Connect with us

    chikkamagaluru

    ಉಡುಪಿ-ದ.ಕ ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್ ಆಚರಣೆ: ಇಂದೇ ಸರ್ಕಾರಿ ರಜೆ ಘೋಷಸಿದ ಜಿಲ್ಲಾಡಳಿತ

    Published

    on

    ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ನಿನ್ನೆ(ಎ.9)  ಚಂದ್ರದರ್ಶನವಾಗಿದ್ದ ಹಿನ್ನಲೆಯಲ್ಲಿ ದ.ಕ.ಜಿಲ್ಲೆ, ಉಡುಪಿ ಸೇರಿದಂತೆ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.10ರಂದು ರಮ್ಜಾನ್ ಆಚರಿಸಲು ದ.ಕ ಜಿಲ್ಲಾ ಖಾಝಿ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲೆಯ ಸಂಯುಕ್ತ ಖಾಘಿ ಅವರು ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಈ ಜಿಲ್ಲೆಗಳಲ್ಲಿ ರಮ್ಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

    ಮಂಗಳೂರಿನ ಬಾವುಟ ಗುಡ್ಡದ ಈದ್ಗಾದಲ್ಲಿ ಸಾಮೂಹಿಕ ನಮಾಜ್ ಮಾಡುವ ಮೂಲಕ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವಾರು ಪ್ರಮುಖರು ಈದ್ಗಾದ ನಮಾಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಸ್ಪೀಕರ್ ಖಾದರ್ ಅವರು ಎಲ್ಲಾ ಜನತೆಗೆ ರಮ್ಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ಈಸ್ಟರ್‌, ಯುಗಾದಿ ಹಾಗೂ ರಮ್ಜಾನ್ ಮೂರು ಹಬ್ಬಗಳು ಒಟ್ಟೊಟ್ಟಿಗೆ ಬಂದಿರುವ ಕಾರಣ ಇದೊಂದು ವಿಶೇಷ ಸನ್ನಿವೇಶವಾಗಿ ಅವರು ಪರಿಗಣಿಸಿದ್ದಾರೆ. ಎಲ್ಲಾ ಹಬ್ಬಗಳ ಸಂದೇಶ ಸಾಮರಸ್ಯವನ್ನು ಸಾರಿದ್ದು, ನಮ್ಮ ಜಿಲ್ಲೆಯಿಂದ ಅಂತಹ ಸಾಮರಸ್ಯ ಇಡೀ ದೇಶಕ್ಕೆ ಸಾರುವಂತಾಗಲಿ ಎಂದು ಹೇಳಿದ್ದಾರೆ.

    ಇನ್ನು ಅಧಿಕೃತವಾಗಿ ರಮ್ಜಾನ್ ಹಬ್ಬದ ಸರ್ಕಾರಿ ರಜೆ ನಾಳೆ ಇದ್ದು , ಇಂದು ಹಬ್ಬ ಆಚರಿಸುತ್ತಿರುವ ಕಡೆಗಳಲ್ಲಿ ಇಂದೇ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಸ್ಪೀಕರ್ ಖಾದರ್ ಅವರ ಮನವಿ ಪುರಸ್ಕರಿಸಿ ಈ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಇಂದು ಹಬ್ಬ ಆಚರಿಸುತ್ತಿರುವ ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇರಲಿದೆ.

    chikkamagaluru

    ಶೃಂಗೇರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ; ಈ ಉಡುಪು ಧರಿಸಿದವರಿಗೆ ಮಾತ್ರ ಪ್ರವೇಶ

    Published

    on

    ಚಿಕ್ಕಮಗಳೂರು: ದೇಶದ ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಇದೀಗ ಶೃಂಗೇರಿ ಶಾರದಾಂಬ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಪುರುಷ ಹಾಗೂ ಮಹಿಳೆಯರು ನಿರ್ದಿಷ್ಟ ಬಟ್ಟೆಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು. ಆದರೆ ವಸ್ತ್ರ ಸಂಹಿತೆಯು ಒಳ ಪ್ರಕಾರಕ್ಕೆ ಮಾತ್ರ ಅನ್ವಯವಾಗಲಿದ್ದು ದೇವಸ್ಥಾನದ ಒಳ ಆವರಣಕ್ಕೆ ಯಾವುದೇ ನಿರ್ಬಂಧವಿಲ್ಲ.

    ಶ್ರೀ ಶಾರದಾ ಪೀಠದ ಒಳ ಪ್ರಾಕಾರಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಶ್ರೀಮಠ ರೂಪಿಸಿದ್ದು ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ಪುರುಷರು ಧೋತಿ, ಶಲ್ಯ ಹಾಗೂ ಮಹಿಳೆಯರು ಸೀರೆ, ಸೆಲ್ವಾರ್‌ ಕಮೀಜ್‌, ದುಪ್ಪಟ್ಟ, ಲಂಗ ದಾವಣಿ, ಲೆಹಂಗ ಧರಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

    ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲಿಗೆ

    “ಅಗಸ್ಟ್ 15, 2024ನೇ ಗುರುವಾರದಿಂದ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಲು ವಿನಂತಿಸಲಾಗಿದೆ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟುಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ, ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ” ಎಂದು ಪ್ರಕಟಣೆ ಹೇಳಿದೆ. ಜಗದ್ಗುರುಗಳ ಚಾತುರ್ಮಾಸ ವ್ರತ ಚಾಲ್ತಿಯಲ್ಲಿ ಇರುವ ಮಧ್ಯೆಯೇ ಈ ವಸ್ತ್ರಸಂಹಿತೆ ನಿಯಮ ಜಾರಿಗೆ ಬರಲಿದೆ.

    Continue Reading

    chikkamagaluru

    ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ..! ಜಿಲ್ಲಾಧಿಕಾರಿ ಆದೇಶ

    Published

    on

    ಚಿಕ್ಕಮಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ಹಲವು ಕಡೆಯ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಸಮುದ್ರದ ತೀರದ ಜನರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದು, ಬೀಚ್‌ನತ್ತ ಬರುವ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.

    ಮಲೆನಾಡು ಪ್ರದೇಶಗಳಲ್ಲಿ ಮಳೆ ಮುಂದುವರಿಯುತ್ತಿದೆ. ಈ ಪ್ರದೇಶಗಳಲ್ಲಿ ಗುಡ್ಡ, ಬೆಟ್ಟಗಳು ಹೆಚ್ಚಿರುವುದರಿಂದ ಆತಂಕ ಹೆಚ್ಚಾಗಿದೆ. ಗಾಳಿ ಮಳೆಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಶೃಂಗೇರಿ, ಕಳಸ, ನರಸಿಂಹರಾಜಪುರ, ಮೂಡಿಗೆರೆ, ಕುದುರೆಮುಖ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು ಗುಡ್ಡೆ, ಬೆಟ್ಟಗಳಲ್ಲಿ ನಿರ್ಮಾಣವಾಗಿರುವ ಸಣ್ಣ ಜಲಪಾತಗಳು ತುಂಬಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದ್ದು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಜು.22 ರವರೆಗೆ ಪ್ರವಾಸ ನಿರ್ಬಂಧವನ್ನು ಹೇರಿದೆ.

    ನೆರೆಯಿಂದ ಜಲಾವೃತಗೊಂಡ ಮನೆ..! ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗಲಾಗದೆ ಪರದಾಟ..!

    ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗುವ ದಾರಿ ಕಿರಿದಾಗಿದ್ದು ಬೆಟ್ಟ ಗುಡ್ಡಗಳ ನಡುವೆಯೇ ಹಾದು ಹೋಗಬೇಕಿದೆ. ಹಾಗಾಗಿ ಈ ಪ್ರದೇಶದಲ್ಲಿ ಅಪಾಯ ಸಂಭವಿಸುವ ಸಾದ್ಯತೆ ಹೆಚ್ಚಿದೆ. ಈ ಪ್ರದೇಶದಲ್ಲಿ ಈಗಾಗಲೇ ಸಣ್ಣ ಪ್ರಮಾಣದ ಗುಡ್ಡ ಕುಸಿತ ಗೊಂಡಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.  ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಹೊರಗಿನ ಯಾವುದೇ ವಾಹನಗಳಿಗೆ ಈ ಪ್ರದೇಶಗಳಲ್ಲಿ ಜು.22ವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

    Continue Reading

    chikkamagaluru

    ವೀಕೆಂಡ್ ಮಸ್ತಿಯಲ್ಲಿ ಯುವಕರು..! ದೇವರಮನೆಯಲ್ಲಿ ಯುವಕರ ಡ್ಯಾನ್ಸ್..!!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಇನ್ನು ಮಳೆಗಾಲದಲ್ಲಿ ಹೇಳಲೇಬೇಕಿಲ್ಲ. ಹಚ್ಚ ಹಸಿರ ವಾತಾವರಣ.. ಝಳಝಳಿಸುವ ಪುಟ್ಟ ಪುಟ್ಟ ಜಲಪಾತಗಳು ಕಣ್ಮನ ಸೆಳೆಯುತ್ತದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ದೇವರಮನೆ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಪ್ರವಾಸಿಗರು ಅಂತರ್‌ರಾಜ್ಯದಿಂದಲೂ ಬರುತ್ತಾರೆ.

    ಇದೀಗ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಕ್ಷೇತ್ರ ಮೋಜು ಮಸ್ತಿಯ ಅಡ್ಡವಾಗಿ ಕಂಡುಬರುತ್ತಿದೆ. ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ. ಮೋಜು, ಮಸ್ತಿ, ಡ್ಯಾನ್ಸ್‌ ಮಾಡಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್‌ ಮಾಡಿದ್ದರು. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕುಣಿದು ಕುಪ್ಪಳಿಸಿರವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರ ಭಯ ಹೇಗೂ ಇಲ್ಲ.. ಸ್ಥಳೀಯರ ಮಾತಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ.

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    ಚಾರ್ಮಾಡಿ ಘಾಟಿಯಲ್ಲೂ ಇದೇ ಪರಿಸ್ಥಿತಿ

    ಇನ್ನು ಚಾರ್ಮಾಡಿ ಘಾಟಿಯಲ್ಲೂ ಇಂಥದ್ದೇ ಪರಿಸ್ಥಿತಿ. ಪ್ರವಾಸಿಗರು ಅಲ್ಲಿನ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಜಲಪಾತಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಇನ್ನು ಜಾರುವ ಬಂಡೆಗಳಲ್ಲಿ ನಿಂತು ಮೋಜು, ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    Continue Reading

    LATEST NEWS

    Trending