Connect with us

DAKSHINA KANNADA

ದ.ಕ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ : ಮಕ್ಕಳ ತಜ್ಞ ವೈದ್ಯರ ಸಮಿತಿ ಜೊತೆ ತುರ್ತು ಸಭೆ..!

Published

on

ಮಂಗಳೂರು : ಕೋವಿಡ್ – 19 3ನೇ ಅಲೆಗೆ ಮಕ್ಕಳು ಹೆಚ್ಚು ಭಾದಿತರಾಗುತ್ತಾರೆಂದು ತಜ್ಞರ ಮತ್ತು ಮಾಧ್ಯಮಗಳ ಮೂಲಕ ವರದಿಯಾಗುತ್ತಿರುವ ಹಿನ್ನಲೆಯಲ್ಲಿ  ಮುಂಜಾಗ್ರತಾ ಕ್ಮವಾಗಿ ಮಕ್ಕಳ ತಜ್ಞ ವೈದ್ಯರ ಸಮಿತಿ ಜೊತೆ ಜಿಲ್ಲಾಡಳಿತ ತುರ್ತು ಸಭೆ ನಡೆಸಿತು.

ಸಭೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಐಸಿಯು ಹಾಸಿಗೆಗಳು, ವೆಂಟಿಲೇಟರ್, HDU, NICU ಹಾಸಿಗೆಗಳ ಕುರಿತು, ಮಕ್ಕಳ ಜನಸಂಖ್ಯೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳ ಶೇಕಡಾವಾರು ಸಂಭಾವನೀಯತೆಯ ಆಧಾರದ ಆಸ್ಪತ್ರೆಗಳಿಗೆ ಅಗತ್ಯವಿರುವ ಯೋಜಿತ ಅವಶ್ಯಕತೆಗಳ ಕುರಿತು, ವೈದ್ಯಕೀಯ ಚಿಕಿತ್ಸಾ ಶಿಷ್ಟಾಚಾರ, ತಾಯಿ ಮತ್ತು ಮಕ್ಕಳ ಲಸಿಕಾಕರಣ, ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ capacity building ಕುರಿತು, Training / Orientation to Nurse’s, ANM and ASHA HCW ಮತ್ತು ಸಮುದಾಯಕ್ಕೆ / ವಿಶೇಷವಾಗಿ ಪೋಷಕರಿಗೆ ಶೈಕ್ಷಣಿಕ ಸಾಮಗ್ರಿಗಳ ಕುರಿತು, ಇಂಟರ್ನ್ ಸ್ನಾತಕೋತ್ತರ ಪದವೀಧರರಿಗೆ ಕಾರ್ಯಾಗಾರದ ಕುರಿತು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ವಿಶೇಷ ತಜ್ಞ ವೈದ್ಯರ ಸಮಿತಿಯನ್ನು ಕರೆದು ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಡಾ. ಭರತ್ ಶೆಟ್ಟಿ,  ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಜಿಲ್ಲೆಯ ಮಕ್ಕಳ ವಿಶೇಷ ತಜ್ಞ ವೈದರು, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

Published

on

ಮಂಗಳೂರು : ‘ಬಿರುವೆರ ಕುಡ್ಲ‘ದ ಮುಖಂಡ ಉದಯ ಪೂಜಾರಿಯನ್ನು ತುಳಿಯಲು ಹೋಗಿ ಬಿಜೆಪಿ ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡಿತಾ ಇಂತಹ ಒಂದು ಪ್ರಶ್ನೆ ಸದ್ಯ ಸಾಮಾಜಿಕ‌ ಜಾಲತಾಣದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಸಲಿಯತ್ತು..!

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಾರಾಯಣ ಗುರು ವೃತ್ತವನ್ನು ನಿರ್ಮಾಣ ಮಾಡಿದ್ದು ‘ಬಿರುವೆರ ಕುಡ್ಲ‘ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತೀಶ್ ಕುಂಪಲ ಅವರ ಈ ಹೇಳಿಕೆ ಈಗ ‘ಬಿರುವೆರ ಕುಡ್ಲ’ದ ಮುಖಂಡ ಉದಯ ಪೂಜಾರಿ ಅವರಲ್ಲೂ ಅಸಮಾಧಾನ ಮೂಡಿಸಿದೆ.

ನಾರಾಯಣ ಗುರು ವೃತ್ತ

ಸತೀಶ್ ಕುಂಪಲ ಹೇಳಿದ್ದೇನು ?

“ನಾರಾಯಣ ಗುರು ವೃತ್ತ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಸಂಘರ್ಷ ಆಗಿತ್ತು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ದಿವಾಕರ್ ವೃತ್ತ ನಿರ್ಮಾಣದ ವಿಚಾರ ಪ್ರಸ್ತಾವಿಸಿದ್ದರು. ಮೇಯರ್ ಆಗಿದ್ದ ಪ್ರೇಮಾನಂದ ಶೆಟ್ಟಿ, ವೃತ್ತ ನಿರ್ಮಾಣದ ಬಗ್ಗೆ ಮೂಡಾದಿಂದ ಅನುದಾನ ಕೊಡಿಸಿದ್ದರು. ಮೂಡಾದ ಅಂದಿನ ಅಧ್ಯಕ್ಷರಾಗಿದ್ದ ರವಿಶಂಕರ್ ಮಿಜಾರ್ ಅನುದಾನ ನೀಡಿದ್ದರು. ಇನ್ನು ವೃತ್ತ ನಿರ್ಮಾಣದ ಬಗ್ಗೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿ ವಹಿಸಿದ್ದರು. ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದು ಇವರೆಲ್ಲರಿಗೂ ಸಾರ್ಥಕತೆ ತರಿಸಿದೆ” ಎಂದು ಹೇಳುವ ಮೂಲಕ ಇಲ್ಲಿ ‘ಬಿರುವೆರ ಕುಡ್ಲ‘ದ ಪಾತ್ರ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮೋದಿ ಅಭಿಮಾನಿ ಉದಯ ಪೂಜಾರಿ ..!

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಉದಯ ಪೂಜಾರಿ ಈ ಬಾರಿ ನ್ಯೂಟ್ರಲ್ ಆಗಿದ್ದರು. ಅಸಲಿಗೆ ನಳಿನ್ ಕುಮಾರ್ ಅವರ ಆಪ್ತರಾಗಿ, ಬಿಜೆಪಿಯ ಬೆಂಬಲಿಗರಾಗಿ, ಮೋದಿಯ ಅಭಿಮಾನಿಯೂ ಆಗಿದ್ದರು.

ನಳಿನ್ ಹಾಗೂ ವೇದವ್ಯಾಸ್ ಜೊತೆ ಉದಯ ಪೂಜಾರಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ತಮ್ಮದೇ ಸಮೂದಾಯದ ರಕ್ಷಿತ್ ಶಿವರಾಂ ಸ್ಪರ್ಧೆ ಮಾಡಿದ್ರೂ ಹರೀಶ್ ಪೂಂಜಾ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪಕ್ಷ ಹಾಗೂ ಮೋದಿಯ ಅಭಿಮಾನಿಯಾಗಿ ಜೊತೆಗೆ ತನ್ನ ಸಮಾಜದ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.

ಸಮಾಜಕ್ಕೆ ಅಂಬ್ಯಲೆನ್ಸ್ ಹಸ್ತಾಂತರ

ಆದರೆ ‘ಬಿರುವೆರ ಕುಡ್ಲ‘ದ ಉದಯ ಪೂಜಾರಿ ಸದ್ಯ ಬಿಜೆಪಿಗೆ ಬೇಡದವರಾಗಿದ್ದಾರೆ. ಆದರೆ ‘ಬಿರುವೆರ ಕುಡ್ಲ‘ ಸಂಘಟನೆಯ ಮೂಲಕ ಸಾಕಷ್ಟು ಬಡ ಜನರಿಗೆ ಸಹಾಯ ಮಾಡಿದ ಉದಯ ಪೂಜಾರಿ ಬೆನ್ನ ಹಿಂದೆ ಸಾವಿರಾರು ಬಿಲ್ಲವ ಯುವಕರ ಪಡೆ ಇದೆ ಅನ್ನೋದು ಬಿಜೆಪಿ ಮರೆತಿದೆ. ಆದರೆ ಇದು ರಾಜಕೀಯವಾಗಿ ಉದಯ ಪೂಜಾರಿ ಬೆಳೆಯಬಹುದು ಎಂಬ ಕಾರಣಕ್ಕೆ ಮೋದಿ ಅವರ ಭೇಟಿಯಿಂದ ಅವರನ್ನು ದೂರ ಇರಿಸಲಾಗಿತ್ತು ಅನ್ನೋದು ಈಗ ರಾಜಕೀಯವಾಗಿ ಚರ್ಚಿತದಲ್ಲಿದೆ.

ಸಮಾಜಿಕ ಜಾಲತಾಣದಲ್ಲಿ ಆಕ್ರೋಶ…!

ಉದಯ ಪೂಜಾರಿಯನ್ನು ತುಳಿಯಲು ಬಿಜೆಪಿ ನಾರಾಯಣ ಗುರುಗಳನ್ನೇಹೈಜಾಕ್ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡಿತಾ ಇದೆ. ಬಿರುವೆರ ಕುಡ್ಲದ ಶ್ರಮ ಹಾಗೂ ಕೊಡುಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಸಾಧನೆ ಅಂದಿದ್ದಾರೆ. ಹೇಗೆ ಹಿಂದುತ್ವವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಂಡಿದೋ ಅದೇ ರೀತಿ ಈಗ ಬಿಲ್ಲವ ಸಮೂದಾಯವನ್ನು ಬಳಸಲು ಹೊರಟಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಅಂದಿದ್ದ ನಾರಾಯಣಗುರುಗಳನ್ನು ಓಟಿಗಾಗಿ ಹೈಜಾಕ್ ಮಾಡಲು ಹೊರಟಿದೆ ಎಂದು ಚರ್ಚೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರವೀಣ್ ನೆಟ್ಟಾರು ತಾಯಿಯನ್ನು ಕರೆತಂದು ಪ್ರಧಾನಿಗೆ ಪರಿಚಯಿಸಿ ಬಿಲ್ಲವರನ್ನು ಓಲೈಸಲಾಗಿದೆ.  ಮತ್ತೊಂದೆಡೆ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಿ ಬಿಲ್ಲವರನ್ನು ಖುಷಿ ಪಡಿಸಿದೆ. ಆದರೆ ಬೆಳೆಯುತ್ತಿದ್ದ ಬಿಲ್ಲವ ನಾಯಕನನ್ನು  ಸೈಲೆಂಟ್ ಆಗಿ ಚಿವುಟಿ ಹಾಕುವ ಎಲ್ಲಾ ಪ್ಲ್ಯಾನ್ ಬಿಜೆಪಿಯಿಂದ ಆಗಿದೆ ಅನ್ನೋ ವಿಚಾರ ಚರ್ಚೆ ಆಗುತ್ತಿದೆ.

 

Continue Reading

DAKSHINA KANNADA

ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!

Published

on

ಮಂಗಳೂರು : ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ(16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರಾದ್ರೂ ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ.  ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಿ ಅವರಿಗೆ ಅಪರೂಪಕ್ಕೆ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಅವರ ಈ ಧಿಡೀರ್ ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

 

 

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

LATEST NEWS

Trending