Connect with us

LATEST NEWS

ಮಂಗಳೂರು: ಕಾರ್‌ಗೆ ಬೈಕ್‌ ಢಿಕ್ಕಿ- ಸಿಸಿಟಿವಿಯಲ್ಲಿ ಭೀಕರ ದೃಶ್ಯ ದಾಖಲು

Published

on

ಮಂಗಳೂರು: ನಗರದ ಚಿಲಿಂಬಿ ಬಳಿಯ ಕೋಟೆಕಣಿ ರಸ್ತೆ ಮತ್ತು ಕುಳೂರು ಫೆರ್ರಿ ರಸ್ತೆಯಲ್ಲಿ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಬೈಕ್‌ ಸವಾರರು ಗಾಯಗೊಂಡಿದ್ದಾರೆ.


ನಿನ್ನೆ ಸಂಜೆ 4 ಗಂಟೆಗೆ ಕಾರೊಂದು ಕೋಟೆಕಣಿಯಿಂದ ಇಳಿಜಾರಿನ ರಸ್ತೆಯಲ್ಲಿ ತೆರಳುತ್ತಿರುವ ವೇಳೆ,

ಲೇಡಿಹಿಲ್‌ನಿಂದ ಉರ್ವಾ ಸ್ಟೋರ್‌ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆ ಬದಿಗೆ ಬಿದ್ದಿದ್ದಾರೆ.

ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪಕ್ಕದ ಅಪಾರ್ಟ್‌ಮೆಂಟ್ ನ ಕಾಂಪೌಂಡ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

FILM

ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

Published

on

ಬ್ಯೂಟಿ ಕ್ವೀನ್ ಎಂದು ಕಿರೀಟ ಮುಡಿಗೇರಿಸಿಕೊಂಡವಳು ಎರಡೇ ವರ್ಷಕ್ಕೆ ಹಂತಕರ ಗುಂಡೇಟಿಕೆ ಬಲಿಯಾಗಿದ್ದಾಳೆ. ರೆಸ್ಟೋರೆಂಟ್‌ನಲ್ಲಿ ಆರಾಮವಾಗಿ ವಿರಾಮಿಸಿ ಬಗೆ ಬಗೆಯ ಸೀಫುಡ್ ಆರ್ಡರ್ ಮಾಡಿದ್ರು.  ಇನ್ನೇನು ಫುಡ್‌ಅನ್ನು ಆಹ್ಲಾದಿಸಬೇಕು ಅನ್ನೋವಷ್ಟರಲ್ಲಿ ದುರಂತ ಅಂದ್ರೆ ಹಂತಕರ ಗುಂಡೇಟಿಗೆ ಈ ಸುಂದರಿ ಬಲಿಯಾಗಿದ್ದಾರೆ.

23ವರ್ಷಕ್ಕೆ ಬ್ಯೂಟಿ ಕ್ವೀನ್ ಆದ ಲ್ಯಾಂಡಿ

ಲ್ಯಾಂಡಿ ಪರ್ರಾಗಾ ಗೊಯ್ಬುರೊ ತನ್ನ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. 2022ರ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ.  ಬಿಕಿನಿ ಕ್ವೀನ್ ಎಂದೆನಿಸಿಕೊಂಡ ಈಕೆ ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ. ಹಲವು ಉದ್ಯಮಗಳನ್ನು ಕೂಡ ಈಕೆ ನಡೆಸುತ್ತಿದ್ದಳು.  ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

ಸಾವಿಗೆ ಕಾರಣವಾದ ಇನ್ಸ್ಟಾಗ್ರಾಮ್ ಪೋಸ್ಟ್:

