ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಬ್ರೆಜಿಲ್ ಅಧಿಕಾರಿಗಳಿಗೆ ಕೊರೊನಾ ಸೋಂಕು
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಬ್ರೆಜಿಲ್ ಅಧಿಕಾರಿಗಳಿಗೆ ಕೊರೊನಾ ಸೋಂಕು
ವಾಷಿಂಗ್ಟನ್: ಶನಿವಾರಷ್ಟೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ಲೋರಿಡಾದಲ್ಲಿ ಭೇಟಿಯಾಗಿ, ಸಭೆ ನಡೆಸಿದ್ದ ಬ್ರೆಜಿಲ್ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಮಾತ್ರವಲ್ಲದೆ ಈ ಅಧಿಕಾರಿಗಳು ಟ್ರಂಪ್ ಅವರ ಜೊತೆಗೆ ನಿಂತು ಪೋಟೋ ತೆಗೆಸಿಕೊಂಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನೊರೊಸ್ ಅವರ ಸಂವಹನ ಕಾರ್ಯದರ್ಶಿಗೂ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ಈ ಕಾರಣದಿಂದ ಅಧ್ಯಕ್ಷರ ವೈದ್ಯಾಧಿಕಾರಿಗಳ ತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬ್ರೆಜಿಲ್ ನಲ್ಲಿ ಈಗಾಗಲೇ 60 ಜನರಿಗೆ ಸೋಂಕು ತಗುಲಿದ್ದು, ಯಾವುದೇ ಸಾವಿನ ವರದಿಯಾಗಿಲ್ಲ. ಈ ಕುರಿತು ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನನಗೆ ಯಾವುದೇ ಭಯಾತಂಕವಿಲ್ಲ, ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
DAKSHINA KANNADA
ಗುರುಪುರ ಸೇತುವೆ ತಡೆಗೋಡಿ ಏರಿ ಮಗುವಿನೊಂದಿಗೆ ಆ*ತ್ಮಹತ್ಯೆಗೆ ಯತ್ನ; ಸ್ಥಳೀಯರಿಂದ ರಕ್ಷಣೆ
ಮಂಗಳೂರು : ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು (ನ।10) ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆದ. ಸೇತುವೆಯ ತುದಿಭಾಗದಲ್ಲಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆಹಿಡಿದು ರಕ್ಷಿಸಿ ಥಳಿಸಿದ್ದಾರೆ.
ಮೊದಲಿಗೆ ಕೆಲ ಮುಸ್ಲಿಂ ಯುವಕರು ಸಂದೀಪ್‌ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದ್ದೇ ಆದಲ್ಲಿ ರಕ್ಷಣೆ ಮಾಡಲು ಸಹ ಕೆಲ ಯುವಕರು ಸಿದ್ದರಾಗಿ ನಿಂತಿದ್ದರು.
ಆದರೂ, ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನ ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ದಿ ಕಲಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಏನು ವಿಷಯ? ಎಂಬ ಸಂಪೂರ್ಣ ಮಾಹಿತಿ ತಿಳಿದು ಬರಬೇಕಷ್ಟೇ.
LATEST NEWS
ಉಡುಪಿ: ದೇವಾಲಯಕ್ಕೆ ಅ*ನ್ಯಕೋಮಿನರ ಪ್ರವೇಶ; ಹಿಂದೂಗಳ ಆ*ಕ್ರೋಶ!!
ಉಡುಪಿ: ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಅ*ನ್ಯಕೋಮಿನ ವ್ಯಕ್ತಿಗಳು ಪ್ರವೇಶ ಮಾಡಿದ್ದರಿಂದ ಹಿಂದೂ ಭಕ್ತಾದಿಗಳು ಆ*ಕ್ರೋಶ ವ್ಯಕ್ತಪಡಿಸಿರುವ ಘಟನೆ ಶನಿವಾರ (ನ.9) ನಡೆದಿದೆ.
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಸಾಲ ಪ್ರಕರಣಕ್ಕೆ ಸಂಬಂಧಿಸಿ ನಡೆದ ಆಣೆ ಪ್ರಮಾಣ ಕಾರ್ಯಕ್ರಮ ಸಂದರ್ಭದಲ್ಲಿ ಅ*ನ್ಯಕೋಮಿನ ಮಂದಿ ದೇವಾಲಯ ಪ್ರವೇಶಿಸಿರುವುದು ಹಿಂದೂಗಳ ಕಣ್ಣು ಕೆಂಪಾಗಿಸಿದೆ.
