Saturday, August 20, 2022

ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಪುಟ್ಟ ಮಗು..!

ಹೆಬ್ರಿ: ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದು ಮಗು ಎಡಕಿವಿಯ ಬಳಿ ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಪೊಲೀಸ್‌ ಠಾಣೆಯ ಶಿವಪುರ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ.


ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಜನತಾ ಕಾಲೋನಿ ಎಂಬಲ್ಲಿ ಶಕುಂತಲಾ ಹಾಗೂ ಕೃಷ್ಣ ಎಂಬ ದಂಪತಿಗೆ ಎರಡೂವರೆ ವರ್ಷ ಪ್ರಾಯದ ಸಾಕ್ಷಿ ಹಾಗೂ 6 ತಿಂಗಳ ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು.

ಮೇ.17ರಂದು ಕಾರ್ಯಕ್ರಮವೊಂದರ ನಿಮಿತ್ತ ಮನೆಗೆ ಬಂದ ಸಂಬಂಧಿ ರಾಜು ಎಂಬುವವರು ರಾತ್ರಿ 8:00 ಗಂಟೆಗೆ ಮನೆಯ ಛಾವಡಿಯಲ್ಲಿ ಸಾಕ್ಷಿಯನ್ನು ಎತ್ತಿ ಅಡಿಸುತ್ತಿದ್ದರು.

ಈ ವೇಳೆ ಏಕಾಏಕಿ ಕೈಯಿಂದ ಜಾರಿದ ಮಗು ನೆಲಕ್ಕೆ ಬಿದ್ದಿದೆ. ಪರಿಣಾಮ ಮಗುವಿನ ಎಡಕಿವಿಯ ಬಳಿ ತೀವ್ರ ಸ್ವರೂಪದ ಗಾಯವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

“ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು”

ಉಡುಪಿ: ಸಾವರ್ಕರ್‌ ಬಗ್ಗೆ ಬೇಕಾ ಬಿಟ್ಟಿ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ.ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಡಿಕೇರಿಯಲ್ಲಿ...

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...

ಚಿಕ್ಕಮಗಳೂರಿನಲ್ಲೂ ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶನ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಮೀಪ ಬಿಜೆಪಿಯವರು ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿದರು.ಪ್ರತಿಯಾಗಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಬಾವುಟ ಪ್ರದರ್ಶಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಗುಂಪುಗಳ...