Connect with us

    LATEST NEWS

    ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ 269 ರೂ ಹೆಚ್ಚಳ: ಹೋಟೆಲ್‌ ತಿಂಡಿ ದುಬಾರಿ ಸಾಧ್ಯತೆ

    Published

    on

    ಹೊಸದಿಲ್ಲಿ: ವಾಣಿಜ್ಯ ಸಿಲಿಂಡರ್‌ಗಳ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬೆಲೆಯನ್ನು ನಿನ್ನೆ ರೂ. 266 ಹೆಚ್ಚಿಸಲಾಗಿದೆ. ಮಂಗಳೂರಿನಲ್ಲಿ 269 ಜಾಸ್ತಿ ಆಗಿದೆ. ಆದರೆ ಅಡುಗೆ ಅನಿಲದ ದರ ಏರಿಕೆಯಾಗಿಲ್ಲ.


    ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 1,950 ಆಗಲಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ದರ ರೂ.2,073.50 ರಷ್ಟಿದ್ದರೆ, ಚೆನ್ನೈನಲ್ಲಿ ಈಗ 19 ಕೆಜಿ ಸಿಲಿಂಡರ್ ರೂ. 2,133 ಕ್ಕೆ ಲಭ್ಯವಿರುತ್ತದೆ.
    ಈ ಹಿಂದೆ, ಅಕ್ಟೋಬರ್ 6 ರಂದು ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ರೂ. 15 ಹೆಚ್ಚಿಸಲಾಯಿತು. ‘

    ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರಗಳನ್ನು ರೂ. 25 ಹೆಚ್ಚಿಸಲಾಯಿತು. ವಾಣಿಜ್ಯ ಸಿಲಿಂಡರ್‌ ಬಳಕೆಯು ಹೆಚ್ಚಾಗಿ ಹೊಟೇಲುಗಳಲ್ಲಿ ಇರುವುದರಿಂದ ಹೊಟೇಲು ತಿನಿಸು ಅವಲಂಬಿಸುವವರಿಗೆ ಪೆಟ್ಟು ನೀಡಲಿದೆ.

    ಇದರ ಪರಿಣಾಮ ಹಿನ್ನೆಲೆ ಹೊಟೇಲ್‌ ತಿಂಡಿ ತಿನಿಸುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಇದೀಗ ಮಂಗಳೂರಿನಲ್ಲಿ ಒಂದು 19 ಕೆ.ಜಿ ವಾಣಿಜ್ಯ ಸಿಲಿಂಡರ್‌ ಬೆಲೆ 1987 ಆಗಿದೆ. 5 ಕೆಜಿ ಸಿಲಿಂಡರ್‌ ಬೆಲೆ 588 ರೂಪಾಯಿ ಇದೆ.

    LATEST NEWS

    ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

    Published

    on

    ಬೆಳಗಾವಿ/ಮಂಗಳೂರು: ಹೆತ್ತ ಮಕ್ಕಳನ್ನು ಬಿಟ್ಟು ಇಪ್ಪತ್ತೈದು ವರ್ಷದ ಯುವಕನ ಜೊತೆ ತಾಯಿಯೊಬ್ಬಳು ಪರಾರಿಯಾದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ನಡೆದಿದೆ. ತಾಯಿಯಿಂದಾಗಿ ಮೂರು ಗಂಡು ಮಕ್ಕಳು ಬೀದಿಗೆ ಬಂದಿದ್ದಾರೆ. ನಮಗೆ ನ್ಯಾಯ ಕೊಡಿಸುವಂತೆ ಮೂರು ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.

    ಸರಕಾರಿ ನೌಕರಿಯಲ್ಲಿದ್ದ ಪತಿಯ ಅಕಾಲಿಕ ಮರಣದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಪತಿಯ ಮರಣ ನಂತರ ಮೂರು ಮಕ್ಕಳು ತಾಯಿಯ ನೆರಳಲ್ಲಿ ಬೆಳೆದಿದ್ದಾರೆ. ಇದೀಗ ಮೂರು ಗಂಡು ಮಕ್ಕಳನ್ನು ಬೀದಿ ಪಾಳು ಮಾಡಿ ಇಪ್ಪತ್ತೈದು ವರ್ಷದ ಯುವಕನ ಜೊತೆ ಓಡಿ ಹೋಗಿದ್ದಾಳೆ. ಕೆಲ ತಿಂಗಳಿನಿಂದ ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.

