ಮುಖ್ಯಮಂತ್ರಿ ವಿರುದ್ಧ ವೃಥಾ ಆರೋಪ ಮಾಡಿದ ಶಾಸಕ ಪೂಂಜಾ ವಿರುದ್ದ ಪಶ್ಚಿಮ ವಲಯ ಡಿಐಜಿಪಿಗೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರು : ಮುಖ್ಯಮಂತ್ರಿ ವಿರುದ್ಧ ವೃಥಾ ಆರೋಪ ಮಾಡಿದ ಶಾಸಕ ಪೂಂಜಾ ವಿರುದ್ದ ಪಶ್ಚಿಮ ವಲಯ ಡಿಐಜಿಪಿಗೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಯ 24 ಹಿಂದು ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಆರೋಪ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಕಾರ್ಪೋರೇಟರ್ , ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಳಾಯಿ ಈ ಹಿಂದೆ ಪೂಂಜಾ ಅವರು ಮಹಿಳೆಗೆ ಮೊಟ್ಟೆಯನ್ನು ಎಸೆದು ಅವಮಾನ ಮಾಡಿದ್ದರು. ಇವರು ಇನ್ನಷ್ಟು ಇಂತಹ ಹೇಳಿಕೆಗಳನ್ನು ಕೊಟ್ಟರೆ ನಾವು ಸುಮ್ಮನಿರುವುದು ಇಲ್ಲ.
ಪೂಂಜ ಎನ್ನುವ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಗ ಇರುವುದು ಶೇಕಡಾ 40 ಸರಕಾರ ಅಲ್ಲ ಎನ್ನುವುದನ್ನು ಗಮನಿಸಬೇಕು.
ಮುಸಲ್ಮಾನರನ್ನು ದ್ವೇಷಿಸಿ ಎನ್ನುವ ಇವರ ಗ್ಯಾಸ್ ಏಜನ್ಸಿಯನ್ನು ಮುಸಲ್ಮಾನರಿಗೆ ಮಾರಾಟ ಮಾಡಿದ್ದು ಯಾಕೆ..?
ಅದೆಷ್ಟೊ ಮಸೀದಿಗಳಿಗೆ ಅನುದಾನ ನೀಡಿ ಅವರ ಮನೆಗೆ ಹೋಗಿ ಊಟ ಮಾಡುತ್ತಾರೆ. ಇಂತಹ ಶಾಸಕರದ್ದು ಯಾವ ಹಿಂದುತ್ವ ಎಂದು ನಾನು ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ.