Thursday, November 26, 2020

ಸಾಮಾರಸ್ಯದ ಪ್ರತೀಕ ಮಂಗಳೂರಿನ ಈ ಕಾಳಿ ಚರಣ್ ಫ್ರೆಂಡ್ಸ್…!

ಹುಬ್ಬಳ್ಳಿ ಉದ್ಯಮಿಯ ಕೊಲೆ ಪ್ರಕರಣ : ದಯಾ ನಾಯಕ್ ತಂಡದಿಂದ ಪ್ರಮುಖ ಆರೋಪಿಯ ಬಂಧನ….

ಹುಬ್ಬಳ್ಳಿ ಉದ್ಯಮಿಯ ಕೊಲೆ ಪ್ರಕರಣ : ದಯಾ ನಾಯಕ್ ತಂಡದಿಂದ ಪ್ರಮುಖ ಆರೋಪಿಯ ಬಂಧನ.... ಮುಂಬಯಿ : ರಿಯಲ್ ಎಸ್ಟೇಟ್ ಉದ್ಯಮಿಯ ಶೂಟೌಟ್ ಪ್ರಕರಣ. ಪ್ರಮುಖ ಆರೋಪಿಯನ್ನು ಮುಂಬಯಿ ಎಟಿಎಸ್ ಅಧಿಕಾರಿಯಾದ ದಯಾ‌ ನಾಯಕ್...

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ – ಶಾಸಕ ಕಾಮತ್..!

ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ - ಶಾಸಕ ಕಾಮತ್ ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ...

 ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ 

ಕೃಷ್ಣಾನುಗ್ರಹದಿಂದ ಪ್ರಜ್ವಲಿಸುತ್ತಿರುವ ಎಳೆ ಕಂದಮ್ಮ ಪ್ರಜ್ವಲಾಳಿಗೆ  ನಾಮಕರಣದ ಸಂಭ್ರಮ  ಉಡುಪಿ: ಎಲ್ಲ ಮಕ್ಕಳಿಗೂ ನಾಮಕರಣ ಸಂಭ್ರಮ ಸಾಮಾನ್ಯ ಆದ್ರೆ ಈ ಪುಟಾಣಿ ಕಂದಮ್ಮನಿಗೆ ನಾಮಕರಣ ಸಂಭ್ರಮ ವಿಶೇಷತೆಯೇ ಸರಿ ಯಾಕಂತೀರಾ... ಈ ಮುದ್ದು ಕಂದಮ್ಮನಿಗೆ...

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ ಭಾರತದಲ್ಲಿ ಕರಾಳ ಅಧ್ಯಾಯ ಬರೆದ  ನವೆಂಬರ್ 26.11. 2008ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷಗಳು ಕಳೆದಿದ್ದು, ಅಮಾಯಕ ಜನರು,...

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಭಾಜಪಾ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹಲವು...

ಸಾಮಾರಸ್ಯದ ಪ್ರತೀಕ ಮಂಗಳೂರಿನ ಈ ಕಾಳಿ ಚರಣ್ ಫ್ರೆಂಡ್ಸ್…!

ಮಂಗಳೂರು : ಕಾಳಿ ಚರಣ್ ಫ್ರೆಂಡ್ಸ್ ಈ ಹೆಸರು ಕೇಳದವರು ಬಹುಷ ಇರಲಿಕ್ಕಿಲ್ಲ. ಕಳೆದ 35 ವರ್ಷಗಳಿಂದ ಮಂಗಳೂರು ನಗರದಲ್ಲಿ ಹುಲಿ ವೇಷ ತಡವನ್ನು ಮುನ್ನಡೆಸಿಕೊಂಡು ಬರುತ್ತಿದೆ.

ಪ್ರತೀ ದಸರಾ ಸಂದರ್ಭದಲ್ಲೂ ಇವರ ಹುಲಿಗಳು ಅಖಾಡಕ್ಕೆ ಇಳಿಯುತ್ತವೆ. ಶಾರದೋತ್ಸವಕ್ಕೆ ಇವರುಗಳು ಹುಲಿ ವೇಷ ಹಾಕಿದರೂ ಇವರ ಬದುಕು ಅಷ್ಟೇ ಸಾಮಾರಸ್ಯದಿಂದ ಕೂಡಿದೆ.

ತಾವೂ ಹಿಂದುಗಳಾದರೂ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಇವರು ಕಾರ್ಯದಲ್ಲೂ ಇದನ್ನು ಅಳವಡಿಸಿಕೊಂಡಿದ್ದಾರೆ.

