Connect with us

    LATEST NEWS

    ನಿವೇದಿತಾಗೆ ಡಿವೋರ್ಸ್ ಕೊಟ್ಟಿದ್ದು ಯಾಕಂದ್ರೆ.. ಕೊನೆಗೂ ಕಾರಣ ಹೇಳಲು ಮುಂದೆ ಬಂದ ಚಂದನ್!

    Published

    on

    ಬೆಂಗಳೂರು: ಚಂದನ್ ಶೆಟ್ಟಿ, ನಿವೇದಿತಾ ಜೋಡಿ ಬೇರೆ, ಬೇರೆ ಆಗಿದ್ದಾಯ್ತು. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಸಡನ್‌ ಬ್ರೇಕ್ ಆಗಿರುವ ಇವರಿಬ್ಬರು ಕೆಲ ದಿನಗಳಿಂದ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಚಂದನ್, ನಿವೇದಿತಾ ದೂರಾಗಿದ್ದು ಯಾಕೆ? ಪ್ರೀತಿಸಿ ಮನೆಯವರ ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಕ್ಯೂಟ್ ಕಪಲ್ ಬಾಳಲ್ಲಿ ಏನಾಯ್ತು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

    ಒಂದೇ ದಿನದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಜೋಡಿ ವಿಚ್ಛೇದನ ಪಡೆದ ಮೇಲೂ ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಶುರುವಾದ ಇವರಿಬ್ಬರ ಲವ್ ಸ್ಟೋರಿ ದಿಢೀರನೇ ಬ್ರೇಕ್ ಅಪ್ ಆಗಿದೆ. ಚಂದನ್, ನಿವೇದಿತಾ ಇಬ್ಬರೂ ಅನ್ಯೋನ್ಯವಾಗಿದ್ರೆ ವಿಚ್ಛೇದನಕ್ಕೆ ಯಾಕೆ ನಿರ್ಧಾರ ಮಾಡಿದ್ರು ಅನ್ನೋದು ಕುತೂಹಲಕ್ಕೆ ಕಾರಣವಾಗಿತ್ತು. ಚಂದನ್ ಅವರ ಆಪ್ತರು ನಮಗೂ ಈ ಸುದ್ದಿ ಕೇಳಿ ಶಾಕ್ ಆಯ್ತು. ಚಂದನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ನಮಗೂ ಕಾರಣ ಗೊತ್ತಿಲ್ಲ ಎಂದು ಹೇಳಿದ್ದರು.

    ಚಂದನ್ ಹೇಳಿದ್ದೇನು?

    ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಚಂದನ್ ಶೆಟ್ಟಿ ಪೋಸ್ಟ್ ಮಾಡಿದ್ದರು.

    ಇಷ್ಟೆಲ್ಲಾ ಬೆಳವಣಿಗೆಯ ಬಳಿಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆಯಲು ಇಂದು ಚಂದನ್ ಶೆಟ್ಟಿ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ಚಂದನ್ ಶೆಟ್ಟಿ ಅವರು ಸುದ್ದಿಗೋಷ್ಟಿಯನ್ನು ಕರೆದಿದ್ದು, ಡಿವೋರ್ಸ್ ವಿಚಾರವಾಗಿ ಮಾಹಿತಿ ನೀಡಲಿದ್ದಾರೆ.ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ಆರಂಭ ಆಗಲಿದೆ. ಈ ವೇಳೆ ಯಾವೆಲ್ಲ ವಿಚಾರ ಮಾತನಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

    LATEST NEWS

    ಒಂಟಿಯಾಗಿ ಸಿಗುವಂತೆ ಹೇಳಿದ್ದ ಖ್ಯಾತ ನಟ : ಸೂರ್ಯವಂಶ ಬೆಡಗಿಯಿಂದ ಆರೋಪ

    Published

    on

    ಮುಂಬೈ : ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅನೇಕ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಇದೀಗ ಇಶಾ ಕೊಪ್ಪಿಕರ್ ಅವರು ಈಗ ಬಾಲಿವುಡ್ ಹೀರೋನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


    ಇಂಡಸ್ಟ್ರಿಯಲ್ಲಿ ಹೋರಾಡುತ್ತಿದ್ದೇನೆ :