‘ಗೋಮಾಂಸ ಭಕ್ಷಕರು, ಮೂರ್ತಿ ಪೂಜೆ ವಿರೋಧಿಗಳು ಆಲಯ ಪ್ರವೇಶಿಸುವ ಮೂಲಕ ತಲೆತಲಾಂತರದಿಂದ ಪಾಲಿಸಿಕೊಂಡು ಬಂದ ಹಿಂದೂ ಧರ್ಮಾಚರಣೆಗೆ, ದೇವಳದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಹೀಗಾಗಿ ದೇವಳದ ಆಡಳಿತ ಮೊಕ್ತೇಸರ ಮಾಜಿ ಶಾಸಕ ರಘುಪತಿ ಭಟ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ
ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಜರಂಗದಳ ಸೇರಿದಂತೆ , ಹಿಂದೂ ಪ್ರಮುಖ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದೆ. ಉಡುಪಿ ನಗರ ಪೊಲೀಸರು ಸಂಘರ್ಷ ಹತೋಟಿಗೆ ಪ್ರಯತ್ನಿಸುತ್ತಿದ್ದು, ಮಿತಿ ಮೀರಿ ಘಟನೆಗಳೇನಾದರು ಸಂಭವಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
LATEST NEWS
ಕಾಲಿಗೆ ಕಪ್ಪು ದಾರ ಕಟ್ಟುವುದರ ಹಿಂದಿನ ಮಹತ್ವ ನಿಮಗೆ ಗೊತ್ತಾ ??
ಇತ್ತೀಚೆಗೆ ಕಾಲಿಗೆ ಕಪ್ಪು ದಾರ ಕಟ್ಟುವುದು ಕೂಡ ಒಂದು ಪ್ಯಾಷನ್ ಆಗಿ ಬದಲಾಗಿದೆ. ಅನೇಕರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ನಿಜವಾಗಿ ನೊಡಲು ಹೋಗುವುದಾದರೆ ಅದರ ಹಿಂದೆ ಬಹುದೊಡ್ಡ ಕಾರಣನೇ ಇದೆ. ಅದು ಏನೆಂದು ಹಂತ ಹಂತವಾಗಿ ತಿಳಿದುಕೊಳ್ಳೋಣ.
ಕಪ್ಪು ದಾರವನ್ನು ಅನೇಕರು ಕಟ್ಟುತ್ತಾರೆ ಮಕ್ಕಳು ತಮ್ಮ ತೋಳುಗಳು, ಕಾಲುಗಳು, ಕುತ್ತಿಗೆ ಮತ್ತು ಸೊಂಟದ ಸುತ್ತಲೂ ಕಪ್ಪು ದಾರವನ್ನು ಧರಿಸುತ್ತಾರೆ. ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ. ಶನಿ ದೋಷದಿಂದ ಹೊರಬರಬಹುದು.ಶನಿದೋಷ ಬಾಧಿಸುವಿಕೆಗೆ ಕಪ್ಪು ದಾರ ಉತ್ತಮ. ಶನಿದೋಷದಿಂದ ಆಗುವ ತೊಂದರೆ ತಪ್ಪಿಸಲು ಶನಿವಾರದಂದು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಮಹತ್ತರ ಪರಿಣಾಮ ಬೀರುತ್ತದೆ.
ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಮುಲಕ ಶತ್ರು ಗ್ರಹವು ಮನೆಗೆ ಪ್ರವೇಶಿಸಿ ಮನೆಯ ಜೀವನವನ್ನು ತೊಂದರೆಗೊಳಿಸುವುದನ್ನು ತಪ್ಪಿಸಬಹುದು. ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವ ಸಂದರ್ಭದಲ್ಲಿ ನಿಮ್ಮ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ನಿವಾರಣೆಗೆ ಸಹಕಾರ ಮಾಡುತ್ತದೆ. ಕಪ್ಪು ದಾರ ಕಾಲಲ್ಲಿ ಇದ್ದರೆ ರಾಹು ಮತ್ತು ಕೇತುಗಳ ಕೋಪದಿಂದ ಮುಕ್ತರಾಗುವ ಮೂಲಕ ಶಾಂತಿ ನಲೆಸಿರುತ್ತದೆ.
ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಲಗಾಲಿಗೆ ಕಪ್ಪು ದಾರ ಕಟ್ಟುವ ಮೂಲಕ ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗಬಹುದು ಮತ್ತು ಯಾರಾದರೂ ನಮ್ಮ ಬಗ್ಗೆ ಅಸೂಯೆ ಪಟ್ಟರೆ ದೃಷ್ಟಿಗೆ ಧಕ್ಕೆಯಾಗುತ್ತದೆ, ಆ ಸಂದರ್ಭ ಕಪ್ಪು ದಾರವನ್ನು ಕಟ್ಟಿದ್ದರೆ ನಮಗೆ ರಕ್ಷಣೆ ಒದಗಿದುತ್ತದೆ, ಕಪ್ಪು ದಾರವು ನರರೋಗಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಪ್ಪು ದಾರವನ್ನು ನೋಟದಿಂದ ಮರೆಮಾಡಬೇಕು. ಅದನ್ನು ಕಟ್ಟುವಾಗ, ಇತರ ಬಣ್ಣಗಳ ಎಳೆಗಳನ್ನು ಕಾಲುಗಳಿಗೆ ಕಟ್ಟಬಾರದು. ಮಂಗಳವಾರ ಅಥವಾ ಶನಿವಾರ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಒಳ್ಳೆಯದು. ಕಪ್ಪು ದಾರವನ್ನು ಕಟ್ಟಿದಂತೆ ಶನಿ ಮಂತ್ರವನ್ನು 22 ಬಾರಿ ಪಠಿಸುವುದು ಇನ್ನೂ ಉತ್ತಮ.
- LATEST NEWS3 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM4 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS6 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್