Connect with us

    ಸಾಲ ಮರುಪಾವತಿಗೆ ಕಾಲಾವಕಾಶ ಕೊಟ್ಟು ಬದುಕಲು ಬಿಡಿ ಪ್ಲೀಸ್ ..!!

    Published

    on

     ಸಾಲ ಮರುಪಾವತಿಗೆ ಕಾಲಾವಕಾಶ ಕೊಟ್ಟು ಬದುಕಲು ಬಿಡಿ ಪ್ಲೀಸ್ ..!!.

    -ಪವಿತ್ರ ಶೆಟ್ಟಿ ದೇರ್ಲಕ್ಕಿ

    ಮಂಗಳೂರು: ಡೆಡ್ಲಿ ಕೊರೋನಾ ವೈರಸ್‌ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಜನರು ಆತಂಕದಲ್ಲಿದ್ದಾರೆ. 8000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿದೆ ಈ ಕಿಲ್ಲರ್.

    ಇದೆಲ್ಲದರ ಮಧ್ಯೆ ಈಗ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡಲು ಬ್ಯಾಂಕ್‌ಗಳು, ಖಾಸಾಗಿ ಫೈನಾನ್ಸ್‌ಗಳು ಮುಂದಾಗಿವೆ.

    ಚೀನಾದ ವೂಹಾನ್‌ ಪ್ರಾಂತದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಕೊರೋನಾ ವೈರಸ್‌ನಿಂದ ಇಡೀ ಪ್ರಪಂಚವೇ ಆತಂಕದಲ್ಲಿ ದಿನ ದೂಡುತ್ತಿದೆ. ಸಾವು ನೋವಿನ ಕಥೆಗಳಿಗೆ ಈ ಕಿಲ್ಲರ್‌ ವೈರಸ್‌ ಕಾರಣವಾಗುತ್ತಿದೆ.

    ಈಗಾಗಲೇ 8000ಕ್ಕೂ ಅಧಿಕ ಮಂದಿ ಕೋವಿಡ್‌ 19ಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟುತ್ತಿದೆ.

    ಒಂದೆಡೆ ಜನರು ಜೀವ ಭಯದಲ್ಲಿದ್ದರೆ, ಮತ್ತೊಂದೆಡೆ ಆರ್ಥಿಕ ಸ್ಥಿತಿಗತಿ ಅದೋಗತಿಗೆ ತಲುಪಿದೆ. ಮೊದಲೇ ಆರ್ಥಿಕ ಹೊಡೆತ ತಿಂದಿದ್ದ ಭಾರತ ದೇಶಕ್ಕೆ ಕೊರೋನಾ ವೈರಸ್‌ ದೊಡ್ಡ ಕಂಟಕವಾಗಿ ಬಿಟ್ಟಿದೆ.

    ಹೌದು. ಪ್ರಪಂಚದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ರಿಲಯನ್ಸ್ ಇಂಡಸ್ಟ್ರೀಯ ಮಾಲಕ ಮುಕೇಶ್ ಅಂಬಾನಿ ಬರೋಬ್ಬರಿ 5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದ್ದಾರೆ.

    ಅಷ್ಟೇ ಅಲ್ಲ. ಆದಿತ್ಯ ಬಿರ್ಲಾ ಗ್ರೂಪ್, ವಿಪ್ರೋ, ಅದಾನಿ ಗ್ರೂಪ್, ಇನ್ಫೋಸಿಸ್, ಮಹೀಂದ್ರಾ ಗ್ರೂಪ್ ಗಳು ಕೂಡ ಭಾರಿ ನಷ್ಟ ಅನುಭವಿಸಿದ್ದಾರೆ. ಶೇರು ಮಾರುಕಟ್ಟೆ ಸಂಪೂರ್ಣ ನೆಲಕಚ್ಚಿದೆ.

    ಅದಷ್ಟೇ ಅಲ್ಲ. ಈ ಕೊರೋನಾ ಎಫೆಕ್ಟ್‌ನಿಂದಾಗಿ ದಿನದ ಕೂಲಿಯನ್ನೆ ನಂಬಿ ಬದುಕಿದ್ದ ಲಕ್ಷಾಂತರ ನೌಕರರು, ಕಾರ್ಮಿಕರು ದಿನದೂಡಲು ಹರಸಾಹಸ ಪಡುತ್ತಿದ್ದಾರೆ.

