Connect with us

    ಯಕ್ಷಗಾನದಲ್ಲಿ ಕೊರೋನಾ ಜಾಗೃತಿ….

    Published

    on

    ಯಕ್ಷಗಾನದಲ್ಲಿ ಕೊರೋನಾ ಜಾಗೃತಿ….

    ಉಡುಪಿ: ಯಕ್ಷಗಾನ ಕಲೆ ಮನೋರಂಜನೆಯ ಜತೆಗೆ ಜನರಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮವಾಗಿ ಶತಮಾನಗಳಿಂದ ಬೆಳೆದು ಬಂದಿದೆ. ಇಲ್ಲಿ ಪ್ರದರ್ಶನವಾಗುವ ಪೌರಾಣಿಕ, ಸಾಮಾಜಿಕ ಪ್ರಸಂಗಗಳು ಮನೋರಂಜನೆ, ಜ್ಞಾನದ ಜತೆಗೆ ಜನರಿಗೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುತ್ತವೆ.

    ಇದೀಗ ಯಕ್ಷಗಾನವು ಕೊರೋನಾ ಮಹಮಾರಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಯಕ್ಷಪ್ರೇಮಿಗಳ ಮನಗೆದ್ದಿದೆ. ಕೊರೊನಾ ಎಂಬ ಮಹಾಮಾರಿ ವೈರಸ್ ವಿಶ್ವದಲ್ಲಿ ಸಾವಿರಾರು ಮಂದಿಯ ಪ್ರಾಣಾಹುತಿ ಪಡೆಯುತ್ತಿರುವ ಹಿನ್ನಲೆ ಇದೀಗ ಯಕ್ಷಗಾನದಲ್ಲೂ ಕೊರೋನಾ ಜಾಗೃತಿ ಮೂಡಿಸಲಾಗಿದೆ.

    ಸಾಮಾಜಿಕ ಪಿಡುಗಾಗಿ ಮುನ್ನುಗ್ಗುತ್ತಿರುವ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲಿ ಸರಕಾರ, ಆಡಳಿತ ವ್ಯವಸ್ಥೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂದರ್ಭ ಬಡಗುತಿಟ್ಟಿನ ಹೆಸರಾಂತ ಡೇರೆ ಮೇಳವಾದ ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯು ತನ್ನ ಯಕ್ಷಗಾನ ಪ್ರದರ್ಶನಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಸಂದೇಶವನ್ನು ಸಾರುತ್ತಿದೆ. ಈ ಕಾರ್ಯವನ್ನು ಒಂದು ವಾರದಿಂದ ಮೇಳದ ಚಂದ್ರಮುಖಿ ಸೂರ್ಯಸಖಿ ಪ್ರಸಂಗದ ಮಧ್ಯದಲ್ಲಿ ನೀಡುತ್ತಿದ್ದು ಸಾವಿರಾರು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

    video..l

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು : ತಣ್ಣೀರು ಬಾವಿ ಬೀಚ್ ಪ್ರವಾಸಿಗರಿಗೆ ವಿಶೇಷ ಸೌಲಭ್ಯಗಳು

    Published

    on

    ಮಂಗಳೂರು : ನಗರದ ತಣ್ಣೀರು ಬಾವಿ ಬೀಚ್‌ ಅಭಿವೃದ್ಧಿ ಕೆಲಸಗಳು ‘ಒನ್ ನೇಷನ್ ಒನ್ ಡೆಸ್ಟಿನೇಷನ್’ ಯೋಜನೆಯಡಿ ಪೂರ್ಣಗೊಳಿಸಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ತಣ್ಣೀರು ಬಾವಿ ಬೀಚ್‌ನಲ್ಲಿ 7.59 ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗೆ ನೀಡಿತ್ತು. ಅಂತೆಯೇ ಪುಣೆ ಮೂಲದ ಬಿವಿಜಿ ಇಂಡಿಯಾ ಲಿಮಿಟೆಡ್‌ ಎಂಬ ಕಂಪನಿಯು 7.56 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದು, ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಹಿಲನ್ ಈ ಕುರಿತು ಮಾಹಿತಿ ನೀಡಿದ್ದಾರೆ.

