Monday, January 24, 2022

ಕುಟುಂಬದ ದೈವ, ದೇವರ ಆರಾಧನೆಯಿಂದ ಒಳಿತು: ಕರಿಂಜೆಶ್ರೀ

ಮಂಗಳೂರು: ನಮ್ಮ ಕುಟುಂಬದ ದೈವ, ದೇವತಾರಾಧನೆ ಅಗತ್ಯವಾಗಿ ನಡೆಯಬೇಕಾಗಿದೆ. ನಮ್ಮ ಹಿರಿಯರು ಮಾಡಿಕೊಂಡು ಬಂದ ಸಂಪ್ರದಾಯ, ಕಟ್ಟುಕಟ್ಟಳೆಗಳನ್ನು ಪಾಲಿಸಿಕೊಂಡು ಬಂದಲ್ಲಿ ನಮಗೆ ಸುಖಸಂಮೃದ್ಧಿ ಸಿಗುತ್ತದೆ.

ಕುಟುಂಬದ ದೇವತಾಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮೂಡುಬಿದಿರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹರಸಿದರು.


ಕೊಣಾಜೆ ಬೆಳ್ಮ ಅಡ್ಕರಮಜಲುವಿನ ಬೋಲ್ಡನ್‌ ಕುಟುಂಬಸ್ಥರ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿದ ದೈವದ ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ,

ಗುಳಿಗ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.


ನಾವು ಎಷ್ಟು ಪೂಜೆ, ಪುನಸ್ಕಾರ ಮಾಡುತ್ತೇವೆನ್ನುವುದು ಮುಖ್ಯ ಅಲ್ಲ. ಅಂತರಂಗ ಶುದ್ಧಿ ಇಟ್ಟುಕೊಂಡು ದೈವಸ್ಥಾನದ ಪ್ರವೇಶಿಸೋಣ.

ನನ್ನ ಜೊತೆಗೆ ನನ್ನ ಕುಟುಂಬದವರಿಗೂ ಒಳ್ಳೆಯದಾಗಲಿ ಎನ್ನುವ ಒಳ್ಳೆಯ ಮನಸ್ಸಿನಿಂದ ಒಂದು ಹೂವಿನ ಎಸಲು ಇಟ್ಟರೂ ದೈವ ದೇವರು ಸಂತೃಪ್ತರಾಗುತ್ತಾರೆ.

ನಾವೆಲ್ಲರೂ ಒಳ್ಳೆಯ ಮನಸ್ಸಿನಿಂದ ದೇವರ ಕಾರ್ಯದಲ್ಲಿ ಭಾಗಿಯಾಗಬೇಕು. ನಮ್ಮ ಮನಸ್ಸು, ನಾಲಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.


ದೈವದೇವರ ಕಾರ್ಯದಲ್ಲಿ ಯಾವುದೇ ಮನಕ್ಲೇಷಗಳನ್ನು ಇಟ್ಟುಕೊಂಡು ಪಾಲ್ಗೊಳ್ಳಬಾರದು.

ನಮ್ಮ ಜೀವನವನ್ನು ನೋಡಿ ಇನ್ನೊಬ್ಬರು ಕಲಿಯುವಂತಾಗಬೇಕು. ಸದಾ ಒಳ್ಳೆಯದನ್ನು ಮಾಡಬೇಕು. ಹೀಗಿದ್ದರೆ ಮಾತ್ರ ನಮ್ಮ ಬದುಕು ಸಾರ್ಥಕ.

ಇಲ್ಲಿ ಜಗದೊಡೆಯ ದೇವರು. ಇಲ್ಲಿ ನಾನು ಎನ್ನುವುದನ್ನು ಬಿಟ್ಟು, ದೇವರು ನನ್ನಿಂದ ಈ ಸೇವೆ ಮಾಡಿಸಿದರು ಎನ್ನುವ ಸೇವೆಯನ್ನು ಮಾಡಿಸಿದರೇ ಅದೇ ಸಾರ್ಥಕ ಎಂದು ಹರಸಿದರು.


ನೂತನ ಮನೆಯಲ್ಲಿ ದೈವಗಳ ಪ್ರತಿಷ್ಠಾಪನೆ
ದೈವಗಳಿಗೆ ನಿರ್ಮಿಸಿದ ನೂತನ ದೈವದ ಗೃಹಪ್ರವೇಶವನ್ನು ಅಂಬ್ಲಮೊಗರು ಪ್ರಶಾಂತ್‌ ಉಡುಪ ದಿವ್ಯಹಸ್ತದಿಂದ ನೆರವೇರಿಸಲಾಯಿತು.

ನಾಗದೇವರಿಗೆ ತಂಬಿಲ, ಅಶ್ಲೇಷ ಪೂಜೆ, ವಾಸ್ತು ಹೋಮ, ಅಘೋರ ಹೋಮ, ಸತ್ಯನಾರಾಯಣ ಪೂಜೆ, ವೆಂಕಟ್ರಮಣ ಪೂಜೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ, ಗುಳಿಗನಿಗೆ ಕೋಲೋತ್ಸವ ನಡೆಯಿತು.


ವಾಸ್ತು ಶಿಲ್ಪಿ ಪ್ರಸನ್ನ ಮುಳಿಯಾಲು, ಗಣೇಶ್‌ ಭಟ್‌ ಮಿತ್ತೂರು, ಬೋಲ್ದನ್ ಕುಟುಂಬಸ್ಥರ ತರವಾಡು ಮನೆಯ ಹಿರಿಯರಾದ ಐತಪ್ಪ ಬೆಳ್ತಂಗಡಿ, ಮೋಹಿನಿ ಬೆಳ್ಮ, ಕಾರ್ಯಕಾರಿ ಸಮಿತಿ ಪ್ರಮುಖರು, ಕುಟುಂಬಸ್ಥರು, ಊರಿನ ಭಕ್ತಾದಿಗಳು, ಹಿಂದೂ ಸಮಾಜದ ಮುಖಂಡರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Hot Topics

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...