Connect with us

    DAKSHINA KANNADA

    ಬಸ್ಸುಗಳು ಮುಖಾಮುಖಿ; ದಂಪತಿಗೆ ಗಾಯ

    Published

    on

    ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸ್ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ಮುಖಾಮುಖಿ ಡಿಕ್ಕಿಹೊಡೆದು ವಾಹನಗಳು ಜಖಂಗೊಂಡಿದೆ.


    ಹಾಸನ ಮೂಲದ ದಂಪತಿಗಳಾದ ನಾಗೇಂದ್ರ ಪ್ರಸಾದ್ (60) ಮತ್ತು ಭಾರತಿ (54) ಎಂಬುವವರಿಗೆ ಗಾಯಗಳಾಗಿದ್ದು, ಶಿರಾಡಿಯ ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
    ಇತ್ತೀಚೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕನ ಅತಿವೇಗ ಹಾಗೂ ಅಜಾಗರುಕತೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನೆಲ್ಯಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಾರಿನಡಿಗೆ ಬಿದ್ದು ಬಾಲಕ ಸಾ*ವು

    Published

    on

    ಕೊಕ್ಕಡ: ಮನೆಯ ಅಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃ*ತಪಟ್ಟ ದಾ*ರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ನಿನ್ನೆ (ಅ.1) ನಡೆದಿದೆ.


    ನವಾಫ್ (10) ಮೃ*ತಪಟ್ಟ ಬಾಲಕ. ಮನೆಗೆ ಬಂದಿದ್ದ ಅತಿಥಿಗಳು ಹೊರಡುವ ಸಂದರ್ಭದಲ್ಲಿ ಕಾರನ್ನು ಹಿಂದಕ್ಕೆ ತೆಗೆಯುವಾಗ , ಹಿಂಬದಿಯೇ ನಿಂತಿದ್ದ ನವಾಫ್ ಕಾರಿ*ನಡಿಗೆ ಬಿದ್ದದ್ದಾನೆ. ಅವನ ಮೇಲೆಯೇ ಕಾರು ಹರಿದ ಪರಿಣಾಮವಾಗಿ ತಲೆ ಹಾಗೂ ಕಾಲಿಗೆ ಗಂ*ಭೀರ ಗಾಯಗಳಾಗಿ ಸಾವ*ನ್ನಪ್ಪಿದ್ದಾನೆ.
    ನವಾಫ್ ಕಾರಿನ ಹಿಂದೆ ನಿಂತಿರುವುದು ಯಾರಿಗೂ ತಿಳಿಯದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಆತಂಕದಲ್ಲಿ ಕಾಂತಾರ 2 ಚಿತ್ರ ತಂಡ..! ಇಲ್ಲಿದೆ ಕಾರಣ..!

    Published

    on

    ಮಂಗಳೂರು : ಸಿನೆಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಲು ವಿರೋಧ ವ್ಯಕ್ತಪಡಿಸಿರುವ ದೈವ ನರ್ತಕರ ಸಮುದಾಯದ ಎಚ್ಚರಿಕೆಯಿಂದ ಕಾಂತಾರ 2 ಗೂ ಸಂಚಕಾರ ಎದುರಾಗಿದೆ. ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದ ಕಾಂತಾರ ಸಿನೆಮಾದ ಪಾರ್ಟ್‌ 2 ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ನಿರ್ದೇಶಕ ಮತ್ತು ನಾಯಕ ನಟ ರಿಷಭ್ ಶೆಟ್ಟಿ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಈ ನಡುವೆ ದೈವಾರಾಧಕರು ಸಿನಿಮಾ ಹಾಗೂ ನಾಟಕದಲ್ಲಿ ದೈವಾರಾಧನೆ ಪ್ರದರ್ಶನ ಮಾಡಿದ್ರೆ ಚಿತ್ರ ಮಂದಿರಕ್ಕೆ ನುಗ್ಗಿ ತಡೆಯುವುದಾಗಿ ಎಚ್ಚರಿಕೆ ನೀಡಿದೆ.

    ಇತ್ತೀಚೆಗೆ ಸಿನೆಮಾ ಹಾಗೂ ನಾಟಕದಲ್ಲಿ ದೈವಾರಾಧನೆಯ ಬಳಕೆ ಜಾಸ್ತಿಯಾಗಿದ್ದು, ಈ ಬಗ್ಗೆ ದೈವ ನರ್ತಕರ ಸಮುದಾಯ ಆಕ್ರೋಶಗೊಂಡಿದೆ. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಅಸಹಾಯಕತೆಯನ್ನೂ ತೋಡಿಕೊಂಡಿದೆ. ಈ ನಡುವೆ ಪೊಲೀಸರಿಗೂ ದೂರು ನೀಡಿ ಇದನ್ನು ತಡೆಯುವಂತೆ ಮನವಿ ಮಾಡಿದೆ. ಆದ್ರೆ, ಇದ್ಯಾವುದಕ್ಕೂ ಬೆಲೆ ಸಿಗದೇ ಇರುವ ಕಾರಣ ಇದೀಗ ಸಿನೆಮಾ ಪ್ರದರ್ಶನವಾದ್ರೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ. ನ್ಯಾಯಯುತವಾಗಿ ನಾವು ಕೇಳಿರುವ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಇಂತಹ ನಿರ್ಧಾರ ಅನಿವಾರ್ಯ ಎಂದು ದೈವ ನರ್ತಕ ಸಮುದಾಯದವರು ಹೇಳಿದ್ದಾರೆ.


    ಕಾಂತಾರ ಸಿನೆಮಾ ರಿಲೀಸ್ ಆಗಿ ಅಪಾರ ಜನ ಮನ್ನಣೆ ಪಡೆದುಕೊಂಡ ಬಳಿಕ ಅದು ಹಲವು ಭಾಷೆಗಳಲ್ಲಿ ಡಬ್ ಆಗಿತ್ತು. ಈ ಸಿನೆಮಾ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತ್ತು. ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದ್ರೆ ದೈವಾರಾಧಕರು ನೀಡಿರುವ ಎಚ್ಚರಿಕೆಯಿಂದ ಚಿತ್ರ ಬಿಡುಗಡೆಯ ಬಗ್ಗೆ ಕೊಂಚ ಆತಂಕ ಕಾಡಿದೆ.

    Continue Reading

    DAKSHINA KANNADA

    ಮೂಡುಬಿದಿರೆ : ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    Published

    on

    ಮೂಡುಬಿದಿರೆ : ಕಳೆದ ಕೆಲವು ದಿನಗಳಿಂದ ಮೂಡುಬಿದಿರೆ ತಾಲೂಕು ಕಲ್ಲಮುಂಡ್ಕೂರು ವ್ಯಾಪ್ತಿಯಲ್ಲಿ ತಿರುಗಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

    ಕಲ್ಲಮುಂಡ್ಕೂರು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯೊಂದು ಸುತ್ತಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಬಗ್ಗೆ ಪಂಚಾಯತ್ ಸದಸ್ಯ ವಸಂತ್ ಸಹಿತ ಗ್ರಾಮಸ್ಥರು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು ಎಸಿಎಫ್ ಪಿ . ಶ್ರೀಧರ್ ಹಾಗೂ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ ಅವರ ಮಾರ್ಗದರ್ಶನದಲ್ಲಿ ಕಳಸಬೈಲು ಎಂಬಲ್ಲಿ ಮೂರು ದಿನಗಳ ಹಿಂದೆ ಬೋನನ್ನು ಇಡಲಾಗಿತ್ತು.

    ಇದನ್ನೂ ಓದಿ : ಬಂದೂಕು ಮಿಸ್‌ ಫೈರ್‌ – ಬಾಲಿವುಡ್‌ ನಟ ಗೋವಿಂದ ಆಸ್ಪತ್ರೆಗೆ ದಾಖಲು..!

    ಇಂದು ಮುಂಜಾನೆ(ಅ.1)  ಚಿರತೆ ಬೋನಿಗೆ ಬಿದ್ದಿದೆ. ಮೂಡುಬಿದಿರೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ, ಗಸ್ತು ಅರಣ್ಯ ಪಾಲಕ ರಾಜೇಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸಹಿತ ಬೋನನ್ನು  ಕೊಂಡೊಯ್ದಿದ್ದಾರೆ.

    Continue Reading

    LATEST NEWS

    Trending