Connect with us

CAA,NRC ವಿರುದ್ದ ಮಂಗಳೂರಲ್ಲಿ ಉಪವಾಸ ಸತ್ಯಾಗ್ರಹ..

Published

on

CAA,NRC ವಿರುದ್ದ ಮಂಗಳೂರಲ್ಲಿ ಉಪವಾಸ ಸತ್ಯಾಗ್ರಹ..!!

ಮಂಗಳೂರು:  ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿ.ಎ.ಎ.., ಎನ್ ಆರ್ ಸಿ. ಹಾಗೂ ಎನ್ ಪಿ.ಆರ್ .ಕಾಯ್ದೆ ವಿರೋಧಿಸಿ ವಿ ದಿ ಪೀಪಲ್ ಆಫ್ ಇಂಡಿಯಾ ವತಿಯಿಂದ ದ.ಕ.ಜಿಲ್ಲಾ ಮಟ್ಟದ ಉಪವಾಸ ಸತ್ಯಾಗ್ರಹ ನಡೆಯಿತು.

ನಗರದ ಕ್ಲಾಕ್ ಟವರ್ ಮಿನಿ ವಿಧಾನ ಸೌಧದ ಎದುರು ಈ ಸಾಮೂಹಿಕ ಸತ್ಯಾಗ್ರಹ ನಡೆದಿದ್ದು, ಮಹಿಳೆಯರು, ಮಕ್ಕಳೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ‘ದಂಡಿ ಸತ್ಯಾಗ್ರಹದ 90ನೇ ವರ್ಷಾಚರಣೆಯ ದಿನವಾದ ಇಂದು ಈ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು

 

. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಅಶ್ರಫ್, ದೇಶಾದ್ಯಂತ ಎನ್ ಪಿ ಆರ್ ಜಾರಿ ತರಲು ಕೇಂದ್ರ ಸರಕಾರ ಮುಂದಾಗಿದ್ದು, ಎ.15ರಂದು ಜಾರಿಗೆ ಬರುತ್ತದೆ ಅನ್ನುವ ಮಾಹಿತಿ ದೊರೆತಿದೆ. ದೇಶ ವಿರೋಧಿ, ಸಂವಿಧಾನ ವಿರೋಧಿ ಕಾನೂನುಗಳನ್ನು ಸರಕಾರ ತರುತ್ತಿದ್ದು, ಇದರಿಂದ ಬಡ ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದನ್ನು ಹಿಂತೆಗೆದುಕೊಳ್ಳುವ ತನಕ ನಮ್ಮ ಹೋರಾಟ ನಿರಂತರವಾಗಿರುತ್ತೆ ಅಂತ ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಹಲವಾರು ಸದಸ್ಯರು ಭಾಗಿಯಾಗಿದ್ದು, ಎನ್ ಪಿ ಆರ್ ವಿರುದ್ದ ಆಕ್ರೋಶ ಕೂಗಿದರು

 

video

Click to comment

Leave a Reply

Your email address will not be published. Required fields are marked *

LATEST NEWS

ಕಳ್ಳತನ ಮಾಡಲೆಂದೇ ವರ್ಷದಲ್ಲಿ ಸುಮಾರು 200 ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ

Published

on

ಕೆಲವರಿಗೆ ಕಳ್ಳತನ ಮಾಡುವುದು ಒಂದು ರೂಢಿ ಆಗಿ ಬಿಡುತ್ತದೆ. ಏನೇನೊ ಹರಸಾಹಸ ಮಾಡಿ ಕಳ್ಳತನ ಮಾಡಿದ್ರೆ ಇನ್ನು ಕೆಲವರು ಸ್ವಲ್ಪ ವಿಶೇಷವಾಗಿ ಕಳ್ಳತನ ಮಾಡುತ್ತಾರೆ. ಅದಕ್ಕೊಂದು ಉದಾಹರಣೆ ಈ ವ್ಯಕ್ತಿ. ಕಳ್ಳತನ ಮಾಡಲೆಂದೇ ವರ್ಷದಲ್ಲಿ 200 ಕ್ಕೂ ಅಧಿಕ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ವರ್ಷದಲ್ಲಿ 200 ಬಾರಿ ವಿಮಾನದಲ್ಲಿ ಪ್ರಯಾಣಿಸಿ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೇಶ್ ಕಪೂರ್ ಎಂಬಾತ ಕಳ್ಳತನ ಮಾಡಲೆಂದೇ ವಿಮಾನದಲ್ಲಿ ಸುಮಾರು 110 ದಿನಗಳ ಕಾಲ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಜಿಐ ಉಷಾ ರಂಗ್ನಾನಿ ಮಾತನಾಡಿ, ಕಪೂರ್ ಅವರನ್ನು ಪಹರ್‌ಗಂಜ್‌ನಲ್ಲಿ ಕದ್ದ ಆಭರಣಗಳ ಜತೆ ಬಂಧಿಸಲಾಗಿದೆ. ಈ ಆಭರಣಗಳನ್ನು ಕರೋಲ್ ಬಾಗ್‌ನಿಂದ ಬಂಧಿಸಲ್ಪಟ್ಟ ಶರದ್ ಜೈನ್‌ಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದ ಎಂದು ಅವರು ಹೇಳಿದರು. ಕಳೆದ ಮೂರು ತಿಂಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ವರದಿಯಾಗಿವೆ ಎಂದು ರಂಗಾನಿ ಹೇಳಿದ್ದಾರೆ. ನಂತರ ಐಜಿಐ ವಿಮಾನ ನಿಲ್ದಾಣದಿಂದ ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಲಾಗಿದೆ.

ಏಪ್ರಿಲ್ 11 ರಂದು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದರು. ಫೆಬ್ರವರಿ 2 ರಂದು ಮತ್ತೊಂದು ಕಳ್ಳತನ ವರದಿಯಾಗಿದ್ದು, ಅಮೃತಸರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳೆದುಕೊಂಡಿದ್ದರು.

ತನಿಖೆಯ ಸಂದರ್ಭದಲ್ಲಿ ದೆಹಲಿ ಮತ್ತು ಅಮೃತಸರ ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಮಾನದ ಮ್ಯಾನಿಫೆಸ್ಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕಳ್ಳತನದ ಘಟನೆಗಳು ವರದಿಯಾದ ಎರಡೂ ವಿಮಾನಗಳಲ್ಲಿ ಕಾಣಿಸಿಕೊಂಡಿದ್ದರಿಂದ ಶಂಕಿತನನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.

ಶಂಕಿತ ಪ್ರಯಾಣಿಕರ ಫೋನ್ ಸಂಖ್ಯೆಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಪಡೆಯಲಾಗಿದೆ, ಆದರೆ ಬುಕ್ಕಿಂಗ್ ಸಮಯದಲ್ಲಿ ಅವರು ನಕಲಿ ಸಂಖ್ಯೆಯನ್ನು ಕೊಟ್ಟಿದ್ದರು ಎಂದು ಅಧಿಕಾರಿ ಹೇಳಿದರು.

ತಾಂತ್ರಿಕ ಕಣ್ಗಾವಲು ನಂತರ, ಕಪೂರ್ ಅವರ ಮೂಲ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು ಮತ್ತು ಅವರು ಸಿಕ್ಕಿಬಿದ್ದರು. ನಿರಂತರ ವಿಚಾರಣೆಯಲ್ಲಿ, ಹೈದರಾಬಾದ್‌ನ ಒಂದು ಪ್ರಕರಣ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

FILM

“ಮಮ್ಮುಟ್ಟಿ” ಸಿನೆಮಾದಲ್ಲಿ “ರಾಜ್‌ ಬಿ ಶೆಟ್ಟಿ” ಖದರ್ ! ‘ಟರ್ಬೊ’ ಟ್ರೈಲರ್‌ಗೆ ಫಿದಾ ಆದ ಸಿನಿಪ್ರಿಯರು

