Connect with us

LATEST NEWS

ಉಡುಪಿ ದತ್ತು ಸ್ವೀಕಾರ ಕೇಂದ್ರದ ಪುಟಾಣಿಗಳಲ್ಲೂ ಕೊರೊನಾ ಪಾಸಿಟಿವ್ ..!

Published

on

ಉಡುಪಿ: ಆಯಾ ಸೇರಿದಂತೆ ಉಡುಪಿಯ ದತ್ತು ಸ್ವೀಕಾರ ಕೇಂದ್ರದ 13ಪುಟಾಣಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಉಡುಪಿ ಸಂತೆಕಟ್ಟಯಲ್ಲಿರುವ ಮಮತೆಯ ತೊಟ್ಟಿಲು ಖ್ಯಾತಿಯ ದತ್ತು ಸ್ವೀಕಾರ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಅನಾಥ ವಿಕಲಚೇತನ, ವಿಶೇಷ ಸಾಮರ್ಥ್ಯದ ಮಕ್ಕಳಿದ್ದು, ಕೇಂದ್ರದಲ್ಲಿನ ಎಲ್ಲ 36ಮಂದಿ ಮಕ್ಕಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಈ ವೇಳೆ 13 ಪುಟಾಣಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.
ಈ ಕೇಂದ್ರದಲ್ಲಿ ಒಂದು ವರ್ಷದಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ.  ಕೋವಿಡ್ ನೆಗೆಟಿವ್ ವರದಿ ಬಂದ 23 ಮಂದಿ ಮಕ್ಕಳನ್ನು ಹತ್ತಿರದ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ಗೆ ಶಿಫ್ಟ್ ಮಾಸಲಾಗಿದೆ.ಪಾಸಿಟಿವ್ ಇರುವ ಮಕ್ಕಳಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ನಾಳೆ ದ್ವಾರಕೀಶ್ ಅಂತ್ಯಕ್ರಿಯೆ.. ಸ್ಥಳ.. ಸಮಯ.. ಇಲ್ಲಿದೆ ಮಾಹಿತಿ

Published

on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ​​ಇಂದು ಕತ್ತಲು ಆವರಿಸಿದೆ. ಹಿರಿಯ ನಟ ದ್ವಾರಕೀಶ್ ಇಂದು ಸಾವನ್ನಪ್ಪಿದ್ದಾರೆ. ಅನೇಕ ನಟರು ಈ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.

81ನೇ ವಯಸ್ಸಿನಲ್ಲಿ ನಟ ದ್ವಾರಕೀಶ್​ ಸಾವನ್ನಪ್ಪಿದ್ದಾರೆ. ಪತ್ನಿ ಅಂಬುಜ ಸಾವನ್ನಪ್ಪಿದ ದಿನ, ತಿಂಗಳಂದೇ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ಮಗನ ಬಳಿ ಕೊಂಚ ಹೊತ್ತು ಮಗಲುತ್ತೇನೆಂದು ಹೇಳಿದವರು ಇಹಲೋಕ ತ್ಯಜಿಸಿದ್ದಾರೆ.

ದ್ವಾರಕೀಶ್​ ಪಾರ್ಥಿವ ಶರೀರ ಕಾಣಲು ಅನೇಕ ಮಂದಿ ಅವರ ಮನೆಯತ್ತ ತೆರಳುತ್ತಿದ್ದಾರೆ. ಹಿರಿಯ ನಟರು ಕೂಡ ದ್ವಾರಕೀಶ್​​ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ನಟನನ್ನು ಕಾಣಲು ಸಾರ್ವಜನಿಕರಿಗೂ ಅವಕಾಶ ಮಾಡಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ದರ್ಶನ ಪಡೆಯಬಹುದಾಗಿದೆ.

ನಾಳೆ ಬೆಳಗ್ಗೆ 6 ಕ್ಕೆ ಮನೆಯಿಂದ ಹೊರಟು 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತೆ. 11 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ಚಾಮರಾಜಪೇಟೆಯ ಟಿಆರ್ ಮೀಲ್ ನತ್ತ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆ ನೆರವೇರಲಿದೆ. 1 ಗಂಟೆಯ ನಂತರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗುತ್ತದೆ.

Continue Reading

LATEST NEWS

ದಿನದಲ್ಲಿಎರಡು ಬಾರಿ ಕಣ್ಮರೆಯಾಗುತ್ತೆ ಈ ದೇವಾಲಯ..! ಇಲ್ಲಿಗೆ ಬಂದ್ರೆ ಪಾಪ ವಿಮೋಚಣೆ..!!

Published

on

ಗುಜರಾತ್: ಈ ದೇವಸ್ಥಾನ ದಿನದಲ್ಲಿ ಎರಡು ಬಾರಿ ಕಣ್ಮರೆಯಾಗುತ್ತೆ. ಭಕ್ತಾಧಿಗಳು ದೇವರ ದರ್ಶನಕ್ಕಾಗಿ ಕೆಲವೊಮ್ಮೆ ಗಂಟೆಗಟ್ಟಲು ಕಾದು ಕುಳಿತಿರ್ತಾರೆ. ಹಾಗಾದ್ರೆ ಈ ದೇವಸ್ಥಾನ ಯಾವುದು? ಏನಿದರ ವಿಶೇಷ.

