Connect with us

    LATEST NEWS

    ಅಮೇರಿಕಾದಲ್ಲಿ ನಿಲ್ಲದ ಕಾಡ್ಗಿಚ್ಚು : 15 ಮಂದಿ ಸಾವು.! ಕೆಂಪೇರಿದ ಬಾನು..!

    Published

    on

    ಅಮೇರಿಕಾದಲ್ಲಿ ನಿಲ್ಲದ ಕಾಡ್ಗಿಚ್ಚು : 15 ಮಂದಿ ಸಾವು.! ಕೆಂಪೇರಿದ ಬಾನು..!

    ಕ್ಯಾಲಿಫೋರ್ನಿಯಾ : ಅಮೆರಿಕದಲ್ಲಿ ಕಾಡ್ಗಿಚ್ಚಿನ ಆರ್ಭಟ ತೀವ್ರಗೊಂಡಿದೆ. ಅಮೆರಿಕದ ಪಶ್ಚಿಮ ಕರಾವಳಿಯ ಮೂರು ರಾಜ್ಯಗಳು ಕಾಡ್ಗಿಚ್ಚು ಬಾಧಿತವಾಗಿವೆ.

    ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದರೂ ಯಾವುದೇ ಪ್ರಗತಿ ಕಾಣ್ತಾ ಇಲ್ಲ.  ಅದರಲ್ಲೂ ಓರೆಗನ್ ರಾಜ್ಯದಲ್ಲಿ ಕಾಡ್ಗಿಚ್ಚಿನ ಹಾವಳಿಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಈಗಾಗಲೇ 16 ಮಂದಿ ಬಲಿಯಾಗಿದ್ದಾರೆ.

    ಸರಿಸುಮಾರು 5 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಭಾಗದಲ್ಲಿ ಬಿಸಿ ಗಾಳಿ, ಧೂಳು ಹಾಗೂ ಹೊಗೆ ಉಸಿರುಗಟ್ಟಿಸುವ ವಾತಾವರಣಕ್ಕೆ ಕಾರಣವಾಗಿದೆ.

    ಕೇವಲ ಓರೆಗನ್ ರಾಜ್ಯ ಮಾತ್ರವಲ್ಲ ಪಕ್ಕದ ವಾಷಿಂಗ್ಟನ್ ಹಾಗೂ ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲೂ ಕಾಡ್ಗಿಚ್ಚು ಹರಡಿದೆ.  ಧೂಳೂ ಮತ್ತು ಕಾಡ್ಗಿಚ್ಚಿನಿಂದ ಬಾನೆಲ್ಲ ಕೆಂಪಾಗಿದೆ. ಕೆಲವೆಡೆ ಸಂಪೂರ್ಣ ಪಟ್ಟಣಗಳೇ ಅಗ್ನಿಗಾಹುತಿಯಾಗಿವೆ.

    ಕ್ಯಾಲಿಫೋರ್ನಿಯಾ ರಾಜ್ಯವೊಂದರಲ್ಲೇ 10 ಮಂದಿ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಹೊಗೆಯಿಂದಾಗಿ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗಿದೆ.

    ಈವರೆಗೆ 4.4 ದಶಲಕ್ಷ ಎಕರೆ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಅರಣ್ಯದ ನಡುವೆ ಹಾದು ಹೋಗಿದ್ದ ಗ್ಯಾಸ್‌ ಪೈಪ್‌ ಲೈನ್‌ಗಳೂ ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    LATEST NEWS

    ಬೆಳಗಾವಿ ಯೋಧ ರವಿ ಯಲ್ಲಪ್ಪ ಹುತಾತ್ಮ

    Published

    on

    ಮಂಗಳೂರು/ಬೆಳಗಾವಿ : ನಾಗಲ್ಯಾಂಡ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಸೇನಾ ವಾಹನದಿಂದ ಯೋಧರು ಕೆಳಗೆ ಜಿಗಿದಿದ್ದು, ಯೋಧರ ಮೇಲೆಯೇ ವಾಹನ ಪಲ್ಟಿಯಾಗಿದೆ.