Published

on

ಮಂಗಳೂರು: ಕನ್ನಡ ಸಿನೆಮಾ ನಟ ಮಂಗಳೂರಿನ ಪ್ರತಿಭೆ ರಾಜ್ ಬಿ ಶೆಟ್ಟಿ. ಈಗಾಗಲೇ ತನ್ನ ಅದ್ಭುತ ನಟನೆಯ ಮೂಲಕ, ನಿರ್ದೇಶನ, ಚಿತ್ರಕಥೆಯ ಮೂಲಕ ಜನರ ಮನ ಗೆದ್ದಿದ್ದಾರೆ. ಹಾಸ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶೆಟ್ರು.. ಬಳಿಕ ಮಾಸ್ ಸಿನೆಮಾದಲ್ಲಿ ಮಿಂಚಿದ್ದರು. ಒಂದು ಮೊಟ್ಟೆಯ ಕಥೆ ಸಿನೆಮಾದಲ್ಲಿ ತುಂಬಾನೇ ಸೈಲಂಟ್‌ ಆದ ನಟನೆ ಇದ್ರೆ, ಇನ್ನು ಗರುಡ ಗಮನ ವೃಷಭ ವಾಹನದಲ್ಲಿ ಕಂಪ್ಲೀಟ್ ಒಪೋಸಿಟ್ ಕ್ಯಾರೆಕ್ಟರ್. ಶಿವನ ಪಾತ್ರದಲ್ಲಿ ಮೈ ಜುಮ್ಮೆನ್ನಿಸುವ ನಟನೆ ಶೆಟ್ರದ್ದು. ಹೀಗಾಗಿ ಶೆಟ್ರು ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಶೆಟ್ಟು ಮಳಯಾಲಂ ನ ಸೂಪರ್‌ ಸ್ಟಾರ್ ಮಮ್ಮುಟಿ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯವರು ರಾಜ್‌ ಬಿ ಶೆಟ್ಟಿ ಯವರ ಅಭಿನಯಕ್ಕೆ ಫಿದಾ ಆಗಿದ್ದರು. ಅವರ ‘ಟರ್ಬೊ’ ಸಿನೆಮಾದಲ್ಲಿ ಮಮ್ಮುಟ್ಟಿಗೆ ಸರಿಸಮಾನದ ಪಾತ್ರವನ್ನು ಅಭಿನಯಿಸುವ ಅವಕಾಶ ಇವರದಾಗಿದೆ. ಈಗಾಗಲೇ ಸಿನೆಮಾ ಪ್ರೋಮೋ ಕೂಡಾ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಆ್ಯಕ್ಷನ್ ಪ್ಯಾಕ್ಡ್‌ ಸಿನೆಮಾ ‘ಟರ್ಬೊ’:

ಇನ್ನು ಟರ್ಬೊ ಸಿನಿಮಾ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಸಿನೆಮಾ ಟ್ರೈಲರ್ ನೋಡಿದ್ರೇನೆ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುತ್ತೆ. ಈ ಸಿನೆಮಾದಲ್ಲಿ ಶೆಟ್ರು ಕಪ್ಪು ಶರ್ಟ್, ಕಪ್ಪು ಪಂಚೆ ಧರಿಸಿದ್ದಾರೆ. ಇನ್ನು ಮಮ್ಮುಟ್ಟಿ ಡಿಫೆರೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ದು, ಬ್ಲ್ಯಾಕ್ ಶರ್ಟ್‌ ಹಾಗೂ ವೈಟ್ ಪಂಚೆ ಧರಿಸಿದ್ದಾರೆ. ಇನ್ನು ಇವರಿಬ್ಬರ ಪಾತ್ರ ಒಬ್ಬರಿಗೊಬ್ಬರು ಠಕ್ಕರ್ ಕೊಡುವಂತಿದೆ.

ಮಮ್ಮುಟಿಗೆ ಠಕ್ಕರ್ ನೀಡಲಿದ್ದಾರಾ ಶೆಟ್ರು..!

ಸಿನೆಮಾ ಟ್ರೈಲರ್‌ ನಲ್ಲಿ ರಾಜ್‌ ಬಿ ಶೆಟ್ಟಿಗೆ ಹೆಚ್ಚು ಸ್ಪೇಸ್ ನೀಡಿದ್ದಾರೆ. ನಾಲ್ಕೈದು ಕಡೆಗಳಲ್ಲಿ ರಾಜ್ ಬಿ ಶೆಟ್ಟಿಯನ್ನು ತೋರಿಸಿದ್ದಾರೆ. ಹೆಲಿಕಾಫ್ಟರ್‌ನಿಂದ ಇಳಿದು ಬರುವ ದೃಶ್ಯ ಮೊದಲು ಕಂಡುಬರುತ್ತದೆ. ಮಮ್ಮುಟ್ಟಿಗಿಂತ ರಾಜ್‌ ಅವರನ್ನೇ ಈ ಸಿನೆಮಾ ಟ್ರೈಲರ್‌ನಲ್ಲಿ  ಹೈಲಟ್ ಮಾಡಿದ್ದಾರೆ ಅನ್ನೋದು ಸತ್ಯ. ಒಂದು ರೀತಿ ಶ್ರೀಮಂತ ವಿಲನ್ ರೀತಿಯಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿಗೂ ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಕೂಡ ಹೊಡೆಯುತ್ತಾರೆ.

‘ಪುಲಿ ಮುರುಗನ್’ ಖ್ಯಾತಿಯ ವೈಶಾಖ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದು, ಮಿಧುನ್ ಮ್ಯಾನ್ಯಯೆಲ್ ಥಾಮಸ್ ಕಥೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ತೆಲುಗು ನಟ ಸುನಿಲ್, ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು ಸಿನೆಮಾ ಮೇ।23 ರಂದು ತೆರೆ ಕಾಣಲಿದ್ದು ಸಿನಿಪ್ರಿಯರು ಕಾತುರದಿಂದ ಕಾಯ್ತಾ ಇದ್ದಾರೆ.

 

Continue Reading

FILM

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ಬಾಸ್​​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಯಿಂದ ಆಚೆ ಬಂದ ಬಳಿಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಸದ್ಯ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಸಂಗೀತಾ ಶೃಂಗೇರಿ ಅವರ ಕುಟುಂಬ್ಥರು ಸಖತ್​ ಬ್ಯುಟಿಫುಲ್​ ಆಗಿರೋ ಸ್ಥಳದಲ್ಲಿ ಕೇಕ್​ ಕಟ್​ ಮಾಡಿಸಿದ್ದಾರೆ. ಇನ್ನು, ಚಾರ್ಲಿ ನಟಿಯ ಹುಟ್ಟು ಹಬ್ಬಕ್ಕೆ ಈ ಬಾರಿಯ ಬಿಗ್​ಬಾಸ್​ ಸ್ಫರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ ಭಾಗಿಯಾಗಿದ್ದರು. ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರ್ತ್​ಡೇ ಸೆಲೆಬ್ರೇಷನ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ಫೋಟೋದಲ್ಲಿ ನಟಿ ನೀಲಿ ಬಣ್ಣ ಡೇಸ್​ನಲ್ಲಿ ಸಖತ್​ ಕ್ಯೂಟ್​ ಆಗಿ ಮಿಂಚಿದ್ದಾರೆ.

ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಶೇರ್​ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕಮೆಂಟ್​ ಮಾಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಶೇರ್​ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Continue Reading

LATEST NEWS

Trending