ಗುಜರಾತ್‌ನ  ಜಂಬೂಸರ್‌ನ ಕವಿ ಕಾಂಬೋಯಿ ಗ್ರಾಮದಲ್ಲಿರುವ ಶ್ರೀ ಸ್ತಂಭೇಶ್ವರ ಮಹಾದೇವ ದೇವಾಲಯ ದಿನಕ್ಕೆ ಎರಡು ಬಾರಿ ಮಾತ್ರ ಗೋಚರಿಸುತ್ತದೆ. ಇದು ಮಹಾದೇವನಿಗೆ ಅರ್ಪಿತವಾದ ದೇವಾಲಯವಾಗಿದ್ದು, ಇಲ್ಲಿ ಶಿವನ ಮೂರ್ತಿಯ ಜೊತೆ ಶಿವಲಿಂಗವನ್ನು ಸ್ಥಾಪನೆ ಮಾಡಲಾಗಿದೆ. ಸ್ತಂಭಗಳ ಮೇಲೆ ಶಿವನಿರುವುದರಿಂದ ಈ ದೇವಾಲಯವನ್ನು ಸ್ತಂಭೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಸಮುದ್ರದ ಉಬ್ಬರ ಹೆಚ್ಚಾದಾಗ ದೇವಾಲಯ ನೀರಿನಲ್ಲಿ ಮುಳುಗಿ ಕಣ್ಮರೆಯಾಗುತ್ತದೆ. ಇದನ್ನು ಕಣ್ಮರೆಯಾಗುವ ಶಿವನ ದೇವಾಲಯ ಅಂತಾನೂ ಕರೀತಾರೆ.

ದೇವಾಲಯಕ್ಕೆ ಸಮುದ್ರದಿಂದ ಅಭಿಷೇಕ

ಈ ದೇವಾಲಯವು ಸುಮಾರು 150 ವರ್ಷಗಳಷ್ಟು ಹಳೆಯದ್ದಾಗಿದ್ದು ಈ ದೇವಾಲಯವು ದಿನಕ್ಕೆ ಎರಡು ಬಾರಿ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾದಾಗಲೆಲ್ಲಾ ಈ ದೇವಾಲಯವು ಗೋಚರಿಸುವುದಿಲ್ಲ. ಅದೇ ಸಮಯದಲ್ಲಿ, ನೀರಿನ ಮಟ್ಟ ಕಡಿಮೆಯಾದಾಗ, ದೇವಾಲಯವು ಗೋಚರಿಸುತ್ತದೆ ಎಂದು ಹೇಳಲಾಗಿದೆ. ಈ ವೇಳೆ ಶಿವನಿಗೆ ಅಭಿಷೇಕವನ್ನು ಸ್ವತಃ ಸಮುದ್ರವೇ ಮಾಡುತ್ತದೆ. ಈ ದೇವಾಲಯವು ಅರಬ್ಬಿ ಸಮುದ್ರ ಹಾಗೂ ಕ್ಯಾಂಬೆ ಕೊಲ್ಲಿಯ ನಡುವೆ ಇದೆ. ತೀರದಿಂದ ಕೆಲವೇ ಮೀಟರ್ ದೂರದಲ್ಲಿದೆ. ದೇವಾಲಯದ ವಾಸ್ತುಶೈಲಿಯಿಂದಲ್ಲದೇ ಇದ್ದರೂ, ಅದರ ವಿಶಿಷ್ಟ ಸ್ಥಳದಿಂದಾಗಿ ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ದೇವಾಲಯದ ಹಿನ್ನೆಲೆ ಏನು?

ದೇವಾಲಯದ ಸುತ್ತಲಿನ ದಂತಕಥೆಗಳು ತಾರಕಾಸುರನ ಕಥೆಯನ್ನು ವಿವರಿಸುತ್ತದೆ.  ಶಿವನ ಭಕ್ತನಾಗಿದ್ದ ತಾರಕಾಸುರನ ರಾಕ್ಷಸ ಸ್ವಭಾವದ ಹೊರತಾಗಿಯೂ, ಅವನ ಅಚಲವಾದ ಭಕ್ತಿಯನ್ನು ಭಗವಾನ್ ಶಿವ ಮೆಚ್ಚುತ್ತಾರೆ. ಶಿವ ದೇವರಲ್ಲಿ ರಾಕ್ಷಸ ವರವನ್ನು ಕೇಳಿದಾಗ, ಶಿವನು ತನ್ನ ಆರು ದಿನದ ಮಗನಿಂದ ಮಾತ್ರ ನಿನ್ನ ಜೀವವನ್ನು ಕೊನೆಗೊಳಿಸಲು ಸಾದ್ಯ ಎಂದು ವರ ನೀಡ್ತಾರೆ. ಭಗವಾನ್ ಶಿವನ ಮೂರನೇ ಕಣ್ಣಿನ ಜ್ವಾಲೆಯಿಂದ ಭಗವಾನ್ ಕಾರ್ತಿಕೇಯನ ಸೃಷ್ಟಿಯಾಗುತ್ತದೆ. ಕಾರ್ತಿಕೇಯ ತಾರಕಾಸುರನ ವಧಿಸುವ ವೇಳೆ ರಾಕ್ಷಸನ ಭಕ್ತಿಗೆ ಪ್ರೇರೇಪಿತನಾಗುತ್ತಾನಂತೆ. ಹಾಗಾಗಿ ಶಿವನ ಅಪ್ಪಟ ಭಕ್ತನನ್ನು ವಧಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಶಿವನ ಧ್ಯಾನವನ್ನು ಮಾಡ್ತಾರೆ. ಬಳಿಕ ಇದೇ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪನೆ ಮಾಡ್ತಾರೆ ಎಂಬ ಪುರಾಣ ಕಥೆಯಿದೆ.