    ಸೇನಾ ವಾಹನದ ಈ ದುರಂತದಲ್ಲಿ ಬೆಳಗಾವಿ ಯೋಧ ರವಿಚಂದ್ರ ಯಲ್ಲಪ್ಪ ತಳವಾರ (35) ಹುತಾತ್ಮರಾಗಿದ್ದಾರೆ. ರವಿ ಯಲ್ಲಪ್ಪ ತಳವಾರ ಅವರು ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದವರು.

    ರವಿಚಂದ್ರ ಯಲ್ಲಪ್ಪ ತಳವಾರ ಅವರಿದ್ದ ಸೇನಾ ವಾಹನ ರಸ್ತೆ ಮಾರ್ಗವಾಗಿ ಹೊರಟ್ಟಿದ್ದಾಗ ಈ ದುರಂತ ನಡೆದಿದೆ. ಕೆಳಗೆ ಜಿಗಿದ ಯೋಧರ ಮೇಲೆ ಸೇನಾ ವಾಹನ ಪಲ್ಟಿಯಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಇದನ್ನೂ ಓದಿ: ಕರಾವಳಿ : ಏರುಪೇರಾಗುತ್ತಿರುವ ಹವಮಾನ ; ಹೆಚ್ಚುತ್ತಿರುವ ಕಾಯಿಲೆ

    16 ವರ್ಷಗಳಿಂದ ನಾಗಾಲ್ಯಾಂಡ್ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಚಂದ್ರ ತಳವಾರ ಹುತಾತ್ಮರಾಗಿದ್ದು, ಇನ್ನೂ ನಾಲ್ಕು ವರ್ಷಗಳಲ್ಲಿ ನಿವೃತ್ತರಾಗಲಿದ್ದರು. ಮೃತರು ಪತ್ನಿ ಶೀತಲ್ ತಳವಾರ, 11 ವರ್ಷದ ಪುತ್ರಿ ಹಾಗೂ 8 ವರ್ಷದ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

    ಇವರ ಇನ್ನೊಬ್ಬ ಚಿಕ್ಕ ಸಹೋದರ ಶಿವರಾಜ ತಳವಾರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಿಬ್ಬರು ಸಹೋದರರು ಊರಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

     

    Continue Reading

    LATEST NEWS

    ಬಿಯರ್ ಪ್ರಿಯರಿಗೆ ಕಹಿ ಸುದ್ಧಿ; ಮತ್ತೆ ಏರಲಿದೆ ಬಿಯರ್ ಬೆಲೆ

    Published

    on

    ಮಂಗಳೂರು/ಬೆಂಗಳೂರು: ಈಗಾಗಲೇ ಬಸ್​ ಟಿಕೆಟ್​ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದ ಸರ್ಕಾರ ಮತ್ತೆ ಮದ್ಯ ಪ್ರಿಯರಿಗೆ ಶಾಕ್​ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆ ಕರ್ನಾಟಕ ಸರ್ಕಾರ ಬಜೆಟ್‌ಗೆ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ.

    ಮದ್ಯದ ಬಾಟಲ್​ಗೆ ಕನಿಷ್ಠ 10 ರಿಂದ 50 ರೂ.ವರೆಗೆ ಹೆಚ್ಚಳವಾಗಲಿದೆ. ಪ್ರತಿ ಬಿಯರ್​ನಲ್ಲಿನ ಅಲ್ಕೋಹಾಲ್​ ಅಂಶದ ಮೇಲೆ ದರ ಏರಿಕೆಯಾಗಲಿದ್ದು, ಜನವರಿ 20 ರಿಂದ ಇದು ಜಾರಿಯಾಗಲಿದೆ. ಭಾರತೀಯ ನಿರ್ಮಿತ ಮದ್ಯದ (ಐಎಂಎಲ್​) ಮಾರಾಟವನ್ನು ರಾಜ್ಯದಲ್ಲಿ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಐಎಂಎಲ್​​ ಮದ್ಯದ ಬೆಲೆ ಶೇ 25 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬಿಯರ್​ ದರ ಪರಿಷ್ಕರಿಸಲು 2024 ರ ಆಗಸ್ಟ್​ನಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಮುಖ್ಯಮಂತ್ರಿಗಳು ದರ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ.