    Read More..; ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    ಇತ್ತ ತಂದೆಯೂ ಇಲ್ಲದೆ ತಾಯಿಯೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನೆ ಬಾಡಿಗೆ ಕಟ್ಟದೆ ಮನೆ ಮಾಲೀಕ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಸದ್ಯಕ್ಕೆ ಅಜ್ಜಿ ಮನೆಯಲ್ಲಿ ಮೂರು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ.

    ಬೆಳಗಾವಿ ಕ್ಯಾಂಪ್ ಪೊಲೀಸರ ಬಳಿ ಹೋಗಿ ತಮ್ಮ ತಾಯಿಯನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ. ನಾವು ವಿದ್ಯಾಭ್ಯಾಸ ಬಿಟ್ಟು ಕೆಲಸಕ್ಕೆ ಹೋಗಿ ತಾಯಿಯನ್ನು ಸಾಕುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆಲ್ಲಾ ಮರುಗದ ನಲುವತ್ತು ವರುಷದ ತಾಯಿ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದಾಳೆ.

    Read More..; WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    ಇನ್ನು ಯುವಕ ವಿನಾಯಕ ಕೋಲ್ಕಾರ ಈ ಹಿಂದೆ ಮಹಿಳೆಯೊಬ್ಬರಿಂದ ಚಪ್ಪಲಿ ಏಟು ತಿಂದಿದ್ದನು. ಮಹಿಳೆಗೆ ಕರೆ ಮಾಡಿ ಐ ಲವ್‌ ಯೂ ಎಂದಿದ್ದನಂತೆ. ಇದರಿಂದ ಆಕ್ರೋಶಗೊಂಡ ಮಹಿಳೆ ಯುವಕನಿಗೆ ಚಪ್ಪಲಿ ಸೇವೆ ಮಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಸದ್ಯ ಯುವಕನ ಜಾಲದಲ್ಲಿ ಸಿಲುಕಿಕೊಂಡಿರುವ ಮಹಿಳೆ ತನ್ನ ಮೂರು ಮಕ್ಕಳನ್ನು ಬಿಟ್ಟು ಹಾಯಾಗಿದ್ದಾಳೆ. ಕರುಳಿನ ಕೂಗು ಆಕೆಗೆ ಕೇಳಿಸದೆ ಇರುವುದು ವಿಪರ್ಯಾಸ.

    Continue Reading

    FILM

    ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    Published

    on

    ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಟ ದರ್ಶನ್ ಅವರಿಗೆ ಸೇರಿದ್ದೆನ್ನಲಾದ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮ್ಯಾನೇಜರ್ ಮಾನಸಿಕ ಖಿನ್ನತೆಗೆ ಒಳಗಾಗಿ ಡೆ*ತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ.


    ಶ್ರೀಧರ್ ಮೃತ ಮ್ಯಾನೇಜರ್. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮ್ಯಾನೇಜರ್ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದರು. ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್‌ನಲ್ಲಿ ಶ್ರೀಧರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆತ, ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಶ್ರೀಧರ್ ಮೃ*ತದೇಹವನ್ನು ನೋಡಿದ್ದ ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ.

    ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಮ್ಯಾನೇಜರ್ ಶ್ರೀಧರ್ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಮೃ*ತಪಟ್ಟಿರುವುದು ಕಂಡು ಬಂದಿದೆ. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು, ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಶ*ವವಾಗಿ ಪತ್ತೆಯಾಗಿದ್ದಾರೆ.
    ಡೆತ್ ನೋಟ್ ಪತ್ತೆಯಾಗಿದ್ದು, ಈ ಘಟನೆಯ ಬೆನ್ನಲ್ಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ : WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    ಡೆತ್ ನೋಟ್ ನಲ್ಲಿ ಏನಿದೆ?

