LATEST NEWS
ಕ್ಯಾಂಟರ್-ಕಾರು ಅಪಘಾತ: ಅಯ್ಯಪ್ಪ ಭಕ್ತರು ಸ್ಥಳದಲ್ಲೇ ದಾರುಣ ಸಾವು
Published
3 years agoon
By
Adminಚಿಕ್ಕಬಳ್ಳಾಪುರ: ಕ್ಯಾಂಟರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಅಯ್ಯಪ್ಪ ಭಕ್ತರಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
22 ವರ್ಷದ ಧರಣೀಶ್, 54 ವರ್ಷದ ನಿರಂಜನ್ ಸಿಂಗ್ ಮೃತರು ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡಪ್ಯಾಯಲಗುರ್ಕಿ ಬಳಿ ಈ ಅಪಘಾತ ಸಂಭವಿಸಿದೆ.
ಮೃತರಿಬ್ಬರನ್ನು ಆಂಧ್ರ ಮೂಲದ ಗುಂತಕಲ್ ನಿವಾಸಿಗಳೆಂದು ಗುರುತಿಸಲಾಗಿದೆ.
ಪ್ರಕರಣದ ವರದಿ:
ಕೇರಳದ ಶಬರಿಮಲೆಯಿಂದ ಆಂಧ್ರಕ್ಕೆ ವಾಪಾಸ್ಸಾಗುತ್ತಿದ್ದು ಈ ವೇಳೆ ಮಾರ್ಗ ಮಧ್ಯೆ ಕಾರು ಪಂಕ್ಚರ್ ಆಗಿತ್ತು. ಇದರಿಂದಾಗಿ ಕಾರು ಹೆದ್ದಾರಿ ಮಧ್ಯೆ ನಿಂತಿದ್ದು, ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು.
ಪಂಕ್ಚರ್ ಆದ ಕಾರಿನಿಂದ ನಾಲ್ವರು ಕೆಳಗೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಲ್ಲೇ ನಿದ್ದೆ ಮಾಡುತ್ತಿದ್ದು, ಧರಣೀಶ್ ಸ್ಟೆಪ್ನಿ ಟೈರ್ ತೆಗೆದುಕೊಳ್ಳುವ ಸಲುವಾಗಿ ಡಿಕ್ಕಿ ತೆಗೆದು ಲಗೇಜ್ ಕೆಳಗೆ ಇಳಿಸಿಕೊಳ್ಳುತ್ತಿದ್ದ.
ಈ ವೇಳೆ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದಿರುವ ಕ್ಯಾಂಟರ್ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಿರಂಜನ್ ಸಿಂಗ್ ಹಾಗೂ ಧರಣೀಶ್ ಮೃತಪಟ್ಟಿದ್ದಾರೆ.
ಪೇರೇಸಂದ್ರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳನ್ನು ಸ್ಥಳಾಂತರಿಸಿ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಂಗಳೂರು/ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್, ಈ ಬಾರಿ ತಂಡ ಚೊಚ್ಚಲ ಟ್ರೋಫಿ ಜಯಿಸಲು ಸಂಪೂರ್ಣ ಸಾಮರ್ಥ್ಯ ಬಳಸಿ ಆಡುವುದಾಗಿ ಹೇಳಿದ್ದಾರೆ.
‘ನಾನು ತಂಡಕ್ಕಾಗಿ ನನ್ನ 200 ಪ್ರತಿಶತವನ್ನು ನೀಡುತ್ತೇನೆ. ಅದು ನಿಮಗೆ ನನ್ನ ಬದ್ಧತೆಯಾಗಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಹೊಸ ಆರಂಭ ಮತ್ತು ಹೊಸ ಶಕ್ತಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಪಂತ್ ಹೊಸ ನಾಯಕನಾಗಿ ನೇಮಕಗೊಂಡ ನಂತರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಪತ್ನಿ ಯಾರು ಗೊತ್ತಾ!? ಆಕೆಯೂ ಕ್ರೀಡಾಪಟು!
‘ನಾವು ಹೊಸ ಭರವಸೆ, ಆಕಾಂಕ್ಷೆ, ಹೊಸ ಆತ್ಮವಿಶ್ವಾಸದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುತ್ತೇವೆ. ನಮ್ಮ ಹೊಸ ನಾಯಕ ರಿಷಭ್ ಪಂತ್ ಅವರನ್ನು ನಿಮಗೆಲ್ಲರಿಗೂ ಪರಿಚಯಿಸಲು ನಾನು ಬಯಸುತ್ತೇನೆ’ ಎಂದು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು 27 ಕೋಟಿ ರೂ. ನೀಡಿ ಲಖನೌ ತಂಡ ಖರೀದಿಸಿತ್ತು.
