Saturday, August 20, 2022

ಪಡುಬಿದ್ರಿಯಲ್ಲಿ ಸಮುದ್ರ ಪಾಲಾದ ಕಾಲೇಜ್ ವಿದ್ಯಾರ್ಥಿ ನೀರುಪಾಲು-ಪ್ರಕರಣ ದಾಖಲು

ಪಡುಬಿದ್ರಿ: ಬೀಚ್‌ನಲ್ಲಿ ಈಜಲು ಹೋದ ಮೂವರು ನೀರುಪಾಲಾದ ಘಟನೆ ‌ಶನಿವಾರ ಸಂಜೆ ಕಾಪು ತಾಲೂಕಿನ ಪಡುಬಿದ್ರಿ ಠಾಣಾ ವ್ಯಾಪ್ತಿಯ ಕಳಿಪಟ್ನ ಎಂಬಲ್ಲಿ ನಡೆದಿದೆ.

ಪಡುಬಿದ್ರೆಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಗಳಾದ ಮೂವರು ಸ್ನೇಹಿತರು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಬೃಹತ್‌ ಅಲೆಗೆ ಸಿಕ್ಕಿ ಮೂವರೂ ಕೂಡ ನೀರುಪಾಲಾಗಿದ್ದರು.

ಈ ಬಗ್ಗೆ ಮಾಹಿತಿ ತಿಳಿದ‌ ಸ್ಥಳೀಯ ಮೀನುಗಾರರು ಇಬ್ಬರನ್ನು ರಕ್ಷಿಸಿದ್ದಾರೆ. ಅದರಲ್ಲಿ ಓರ್ವ ನೀರುಪಾಲಾಗಿದ್ದು, ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics