Connect with us

    LATEST NEWS

    ಕಾರು – ಸ್ಕೂಟರ್ ಅಪಘಾತ ಸವಾರ ಸ್ಥಳದಲ್ಲೇ ಸಾವು

    Published

    on

    ಕುಂದಾಪುರ: ಬೈಂದೂರು ತಾಲೂಕಿನ ನಾವುಂದದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ‌ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಾವುಂದ ನಿವಾಸಿ ಇಸ್ಮಾಯಿಲ್ (56) ಎಂದು ಗುರುತಿಸಲಾಗಿದೆ.

    ನಾವುಂದ ಮಾರುಕಟ್ಟೆ ಕಡೆಯಿಂದ ಇಸ್ಮಾಯಿಲ್ ತನ್ನ ಮನೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು ಅಪಘಾತದಿಂದ ರಸ್ತೆಗೆ ಎಸೆಯಲ್ಪಟ್ಟ ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇಸ್ಮಾಯಿಲ್‌ ಅವರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಬಂದು ಇಸ್ಮಾಯಿಲ್‌ ಶವವನ್ನು ನೋಡಿದ ಅವರ ಪುತ್ರನೂ ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ಕೊಡಿಸಲಾಗಿದೆ.

    ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    DAKSHINA KANNADA

    ಬಂಟರ ಸಂಘ ಬಜಪೆ ವಲಯದ 12 ನೇ ವಾರ್ಷಿಕ ಮಹಾಸಭೆ : ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ನೆರವು

    Published

    on

    ಮಂಗಳೂರು : ಬಂಟರ ಸಂಘ ಬಜಪೆ ವಲಯದ 12 ನೇ ವಾರ್ಷಿಕ ಮಹಾಸಭೆ ಸಂಜೀವ ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಬಂಟರ ಸಂಘ ಬಜಪೆ ವಲಯದ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಮತ್ತು 2023-24 ನೇ ಸಾಲಿನ ಲೆಕ್ಕ ಪತ್ರ ಮಂಡನೆಯನ್ನು ಕೋಶಾಧಿಕಾರಿ ಸುರೇಶ್ ಶೆಟ್ಟಿ ಅರೆಕಲ್ಲು ಮಂಡಿಸಿ ಅನುಮೋದನೆ ಪಡೆದರು.

    ಈ ಸಂದರ್ಭ 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಶಕ್ತರಿಗೆ ನೆರವಾಗುವ ‘ಹೊಸಬೆಳಕು ಯೋಜನೆ’ಯಡಿಯಲ್ಲಿ 4 ಜನ ಬಂಟ ಸಮಾಜ ಮತ್ತು ಇತರ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಲಾಯಿತು. ಈ ಸಂದರ್ಭ 5 ಮಂದಿ ವಿಶಿಷ್ಟ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು.

    ಇದನ್ನೂ ಓದಿ : ಕೊನೆಗೂ ಮೌನ ಮುರಿದ್ರಾ ಸುಮಲತಾ..! ವೈರಲ್ ಪೋಸ್ಟ್‌ನಲ್ಲಿ ಏನಿದೆ ಗೊತ್ತಾ?

    ಕಾರ್ಯಕ್ರಮದಲ್ಲಿ ಸುಕೇಶ ಮಾನೈ, ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ವಸಂತ ಶೆಟ್ಟಿ, ಗಿರೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಹೆಗ್ಡೆ, ಸುನಿಲ್ ಭಂಡಾರಿ, ವಿದ್ಯಾಧರ್ ಹೆಗ್ಡೆ, ಪ್ರವೀಣ್ ಆಳ್ವ, ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಸುಕೇಶ್ ಶೆಟ್ಟಿ ಮುಂಡರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕಂದಾವರ ಕಾರ್ಯಕ್ರಮ ನಿರೂಪಿಸಿದರು.

     

    Continue Reading

    DAKSHINA KANNADA

    ಮಂಜೇಶ್ವರ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿ*ಕ್ಕಿ; ತಲೆಕಳ ನಿವಾಸಿ ಮೃ*ತ್ಯು

    Published

    on

    ಮಂಜೇಶ್ವರ : ಕಾರುಗಳ ನಡುವೆ ಉಂಟಾದ ಅಪ*ಘಾತದಲ್ಲಿ ವೃದ್ಧರೋರ್ವರು ಮೃ*ತಪಟ್ಟು ಮೂವರು ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ವರ್ಕಾಡಿ ಮೊರತ್ತಣೆಯಲ್ಲಿ ನಡೆದಿದೆ.

    ಮೀಂಜ ತಲೆಕ್ಕಳ ಡಾ . ಅಬೂಬಕ್ಕರ್ ಮುಸ್ಲಿಯಾರ್ (65) ಸಾವ*ನ್ನಪ್ಪಿದವರು. ಪತ್ನಿ ಅಮೀನಾ , ಪುತ್ರಿ ಸಬೀರಾ ಮತ್ತು ಸುಮಯ್ಯ ಅಪಘಾತದಲ್ಲಿ ಗಾಯಗೊಂಡವರು.

    ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮೊರತ್ತಣೆ ಜಂಕ್ಷನ್ ನಲ್ಲಿ ಅಪ*ಘಾತ ನಡೆದಿದೆ. ಅಬೂಬಕ್ಕರ್ ಮುಸ್ಲಿಯಾರ್ ಸಂಚರಿಸುತ್ತಿದ್ದ ಆಲ್ಟೋ ಕಾರು ಮತ್ತು ಹೊಸಂಗಡಿ ಕಡೆಗೆ ತೆರಳುತ್ತಿದ್ದ ಇನೋವಾ ಕಾರಿನ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಅಬೂಬಕ್ಕರ್ ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಮೃ*ತಪಟ್ಟಿರುವುದಾಗಿ ತಿಳಿದುಬಂದಿದೆ. ಉಳಿದ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಾವೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅಪ*ಘಾತ ಸಂಭವಿಸಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಪ್ರತಿಭಟನೆ ವೇಳೆ ಮೆಣಸಿನಕಾಯಿ ಬೆಳೆಗಾರರಿಂದ ಆತ್ಮಹತ್ಯೆಗೆ ಯತ್ನ..!

    Published

    on

    ಬಳ್ಳಾರಿ:  ಕೆಂಪು ಮೆಣಸು ಖರೀದಿಸಿದ ಖಾಸಗಿ ಕಂಪೆನಿಯು ಒಂದೂವರೆ ವರ್ಷದಿಂದ ಹಣವನ್ನು ಪಾವತಿ ಮಾಡದೆ ಬಾಕಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ವರು ಮೆಣಸಿನಕಾಯಿ ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ.

    ರುದ್ರೇಶ್ (55), ಹನುಮಂತ್ (40), ಶೇಖರ್ (45) ಮತ್ತು ಕುನೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು. ಹಣ ಪಾವತಿ ಮಾಡಲು ವಿಳಂಬ ಮಾಡಿದ್ದನ್ನು ವಿರೋಧಿಸಿ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

    ಬಾವನಿಂದಲೇ ಬಾಮೈದನ ಹ*ತ್ಯೆ..! ಮಗನ ಅಗಲಿಕೆ ನೋವಿನಿಂದ ತಾಯಿ ಆತ್ಮಹ*ತ್ಯೆ..!!

    ಬೆಂಗಳೂರು ಮೂಲದ ಅಗ್ರಿಗ್ರೀಡ್ ಪ್ರೈವೇಟ್ ಲಿಮಿಟೆಡ್ 100 ರೈತರಿಂದ 1.9 ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಖರೀದಿಸಿದೆ ಎಂದು ರೈತರು ತಿಳಿಸಿದ್ದಾರೆ. 54 ರೈತರ ಬಿಲ್ ಕ್ಲಿಯರ್ ಆಗಿದ್ದು, ಉಳಿದ 46 ರೈತರಿಗೆ ಇನ್ನೂ ಹಣ ಬಂದಿಲ್ಲ. ಬಿಲ್ ಬಾಕಿ ಉಳಿದಿರುವ ರೈತರಲ್ಲಿ ಒಬ್ಬರಾದ ಹನುಮಂತಪ್ಪ ವಡ್ಡರ ಮಾತನಾಡಿ, ‘ಕಂಪೆನಿಯಲ್ಲಿ ಜಿಲ್ಲೆಯ ಹೆಸರಾಂತ ವ್ಯಕ್ತಿಗಳು ಷೇರುದಾರರಾಗಿದ್ದಾರೆ. ಅವರನ್ನು ನಂಬಿ 220 ಟನ್ ಮೆಣಸಿನಕಾಯಿಯನ್ನು ಕಂಪೆನಿಗೆ ಮಾರಾಟ ಮಾಡಿದೆವು. ಸಾಮಾನ್ಯವಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಖಾಸಗಿ ಕಂಪನಿಗೆ ನೀಡಿದ್ದು ಇದೇ ಮೊದಲು ಎಂದು ತಿಳಿಸಿದ್ದಾರೆ.

    ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಕಲ್ಯಾಣ-ಕರ್ನಾಟಕದಲ್ಲಿ ಕುರುಗೋಡು ತಾಲೂಕು ಮೆಣಸಿನಕಾಯಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ.

     

     

     

     

     

    Continue Reading

    LATEST NEWS

    Trending