ಮಂಗಳೂರು ನಗರದ ಬೋಳೂರು ನೇಷನಲ್ ಪರಿಸರದಲ್ಲಿ ಇರುವ ನೂರಾರು ವರ್ಷಗಳ ಪುರಾತವಾದ ಈ ಯೇಸು ಕ್ರಿಸ್ತನ ಪುತ್ತಳಿಗೆ ನಮನ ಸಲ್ಲಿಸಿಯೇ ಇವರು ಹುಲಿವೇಷದ ತಂಡವನ್ನು ಇಳಿಸುವುದು. ಕಳೆದ ದಶಕಗಳಿಂದ ಇದನ್ನು ತಪ್ಪದೇ ಪಾಲಿಕೊಂಡು ಬಂದಿದ್ದಾರೆ ಕಾಳಿ ಚರಣ್ ಫ್ರೆಂಡ್ಸ್ .

ಯೇಸು ಕ್ರಿಸ್ತರ ಪುತ್ತಳಿ ಇರುವ ಈ ಸ್ಥಳ ಹಿಂದೂ ಬಂಧವರಿಗೆ ಸೇರಿದ ಜಾಗವಾಗಿದ್ದು. ಕುಟುಂಬವು ನಂಬಿ ಇಂದಿನ ವರಗೂ ಅದನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.

ಇದರ ನಿರ್ವಹಣೆಯ ಜವಾಬ್ದಾರಿಯನ್ನು ಕಾಳಿಚರಣ್ ಫ್ರೆಂಡ್ಸ್ ನೋಡುಕೊಳ್ಳುತ್ತಿದೆ.

ಅಲ್ಲದೇ ಕ್ರಿಸ್ಮಸ್, ಈಸ್ಟ್ ರ ಹಬ್ಬದ ಸಂದರ್ಭದಲ್ಲೂ ವಿದ್ಯುತ್ ದೀಪಾಲಕಾರ, ವರುಷ ವರುಷ ಬಣ್ಣಗಳನ್ನು ಬಳಿಯುತ್ತ ಇದರ ಸಂರಕ್ಷಣೆ ಮಾಡುತ್ತಿದ್ದಾರೆ.

ಕೃಷ್ಣ ಜನ್ಮಾಷ್ಟಮಿಯ ದಿನವೂ ಯೇಸು ಕ್ರಿಸ್ತನ ರಿಗೆ ವಿಶೇಷ ಅಲಂಕಾರ ಹಾಗೂ ಕ್ಯಾಂಡಲ್ ಉರಿಸಿ ಕೋಮು ಸಾಮರಸ್ಯ ಸಾರುತ್ತಿದ್ದಾರೆ.

ಅಷ್ಟೇ ಅಲ್ಲದೇ ದಸರ ಸಂದರ್ಭದಲ್ಲಿ ಕಳೆದ 35 ವರುಷದಿಂದ ಪಿಲಿ ನಲಿಕೆ ಮಾಡಿಕೊಂಡು ಬಂದ್ದಿದು 2 ನೇ ಪ್ರತಿಷ್ಟೆಯ ಹುಲಿ ತಂಡ ಇದಾಗಿದೆ,

ಹುಲಿಗಳು ಅಖಾಡಕ್ಕೆ ಇಳಿಯುವ ಮೊದಲು ಇಲ್ಲಿನ ಯೇಸು ಕ್ರಿಸ್ತ ರ ಪ್ರತಿಮೆಗೆ ಹೂಹಾರ ಹಾಕಿ ಕ್ಯಾಂಡಲ್ ಉರಿಸಿ ಪ್ರಾರ್ಥಿಸಿ ತೆರಳುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿರುತ್ತದೆ.

ಅಲ್ಲದೇ ಇತರ ಹಿಂದೂ ಹಬ್ಬಗಳನ್ನು ಇವರು ಆಚರಿರುತ್ತಾರೆ. ಸಾಂಸ್ಕೃತಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಕೂಡ ಕಾಳಿ ಚರಣ್ ಫ್ರೆಂಡ್ಸ್ ಉತ್ತಮ ಕಾರ್ಯ ಮಾಡುವುದಲ್ಲಿ ಹಿಂದೆ ಬಿದ್ದಿಲ್ಲ.

ಜಾತಿ- ಧರ್ಮ- ಪಂಗಡಗಳೆಂದು ಕಲಹಗಳಿಂದ ವಿಘಟನೆಯಲ್ಲಿರುವ ಈ ಕಾಲಘಟ್ಟದಲ್ಲಿ ಇಂತಹ ಸಾಮಾರಸ್ಯ ಸಾರುವ ಕಾಳಿ ಚರಣ್ ಫ್ರೆಂಡ್ಸ್‌ ತಂಡಕ್ಕೆ ಒಂದು ಶುಭ ಹಾರೈಕೆ ಕೊಡಲೇ ಬೇಕಲ್ಲವೇ. ?

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.