ಮಂಗಳೂರು: ರಾಜ್ಯದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ.ಅದರಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಕೊರೊನಾ ರಾತ್ರಿ ಕರ್ಫ್ಯೂ ಬಿಗಿಗೊಳಿಸಲಾಗಿತ್ತು.
ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಿದರು.
ಪೊಲೀಸರ ತಪಾಸಣೆಯ ಭೀತಿಯಿಂದ ಬಹುತೇಕ ಅಂಗಡಿಗಳ ಮಾಲಕರು, ಕೆಲಸಗಾರರು ಅಂಗಡಿಗಳನ್ನು ನಿಗದಿತ ಸಮಯಕ್ಕಿಂತ ಮೊದಲೇ ಮುಚ್ಚಿ ಮನೆಯತ್ತ ತೆರಳುತ್ತಿರುವ ದೃಶ್ಯ ಕಂಡು ಬಂತು.
ಪೊಲೀಸ್ ಕಾರ್ಯಾಚರಣೆಗೂ ಮುನ್ನ ಮಂಗಳೂರು ನಗರದ ಪದುವಾ ಕಾಲೇಜ್ ಮೈದಾನದಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪೊಲೀಸ್ ಪರೇಡ್ ನಡೆಸಿ ಮಾರ್ಗದರ್ಶನ ನೀಡಿದ್ದರು.
ಪಾಲಿಕೆ ವ್ಯಾಪ್ತಿಯ 45 ಚೆಕ್ ಪೋಸ್ಟ್‌ಗಳಲ್ಲಿ ಸುಮಾರು 480 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. 18 ಇನ್ಸ್ಪೆಕ್ಟರ್, 40 ಸಬ್ ಇನ್ಸ್ಪೆಕ್ಟರ್, 4 ಎಸಿಪಿಗಳು, 2 ಡಿಸಿಪಿ ಗಳು ಪ್ರತೀ ಚೆಕ್ ಪೋಸ್ಟ್ ಗೆ ಇನ್ಸ್ಪೆಕ್ಟರ್ ಸೇರಿ 11 ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.