    ಕೊರೋನಾ ಸೋಂಕು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್‌, ಥಿಯೇಟರ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸೇರಿದಂತೆ ಹೆಚ್ಚು ಜನ ಸೇರುವ ಶಾಪ್‌ಗಳನ್ನು ಬಂದ್ ಮಾಡಲಾಗಿದೆ.

    ಸಭೆ ಸಮಾರಂಭಗಳನ್ನು ಮದುವೆ -ಮುಂಜಿಗಳನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ದಿನ ಸವೆಸೋದು ಕಷ್ಟಸಾಧ್ಯವಾಗಿದೆ.

    ಈ ಮಧ್ಯೆ ಬ್ಯಾಂಕ್‌ಗಳು, ಫೈನಾನ್ಸ್‌ಗಳು ರಕ್ಕಸರಂತೆ ಕಾಡುತ್ತಿದ್ದಾರೆ. ಸಾಲ ಮರುಪಾವತಿ ಮಾಡದ ಗ್ರಾಹಕರನ್ನು ಕಾಡಲಾರಂಭಿಸಿದ್ದು ವಾಹನಗಳನ್ನು ಸೀಜ್‌ ಮಾಡುತ್ತಿದ್ದಾರೆ. ಇದರ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

    ನೊಂದ ಜನರು, ಸಾಲ ಕಟ್ಟಲು ರೆಡಿ ಇದ್ದೇವೆ. ಸಾಲ ಮರುಪಾವತಿಗೆ ನಮಗೆ ಕಾಲಾವಕಾಶ ಬೇಕು. ಎರಡು- ಮೂರು ತಿಂಗಳು ವಿನಾಯಿತಿ ನೀಡಿದರೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ ಅನ್ನುತ್ತಿದ್ದಾರೆ. ಕೆಲಸವೇ ಇಲ್ಲದೆ ತಿನ್ನಲು ಕೂಳಿಗಾಗಿ ಹರಸಾಹಸ ಪಡುತ್ತಿದ್ದಾರೆ. ಇನ್ನು ಸಾಲ ಎಲ್ಲಿಂದ ತಾನೆ ಕಟ್ಟಿಯಾರು? ದಿನ ಕೂಲಿಯನ್ನು ನಂಬಿ ಬದುಕುವ ಕಾರ್ಮಿಕರು, ನೌಕರಿಗೆ ಬ್ಯಾಂಕ್‌ಗಳು, ಫೈನಾನ್ಸ್‌ಗಳು ಮಾನವೀಯ ನೆಲೆಯಲ್ಲಿ ವಿನಾಯತಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

    ಇನ್ನು ಈ ಬಗ್ಗೆ ಕರಾವಳಿ ಶಾಸಕರಾದ ಯು.ಟಿ. ಖಾದರ್ ಅವರೂ ಸರ್ಕಾರದ ಗಮನ ಸೆಳೆದಿದ್ದು, ಕೊರೋನಾ ಅಟ್ಟಹಾಸದಿಂದ ದುಡಿಯುವ ವರ್ಗಕ್ಕೆ ಸಮಸ್ಯೆಯಾಗುತ್ತಿದೆ,

    ಮಾಲಕರು ತಿಂಗಳ ಬಾಡಿಗೆಗೆ ವಿನಾಯತಿ ನೀಡಬೇಕು. ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ ಇದಕ್ಕೆ ಕ್ರಮ ಕೈಗೊಳ್ಳಬೇಕು.

    ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಒಟ್ಟಾರೆಯಾಗಿ ನಾಡಿನ ಜನರ ನಿದ್ದೆ ಕೆಡಿಸಿರುವ ಈ ಡೆಡ್ಲಿ ಕೊರೋನಾದಿಂದ ಹೈರಾಣಾಗಿರುವ ಜನತೆ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ.

    ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಾಲ ಮರುಪಾವತಿಗೆ ವಿನಾಯಿತಿ ಕೊಡಲು ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಈ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕಿದೆ.