    ನೀವು ಏನು ಮಾಡಬಹುದು ಎಂಬುದದನ್ನು ಇಲ್ಲಿ ಯಾರೂ ಕೇಳಲ್ಲ. ಇದೆಲ್ಲವನ್ನು ಹೀರೋಗಳು ನಿರ್ಧರಿಸುತ್ತಿದ್ದರು. ನೀವು ಮೀಟೂ ಬಗ್ಗೆ ಕೇಳಿರುತ್ತೀರಿ. ಮತ್ತು ನೀವು ಮೌಲ್ಯಗಳನ್ನು ಹೊಂದಿದ್ದರೆ, ಆ ಪರಿಸ್ಥಿತಿ ತುಂಬಾ ಕಷ್ಟಕರವಾಗುತ್ತದೆ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಒಂದೋ ಹುಡುಗಿಯರು ಒಪ್ಪಿದರು ಇಲ್ಲವೇ ಚಿತ್ರರಂಗ ತೊರೆದರು. ಇನ್ನೂ ಕೆಲವರು ಇಂಡಸ್ಟ್ರಿಯಲ್ಲಿ ಹೋರಾಡುತ್ತಾ ಇರುವ ಕೆಲವೇ ಕೆಲವು ಮಂದಿ ಇದ್ದಾರೆ. ನಾನು ಅವರಲ್ಲಿ ಒಬ್ಬಳು ಎಂದಿದ್ದಾರೆ ಇಶಾ ಕೊಪ್ಪಿಕರ್.

    ಒಂಟಿಯಾಗಿ ಸಿಗುವಂತೆ ಓರ್ವ ನಟ ಕೇಳಿದ್ದ :

    ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಕೆಲಸ ಸಿಗಬೇಕಾದರೆ ನಟರ ಜೊತೆ ಫ್ರೆಂಡ್ಲಿ ಆಗಬೇಕು ಎಂದು ಅವರು ಹೇಳಿದರು. ನಾನು ತುಂಬಾ ಸ್ನೇಹಜೀವಿ, ಆದರೆ ಫ್ರೆಂಡ್ಲಿ ಎಂದರೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮತ್ತೆ ಹೀಗೆ ಆಗಿತ್ತು :

    18 ವರ್ಷದವಳಿರುವಾಗ ಏನು ಅನುಭವ ಆಗಿತ್ತೋ ಮತ್ತೆ ಅಂತಹುದೇ ಅನುಭವ ಇಶಾ ಅವರಿಗೆ ಆಗಿತ್ತಂತೆ. 23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಓರ್ವ ನಟ ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಆಗಲೇ ಹಲವು ಹೀರೋಯಿನ್​ಗಳ ಜೊತೆ ತಳುಕು ಹಾಕಿಕೊಂಡಿತ್ತು. ಈ ರೀತಿ ಬೇಡಿಕೆ ಇಟ್ಟಿದ್ದು ಹಿಂದಿಯ ಎ-ಲಿಸ್ಟ್​ನ ನಟ ಎಂದಿದ್ದಾರೆ.

    ಇದನ್ನೂ ಓದಿ :  ನಟ ದರ್ಶನ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಸಿವಿ ನಾಗೇಶ್; ಯಾರಿವರು ಗೊತ್ತಾ!?

    1998 ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ‘ಚಂದ್ರಲೇಖಾ’ ಅವರ ಮೊದಲ ಸಿನಿಮಾ. ಕನ್ನಡದಲ್ಲಿ ‘ಸೂರ್ಯವಂಶ’ ಅವರು ನಟಿಸಿದ ಮೊದಲ ಸಿನಿಮಾ. ‘ಓ ನನ್ನ ನಲ್ಲೆ’, ‘ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ.

    Continue Reading

    LATEST NEWS

    ನಟ ದರ್ಶನ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಸಿವಿ ನಾಗೇಶ್; ಯಾರಿವರು ಗೊತ್ತಾ!?

    Published

    on

    ಬೆಂಗಳೂರು : ಇದೀಗ ಈ ಪ್ರಕರಣದಲ್ಲಿ ದರ್ಶನ್ ಪರವಾಗಿ ವಾದಿಸಲು ಹಿರಿಯ ವಕೀಲರನ್ನು ನೇಮಿಸಲಾಗಿದೆ. ಕೆಲ ವಾರಗಳ ಹಿಂದಷ್ಟೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಎಚ್​ಡಿ ರೇವಣ್ಣ ಪರ ವಾದ ಮಂಡಿಸಿ ಅವರಿಗೆ ಜಾಮೀನು ಮಂಜೂರು ಮಾಡಿಸಿದ್ದ ಸಿವಿ ನಾಗೇಶ್ ಈಗ ದರ್ಶನ್ ಪರವಾಗಿ ವಾದ ಮಂಡಿಸಲಿದ್ದಾರೆ.

    ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರುಗಳು ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ತಂದೆ-ತಾಯಿಯ ಪರವಾಗಿ ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದರು.