    ಪ್ರೀಮಿಯಂ ಬಿಯರ್​ ಬೆಲೆ ಏರಿಕೆಗೆ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ತಕರಾರು ವ್ಯಕ್ತಪಡಿಸಿದೆ. ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ​ಬೆಲೆಗೆ ಬಿಯರ್ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಬಿಯರ್​ ಮಾರಾಟ ಕಡಿಮೆಯಾಗಿದೆ ಎಂದು ಹೇಳಿದೆ.

    ಎರಡು ಪಟ್ಟು ಹೆಚ್ಚಿದ ಬಿಯರ್ ಮಾರಾಟ :

     ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಬೇಸಿಗೆಯ ತಾಪಮಾನದಲ್ಲಿನ ಏರಿಕೆ ಕೂಡ ಬಿಯರ್ ಬೇಡಿಕೆ ಹೆಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.

    Continue Reading

    LATEST NEWS

    ದಿಢೀರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವರುಣ್ ಆರನ್

    Published

    on

    ನವದೆಹಲಿ: ವರುಣ್ ಆರನ್ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹೃದಯಸ್ಪರ್ಶಿ ಪೋಸ್ಟ್ನೊಂದಿಗೆ ಎಲ್ಲಾ ರೀತಿಯ ಕ್ರಿಕೆಟ್’ನಿಂದ ನಿವೃತ್ತಿ ಘೋಷಿಸಿದ್ದಾರೆ.

    ಅಂದ್ಹಾಗೆ, ವರುಣ್, 2010-11ರ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಗುಜರಾತ್ ವಿರುದ್ಧ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು.

    ದುರದೃಷ್ಟವಶಾತ್, ಭಾರತೀಯ ವೇಗದ ಬೌಲರ್ ವೃತ್ತಿಜೀವನವು ಪುನರಾವರ್ತಿತ ಗಾಯಗಳಿಂದ ಬಳಲುತ್ತಿದೆ. ಯಾಕಂದ್ರೆ, ವರುಣ್ ಆರನ್, ಒಟ್ಟು 18 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನ ಪ್ರತಿನಿಧಿಸಿದ್ದು, ಕೇವಲ 29 ವಿಕೆಟ್ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಆರೋನ್ ನಿಯಮಿತವಾಗಿ ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು.

    ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವರುಣ್ ಆರನ್ .!

    ಗಾಯಗಳಿಂದಾಗಿ ವರುಣ್ ಆರೋನ್ ಕಳೆದ ಫೆಬ್ರವರಿಯಲ್ಲಿ ರೆಡ್-ಬಾಲ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು, ಮತ್ತು ಈಗ ಅವರು ಅಂತಿಮವಾಗಿ ಎಲ್ಲಾ ರೀತಿಯ ಆಟದಿಂದ ಹೊರಗುಳಿದಿದ್ದಾರೆ. ಜನವರಿ 10 ರಂದು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 2024-25 ರಲ್ಲಿ ಗೋವಾ ವಿರುದ್ಧ ಜಾರ್ಖಂಡ್ ಪರ ವೇಗದ ಬೌಲರ್ ತಮ್ಮ ಕೊನೆಯ ಪಂದ್ಯವನ್ನ ಆಡಿದರು.

    ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಮಯವನ್ನ ಕರೆದ ಆರೋನ್ ಇನ್ಸ್ಟಾಗ್ರಾಮ್’ನಲ್ಲಿ, “ಕಳೆದ 20 ವರ್ಷಗಳಿಂದ, ನಾನು ವೇಗವಾಗಿ ಬೌಲಿಂಗ್ ಮಾಡುವ ಅವಸರದಲ್ಲಿ ಬದುಕಿದ್ದೇನೆ, ಉಸಿರಾಡಿದ್ದೇನೆ ಮತ್ತು ಅಭಿವೃದ್ಧಿ ಹೊಂದಿದ್ದೇನೆ. ಇಂದು, ಅಪಾರ ಕೃತಜ್ಞತೆಯೊಂದಿಗೆ, ನಾನು ಪ್ರತಿನಿಧಿ ಕ್ರಿಕೆಟ್ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.

    Continue Reading

    LATEST NEWS

    Trending