    ವಿಡಿಯೋಗಾಗಿ..

    Click to comment

    Leave a Reply

    Your email address will not be published. Required fields are marked *

    FILM

    ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್, ಪವಿತ್ರ ಗೌಡ

    Published

    on

    ಮಂಗಳೂರು/ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಇಂದು(ಜ.10) ಬೆಂಗಳೂರಿನ ಸಿಸಿಎಚ್ 57ರ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿದ್ದಾರೆ.

    ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಜಾಮೀನು ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊ*ಲೆ ಆರೋಪಿಗಳೆಲ್ಲ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

    ಪವಿತ್ರಾ ಗೌಡ, ಇತರೆ ಆರೋಪಿಗಳು ತಮ್ಮ ತಮ್ಮ ವಕೀಲರೊಡನೆ ಕೋರ್ಟ್​ಗೆ ಹಾಜರಾಗಿದ್ದರು. ದರ್ಶನ್, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದಿದ್ದು, ಅವರೊಂದಿಗೆ ವಕೀಲರು ಸಹ ಆಗಮಿಸಿದ್ದರು.

    ಇದನ್ನೂ ಓದಿ : ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಶ*ವ ಪತ್ತೆ!

    ನ್ಯಾಯಾಲಯಕ್ಕೆ ಹಾಜರಾದ ಎಲ್ಲಾ ಆರೋಪಿಗಳ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದರು.

    Continue Reading

    LATEST NEWS

    ಕ್ರಿಕೆಟಿಗ ಮನೀಶ್ ಪಾಂಡೆ ದಾಂಪತ್ಯ ಜೀವನದಲ್ಲಿ ಬಿರುಕು?

    Published

    on

    ಮಂಗಳೂರು : ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಈ ಇಬ್ಬರೂ ಪರಸ್ಪರ ಇನ್ ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿಕೊಂಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಆಟಗಾರರ ಡಿವೋರ್ಸ್ ಪರ್ವ ಜಾಸ್ತಿಯಾಗಿದೆ. ಶಿಖರ್ ಧವನ್, ಯಜ್ವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಸಂಬಂಧ ಕೊನೆಗೊಂಡಿತು. ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿಯೂ ಕೇಳಿ ಬರುತ್ತಿದೆ. ಇದರ ನಡುವೆ ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಅವರ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿಯೂ ಬಿರುಕು ಮೂಡಿದ್ದು, ಇಬ್ಬರೂ ದೂರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿವೋರ್ಸ್ ಗೆ ಮುಂದಾದ್ರ ಕನ್ನಡಿಗ ಮನೀಶ್ ಪಾಂಡೆ
    ಕನ್ನಡಿಗ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ವದಂತಿ ಇಷ್ಟು ವೇಗವಾಗಿ ಎಲ್ಲೆಡೆ ಹಬ್ಬಲು ಕಾರಣವೂ ಇದ್ದು, ಈ ಸ್ಟಾರ್ ಜೋಡಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಈ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಇಬ್ಬರು ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈಗ ಹಬ್ಬಿರುವ ವದಂತಿಗೆ ಈ ಸ್ಟಾರ್ ದಂಪತಿಗಳು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

    ಇದನ್ನೂ ಓದಿ: ಅದು ನಿಜವಾಗಿರಬಹುದು… ಡಿವೋರ್ಸ್ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ಚಹಲ್ !

    ಪಾಂಡೆ-ಆಶ್ರಿತಾ ದಾಂಪತ್ಯ ಜೀವನ:
    ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕನ್ನಡಿಗರಾಗಿರುವ ಈ ಜೋಡಿ ಇಬ್ಬರೂ ಕರ್ನಾಟಕದವರಾಗಿದ್ದಾರೆ. ಪಾಂಡೆ ಪತ್ನಿ ಅವರು ಮಂಗಳೂರಿನವರಾಗಿದ್ದು, ಆಶ್ರಿತಾ ತಮಿಳು ಮತ್ತು ತುಳು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.

