 2153 ಸಕ್ರೀಯ ಪ್ರಕರಣಗಳು ದಾಖಲಾಗಿವೆ.

ರಾಜ್ಯ ವರದಿ :

ಕರ್ನಾಟಕದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 6805 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿದ್ದರೆ 93 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 15 ಮಂದಿ ಬಲಿಯಾಗಿದ್ದರೆ ಅತೀಹೆಚ್ಚು ಅಂದರೆ 2544 ಹೊಸ ಪ್ರಕರಣಗಳು ವರದಿಯಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 56,282 ಕಂಡು ಬಂದಿವೆ. ದೇಶದ ಕೊರೋನಾ ಪೀಡಿತರ ಸಂಖ್ಯೆ 19,64,537ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...