ಚೆನ್ನೈ:ಪ್ರಯಾಣಿಕರ ಸೋಗಿನಲ್ಲಿ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ 7 ಮಂದಿ
ಚೆನ್ನೈ: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 2.42 ಕೆಜಿ ಚಿನ್ನ ಮತ್ತು 1.35 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಫ್ಲೈಟ್ ಐಎಕ್ಸ್-1644 ಮೂಲಕ ಆಗಮಿಸಿದ ಏಳು ಪ್ರಯಾಣಿಕರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.56 ಲಕ್ಷ ರೂ.ಗಳ ಮೌಲ್ಯದ 1.10 ಕೆಜಿ ತೂಕದ 12 ಚಿನ್ನದ ಸರ,5 ಚಿನ್ನದ ನಾಣ್ಯಗಳು ಮತ್ತು 2 ಚಿನ್ನದ ಗಟ್ಟಿ ಅದನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ.
56 ಲಕ್ಷ ರೂ.ಗಳ ಮೌಲ್ಯದ 1.10 ಕೆಜಿ ತೂಕದ 12 ಚಿನ್ನದ ಸರ,5 ಚಿನ್ನದ ನಾಣ್ಯಗಳು ಮತ್ತು 2 ಚಿನ್ನದ ಗಟ್ಟಿ ಅದನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಕೈಚೀಲಗಳಲ್ಲಿ, ಮೊಬೈಲ್ ಕವರ್‌ಗಳಲ್ಲಿ ಮರೆಮಾಚಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಇನ್ನು 67ಲಕ್ಷ ರೂ.ಗಳ ಮೌಲ್ಯದ 1.32 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ವಿದೇಶಿ ಕರೆನ್ಸಿಯನ್ನು ಸಾಗಿಸುವ ಅನುಮಾನದ ಮೇಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಸ್ 1643 ನಿಂದ ದುಬೈಗೆ ತೆರಳಿದ್ದ ರಾಮನಾಥಪುರಂನ ಸೌಕತ್ ಅಲಿ ಎಂಬ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
19,500 ಸೌದಿ ರಿಯಾಲ್ ಮತ್ತು 11,000 ಯುಎಸ್ ಡಾಲರ್ ವಶಪಡಿಸಲಾಗಿದೆ. ಬೇರೆ ಬೇರೆ ರೂಪದಲ್ಲಿ ಸೊತ್ತಿನ ಎಡೆಗಳಲ್ಲಿ ಇವುಗಳನ್ನು ಗುಪ್ತವಾಗಿ ಇಟ್ಟು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.