Thursday, September 29, 2022

ಸಿಎಂ ಬೆಂಗಾವಲು ವಾಹನ ಪಲ್ಟಿ-ಗಾಯಗೊಂಡ ಸಿಬ್ಬಂದಿ..! 

ಸಿಎಂ ಬೆಂಗಾವಲು ವಾಹನ ಪಲ್ಟಿ-ಗಾಯಗೊಂಡ ಸಿಬ್ಬಂದಿ..! 

ಚಿಕ್ಕಮಗಳೂರು : ಮಂಗಳೂರಿನಿಂದ ವಾಪಸ್ ಆಗುತ್ತಿದ್ದ ಸಂದರ್ಭ ಸಿಎಂ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.

ಗುರುವಾರ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುವ ಸಲುವಾಗಿ ಮಂಗಳೂರಿಗೆ ಭೇಟಿ ನೀಡಿದ್ದರು.ಈ ಸಮಯದಲ್ಲಿ ಸಿಎಂ ಬೆಂಗಾವಲು ಕರ್ತವ್ಯದಲ್ಲಿದ್ದವರು ಇಂದು ಕಾರ್ಯ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಬಳಿ ಬರುತ್ತಿದ್ದಂತೆ ಜೀಪ್ ಪಲ್ಟಿಯಾಗಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ವಾಹನ ಚಲಿಸುವಾಗ ಜೀಪ್ ಬ್ರೇಕ್ ಜಾಮ್ ಆಗಿದ್ದೇ ವಾಹನ ಪಲ್ಟಿಯಾಗಲು ಕಾರಣವಾಗಿದೆ.

ಬ್ರೇಕ್ ಜಾಮ್ ಆಗುತ್ತಿದ್ದಂತೆ, ವಾಹನದ ಟೈರ್ ಸ್ಫೋಟಗೊಂಡು ಪಲ್ಟಿಯಾಗಿ ಉರುಳಿದೆ. ಘಟನೆಯಲ್ಲಿ ಜೀಪ್ ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಜೀಪ್ ಚಾಲಕ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ತುಳು ಭಾಷೆಗೆ ಸ್ಥಾನಮಾನ: ನವರಾತ್ರಿ ಮುಗಿದ ಕೂಡಲೇ ಮೀಟಿಂಗ್

ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು...

ಮಂಗಳೂರು: ಮಾರ್ನಮಿಕಟ್ಟೆ ದೇವಿ ಪ್ರತ್ಯಂಗಿರಾ ಕ್ಷೇತ್ರದಲ್ಲಿ ಶರನ್ನವರಾತ್ರಿ ಸಂಭ್ರಮ, ದುರ್ಗಾ ನಮಸ್ಕಾರ ಪೂಜೆ

ಮಂಗಳೂರು: ಕರಾವಳಿಯಲ್ಲೀಗ ನವರಾತ್ರಿ ಸಂಭ್ರಮ. ದೇವಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.ಕಾರಣಿಕದ ಶಕ್ತಿಗೆ ಮನೆಮತಾಗಿರುವ ಹಾಗೂ ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿ ಹರಕೆ ಹೇಳಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವಂತಹ ಮಂಗಳೂರು ಮಾರ್ನಮಿಕಟ್ಟೆಯ ತಾಯಿ...

ಮಂಗಳೂರು: ಖಾಸಗಿ ಬಸ್ಸುಗಳಲ್ಲಿ ಕನ್ನಡ ನಾಮಫಲಕ ಇನ್ಮುಂದೆ ಕಡ್ಡಾಯ-ತುಳು ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ವತಿಯಿಂದ ಇಂದು ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರು...