Connect with us

LATEST NEWS

ಭಾರತದಲ್ಲಿ ಪ್ರಾಣಿಗಳಲ್ಲೂ ಕೊರೊನಾ ಸೋಂಕು : 8 ಸಿಂಹಗಳಿಗೆ ಕರೊನಾ ಪಾಸಿಟಿವ್ ಧೃಡ..!

Published

on

ಹೈದರಾಬಾದ್​: ಮಹಾಮಾರಿ ಕೊರೊನಾ ಸೋಂಕಿಗೆ ಜಗತ್ತು ತಲ್ಲಣಗೊಂಡಿದ್ದು, ಇಡೀ ಮನುಕುಲ ತತ್ತರಿಸಿದೆ. ಲಕ್ಷಾಂತರ ಮಂದಿ ಬಲಿಯಾಗಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಭಾರತದಲ್ಲೂ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. ಇಂತಹ ಸಂಕಷ್ಟ ಕಾಲದಲ್ಲಿ ದೇಶದ ಜನತೆಗೆ ಆಘಾತಕಾರಿ ಸುದ್ದಿ ಬಂದಿದೆ. ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಕರೊನಾ ಸೋಂಕು ಬರುತ್ತೆ! ಹೌದು, ಹೈದರಾಬಾದ್​ನ ನೆಹರು ಜಿಯೋ ಲಜಿಕಲ್​ ಪಾರ್ಕ್​ನ 8 ಏಷ್ಯನ್​ ಸಿಂಹಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇದರಲ್ಲಿ ನಾಲ್ಕು ಹೆಣ್ಣು, ನಾಲ್ಕು ಗಂಡು ಸಿಂಹಳಿವೆ. ಪ್ರಾಣಿಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ಭಾರತದಲ್ಲಿ ಇದೇ ಮೊದಲು.

ಕಳೆದ ವಾರ ಸಿಂಹಗಳು ಜ್ವರ, ಒಣಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದವು. ಹಾಗಾಗಿ ಇವುಗಳ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ Centre for Cellular and Molecular Biology (CCMB) ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದ್ದು,  ಪಾಸಿಟಿವ್ ವರದಿ​ ಬಂದಿದೆ.

ಸಿಂಹಗಳನ್ನು ಐಸೋಲೇಷನ್​ಗೆ ಒಳಪಡಿಸಲಾಗಿದ್ದು, ಇತರ ಪ್ರಾಣಿಗಳ ಸಂಪರ್ಕಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಮೃಗಾಲಯಕ್ಕೆ ಬಾಗಿಲು ಹಾಕಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಮೃಗಾಲಯದ ನಿರ್ವಹಣಾಧಿಕಾರಿ ಭದ್ರಾದೇವಿ ತಿಳಿಸಿದ್ದಾರೆ.

ಸಿಂಹಗಳ ಆರೋಗ್ಯ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸಿಂಹಗಳು ಸ್ಪಂದಿಸುತ್ತಿದ್ದು, ಚೇತರಿಕೆ ಕಂಡು ಬರುತ್ತಿದೆ.

ನಿಯಮಿತವಾಗಿ ಆಹಾರ ಸೇವಿಸುತ್ತಿವೆ.ಮೃಗಾಲಯ ಸಿಬ್ಬಂದಿ ಎಚ್ಚರಿಕೆಯಿಂದ ಕಾಳಜಿ ಮಾಡುತ್ತಿದ್ದಾರೆ ಎಂದು ಸಿಸಿಎಂಬಿ ನಿರ್ದೇಶಕರು ತಿಳಿಸಿದ್ದಾರೆ.

2020ರ ಏಪ್ರಿಲ್​ನಲ್ಲಿ ನ್ಯೂ ಯಾರ್ಕ್​​ ನಗರದ ಬ್ರಾಂಕ್ಸ್​ ಮೃಗಾಲಯದಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿಗೆ  ಸೋಂಕು ತಗುಲಿದ್ದು ದೃಢಪಟ್ಟಿತ್ತು.

ಇದೀಗ ಭಾರತದಲ್ಲೂ ಕಾಡು ಪ್ರಾಣಿಗಳಲ್ಲಿ ಕೊರೊನಾ ಸೋಂಕು ಹರಡಿದರೆ ಇಡೀ ಜೀವ ಸಂಕುಲಕ್ಕೆ  ಆಪತ್ತು ತಪ್ಪಿದ್ದಲ್ಲ. ಪ್ರಾಣಿಗಳಿಗೆ ಕೊರೊನಾ ಪರೀಕ್ಷೆ ಮಾಡಲು ದೇಶದಲ್ಲಿ 4 ಕೇಂದ್ರಗಳಿವೆ. ಅದರಲ್ಲಿ ಸಿಸಿಎಂಬಿ ಕೂಡ ಒಂದು.

LATEST NEWS

ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

Published

on

ತಮಿಳುನಾಡು: ತಮಿಳುನಾಡಿನಲ್ಲಿರುವ ದೇವಸ್ಥಾನದಲ್ಲಿ ಒಂದು ಲಿಂಬೆ ಹಣ್ಣಿಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇದ್ದು, ಲಿಂಬೆಹಣ್ಣಿಗಾಗಿ ಜನ ಮುಗಿ ಬೀಳುತ್ತಿದ್ದಾರೆ.  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ 10 ರೂಪಾಯಿಗೆ ಎರಡು ಮೂರು ನಿಂಬೆ ಹಣ್ಣು ಖರೀದಿಸಬಹುದು. ಆದ್ರೆ, ಇಲ್ಲಿನ ಲಿಂಬೆ ಹಣ್ಣು ಮಾತ್ರ ವಿಶೇಷವಾಗಿದೆ. ಹಾಗಾಗಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ.

ಈ ಲಿಂಬೆಹಣ್ಣಿನಲ್ಲೇನಿದೆ?

ಮುರುಗನ್ ದೇವಸ್ಥಾನದಲ್ಲಿ ಪತ್ರೀ ವರ್ಷ ಅದ್ಧೂರಿಯಾಗಿ ಒಂಭತ್ತು ದಿನಗಳ ಕಾಲ ಉತಿರಂ ಹಬ್ಬವನ್ನು ಆಚರಿಸಲಾಗುತ್ತದೆ. ಒಂಭತ್ತು ದಿನಗಳ ದೇವರ ಪೂಜಾ ಸಮಯದಲ್ಲಿ ಒಂದೊಂದು ದಿನ ದೇವರ ತ್ರಿಶೂಲದ ಮೇಲೆ ಲಿಂಬೆ ಹಣ್ಣುಗಳನ್ನು ಇಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಾರೆ.

ಈ ಲಿಂಬೆಹಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಸಾಕಷ್ಟು ವರ್ಷಗಳಿಂದ ಭಕ್ತರು ನಂಬಿಕೊಂಡು ಬಂದಿದ್ದಾರೆ. ಸಂತಾನದೋಷದಿಂದ ಬಳಲುತ್ತಿರುವ ದಂಪತಿಗಳಿಗೆ ಈ ಲಿಂಬೆಹಣ್ಣು ಸಿಕ್ಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಲಿಂಬೆ ಹಣ್ಣನ್ನು ಪಡೆದವರಿಗೆ ಯಶಸ್ಸು ಹೆಗಲೇರಿ ಬರುತ್ತದೆ ಎಂಬ ಪ್ರತೀತಿ ಇದೆ.

Continue Reading

LATEST NEWS

ತ್ರಿಬಲ್ ಮರ್ಡ*ರ್ ಪ್ರಕರಣ: ಏಳು ದಿನಗಳ ಬಳಿಕ ಮನೆಗಳಿಗೆ ತಲುಪಿದ ಮೃ*ತದೇಹ

Published

on

ಬೆಳ್ತಂಗಡಿ: ತುಮಕೂರಿನಲ್ಲಿ ನಡೆದ ತ್ರಿಬಲ್ ಮರ್ಡ*ರ್‌ ಪ್ರಕರಣಕ್ಕೆ ಸಂಬಂಧಿಸಿ ಮೃ*ತಪಟ್ಟ ಮೂವರ ಮೃ*ತ ದೇಹವನ್ನು ಶುಕ್ರವಾರ (ಮಾ.29) ಮುಂಜಾನೆ ಬೆಳ್ತಂಗಡಿಗೆ ತರಲಾಗಿದೆ.

ನಿಧಿ ಆಸೆಗೆ ಮಾ.22ರಂದು ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಸುಡಲಾಗಿತ್ತು. ತನಿಖೆ ಬಳಿಕ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗಿದೆ. ಘಟನೆ ನಡೆದ ಏಳು ದಿನಗಳ ಬಳಿಕ ಸಂಬಂಧಪಟ್ಟವರಿಗೆ ಮೃತದೇಹವನ್ನು ತಲುಪಿಸಲಾಗಿದೆ.

ಮೃತಪಟ್ಟ ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹ ಮೊಯ್ಯುದ್ದೀನ್ ಜುಮಾ ಮಸೀದಿ ಹಳೆಪೇಟೆಗೆ ಮತ್ತು ಸಿದ್ದೀಕ್ ಅವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದ್ದು, ಅಲ್ಲಿ ಅಂತಿಮ ದರ್ಶನ ಹಾಗೂ ವಿಧಿ ವಿಧಾನ ನೆರವೇರಲಿದೆ.

ಪ್ರಕರಣದ ಹಿನ್ನೆಲೆ:

ತುಮಕೂರು ಜಿಲ್ಲೆಯಲ್ಲಿ  ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶ*ವ ಪತ್ತೆಯಾಗಿತ್ತು. ಇದೊಂದು ವ್ಯವಸ್ಥಿತ ಕೊ*ಲೆ ಎಂಬುದು ತನಿಖೆಯಿಂದ ಹೊರಬಂದಿತ್ತು.  ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಕೋರಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಮುಖ ಆರೋಪಿ ಪಾತರಾಜ ಹಾಗೂ ಗಂಗರಾಜು ಎಂಬವರನ್ನು ಬಂಧಿಸಲಾಗಿದೆ. ನಿಧಿಯ ಆಸೆಗೆ ತುಮಕೂರಿಗೆ ಹೋಗಿದ್ದ ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಾಕಿ ಸುಡಲಾಗಿತ್ತು.

ಮೃತರಿಗೆ ಪಾತರಾಜ ಎಂಬಾತ ಆರು ತಿಂಗಳ ಹಿಂದೆ ಪರಿಚಿತವಾಗಿದ್ದು, ನಿಧಿ ವಿಚಾರವಾಗಿ ಮೃತರಿಂದ 6 ಲಕ್ಷ ಹಣ ಪಡೆದುಕೊಂಡಿದ್ದ. ಆದರೆ ಆರು ತಿಂಗಳಾದ್ರೂ ಹಣ ವಾಪಾಸು ನೀಡದ ಕಾರಣ ಮೂವರೂ ಕೂಡಾ ಆತನ ಹಿಂದೆ ಬಿದ್ದಿದ್ದರು. ಹೀಗಾಗಿ ಈ ಮೂವರನ್ನು ಮುಗಿಸಲು ಪ್ಲಾನ್ ರೂಪಿಸಿದ್ದ ಪಾತರಾಜ ಸತ್ಯಮಂಗಲ ನಿವಾಸಿ ಗಂಗರಾಜು ಎಂಬಾತನ ಸಹಾಯ ಪಡೆದಿದ್ದ. ಆತನಿಗೆ 3 ಕೆ.ಜಿ ಚಿನ್ನಕೊಡುವುದಾಗಿ ನಂಬಿಸಿ ತನ್ನ ಕೆಲಸ ಮಾಡಿಸಿದ್ದ.

ಗಂಗರಾಜು ಕೂಡಾ ಚಿನ್ನದ ಆಸೆಗೆ ತನ್ನ ಸಹಚರರ ಮೂಲಕ ಇಸಾಕ್, ಹಮೀದ್ ಹಾಗೂ ಸಿದ್ದಿಕ್ ಅವರನ್ನು ಕೊಲೆ ಮಾಡಿಸಿದ್ದ. ತುಮಕೂರಿನ ಬೀರನಕಲ್ಲು ಬೆಟ್ಟದ ಬಳಿ ಬರಲು ಹೇಳಿ ಅಲ್ಲಿ ಮಚ್ಚು ಲಾಂಗ್‌ನಿಂದ ಹಲ್ಲೆ ಮಾಡಿ ಮೂವರನ್ನು ಕೊಲೆ ಮಾಡಲಾಗಿತ್ತು. ಬಳಿಕ ಅಲ್ಲಿಂದ ಅವರದೇ ಕಾರಿನಲ್ಲಿ ಮೃತದೇಹ ಇರಿಸಿ ಕುಚ್ಚಂಗಿ ಕೆರೆ ಬಳಿ ತಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿರುವ ಪ ಮಧುಸೂದನ್ ನವೀನ್,  ಕೃಷ್ಣ,  ಗಣೇಶ್,  ಕಿರಣ್,  ಸೈಮನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ..

Continue Reading

BELTHANGADY

ರಸ್ತೆ ದಾಟುವ ವೇಳೆ ದ್ವಿಚಕ್ರ ವಾಹನ ಡಿ*ಕ್ಕಿ..!! ಪಾದಾಚಾರಿ ಮೃ*ತ್ಯು

Published

on

ಬೆಳ್ತಂಗಡಿ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಾವ ಶೇಖರ್ ಬಂಗೇರ ಹೇರಾಜೆ(65 ವ) ಮೃ*ತಪಟ್ಟವರು.

ಗುರುವಾರ (ಮಾ.28) ರಾತ್ರಿ ಶೇಖರ್ ಬಂಗೇರ ರವರು ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀ*ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಬಂಟ್ವಾಳದಲ್ಲಿ ಅವರು ಸಾವನ್ನಪ್ಪಿದ್ದಾರೆ.  ಸ್ಕೂಟರ್ ನಲ್ಲಿದ್ದ ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿ ಅನುಷಾ(19ವ) ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೃತಪಟ್ಟ ಶೇಖರ್ ಬಂಗೇರ ಹೇರಾಜೆ ವಿಜಯ ಬ್ಯಾಂಕ್  ಮಾಜಿ ಉದ್ಯೋಗಿ, ಮುಗ್ಗ ಗುತ್ತು ಮನೆತನದ ಟ್ರಸ್ಟ್ ಕೋಶಾಧಿಕಾರಿ, ರಾಘವೇಂದ್ರ ಮಠದ ಕೋಶಾಧಿಕಾರಿ, ಗುರುನಾರಾಯಣ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು.

ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

Continue Reading

LATEST NEWS

Trending