 

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ಸ್ತಂಭೇಶ್ವರ ದೇವಸ್ಥಾನದ ವಿಶೇಷತೆಯೇನು?

ಶಿವನ ಅನುಮತಿಯಿದ್ದರೆ ಮಾತ್ರ ಈ ದೇವಲಯವನ್ನು ನೋಡಲು ಸಾಧ್ಯ. ಇಲ್ಲಿಗೆ ಬಂದವರು ತಮ್ಮ ಪಾಪ ವಿಮೋಚನೆಯನ್ನು ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿಗೆ ಬಂದರೆ ತಮಗೆ ಮೋಕ್ಷ ಕೂಡಾ ಲಭಿಸುತ್ತೆ ಎಂದು ಹೇಳುತ್ತಾರೆ. ಆದರೆ ಈ ದೇವಾಲಯಕ್ಕೆ ಪ್ರವಾಸಿಗರು ಮಧ್ಯಾಹ್ನ 2ರಿಂದ 3 ಗಂಟೆವಯರೆಗೆ ಮಾತ್ರ ಭೇಟಿ ಕೊಡಬಹುದಾಗಿದೆ. ಉಳಿದ ಸಮಯ ಸಮುದ್ರದ ಉಬ್ಬರ ಹೆಚ್ಚಿರುವುದರಿಂದ ಪ್ರವಾಸಿಗರಿಗೆ ದೇವಾಲಯದ ಒಳಗೆ ಪ್ರವೇಶ ನೀಡಲಾಗುವುದಿಲ್ಲ.

 

Continue Reading

LATEST NEWS

ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ನಮ್ರತಾ ಗೌಡ ಹುಟ್ಟು ಹಬ್ಬ…!

Published

on

ಬೆಂಗಳೂರು: ನಾಗಿಣಿ, ಬಿಗ್ ಬಾಸ್ ಕನ್ನಡ 10 ಶೋಗಳ ಮೂಲಕ ಮನೆ ಮಾತಾದ ನಟಿ ನಮ್ರತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ನಟಿ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದಾರೆ. ನಮ್ರತಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನಲ್ಲಿ ಬಿಗ್ ಬಾಸ್ ಮನೆ ಮಂದಿ ಭಾಗಿಯಾಗುವ ಮೂಲಕ ಸಂಭ್ರಮ ಡಬಲ್ ಮಾಡಿದ್ದಾರೆ.

ಈ ಬಾರಿ ಅವರ ಜೊತೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿಗಳು ಇದ್ದಿದ್ದು ವಿಶೇಷವಾಗಿತ್ತು. ನಮ್ರತಾ ಅವರ ಮನೆಯನ್ನು ಬಿಳಿ, ಬ್ಲ್ಯಾಕ್ ಥೀಮ್‌ನಲ್ಲಿ ಡೆಕೋರೇಟ್ ಮಾಡಲಾಗಿತ್ತು. ಎರಡು ಬಾರಿ ಡ್ರೆಸ್‌ ಚೇಂಜ್ ಮಾಡಿಕೊಂಡಿದ್ದ ನಮ್ರತಾ ಗೌಡ ಅವರು ಸ್ಪೆಷಲ್ ಗೆಟಪ್‌ನಲ್ಲಿ ಮಿಂಚಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಅಕ್ಷತಾ ವಿನಯ್, ಮೈಕಲ್ ಅಜಯ್, ಇಶಾನಿ, ತನಿಷಾ ಕುಪ್ಪಂಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಕಿಶನ್ ಬಿಳಗಲಿ, ಕವಿತಾ ಗೌಡ, ಅನುಪಮಾ ಗೌಡ, ನೇಹಾ ಗೌಡ ಭಾಗಿಯಾಗಿ ನಮ್ರತಾಗೆ ಶುಭಕೋರಿದ್ದಾರೆ.
ಅಂದಹಾಗೆ, ನಮ್ರತಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ನಮ್ರತಾ ಗೌಡ ಅವರು ‘ಬಿಗ್ ಬಾಸ್’ ಶೋ ನಂತರದಲ್ಲಿ ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಅವರು ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.

Continue Reading

LATEST NEWS

Trending