Connect with us

    DAKSHINA KANNADA

    ಸಿಎಂ ರಾಜಿನಾಮೆ ನೀಡಬೇಕು; ಕ್ಯಾಪ್ಟನ್‌ ಬ್ರಿಜೇಶ್ ಚೌಟ ಒತ್ತಾಯ

    Published

    on

    ಮಂಗಳೂರು: ಸಿದ್ದರಾಮಯ್ಯ 14 ಸೈಟ್ ವಾಪಾಸ್‌ ಕೊಟ್ಟಿರುವುದು ಅವರಿಗೆ ಅವರ ತಪ್ಪಿನ ಅರಿವಾದಂತೆ ಇದೆ. ಅವರು ಬದುಕುಳಿಯುವ ಕೊನೆಯ ಯತ್ನವಾಗಿ ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.


    ಸಂವಿಧಾನದ ಆಶಯಗಳಿಗೆ ಗೌರವ ನೀಡಬೇಕು ಕೇವಲ ಕುರ್ಚಿಗೆ ಅಂಟಿಕೊಂಡಿರುವುದಲ್ಲ . ಸಿದ್ದರಾಮಯ್ಯ ಕೇವಲ ಕುರ್ಚಿಗಾಗಿಯೇ ಇರುವಂತೆ ಮಾಡುತ್ತಾರೆ ಎಂದು ಹೇಳಿದರು.
    ಆಮಿಷಗಳಿಗೆ ಜನರನ್ನು ಒಳಪಡಿಸುತ್ತಾ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಕಿಂಚಿತ್ತೂ ಆಭಿವೃದ್ಧಿ ಕಾಣುತ್ತಿಲ್ಲ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್ ಮಾಡಿಕೊಂಡಿದ್ದಾರೆ ಎಂದರು.

    Click to comment

    Leave a Reply

    Your email address will not be published. Required fields are marked *

    BANTWAL

    ಬಸ್ಸಿನಿಂದ ಪರಿಸರ ಮಾಲಿನ್ಯ; ಸಾರ್ವಜನಿಕರ ಆಕ್ರೋಶ

    Published

    on

    ಬಂಟ್ವಾಳ: ಮಂಗಳೂರು ವಿಭಾಗಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳೂರು – ಧರ್ಮಸ್ಥಳ ಸಂಚರಿಸುವ ವೇಳೆಯಲ್ಲಿ  ಜೀವಕ್ಕೆ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಕಪ್ಪು ಹೊಗೆಯನ್ನು ಹೊರ ಹಾಕುತ್ತಿದ್ದು  ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


    ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಸರಿಯಾದ ನಿರ್ವಹಣೆ ಇಲ್ಲದ ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುತ್ತಿದ್ದು, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರವೇ ನಿವಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಕಪ್ಪು ಹೋಗೆ ಹೊರ ಸೂಸುವ ಬಸ್ಸಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

    Continue Reading

    DAKSHINA KANNADA

    ಬಸ್ಸುಗಳು ಮುಖಾಮುಖಿ; ದಂಪತಿಗೆ ಗಾಯ

    Published

    on

    ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸ್ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ಮುಖಾಮುಖಿ ಡಿಕ್ಕಿಹೊಡೆದು ವಾಹನಗಳು ಜಖಂಗೊಂಡಿದೆ.


    ಹಾಸನ ಮೂಲದ ದಂಪತಿಗಳಾದ ನಾಗೇಂದ್ರ ಪ್ರಸಾದ್ (60) ಮತ್ತು ಭಾರತಿ (54) ಎಂಬುವವರಿಗೆ ಗಾಯಗಳಾಗಿದ್ದು, ಶಿರಾಡಿಯ ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
    ಇತ್ತೀಚೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕನ ಅತಿವೇಗ ಹಾಗೂ ಅಜಾಗರುಕತೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನೆಲ್ಯಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಕಾರಿನಡಿಗೆ ಬಿದ್ದು ಬಾಲಕ ಸಾ*ವು

    Published

    on

    ಕೊಕ್ಕಡ: ಮನೆಯ ಅಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃ*ತಪಟ್ಟ ದಾ*ರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ನಿನ್ನೆ (ಅ.1) ನಡೆದಿದೆ.


    ನವಾಫ್ (10) ಮೃ*ತಪಟ್ಟ ಬಾಲಕ. ಮನೆಗೆ ಬಂದಿದ್ದ ಅತಿಥಿಗಳು ಹೊರಡುವ ಸಂದರ್ಭದಲ್ಲಿ ಕಾರನ್ನು ಹಿಂದಕ್ಕೆ ತೆಗೆಯುವಾಗ , ಹಿಂಬದಿಯೇ ನಿಂತಿದ್ದ ನವಾಫ್ ಕಾರಿ*ನಡಿಗೆ ಬಿದ್ದದ್ದಾನೆ. ಅವನ ಮೇಲೆಯೇ ಕಾರು ಹರಿದ ಪರಿಣಾಮವಾಗಿ ತಲೆ ಹಾಗೂ ಕಾಲಿಗೆ ಗಂ*ಭೀರ ಗಾಯಗಳಾಗಿ ಸಾವ*ನ್ನಪ್ಪಿದ್ದಾನೆ.
    ನವಾಫ್ ಕಾರಿನ ಹಿಂದೆ ನಿಂತಿರುವುದು ಯಾರಿಗೂ ತಿಳಿಯದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending