BANTWAL
ಉಪ್ಪಿನಂಗಡಿ: ಎರಡು ಕಾರುಗಳು ಮುಖಾಮುಖಿ ಢಿಕ್ಕಿ-ಪ್ರಯಾಣಿಕರಿಗೆ ಗಾಯ
ಉಪ್ಪಿನಂಗಡಿ: ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಒಂದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ನಡೆದಿದೆ.
ಕೆಮ್ಮಾರದ ಮುಹಮ್ಮದ್ ನವಾಝ್ ಹಾಗೂ ಅನ್ಸಾರ್ ಗಾಯಗೊಂಡವರಾಗಿದ್ದಾರೆ.
ಸ್ವಿಫ್ಟ್ ಡಿಸೈರ್ ಕಾರಿನಲ್ಲಿದ್ದ ಸಾಮೆತ್ತಡ್ಕದ ನಿವಾಸಿ ಅಬ್ದುಲ್ ಮಜೀದ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆ ಹೋಗುತ್ತಿದ್ದ ಕಾರು ಕೂಟೇಲು ಸೇತುವೆಯ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಹಳೆಗೇಟು ಕಡೆ ಮುಖ ಮಾಡಿ ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದರೆ, ಮಾರುತಿ 800 ಕಾರು ರಸ್ತೆಯ ಇನ್ನೊಂದು ಬದಿ ಉಪ್ಪಿನಂಗಡಿ ಕಡೆಗೆ ಮುಖ ಮಾಡಿ ನಿಂತಿದೆ.
ಮಾರುತಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!
ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.
ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ
ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :
ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.
ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!
ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
BANTWAL
ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!
ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.
ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- FILM5 days ago
“ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?
- DAKSHINA KANNADA6 days ago
PUTTUR : ಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ತೆಗೆದವರಿಗೆ ಬಿತ್ತು ಧರ್ಮದೇಟು!
- FILM6 days ago
ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?
- DAKSHINA KANNADA5 days ago
ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್