    ಇದೀಗ ಸಿವಿ ನಾಗೇಶ್ ಅವರು ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರ ಬದಲಿಗೆ ವಾದ ಮಂಡಿಸುತ್ತಾರೆಯೇ ಅಥವಾ ಅನಿಲ್ ಬಾಬು, ರಂಗನಾಥ ರೆಡ್ಡಿ ಅವರುಗಳ ಜೊತೆಗೆ ಸಿವಿ ನಾಗೇಶ್ ಸಹ ವಾದ ಮಂಡಿಸುತ್ತಾರೆಯೇ ಎಂಬುದು ತಿಳಿದು ಬಂದಿಲ್ಲ.
    ಒಬ್ಬ ಆರೋಪಿಯ ಪರವಾಗಿ ಇಬ್ಬರು ವಕೀಲರು ವಾದ ಮಂಡಿಸುವ ಅವಕಾಶವೂ ಇದೆ ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ವಾದ ಮಂಡಿಸಿದರೆ, ದರ್ಶನ್ ಪರವಾಗಿ ಸಿವಿ ನಾಗೇಶ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಸಿವಿ ನಾಗೇಶ್ ಅವರ ಸಹಾಯಕ ವಕೀಲರಾಗಿರುವ ರಾಘವೇಂದ್ರ ಅವರು ಈಗಾಗಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ನಟ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜಾಮೀನು ಅರ್ಜಿಯನ್ನು ಹಾಕಲು ಸಕಲ ತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಬೇಕಿರುವ ಅಗತ್ಯ ಮಾಹಿತಿಯನ್ನು ದರ್ಶನ್ ಅವರಿಂದ ಪಡೆದುಕೊಂಡಿದ್ದಾರೆ. ರಿಮ್ಯಾಂಡ್ ಶೀಟ್ ಇನ್ನಿತರೆಗಳನ್ನು ಪೊಲೀಸರಿಂದ ಪಡೆದುಕೊಂಡಿದ್ದು, ಜೂನ್ 22 ರಂದೇ ಸಿವಿ ನಾಗೇಶ್ ಅವರು ತಮ್ಮ ವಾದ ಮಂಡಿಸಲಿದ್ದಾರೆ.

    ಇದನ್ನೂ ಓದಿ : ನಟ ದರ್ಶನ್ ಅಭಿಮಾನಿಯ ವಿರುದ್ಧ ಬಿತ್ತು ಕೇಸ್

    ಸಿವಿ ನಾಗೇಶ್ ಅವರು ಹೈಕೋರ್ಟ್​ನ ಹಿರಿಯ ವಕೀಲರಾಗಿದ್ದು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಅಪಹರಣ ಪ್ರಕರಣದಲ್ಲಿ ಎಚ್​ಡಿ ರೇವಣ್ಣ ಜೈಲು ಪಾಲಾದಾಗಿದ್ದಾಗ ಅವರ ಪರ ವಾದ ಮಂಡಿಸಿ ಕೆಲವೇ ದಿನಗಳಲ್ಲಿ ಅವರಿಗೆ ಜಾಮೀನು ದೊರಕಿಸಿದರು. ಹ*ಲ್ಲೆ ಆರೋಪದಲ್ಲಿ ಜೈಲುಪಾಲಾಗಿದ್ದ ಮೊಹಮ್ಮದ್ ನಲಪಾಡ್ ಪರವಾಗಿಯೂ ನಾಗೇಶ್ ಅವರೇ ವಾದ ಮಂಡಿಸಿದ್ದರು.

    Continue Reading

    LATEST NEWS

    ನಟ ದರ್ಶನ್ ಅಭಿಮಾನಿಯ ವಿರುದ್ಧ ಬಿತ್ತು ಕೇಸ್

    Published

    on

    ಮಂಡ್ಯ : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಇದೀಗ ದರ್ಶನ್ ಅವರ ಮಹಿಳಾ ಅಭಿಮಾನಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ.

    ಇತ್ತೀಚಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಂಗಳಾ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರೆ.

    ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ದರ್ಶನ್ ಅಭಿಮಾನಿ ಮಂಗಳಾ ವಿರುದ್ಧ ಕೆ.ಆರ್.ಪೇಟೆ ಟೌನ್​ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆಡಿಎಸ್​ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ಎಂಬುವರು ಈ ದೂರು ನೀಡಿದ್ದಾರೆ.

    ಇದನ್ನೂ ಓದಿ : ನೇಣಿಗೆ ಶರಣಾದ ಕಾಂಗ್ರೆಸ್ ಶಾಸಕನ ಪತ್ನಿ


    ಏನಂದಿದ್ರು ಮಂಗಳಾ?

    ನಟ ದರ್ಶನ್ ಮೇಲೆ ಕೊಲೆ ಆರೋಪ ಬರುವಂತೆ ಹೆಚ್ .ಡಿ.ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ದ ಧಿಕ್ಕಾರ ಕೂಗಿಸುತ್ತೀಯಾ? ಮಾಜಿ ಸಂಸದೆ ಸುಮಲತಾ ಅಂಬರೀಶ್​ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕುತ್ತೀಯಾ? ಸುಮಲತಾ‌ ಅವರಿಂದ ಭಿಕ್ಷೆ ಹಾಕಿಸಿಕೊಂಡ ಮಗ ಎಂದು ಏಕವಚನದಲ್ಲೇ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿ ಮಂಗಳಾ ಅವರು ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ಮಂಗಳ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಕೆ.ಆರ್ ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Continue Reading

    LATEST NEWS

    Trending