    ದರ್ಶನ್ ಫಾರ್ಮ್‌ಹೌಸ್ ಮ್ಯಾನೇಜರ್ ಸಾವಿಗೂ ಮುನ್ನ ಬರೆದಿಟ್ಟಿರುವ ಡೆ*ತ್‌ನೋಟ್ ಪತ್ತೆಯಾಗಿದೆ. ಡೆತ್ ನೋಟ್ ಅನ್ನು ಸ್ವತಃ ತಾನೇ ಬರೆದಿಟ್ಟಿರುವ ಮ್ಯಾನೇಜರ್ ಶ್ರೀಧರ್ ಡೆ*ತ್ ನೋಟ್ ನಲ್ಲಿ ಹೆಬ್ಬೆಟ್ಟು ಕೂಡಾ ಒತ್ತಿದ್ದಾರೆ.

    ಅದರಲ್ಲಿ ಯಾವುದೋ ಕಾರಣದಿಂದ ನನ್ನ ಪರ್ಸನಲ್ ಒಂಟಿತನ ಕಾಡುತ್ತಿದೆ. ಬದುಕುವ ಆಸೆಯಿಲ್ಲ, ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾ*ವಿನ ಕಾರಣ ಹಾಗೂ ಹಿನ್ನೆಲೆಯನ್ನು ಇಟ್ಟುಕೊಂಡು ಸ್ನೇಹಿತರು, ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಕೊಡಬೇಡಿ. ನಾನು ಯಾರಿಗೆ ಫೋನ್ ಮಾಡಿದ್ದೆ, ಅದು ಇದು ಎಂದು ಯಾರಿಗೂ ಪೊಲೀಸರು ತೊಂದರೆ ಕೊಡಬೇಡಿ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಸಹೋದರಿಯರು ಸೇರಿ ಎಲ್ಲರಿಗೂ ಹೇಳುತ್ತಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.

    Continue Reading

    LATEST NEWS

    WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    Published

    on

    ಮಂಗಳೂರು/ ಮಹಾರಾಷ್ಟ್ರ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವನ್ನೂ ಪ್ರದರ್ಶನಕ್ಕಾಗಿ, ಶೋಕಿಗಾಗಿ ಹಂಚಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ರೀಲ್ಸ್ ಮಾಡೋದು ಕಾಮನ್ ಆಗೋಗಿದೆ. ವೀವ್ಸ್ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಈ ರೀಲ್ಸ್ ಹುಚ್ಚು ಪ್ರಾಣಕ್ಕೆ ಕುತ್ತಾಗಿರೋ ಉದಾಹರಣೆಗಳಿಗೇನೂ ಕಮ್ಮಿಯಿಲ್ಲ ಬಿಡಿ. ಇದೀಗ ಯುವತಿಯೊಬ್ಬಳು ಕಾರು ಚಲಾಯಿಸುವ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಘಟನೆ ನಡೆದಿದೆ.


    ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದ ಸುಲಿಭಂಜನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್ ​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ್ದಾಳೆ. ಪರಿಣಾಮ ಕಾರು ಕಂದಕಕ್ಕೆ ಬಿದ್ದಿದೆ. ಪರಿಣಾಮ ಗಂಭೀ*ರವಾಗಿ ಗಾಯಗೊಂಡ ಯುವತಿ ಇಹಲೋಕ ತ್ಯಜಿಸಿದ್ದಾಳೆ.

    ಶ್ವೇತಾ ಸುರ್ವಾಸೆ(23) ಮೃತ ಯುವತಿ. ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾ*ವನ್ನಪ್ಪಿದ್ದಾಳೆ. ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.

    ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ. ಶ್ವೇತಾಗೆ ಕಾರು ಓಡಿಸುವಾಗ ರೀಲ್ಸ್ ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಹೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು. ಈ ವೇಳೆ ಶ್ವೇತಾ ಎಕ್ಸಲೇಟರ್ ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

    ಇದನ್ನೂ ಓದಿ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

    ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಎಕ್ಸಲರೇಟರ್ ಒತ್ತಿದ್ದರಿಂದ ಈ ಅವಘ*ಡ ಸಂಭವಿಸಿದೆ.

    ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ, ಯುವತಿ ಜೀವಾಂತ್ಯವಾಗಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ವೈರಲ್ ಆಗಿದೆ.

    Continue Reading

    LATEST NEWS

    Trending