Thursday, October 21, 2021

ಒಂದು ವಾರ ಕೊಳೆತ ಶವದ ನೀರು ಕುಡಿದ ಜನ: ಕೆಲವರಲ್ಲಿ ಆರೋಗ್ಯ ಏರುಪೇರು

ಚನ್ನಪಟ್ಟಣ : ನಗರದ 9, 10, 11 ನೇ ವಾರ್ಡ್‌ನ ಜನ ಕಳೆದ ಹತ್ತು ದಿನಗಳಿಂದ ಅವರೆಲ್ಲರೂ ಸಹ ಕೊಳೆತ ಶವದ ನೀರನ್ನ ಕುಡಿಯುತ್ತಿದ್ದರು ಎಂಬ ಶಾಕಿಂಗ್‌ ಸುದ್ದಿ ವರದಿಯಾಗಿದೆ.


ಈಗ ಆ ಬಡಾವಣೆಯ ಜನರು, ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ನಗರದ ಜನತೆ ಆಶ್ಚರ್ಯರಾಗಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ 9, 10, 11 ನೇ ವಾರ್ಡ್ ನ‌ ಸರಿಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಕೂಡ ಕೊಳೆತ ಶವದ ನೀರನ್ನೇ ಕುಡಿದ್ದಿದ್ದಾರೆ. ಒಂದು ವಾರಗಳ ಕಾಲ ನೀರು ಹಳದಿ ಬಣ್ಣಕ್ಕೆ ತಿರುಗಿದೆ, ಕೆಟ್ಟ ವಾಸನೆ ಬಂದಿದೆ.

ಈ ವಿಚಾರವಾಗಿ ಸ್ಥಳೀಯರು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಗೆ ದೂರು ನೀಡಿದ್ದಾರೆ.
ನಂತರ ಪರಿಶೀಲನೆ ಮಾಡಿದಾಗ ‌ಕೆಳಭಾಗದಲ್ಲಿ ಇರೋ ಓವರ್ ಹೆಡ್ ಟ್ಯಾಂಕ್ ನ ವಾಲ್ ನಲ್ಲಿ‌ ಮಹಿಳೆಯ ಕಾಲು ಪತ್ತೆಯಾಗಿದೆ.

ಚನ್ನಪಟ್ಟಣದ ಮಾರುತಿ ಬಡಾವಣೆಯಲ್ಲಿ ಘಟನೆ ನಡೆದಿದ್ದು ಈ ಭಾಗದ ಜನರು ಆತಂಕದಲ್ಲಿ ಕಾಲಕಳೆದಿದ್ದಾರೆ.
ಸದ್ಯ ನೀರನ್ನ ಬಳಕೆ ಮಾಡಿರುವ ಕೆಲವರಲ್ಲಿ ಆರೋಗ್ಯ ವ್ಯತ್ಯಾಸವಾಗಿದ್ದು ಕೆಮ್ಮು, ಜ್ವರ ಕಾಣಿಸಿಕೊಂಡಿದೆ ಎಂಬ ಮಾಹಿತಿ ಇದೇ.

ಸ್ಥಳದಲ್ಲಿ ಮಹಿಳೆಯ ಕಾಲು ಮಾತ್ರ ಪತ್ತೆಯಾಗಿದೆ, ಕಾಲು ಹೊರತಾಗಿ ಬೇರೆ ಯಾವುದೇ ಅಂಗ ಸಿಕ್ಕಿಲ್ಲ. ಇದರ ಜೊತೆಗೆ ಚೂಡಿದಾರ ಡ್ರೆಸ್, ಚಪ್ಪಲಿ, ಛತ್ರಿ ಸಹ ಪತ್ತೆಯಾಗಿದೆ. ಈ ವಿಚಾರ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಕೊಲೆಯಾದ ಮಹಿಳೆಯ ಶವ ಎಂಬ ಅನುಮಾನ ಒಂದೆಡೆಯಾದರೆ,

ಪ್ರಕರಣದ ದಿಕ್ಕು ತಪ್ಪಿಸಲು ಬೇರೆಡೆ ಕೊಲೆ ಮಾಡಿ ಕಾಲನ್ನ ತಂದು ಬಿಸಾಡಿರುವ ಶಂಕೆಯೂ ಇದೆ. ಅಥವಾ ಕಾಲು ಸಿಕ್ಕಿ ದೇಹ ಮತ್ತೊಂದೆಡೆ ಹೋಗಿರಬಹುದೆಂದು ಶಂಕೆಯೂ ಸಹ ವ್ಯಕ್ತವಾಗ್ತಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...