DAKSHINA KANNADA
ಮಂಗಳೂರು : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ : ಪ್ರಯಾಗ್ ರಾಜ್ ಕುಂಭಮೇಳ ಪ್ರಯಾಣ
Published
9 hours agoon
20/01/2025By
NEWS DESK4ಮಂಗಳೂರು : 144 ವರ್ಷಗಳ ಬಳಿಕ ನಡೆಯುವ ಮಹಾ ಕುಂಭಮೇಳದಲ್ಲಿ ಅಖಿಲ ಭಾರತೀಯ ಸಂತಸಮಿತಿ ಕರ್ನಾಟಕ ಘಟಕದಿಂದ ಕಾರ್ಯಕರ್ತರು 2025 ಜನವರಿ 25 ರಿಂದ 30 ರವರೆಗೆ ಭಾಗವಹಿಸುವುದಾಗಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ವಿಶ್ವದ ಅತೀ ದೊಡ್ಡ ಉತ್ಸವವೇ ಮಹಾ ಕುಂಭಮೇಳ, ನಾನಾ ಯತಿ ಶ್ರೇಷ್ಠರು ಭಾಗವಹಿಸುವ ಕುಂಭಮೇಳದಲ್ಲಿ ವ್ಯತ್ಯಾಸ್ತ ಹೈದವ ಸಂಘಟನೆಗಳಿಂದ ಚರ್ಚೆ ಬೈಠಕ್ ನಡೆಯುವುದು. ಜನವರಿ 21,22 ದಿನಾಂಕದಲ್ಲಿ ಅಖಿಲ ಭಾರತೀಯ ಸಂತ ಸಮಿತಿಯ ಬೈಠಕ್ ನಡೆಯಲಿದೆ. ಅಖಿಲ ಭಾರತ ಸಂತ ಸಮಿತಿ ಹಾಗೂ ಗಂಗಾ ಮಹಾಸಭೆಯ ಸಂಯುಕ್ತತೆಯಲ್ಲಿ ವಾಸ್ತವ್ಯ ಉಪಹಾರದ ವ್ಯವಸ್ಥೆಯು ಸಂಘಟನೆಯಿಂದ ಮಾಡಲಾಗಿದೆ.
ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?
ರಾಜ್ಯಾಧ್ಯಕ್ಷರಾದ ಮಂಗಳೂರು ಓಂ ಶ್ರೀ ಮಠದ ಸ್ವಾಮಿ ಹಾಗೂ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ ಸಮೇತ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ, ಸಮಿತಿ ಮುಖ್ಯ ಕಾರ್ಯದರ್ಶಿ ಕೊಡಗು ಅರಸೀಗುಪ್ಪೆ ಶ್ರೀ ಮಂಜುನಾಥ ಕ್ಷೇತ್ರದ ಸ್ವಾಮಿ ಶ್ರೀ ರಾಜೇಶ್ ನಾಥ್ ಗುರೂಜಿ, ಸಂಘಟನಾ ಕಾರ್ಯದರ್ಶಿ ಕೊಡಗು ಬೆಂಗಳೂರು ವಿರಕ್ತಮಠದ ಶ್ರೀ ನಿಶ್ಚಲ ನಿರಂಜನ ದೇಶೀ ಕೇಂದ್ರ ಸ್ವಾಮೀಜಿ, ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಅರಸೀಕೆರೆ ರುದ್ರಾಕ್ಷ ಫೌಂಡೇಶನ್ ಶ್ರೀ ಜಯಪ್ರಕಾಶ್ ಗುರೂಜಿ, ಕಾರ್ಯದರ್ಶಿಗಳಾದ ಕಡೂರು ಅಯ್ಯಪ್ಪ ಸ್ವಾಮಿ ಕ್ಷೇತ್ರದ ಶ್ರೀ ಭದ್ರಾರಾಜ್ ಸ್ವಾಮೀಜಿ, ಫೌಂಡರ್ ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ಹರಿಹರ ಪರಂಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿ ಹಾಗೂ ಸಮಿತಿಯ ಸಂಯೋಜಕ ಸಮಿತಿ ಅಧ್ಯಕ್ಷ ಅಡ್ವಕೇಟ್ ವೀರೇಶ್ ಅಜ್ಜಣ್ಣನವರ್ ಹರಿಹರ ಜೊತೆಯಲ್ಲಿ ಸ್ವಾಮೀಜಿಯವರ ಶಿಷ್ಯರು ಭಾಗವಹಿಸಲಿದ್ದಾರೆ.
LATEST NEWS
ಆರ್‌ಜಿಕರ್ ವೈದ್ಯೆ ಅ*ತ್ಯಾಚಾರ, ಕೊ*ಲೆ ಪ್ರಕರಣ : ಆರೋಪಿ ಸಂಜಯ್ ರಾಯ್‌ಗೆ ಶಿಕ್ಷೆ ಪ್ರಕಟ
Published
9 hours agoon
20/01/2025By
NEWS DESK4ಮಂಗಳೂರು/ ಕೊಲ್ಕತ್ತಾ : ಆರ್‌ಜಿಕರ್ ವೈದ್ಯಕೀಯ ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ನಡೆಸಿ, ಹ*ತ್ಯೆಗೈದಿರುವ ಆರೋಪಿ ಸಂಜಯ್ ರಾಯ್‌ಗೆ ಜೀ*ವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪಶ್ಚಿಮ ಬಂಗಾಳದ ಸಿಯಾಲ್ದಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಅಪರಾಧಿಗೆ ಜೀ*ವಾವಧಿ ಶಿಕ್ಷೆ ಜೊತೆಗೆ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ಅಲ್ಲದೇ, ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.
2024ರ ಆಗಸ್ಟ್ 9 ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ, ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು. ದೇಶದ ಬಹುತೇಕ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರು.
ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?
ಆಗಸ್ಟ್ 10 ರಂದು ಸಂಜಯ್ ರಾಯ್‌ನನ್ನು ಬಂಧಿಸಲಾಯಿತು. ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಪ್ರಕರಣದ ವಿಚಾರಣೆ ನವೆಂಬರ್ 12 ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜ.9ರಂದು ಕೊನೆಗೊಂಡಿತ್ತು.