    ಲಭ್ಯವಿರುವ ಸೌಲಭ್ಯಗಳ ಪಟ್ಟಿ :

    ತಣ್ಣೀರು ಬಾವಿ ಬೀಚ್‌ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೀಚ್‌ಗೆ ಬರುವ ಪ್ರವಾಸಿಗರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗದಿ ಮಾಡುವ ಪ್ರವೇಶ ಶುಲ್ಕವನ್ನು ವಸೂಲಿ ಮಾಡುವ ಅವಕಾಶವನ್ನು ಟೆಂಡರ್ ಪಡೆದವರಿಗೆ ನೀಡಲಾಗುತ್ತದೆ. ಸದ್ಯ ಬೀಚ್ ನಿರ್ವಹಣೆ ಮಾಡುವ ಗುತ್ತಿಗೆ ಅವಧಿ ಅಂತ್ಯವಾಗಿದೆ. ಆದ್ದರಿಂದ ಹೊಸ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇಷ್ಟು ದಿನ ತಣ್ಣೀರು ಬಾವಿ ಬೀಚ್‌ಗೆ ತೆರಳುವ ಪ್ರವಾಸಿಗರಿಗೆ ಮರ ಗಿಡಗಳ ಉದ್ಯಾನವನ ಪ್ರಮುಖ ಆಕರ್ಷಣೆಯಾಗಿತ್ತು. ಸಸಿಹಿತ್ಲು, ಪಣಂಬೂರು ಬೀಚ್‌ಗೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚಿನ ಆಕರ್ಷಣೆಗಳು, ಸೌಲಭ್ಯಗಳು ಇಲ್ಲ ಎಂಬ ಆರೋಪವಿತ್ತು. ಆದ್ದರಿಂದ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಬೇಕಾದ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ.

    ಬೀಚ್ ಆವರಣದಲ್ಲಿ ಆಹಾರ ಮಳಿಗೆಗಳು, ಸಮುದ್ರ ವೀಕ್ಷಣೆ ಮಾಡಲು ಫ್ರೇಮ್ ಮುಂತಾದ ಕಾಮಗಾರಿಗಳನ್ನು ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಾಡಲಾಗುತ್ತಿದೆ. ಬೀಚ್‌ನಲ್ಲಿ ಬಿದಿರು ಮನೆಗಳು ನಿರ್ಮಾಣವಾಗಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡಲಿವೆ. ಬೀಚ್‌ನಲ್ಲಿ ಹುಲ್ಲಿನ ಕೊಡೆಗಳ ಕೆಳಗೆ ಕುಳಿತು ಸಮುದ್ರ ವೀಕ್ಷಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಬೀಚ್ ಕಸ ನಿರ್ವಹಣೆಗೆ ಘನತ್ಯಾಜ್ಯ ನಿರ್ವಹಣೆ ಘಟಕ, ಶೌಚಾಲಯಗಳ ನಿರ್ವಹಣೆ, ಬಟ್ಟೆ ಬದಲಾಯಿಸುವ ಕೊಠಡಿ, ಬಿದಿರಿನ ತಾತ್ಕಾಲಿಕ ಮನೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬೀಚ್‌ನಲ್ಲಿ ಒದಗಿಸಲಾಗಿದೆ. ಜೊತೆಗೆ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಚಿಕಿತ್ಸೆ ಕೊಠಡಿ, ಸಿಸಿಟಿವಿ ಕ್ಯಾಮರಾ ನಿಯಂತ್ರಣ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಬೀಚ್ ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    Continue Reading

    LATEST NEWS

    ಶಬರಿಮಲೆಯಿಂದ ವಾಪಸ್ ಆಗುವಾಗ ಭೀಕರ ಅಪಘಾತ: ಇಬ್ಬರು ಅಯ್ಯಪ್ಪ ಭಕ್ತರು ಸಾವು!

    Published

    on

    ಚಾಮರಾಜನಗರ: ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.

    ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.

    Continue Reading

    DAKSHINA KANNADA

    ಕರಾವಳಿ : ಏರುಪೇರಾಗುತ್ತಿರುವ ಹವಮಾನ ; ಹೆಚ್ಚುತ್ತಿರುವ ಕಾಯಿಲೆ

    Published

    on

    ಕರಾವಳಿ :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನದಲ್ಲಿ ಏರುಪೇರಾಗುತ್ತಿದೆ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು ಕಾಣಿಸಿ ಕೊಂಡು ವೈರಲ್ ಕಾಯಿಲೆಗಳಿಗೆ ವೇದಿಕೆಯಾಗುತ್ತಿದೆ. ಡಿಸೆಂಬ‌ರ್, ಜನವರಿಯಲ್ಲಿ ಚಳಿಗಾಲ ಸಾಮಾನ್ಯವಾಗಿ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಚಳಿ ತುಸು ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆರೋಗ್ಯ ಇಲಾಖೆ ಕೂಡ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ ಎಂದು ಮಾಹಿತಿ, ಜಾಗೃತಿ ನೀಡುತ್ತಿದ್ದರೂ, ಪದೇ ಪದೆ ಚಳಿಯಿಂದಾಗಿ ಶೀತ, ಜ್ವರ, ಕೆಮ್ಮು, ಅಸ್ತಮಾದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರ ಬಳಿಗೆ ಹೋಗಿ ಔಷಧ ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ.

    ಪರೀಕ್ಷೆ ಜತೆಗೆ ಕಾಯಿಲೆಗಳ ಚಿಂತೆ :

    ಜನವರಿ ತಿಂಗಳಲ್ಲಿ ಬಹಳಷ್ಟು ಶಾಲಾ-ಕಾಲೇಜುಗಳಲ್ಲಿ ಪರೀಕ್ಷಾ ಸಮಯ ಆದರೆ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಶಾಲೆಗೆ ಹಾಜರಾಗುತ್ತಿದ್ದಾರೆ. ಮಕ್ಕಳಿಂದ ಮಕ್ಕಳಿಗೆ ಜ್ವರ ಹರಡುವ ಪ್ರಮೇಯ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸೂಚನೆ ರವಾನಿಸುವ ಕೆಲಸ ಮಾಡಿದೆ.

    ಕರಾವಳಿಯಲ್ಲಿ ಚಳಿ ಇಳಿಕೆ ಸಾಧ್ಯತೆ :

    ಉತ್ತರ ಭಾರತದಿಂದ ಬೀಸುತ್ತಿರುವ ಗಾಳಿ ಕಡಿಮೆಯಾಗಿ ಬಂಗಾಳಕೊಲ್ಲಿ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಮಾಣ ಜಾಸ್ತಿಯಾಗುವ ಕಾರಣ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಉಂಟಾಗಲಿದೆ. ಇದರಿಂದ ಚಳಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಜ.13ರಂದು ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಬಳಿಕ ಚಳಿಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ವಾತಾವರಣ ದಲ್ಲಿ ತೇವಾಂಶ ಇದ್ದರೆ ಚಳಿ ಕಡಿಮೆಯಾಗಬಹುದು. ಆದರೆ ಒಣಹವೆ ಇದ್ದರೆ ಮಾತ್ರ ಚಳಿ ಏರಿಕೆಯಾಗಲಿದೆ. ಕೆಲವು ದಿನಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮುಂಜಾನೆ ಕನಿಷ್ಠ ತಾಪಮಾನ ಇಳಿಕೆಯಾಗಿ 20-21 ಡಿ.ಸೆ. ಆಸುಪಾಸಿನಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ 1-2 ಡಿ.ಸೆ.ನಷ್ಟು ಇಳಿಕೆಯಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಮುಂಜಾನೆ 8-9 ಗಂಟೆಯವರೆಗೂ ಚಳಿ ಅನುಭವವಾಗುತ್ತಿದೆ. ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆ ಸಹಿತ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸುವ ಎಚ್ಚರಿಕೆ ನೀಡಿದ್ದು, ಕನಿಷ್ಢ ತಾಪಮಾನ ವಾಡಿಕೆಗಿಂತ ಇನ್ನೂ 2-4 ಡಿ.ಸೆ. ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.

    Continue Reading

    LATEST NEWS

    Trending