Connect with us

    LATEST NEWS

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆ: ತಡೆ ತೆರವುಗೊಳಿಸಿದ ಸರ್ವೋಚ್ಛ ನ್ಯಾಯಾಲಯ..!

    Published

    on

     

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆ: ತಡೆ ತೆರವುಗೊಳಿಸಿದ ಸರ್ವೋಚ್ಛ ನ್ಯಾಯಾಲಯ..!

    ನವದೆಹಲಿ: ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗೆ 3 ಕಿ.ಮೀ. ವಿಸ್ತಾರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ ತಡೆಯನ್ನು ಸರ್ವೋಚ್ಛ ನ್ಯಾಯಾಲಯ ತೆರವುಗೊಳಿಸಿದೆ.

    ಪರಿಸರ ಅನುಮತಿ ಮತ್ತು ಭೂ ಬಳಕೆಯಲ್ಲಿನ ಅಧಿಸೂಚನೆಯನ್ನು ಸುಪ್ರೀಂ ಕೋರ್ಟು ಬಹುಮತದ ತೀರ್ಪಿನ ಮೂಲಕ ವಿಸ್ತಾ ಯೋಜನೆ ಚಾಲನೆಗೊಳ್ಳಲು ದಾರಿ ಮಾಡಿಕೊಟ್ಟಿದೆ.2019ರ ಸೆಪ್ಟೆಂಬರ್‍ನಲ್ಲಿ ಘೋಷಿಸಲಾದ ಸೆಂಟ್ರಲ್ ವಿಸ್ತಾ ಪುನರುಜ್ಜೀವನ ಯೋಜನೆ 900 ರಿಂದ 1,200 ಸಂಸದರಿಗೆ ಆಸನ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ನೂತನ ತ್ರಿಕೋನ ಸಂಸತ್ತಿನ ಕಟ್ಟಡ ನಿರ್ಮಾಣ ಯೋಜನೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸುವ ಗುರಿಯಿದ್ದು,  ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ.ಈ ಯೋಜನೆಯಡಿ ಸಾಮಾನ್ಯ ಕೇಂದ್ರ ಸಚಿವಾಲಯವನ್ನು 2024ರ ವೇಳೆಗೆ ನಿರ್ಮಿಸುವ ಸಾಧ್ಯತೆಯೂ ಇದೆ. ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು 2-1ರ ಬಹುಮತದಿಂದ ತೀರ್ಪಿಗೆ ಅನುಮೋದನೆ ನೀಡಿದೆ.

    ಪರಿಸರ ಅನುಮತಿ ಮತ್ತು ಯೋಜನೆಗಾಗಿ ಭೂ ಕಬಳಿಕೆಯಲ್ಲಿ ಬದಲಾವಣೆಯ ಅಧಿಸೂಚನೆ ಮಾನ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಜಸ್ಟೀಸ್ ಖಾನ್ವಿಲ್ಕರ್ ಅವರು ಖುದ್ದು ತೀರ್ಪು ಬರೆದಿದ್ದಲ್ಲದೆ, ಮತ್ತೊಬ್ಬ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಸಹಕರಿಸಿದ್ದಾರೆ.

    ಯೋಜನೆ ತಡೆ ಕೋರಿ ದೆಹಲಿ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದವರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ದಾವೆ ಸೇರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 971 ಕೋಟಿ ರೂ. ಈ ಬೃಹತ್ ಸಂಸತ್ತು ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ಅದ್ಧೂರಿಯಾಗಿ ನಡೆಸಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪ*ಲ್ಟಿ; ಓರ್ವ ಸಾ*ವು, ಹಲವರ ಸ್ಥಿತಿ ಗಂಭೀ*ರ

    Published

    on

    ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರೊಂದು ಪ*ಲ್ಟಿಯಾಗಿರುವ ಘಟನೆ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕ ಮೃ*ತಪಟ್ಟಿದ್ದಾನೆ. ನೆಲಮಂಗಲದ ಚಂದನ್‌ (26) ಮೃ*ತ ಯುವಕ.

    ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಭತ್ತದ ಗದ್ದೆಗೆ ಪ*ಲ್ಟಿಯಾಗಿದೆ.  ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬವರಿಗೆ ಗಂ*ಭೀರ ಗಾ*ಯವಾಗಿದೆ.

    ಇದನ್ನೂ ಓದಿ : ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್​? ನಿಜಾನಾ ಎಂದು ಕೇಳಿದ್ದಕ್ಕೆ ಎಂಜಾಯ್​ ಮಾಡಿ ಎಂದ ಕಿರಾತಕ ಬೆಡಗಿ

    ಯುವಕರ ತಂಡ ಬೆಂಗಳೂರಿನಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿತ್ತು. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    Continue Reading

    LATEST NEWS

    ಪೊಳಲಿ ಸೇತುವೆ ಬಂದ್: ಮಂಗಳವಾರ ಗ್ರಾಮಸ್ಥರಿಂದ ಪ್ರತಿಭಟನೆ

    Published

    on

    ಮಂಗಳೂರು: ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಸೇತುವೆಯ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿ – ಅಡ್ಡೂರಿನ ಪಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟ ಕಾರಣಕ್ಕೆ ಘನ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಸೇತುವೆಯ ಸಾಮರ್ಥ್ಯವನ್ನು ಯಂತ್ರದ ಮೂಲಕ ಪರಿಶೀಲನೆ ನಡೆಸಿ ಎರಡು ತಿಂಗಳಾದ್ರೂ ಏನಾಗಿದೆ ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ತೊಂದರೆಗೆ ಒಳಗಾಗಿರುವ ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತ್ತು ಸುತ್ತಮುತ್ತಲಿನ ಜನ ಸಭೆ ನಡೆಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದನೆಯೇ ನೀಡದ ಜನಪ್ರತಿಧಿಗಳು, ಹಾಗೂ ಅಧಿಕಾರಿಗಳ ವಿರುದ್ಧ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿಯ ರಾಮಕೃಷ್ಣ ತಪೋವನ ರಾಜರಾಜೇಶ್ವರಿ ಸಭಾಂಗಣದಲ್ಲಿ ಸಭೆ ನಡೆಸಲಾಗಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದು ಹೋರಾಟದ ಬಗ್ಗೆ ಜನಾಭಿಪ್ರಾಯ ಪಡೆದುಕೊಂಡಿದ್ದಾರೆ.

    Continue Reading

    LATEST NEWS

    ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

    Published

    on

    ಬ್ರಹ್ಮಾವರ: ಹೇರಾಡಿ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
    ಮೃತ ವಿದ್ಯಾರ್ಥಿಯು ಮೊಹಮ್ಮದ್ ಜಹೀದ (12) ಎಂದು ಗುರುತಿಸಲಾಗಿದೆ.


    ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮಾಲಿಕ್ ದಿನಾರ್ ಮದರಸ ಹಾಸ್ಟೇಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆಯನ್ನು ಮುಗಿಸಿ ಅ.11 ರಂದು ಹಾಸ್ಟೇಲ್‌ಗೆ ಮರಳಿದ್ದಾನೆ.

    ರಾತ್ರಿ 9 ಗಂಟೆಗೆ ಊಟಕ್ಕೆ ಬಾರದಿದ್ದನ್ನು ಗಮನಿಸಿ ಹಾಡುಕಿದಾಗ ಹಾಸ್ಟೇಲ್‌ನ ಬಾತ್‌ರೂಮ್‌ನಲ್ಲಿ ಸರಳಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ರಾತ್ರಿ 10.40 ರ ಸುಮಾರಿಗೆ ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನ ಮರಣದಲ್ಲಿ ಸಂಶಯವಿರುವುದಾಗಿ ಬಾಲಕನ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಕನಿಗೆ ಹಾಸ್ಟೇಲ್‌ಗೆ ಹೋಗಲು ಮನಸ್ಸಿಲ್ಲವೆಂದು, ಹಾಸ್ಟೇಲ್‌ನ ಇತರ ವಿದ್ಯಾರ್ಥಿಗಳೊಂದಿಗೆ ಸಣ್ನ ಮಟ್ಟಿನ ಜಗಳ ಆಗಿತ್ತು ಎಂದು ತಿಳಿದು ಬಂದಿದದೆ.

    Continue Reading

    LATEST NEWS

    Trending