Saturday, August 20, 2022

ತೊಕ್ಕೊಟ್ಟು: ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು ಪರಾರಿ- ಸಹಸವಾರೆ ಸಾವು

ಉಳ್ಳಾಲ: ಸ್ಕೂಟರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ದಾರುಣ ಸಾವನ್ನಪ್ಪಿದ ಘಟನೆ ಮಂಗಳೂರಿನ ರಾ.ಹೆ. 66 ರ ಕಾಪಿಕಾಡಿನಲ್ಲಿ ನಡೆದಿದೆ.


ತೊಕ್ಕೊಟ್ಟು ಕಾಪಿಕಾಡು ಎರಡನೇ ಕ್ರಾಸ್ ನಿವಾಸಿ ಎಮಿಲ್ಡಾ ಡಿಸೋಜ (55) ಮೃತ ಪಟ್ಟ ದುರ್ದೈವಿಯಾಗಿದ್ದಾರೆ.

ಎಂದಿನಂತೆ ವಾಕಿಂಗ್ ತೆರಳಿದ್ದ ಎಮಿಲ್ಡಾ ತೊಕ್ಕೊಟ್ಟು ಚರ್ಚ್‌ಗೆ ತೆರಳಿ ವಾಪಾಸ್ ಹಿಂತಿರುಗುವ ವೇಳೆ ಕ್ಲೇವಿ ಡಿಸೋಜ ಎಂಬವರ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಇದೇ ಸಂದರ್ಭ ಹಿಂಬದಿಯಿಂದ ಕೇರಳ ಕಡೆಗೆ ತೆರಳುತ್ತಿದ್ದ ಅಪರಿಚಿತ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ, ಕಾರಿಗಾಗಿ ಶೋಧ ಮುಂದುವರಿಸಿದ್ದಾರೆ.

ಸವಾರೆ ಕ್ಲೇವಿ ಡಿಸೋಜಾ ಆಸ್ಪತ್ರೆಯಲ್ಲಿ ಆ್ಪತ್ರೆಯಲ್ಲಿ ದಾಖಲಾಗಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.

ಮೃತರು ಪತಿ, ಪುತ್ರ, ಪುತ್ರಿ, ಮೊಮ್ಮಕ್ಕಳನ್ನ ಅಗಲಿದ್ದಾರೆ.

ಪ್ರತಿನಿತ್ಯ ನಡೆದುಕೊಂಡು ಹೋಗುತ್ತಿದ್ದರು

ಆರೋಗ್ಯ ಕಾಪಾಡುವ ಸಲುವಾಗಿ ಎಮಿಲ್ಡಾ ಡಿಸೋಜ ನಿತ್ಯ ಮನೆಯಿಂದ ಚಚ್೯ವರೆಗೆ ಎರಡು ಕಿ.ಮೀ ದೂರ ನಡೆದುಕೊಂಡೇ ಹೋಗಿ ಹಾಗೆಯೇ ವಾಪಸ್ಸಾಗುತ್ತಿದ್ದರು. ಇಂದು ವಾಪಸ್ಸು ಬರುವ ಸಮಯ ಚಚ್೯ಗೆ ತೆರಳಿದ್ದ ಅಂಬಿಕಾರೋಡ್ ನಿವಾಸಿ ಕ್ಲೇವಿ ಡಿಸೋಜ ಸ್ಕೂಟರಿನಲ್ಲಿ ಸಿಕ್ಕಿದ್ದಾರೆ. ಅವರು ಎಮಿಲ್ಡಾ ಅವರನ್ನು ಮನೆತನಕ ಬಿಡುವುದಾಗಿ ಸ್ಕೂಟರನ್ನೇರಿಸಿ ವಾಪಸ್ಸಾಗುವಾಗ ದುರಾದೃಷ್ಟವಶಾತ್ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

 

 

LEAVE A REPLY

Please enter your comment!
Please enter your name here

Hot Topics