    ಇನ್ನು, ಕಳೆದ ಬಾರಿ ಐಪಿಎಲ್ 2024ರ ವೇಳೆ ಆಶ್ರಿತಾ ಅವರು ಪಾಂಡೆ ಬೆಂಬಲಿಸಲು ಒಮ್ಮೆಯೂ ಮೈದಾನಕ್ಕೆ ಬಂದಿರಲಿಲ್ಲ. ಅಲ್ಲದೇ ಮನೀಶ್ ಪಾಂಡೆ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಅಲ್ಲದೇ ತಂಡವು ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ ಆಶ್ರಿತಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ.

    ಮನೀಶ್ ವೃತ್ತಿಜೀವನ
    ಇನ್ನು ಮನೀಶ್ ಪಾಂಡೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2015ರಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮನೀಶ್ ಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಅಲ್ಪಾವಧಿಯಲ್ಲೇ ಕೊನೆಗೊಂಡಿತು. ಭಾರತದ ಪರ ಇದುವರೆಗೆ 29 ಏಕದಿನ ಪಂದ್ಯಗಳನ್ನಾಡಿರುವ ಮನೀಶ್ ಇದರಲ್ಲಿ 566 ರನ್ ಕಲೆಹಾಕಿದ್ದರೆ, 39 ಟಿ20 ಪಂದ್ಯಗಳಲ್ಲಿ 709 ರನ್ ಗಳಿಸಿದ್ದಾರೆ. ದೇಶೀ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಮನೀಶ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಗೆ ತಂಡದಿಂದ ಕೈಬಿಡಲಾಗಿತ್ತು.

    Continue Reading

    LATEST NEWS

    ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಶ*ವ ಪತ್ತೆ!

    Published

    on

    ಮಂಗಳೂರು/ಮೀರತ್ : ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶ*ವವಾಗಿ ಪತ್ತೆಯಾದ ಘಟನೆ ಉತ್ತರಪ್ರದೇಶದ ಮೀರತ್ ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

    ಮೊಯಿನ್, ಅವರ ಪತ್ನಿ ಅಸ್ಮಾ, ಮೂವರು ಹೆಣ್ಣು ಮಕ್ಕಳಾದ ಅಫ್ಸಾ(8), ಅಜೀಜಾ(4), ಆದಿಬಾ(1) ಮೃ*ತಪಟ್ಟವರು. ಮೃ*ತದೇಹಗಳನ್ನು ಪೊಲೀಸರು ಮ*ರಣೋತ್ತರ ಪರೀಕ್ಷೆಗೆ  ರವಾನಿಸಿದ್ದಾರೆ.

    ಮೃ*ತ ಮೊಯಿನ್‌ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಆತ ಹಾಗೂ ಆತನ ಆಸ್ಮಾ ಬುಧವಾರ ನಾಪತ್ತೆಯಾಗಿದ್ದರು. ಅಲ್ಲದೇ, ಮನೆಯ ಹೊರಗಿನಿಂದ ಬೀಗ ಜಡಿಯಲಾಗಿತ್ತು. ಮನೆಯ ಮೇಲ್ಛಾವಣಿಯ ಮೂಲಕ ಪೊಲೀಸರು ಒಳಗೆ ಪ್ರವೇಶಿಸಿದಾಗ ಶ*ವಗಳು ಪತ್ತೆಯಾಗಿವೆ.

    ಮೂರು ಮಕ್ಕಳ ಶ*ವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಮೊಹಿನ್ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಲಾಗಿತ್ತು ಎಂದು ತಿಳಿದುಬಂದಿದೆ. ವಿಧಿ ವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಸಲಾಗುತ್ತಿದೆ.

    ಇದನ್ನೂ ಓದಿ : ಶಾಲೆಗಳಿಗೆ ಬಾಂ*ಬ್ ಬೆದರಿಕೆ; 12ನೇ ತರಗತಿ ವಿದ್ಯಾರ್ಥಿಯ ಬಂಧನ

    ಹಳೆಯ ದ್ವೇಷದ ಹಿನ್ನೆಲೆ ಕೊ*ಲೆ ನಡೆದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುಟುಂಬವು ಇತ್ತೀಚೆಗಷ್ಟೇ ಆ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿಯಲಿದೆ.

    Continue Reading

    LATEST NEWS

    Trending