ಎ.28ರಂದು ಕ್ವೆವೆಡೊ ನಗರದ ರೆಸ್ಟೋರೆಂಟ್‌ವೊಂದಕ್ಕೆ ಲ್ಯಾಂಡಿ ತೆರಳಿದ್ದರು. ಈ ವೇಳೆ ವೆರೈಟಿ ಸೀ ಫುಡ್‌ಗಳನ್ನು ಆರ್ಡರ್ ಮಾಡಿದ್ದಾರೆ. ಫುಡ್‌ಗಳು ಟೇಬಲ್ ಮೇಲೆ ಬಂದ ಕೂಡಲೇ ಫೊಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋ ಲ್ಯಾಂಡಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಹಂತಕರು ಪೋಸ್ಟ್ ಮಾಡಿದ್ದ ಫೊಟೋದ ಜಾಲವನ್ನು ಹಿಡಿದು ಹಿಂಬಾಳಿಸಿದ ಇಬ್ಬರು ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್‌ಗೆ ಬಂದ ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಗನ್‌ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಈಕ್ವೆಡಾರ್‌ನ ಸುಂದರಿ ದುಷ್ಕರ್ಮಿಗಳ ಗುಂಡೇಟಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ  ಹತ್ಯೆಯಾಗಿದ್ದಾರೆ. ಹಂತಕರು ಈಕೆಯ ಇನ್ಸ್ಟಾಗ್ರಾಮ್‌ನ್ನು ಫಾಲೋ ಮಾಡಿ ಹತ್ಯೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೀಡಿಯೋ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ವಿಶೇಷ ತಂಡ ರಚನೆ ಮಾಡಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿ ಅಪರಾಧ ಪ್ರಕರಣದಲ್ಲಿ, ಡ್ರಗ್ ಕಳ್ಳ ಸಾಗಾಣಿಕೆಯಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ತನ್ನ ಬಾಯ್‌ಫ್ರೆಂಡ್‌ನಿಂದ ದೂರಾಗಿದ್ದ ಲ್ಯಾಂಡ್ರಿಯ ಈ ನಿಗೂಢ ಬರ್ಬರ ಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.

 

 

 

 

Continue Reading

FILM

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

Published

on

ಮುಂಬೈ/ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಲೋಕದಲ್ಲಿ ತಮ್ಮದೇ ಆದ ಸ್ಟಾಂಡ್‌ ಕ್ರಿಯೇಟ್ ಮಾಡಿದ್ದಾರೆ. ಕೇವಲ ತಮಿಳು ಭಾಷೆ ಅಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ರಜನಿಗೆ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಚಾರ್ಮ್ ಅಬ್ಬಾ…! ವಯಸ್ಸಲ್ಲಿ 73 ಆದರೂ ಚಿರ ಯುವಕನಂತೆ ಕಾಣಿಸುವ ಎನರ್ಜಿ ಇವರದು. ಇನ್ನು ಇವರ ಸಿನೆಮಾ ರಿಲೀಸ್ ಆದ್ರೆ ಸಾಕು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತೆ. ಅದಕ್ಕೆ ಇತ್ತೀಚೆಗೆ ರಿಲೀಸ್ ಆದ ಜೈಲರ್ ಸಿನೆಮಾವೇ ಸಾಕ್ಷಿ. ಇದೀಗ ರಜನಿ ಹಾಗೂ ಐಶ್ವರ್ಯ ರೈ ಗೆ ಸಂಬಂಧಪಟ್ಟ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

rajani-aishwarya

14 ವರ್ಷಗಳ ಹಿಂದೆಯೇ ಕೆಲವರು ರಜನಿಕಾಂತ್ ಅವರನ್ನು ಹೀರೋ ಅಲ್ಲ ಎಂಬಂತೆ ವರ್ತಿಸಿದ್ದರಂತೆ. ಹೀಗಂತ ಖುದ್ದು ರಜನಿ ಅವರು ರೋಬೋ ಸಿನೆಮಾ ಪ್ರೆಸ್‌ಮೀಟ್‌ ನಲ್ಲಿ ಇಂಟ್ರಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ಈ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಐಶ್ವರ್ಯ ರೈ ಬಚ್ಚನ್‌ಗೆ, ಸೊಸೆಯ ‘ವಾಟ್‌ ದಿ ಹೆಲ್‌ ನವ್ಯಾ’ದಲ್ಲಿ ಡಿಮ್ಯಾಂಡ್‌…!

ಪ್ರೆಸ್‌ಮೀಟ್‌ನಲ್ಲಿ ಮಾತು ಆರಂಭಿಸಿದ ರಜನಿ ‘ನನ್ನ ಜೊತೆ ಹೀರೋಯಿನ್‌ ಆಗಿ ನಟಿಸಿರುವುದಕ್ಕೆ ಐಶ್ವರ್ಯಾಗೆ ಧನ್ಯವಾದಗಳು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆ ರಾಜಸ್ಥಾನ ಕುಟುಂಬದವರು ನನ್ನನ್ನು ನೋಡಲು ಬಂದರು. ಅದರಲ್ಲಿ ನಂದುಲಾಲ್ ಎಂಬವರು ನನ್ನನ್ನು ಮಾತನಾಡಿಸಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸರ್ ನಿಮ್ಮ ತಲೆ ಕೂದಲಿಗೆ ಏನಾಗಿದೆ ಎಂದು ಕೇಳಿದರು. ಬಿಡಿ ಎಲ್ಲಾ ಉದುರಿ ಹೋಗಿದೆ ಎಂದು ಹೇಳಿದೆ. ನಿಮ್ಮ ನಿವೃತ್ತಿ ಜೀವನ ಹೇಗಿದೆ. ಲೈಫ್ ಎಂಜಾಯ್ ಮಾಡ್ತಿದ್ದೀರಾ ಎಂದು ಕೇಳಿದರು. ಇಲ್ಲಾ ನಾನೊಂದು ಸಿನೆಮಾ ಮಾಡ್ತಾ ಇದ್ದೇನೆ. ಐಶ್ವರ್ಯ ರೈ ಹೀರೋಯಿನ್ ಅಂದೆ. ‘ಹೀರೋ ಯಾರು ಸರ್’ ಎಂದು ಮರು ಪ್ರಶ್ನಿಸಿದರು.  ಅವರ ಜೊತೆ ಇದ್ದವರು ಡ್ಯಾಡಿ ಇವರೇ ಹೀರೋ ಎಂದು ಮೆಲುಧ್ವನಿಯಲ್ಲಿ ಹೇಳ್ತಾರೆ. ನಂದುಲಾಲ್  ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡಿ ಏನೂ ಮಾತನಾಡದೆ ಹೊರಟು ಬಿಟ್ಟರು. ಅಷ್ಟರಾಗಲೇ ಮನೆ ಒಳಗಡೆಯಿಂದು ಒಂದು ಧ್ವನಿ ಬರುತ್ತೆ. ಐಶ್ವರ್ಯ ರೈ ಗೆ ಏನಾಗಿದೆ..? ಅಲ್ಲಾ ಅಭಿಷೇಕ್ ಹೇಗೆ ಒಪ್ಪಿದ್ರು..? ಅಮಿತಾಬಚನ್‌ಗಾದ್ರು ಎನಾಗಿದೆ.. ಐಶ್ವರ್ಯಾಳನ್ನು ಇವರ ಜೊತೆ ಹೀರೋಯಿನ್ ಮಾಡಲು ಒಪ್ಪಿದ್ದಾರಲ್ಲ  ಎಂಬ ಮಾತು ಕೇಳಿ ಬಂತು ಎಂದು ರಜನಿಕಾಂತ್ ಸಿನೆಮಾ ಪ್ರೆಸ್ ಮೀಟ್‌ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು.

Continue Reading

FILM

ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ಕರೀನಾ ಕಪೂರ್; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ, ಏನಂದ್ರು?

Published

on

ಮಂಗಳೂರು / ಬೆಂಗಳೂರು : ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ (Unicef India’s National Ambassador) ನೇಮಕಗೊಂಡಿದ್ದಾರೆ. ಈ ಬಗ್ಗೆ ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಭಾವನಾತ್ಮಕ ಪೋಸ್ಟ್ :

ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಟಾಕ್ಸಿಕ್ ನಿಂದ ಔಟ್ :

ಕರೀನಾ ಕಪೂರ್ ಇತ್ತೀಚೆಗೆ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಹಿಳಾ ಪ್ರಧಾನ ಚಿತ್ರವಾದ ಈ ಚಿತ್ರ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಸದ್ಯ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಅವರು ಬಿಝಿಯಾಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತಾದರೂ, ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್ 

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.

Continue Reading

LATEST NEWS

Trending