Connect with us

    LATEST NEWS

    ಪ್ರತಿಭಟನೆ ವೇಳೆ ಮೆಣಸಿನಕಾಯಿ ಬೆಳೆಗಾರರಿಂದ ಆತ್ಮಹತ್ಯೆಗೆ ಯತ್ನ..!

    Published

    on

    ಬಳ್ಳಾರಿ:  ಕೆಂಪು ಮೆಣಸು ಖರೀದಿಸಿದ ಖಾಸಗಿ ಕಂಪೆನಿಯು ಒಂದೂವರೆ ವರ್ಷದಿಂದ ಹಣವನ್ನು ಪಾವತಿ ಮಾಡದೆ ಬಾಕಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ವರು ಮೆಣಸಿನಕಾಯಿ ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ.

    ರುದ್ರೇಶ್ (55), ಹನುಮಂತ್ (40), ಶೇಖರ್ (45) ಮತ್ತು ಕುನೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು. ಹಣ ಪಾವತಿ ಮಾಡಲು ವಿಳಂಬ ಮಾಡಿದ್ದನ್ನು ವಿರೋಧಿಸಿ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

    ಬಾವನಿಂದಲೇ ಬಾಮೈದನ ಹ*ತ್ಯೆ..! ಮಗನ ಅಗಲಿಕೆ ನೋವಿನಿಂದ ತಾಯಿ ಆತ್ಮಹ*ತ್ಯೆ..!!

    ಬೆಂಗಳೂರು ಮೂಲದ ಅಗ್ರಿಗ್ರೀಡ್ ಪ್ರೈವೇಟ್ ಲಿಮಿಟೆಡ್ 100 ರೈತರಿಂದ 1.9 ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಖರೀದಿಸಿದೆ ಎಂದು ರೈತರು ತಿಳಿಸಿದ್ದಾರೆ. 54 ರೈತರ ಬಿಲ್ ಕ್ಲಿಯರ್ ಆಗಿದ್ದು, ಉಳಿದ 46 ರೈತರಿಗೆ ಇನ್ನೂ ಹಣ ಬಂದಿಲ್ಲ. ಬಿಲ್ ಬಾಕಿ ಉಳಿದಿರುವ ರೈತರಲ್ಲಿ ಒಬ್ಬರಾದ ಹನುಮಂತಪ್ಪ ವಡ್ಡರ ಮಾತನಾಡಿ, ‘ಕಂಪೆನಿಯಲ್ಲಿ ಜಿಲ್ಲೆಯ ಹೆಸರಾಂತ ವ್ಯಕ್ತಿಗಳು ಷೇರುದಾರರಾಗಿದ್ದಾರೆ. ಅವರನ್ನು ನಂಬಿ 220 ಟನ್ ಮೆಣಸಿನಕಾಯಿಯನ್ನು ಕಂಪೆನಿಗೆ ಮಾರಾಟ ಮಾಡಿದೆವು. ಸಾಮಾನ್ಯವಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಖಾಸಗಿ ಕಂಪನಿಗೆ ನೀಡಿದ್ದು ಇದೇ ಮೊದಲು ಎಂದು ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಕಲ್ಯಾಣ-ಕರ್ನಾಟಕದಲ್ಲಿ ಕುರುಗೋಡು ತಾಲೂಕು ಮೆಣಸಿನಕಾಯಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ.

     

     

     

     

     

    Click to comment

    Leave a Reply

    Your email address will not be published. Required fields are marked *

    LATEST NEWS

    ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನ ಜಲಾವೃತ; ನಾವುಂದದಲ್ಲಿ ನೆರೆ

    Published

    on

    ಬೈಂದೂರು : ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಸ್ವರ್ಣಾ ನದಿ, ಸೀತಾ ನದಿ ಮತ್ತು ಸೌಪರ್ಣಿಕಾ ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ.


    ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ನದಿಯ ನೀರು ಶ್ರೀ ಕ್ಷೇತ್ರದ ಒಳಗೆ ನುಗ್ಗಿದೆ.


    ಬೈಂದೂರಿನ ನಾವುಂದ ಪರಿಸರದಲ್ಲಿ ನೆರೆ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

    ಇನ್ನು ಬೈಂದೂರು ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ತಹಸೀಲ್ದಾರ್‌ಅವರು ರಜೆ ಘೋಷಿಸಿದ್ದಾರೆ. ಹವಾಮಾನ ಇಲಾಖೆಯು ಉಡುಪಿ ಜಿಲ್ಲೆಗೆ ಇಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

    ಇದನ್ನೂ ಓದಿ : ಮುಲ್ಕಿ : ಮನೆಗೆ ನುಗ್ಗಿ ನಗ ನಗದು ಕಳವು

    Continue Reading

    DAKSHINA KANNADA

    ಮುಲ್ಕಿ : ಮನೆಗೆ ನುಗ್ಗಿ ನಗ ನಗದು ಕಳವು

    Published

    on

    ಮುಲ್ಕಿ : ಮನೆಮಂದಿ ಒಳಗಿದ್ದಾಗಲೇ, ಮನೆಗೆ ನುಗ್ಗಿ ನಗ ನಗದು ಕಳವುಗೈದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆಯಲ್ಲಿ ಇಂದು(ಜು.4) ಮುಂಜಾನೆ ನಡೆದಿದೆ. ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದು ಶೇಖಬ್ಬ ಅವರ ಮಗಳ ಗಂಡ ರಾತ್ರಿ 1.00 ಗಂಟೆಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿ ಮಲಗಿದ್ದರು. ಆದರೆ, ಆ ಸಂದರ್ಭ ಕಳ್ಳತನ ನಡೆದಿಲ್ಲ.


    ಮುಂಜಾನೆ 4.30 ಕ್ಕೆ ಶೇಕಬ್ಬ ಅವರ ಮಗಳು ಶೌಚಾಲಯಕ್ಕೆ ತೆರಳಲು ಏಳುವಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಕಳ್ಳರು ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಬಾಗದ ಚಿಲಕವನ್ನು ರಾಡ್ ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿದ್ದಾರೆ.

    ಹಾಸಿಗೆಯ ಅಡಿಯಲ್ಲಿ ಕಪಾಟಿನ ಕೀಲಿಕೈ ಇದ್ದು, ಅದರಿಂದ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಸುಮಾರು 5000 ರೂಪಾಯಿ ನಗದು ದೋಚಿದ್ದಾರೆ.
    ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮುಲ್ಕಿ ಪೋಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    Continue Reading

    LATEST NEWS

    ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    Published

    on

    ಮಂಗಳೂರು : ಡೇಟಿಂಗ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾ ಇದ್ದು, ಒಂದು ರೀತಿಯ ಟ್ರೆಂಡಿಂಗ್ ಕೂಡಾ ಆಗಿದೆ. ಹಾಗಂತ ಡೇಟಿಂಗ್ ಮಾಡಲು ಜೊತೆ ಇಲ್ಲಾ ಅಂದ್ರೆ, ಬಾಡಿಗೆ ಜೊತೆಗಾರ ಅಥವಾ ಜೊತೆಗಾತಿಯನ್ನು ನೀಡುವ ಅ್ಯಪ್‌ಗಳೂ ಕೂಡಾ ಬಂದಿವೆ. ಇದರ ಮೂಲಕ ತಮಗೆ ಇಷ್ಟವಾದವರ ಜೊತೆ ಡೇಟಿಂಗ್ ನಡೆಸೋದು ಕೂಡಾ ಈಗ ಜೋರಾಗಿ ನಡಿತಾ ಇದೆ. ಹೀಗೆ ಅ್ಯಪ್ ಮೂಲಕ ಜೊತೆಗಾತಿಯನ್ನು ಸಂಪಾದಿಸಿದ ಯುವಕ ಆಕೆಯ ಜೊತೆ ಡೇಟಿಂಗ್ ಮಾಡಿ ಪೇಚಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಶಾ*ಕ್ ಕೊಟ್ಟ ಬಿಲ್ :

    ಟಿಂಡರ್ ಅ್ಯಪ್‌ ಅನ್ನೋ ಆನ್‌ಲೈನ್ ಜಾಲದ ಮೂಲಕ ಬಾಡಿಗೆ ಗೆಳತಿಯನ್ನು ಸಂಪಾದಿಸಿಕೊಂಡ ಯುವಕ ಆಕೆಯ ಜೊತೆ ಡೇಟಿಂಗ್ ಹೋಗಿದ್ದಾನೆ. ಹೊಟೇಲ್ ಒಂದರಲ್ಲಿ ಫುಡ್ ಆರ್ಡರ್ ಮಾಡಿ ತಿಂದ ಮೇಲೆ ಬಿಲ್ ನೋಡಿದ ಯುವಕ ಶಾ*ಕ್‌ ಆಗಿದ್ದಾನೆ. ಇಬ್ಬರು ತಿಂದ ಫುಡ್ ಹಾಗೂ ಡ್ರಿಂಕ್ಸ್ ಬಿಲ್ ರೂ 44000.00 ಆಗಿದ್ದೇ ಯುವಕ ಶಾ*ಕ್ ಆಗಲು ಕಾರಣ.

    ಇದನ್ನೂ ಓದಿ : ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ಸಾವು

    ಯುವತಿಯ ಜೊತೆ ಡೇಟಿಂಗ್ ಹೋಗಿದ್ದ ಯುವಕ 30 ಎಮ್‌ಎಲ್‌ನ 18 ಜಾಗರ್ ಬಾಂಬ್‌ ಅನ್ನೋ ಡ್ರಿಂಕ್ಸ್ ಹಾಗೂ ಎರಡು ರೆಡ್‌ ಬುಲ್, ಫ್ರೆಂಚ್ ಫ್ರೈಸ್‌ ಹಾಗೂ ಉಪ್ಪು ಸಹಿತ ಕಡಲೆಕಾಯಿ, ನಾಲ್ಕು ಚಾಕೋಲೇಟ್ ಟ್ರಫಲ್‌ ಕೇಕ್‌ ಆರ್ಡರ್‌ ಮಾಡಿದ್ದ. ಇದಿಷ್ಟಕ್ಕೇ ಹೊಟೇಲ್‌ನವರು ರೂ.44829.00 ಬಿಲ್‌ ನೀಡಿದ್ದಾರೆ.

    Continue Reading

    LATEST NEWS

    Trending