Connect with us

FILM

ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ: ಖ್ಯಾತ ಕಿರುತೆರೆ ನಟಿ ಅರೆಸ್ಟ್‌

Published

on

ಮುಂಬೈ: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ಖ್ಯಾತ ಕಿರುತೆರೆ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ಬಂಧಿಸಿದ್ದಾರೆ. ಈಕೆ ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು.


ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಇವರ ಜೊತೆ ರಾಕೆಟ್‌ನಲ್ಲಿ ಇಬ್ಬರು ಮಾಡೆಲ್ ಗಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಪೊಲೀಸ್ ಅಧಿಕಾರಿಯೊಬ್ಬರು ಕಿರುತೆರೆ ನಟಿ ಆರತಿಗೆ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಸಂಪರ್ಕಿಸಿದ್ದಾರೆ. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು.

ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಸ್ಥಳದಲ್ಲಿ ಇದ್ದರು.

ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಜೊತೆ ಯಾರೆಲ್ಲ ಇದ್ದಾರೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

FILM

ಟಗರು ಪುಟ್ಟಿ ಮಾನ್ವಿತಾಗೆ ಕೂಡಿ ಬಂತು ಕಂಕಣ ಭಾಗ್ಯ; ಹುಡುಗ ಯಾರು? ಮದುವೆ ಯಾವಾಗ?

Published

on

ಚಂದನವನ : ‘ಕೆಂಡಸಂಪಿಗೆ’ ನಟಿ ಮಾನ್ವಿತಾ ಕಾಮತ್ ಅವರಿಗೆ ಮಾಂಗಲ್ಯ ಭಾಗ್ಯ ಕೂಡಿಬಂದಿದೆ. ಮೇ1 ರಂದು ಅವರ ವಿವಾಹ ನಡೆಯಲಿದೆ. ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ  ಮಾನ್ವಿತಾ ಸಪ್ತಪತಿ ತುಳಿಯಲಿದ್ದಾರೆ.

ಎಲ್ಲಿ ಮದುವೆ?

ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ವಿವಾಹವು ಮೇ 1ರಂದು ಮಂಗಳೂರಿನಲ್ಲಿ ಜರುಗಲಿದೆ. ಹಳದಿ ಶಾಸ್ತ್ರವು ಏಪ್ರಿಲ್‌ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರವು ಏಪ್ರಿಲ್ 30ರಂದು ನಡೆಯಲಿದೆ.

ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಮಾನ್ವಿತಾ ಮತ್ತು ಅರುಣ್ ವಿವಾಹವಾಗಲಿದ್ದಾರೆ. ಅಂದಹಾಗೆ ಅರುಣ್  ಮೈಸೂರು ಮೂಲದವರು.
ಮದುವೆ ಕುರಿತಾದ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಮಾನ್ವಿತಾ ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಜೂನಿಯರ್ NTR ಮುಂದೆ ಈ ಸ್ಟಾರ್‌ ನಟಿಗೆ ಅವಮಾನ..!! ಭೇಷ್ ಅಂದ ನೆಟ್ಟಿಗರು!!

ಸಿನಿಮಾದಲ್ಲಿ ಬ್ಯುಸಿ :

ಆರ್.ಜೆಯಾಗಿ ಖ್ಯಾತಿ ಗಳಿಸಿದ್ದ ಮಾನ್ವಿತಾ ಬಳಿಕ ಸಿನಿಮಾ ರಂಗಕ್ಕೆ ಬಂದರು. ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಜನಪ್ರಿಯತೆ ತಂದು ಕೊಟ್ಟಿದ್ದಲ್ಲದೇ, ಟಗರು ಪುಟ್ಟಿ ಎಂದೇ ಫೇಮಸ್ ಆದರು.’ಕನಕ’, ‘ಚೌಕ’, ‘ತಾರಕಾಸುರ’, ‘ರಿಲ್ಯಾಕ್ಸ್ ಸತ್ಯ’, ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್’, ‘ಶಿವ 143’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಾನ್ವಿತಾ ನಟನೆಯ ‘ಅಪ್ಪಾ ಐ ಲವ್ ಯೂ’ ಸಿನಿಮಾ ಶುಕ್ರವಾರ (ಏ.12) ತೆರೆಕಂಡಿದೆ.’ಬ್ಯಾಡ್’, ‘ರಾಜಸ್ಥಾನ್ ಡೈರೀಸ್’, ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿವೆ.

Continue Reading

FILM

ಜೂನಿಯರ್ NTR ಮುಂದೆ ಈ ಸ್ಟಾರ್‌ ನಟಿಗೆ ಅವಮಾನ..!! ಭೇಷ್ ಅಂದ ನೆಟ್ಟಿಗರು!!

Published

on

ಟಾಲಿವುಡ್: ಟಾಲಿವುಡ್ ನಲ್ಲಿ ಜೂನಿಯರ್ NTR ಹವಾನೇ ಬೇರೆ. RRR ಸಿನೆಮಾ ಹಿಟ್ ಬಳಿಕ ಜೂನಿಯರ್ NTR ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ಜನರಿಗೆ ಫೇವರೆಟ್ ಹೀರೋ ಕೂಡಾ ಆಗಿದ್ದಾರೆ.

ಇತ್ತೀಚೆಗೆ ‘ಟಿಲ್ಲು ಸ್ಕ್ವೇರ್’ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನುಪಮಾ ಪರಮೇಶ್ವರನ್‌ಗೆ ಎನ್‌ಟಿಆರ್ ಮುಂದೇನೆ ಅವಮಾನವಾಗಿದೆ. ಹೌದು, ಅನುಪಮಾ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದೆ. ಸೂಪರ್‌ ಸಕ್ಸಸ್‌ಗಾಗಿ ಕಾಯುತ್ತಿದ್ದ ಟಾಲಿವುಡ್ ಮಂದಿಗೆ ಮತ್ತೊಂದು 100 ಕೋಟಿ ರೂಪಾಯಿ ಸಿನಿಮಾ ಸಿಕ್ಕಿದಂತಾಗಿದೆ. ಈ ಸಿನೆಮಾದ ಸಂಭ್ರಮಾಚರಣೆಯಲ್ಲಿ ಜೂನಿಯರ್ ಎನ್‌ಟಿಆರ್ ಕೂಡಾ ಭಾಗವಹಿಸಿದ್ದರು.

Read More..; ಎಲ್ಲರ ಕಣ್ಣು ಜಾಹ್ನವಿ ಕೊರಳ ಮೇಲೆ…ಅಂತದ್ದೇನಿದೆ ಆ ನೆಕ್ಲೇಸ್ ನಲ್ಲಿ?

ಕಿರಿಕ್ ಮಾಡಿದ ಜೂನಿಯರ್ ಎನ್‌ಟಿಆರ್ ಫ್ಯಾನ್ಸ್..!

‘ಟಿಲ್ಲು ಸ್ಕ್ವೇರ್’ ಸಿನೆಮಾದ ಯಶಸ್ಸಿನ ಬಗ್ಗೆ ಸಿನೆಮಾ ತಂಡದವರು ಒಬ್ಬೊಬ್ಬರಾಗಿ ಸ್ಟೇಜ್‌ ಗೆ ಬಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ರು. ಈ ನಡುವೆ ಜೂನಿಯರ್ ಎನ್‌ಟಿಆರ್ ಸ್ಟೇಜ್ ಮೇಲೆ ಬರುವಂತೆ ಬೊಬ್ಬೆ ಹಾಕಿ ಕೂಗಾಡ ತೊಡಗಿದ್ರು ಅವರ ಅಭಿಮಾನಿಗಳು. ಕಾರ್ಯಕ್ರಮದ ನಿರೂಪಕರಿಗೂ ಇವರನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ.

ಅನುಪಮಾಳಿಗೆ ಅವಮಾನಿಸಿದ ಎನ್‌ಟಿಆರ್ ಫ್ಯಾನ್ಸ್..!

ಅಭಿಮಾನಿಗಳ ಗಲಾಟೆ ಮಧ್ಯೆ ಚಿತ್ರದ ನಟಿ ಅನುಪಮಾ ಪರಮೇಶ್ವರನ್ ಸ್ಟೇಜ್ ಏರುತ್ತಿರುವಾಗಲೇ ಫ್ಯಾನ್ಸ್ ಗಲಾಟೆ ಜೋರು ಶುರು ಮಾಡಿದ್ರು. ‘ನಟಿ ನಾನು ಮಾತಾಡಬೇಕಾ? ಬೇಡ್ವಾ’ ಎಂದು ಕೇಳಿಕೊಂಡ್ರು. ಅದಕ್ಕೆ ಜೂನಿಯರ್ ಎನ್‌ಟಿಆರ್  ಅಭಿಮಾನಿಗಳು ಬೇಡ ಎಂದು ಹೇಳಿದ್ದಾರೆ.

ಈ ಗದ್ದಲದಲ್ಲಿಯೂ ಅನುಪಮಾ ಮಾತನಾಡಲು ಪ್ರಯತ್ನಿಸಿದ್ದಾರೆ. ‘ನಾನು ಕೇವಲ ಒಂದೇ ಒಂದು ನಿಮಿಷ ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಾನು ನಿಮ್ಮ ಸಮಯವನ್ನು ಹಾಳು ಮಾಡುವುದಿಲ್ಲ. ಎನ್‌ಟಿಆರ್ ಅವರೇ ನೀವು ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದಗಳು. ನನಗೆ ಏನೂ ಬೇಜಾರಾಗಿಲ್ಲ. ಯಾಕಂದ್ರೆ, ಅವರ ಭಾವನೆಗಳೇನು ಅನ್ನೋದನ್ನು ನಾನು ಅರ್ಥೈಸಿಕೊಳ್ಳಬಲ್ಲೆ’ ಎಂದು ಹೇಳಿ ವೇದಿಕೆ ಇಳಿದ್ದಾರೆ.  ಅನುಪಮಾರವರು ಅಲ್ಲಿದ್ದ ಸಿಚುವೇಷನ್‌ಅನ್ನು ಸಮರ್ಥವಾಗಿ ಹ್ಯಾಂಡಲ್ ಮಾಡಿದಕ್ಕೆ ನೆಟ್ಟಿಗರು ನಟಿಗೆ ‘ಭೇಷ್’ ಎಂದಿದ್ದಾರೆ.

Continue Reading

LATEST NEWS

Trending