Connect with us

    LATEST NEWS

    ಕ*ಮರಿಗೆ ಉ*ರುಳಿದ ಬಸ್; 1 ಸಾ* ವು, 20ಕ್ಕೂ ಹೆಚ್ಚು ಮಂದಿಗೆ ಗಾ*ಯ

    Published

    on

    ಮಂಗಳೂರು/ಹಿಮಾಚಲ ಪ್ರದೇಶ : ಖಾಸಗಿ ಬಸ್ ಒಂದು ಕ*ಮರಿಗೆ ಉ*ರುಳಿದ ಪರಿಣಾಮ ಓರ್ವ ಸಾ*ವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ಇಂದು (ಡಿ.10) ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಗಾ*ಯಗೊಂಡಿದ್ದಾರೆ.

    ಸ್ಥಳೀಯರು ಗಾ*ಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೆ, ಬಸ್‌ನ ಚಾಲಕ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ. ಬಸ್‌ನಲ್ಲಿ ಸುಮಾರು 20 ರಿಂದ 25 ಜನರಿದ್ದು, ಅಪಘಾತದ ಸಮಯ ಇತರ ಗಾ*ಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಣ್ಣಪುಟ್ಟ ಗಾ*ಯಗೊಂಡವರನ್ನು ಪ್ರಾ*ಥಮಿಕ ಚಿ*ಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದು, ಗಂ*ಭೀರವಾಗಿ ಗಾ*ಯಗೊಂಡವರನ್ನು ರಾಂಪುರಕ್ಕೆ ಕಳುಹಿಸಲಾಗಿದೆ.

    ಕಾರಂತಲ್‌ನಿಂದ ಬರುತ್ತಿದ್ದ ಬಸ್ ಕುಲುವಿನ ಅನ್ನಿಯ ಶ್ವಾದ್-ನಾಗನ್ ರಸ್ತೆಯ ಬಳಿ ಕ*ಮರಿಗೆ ಬಿದ್ದಿದೆ. ಬಸ್ ಸಂಪೂರ್ಣವಾಗಿ ನ*ಜ್ಜುಗುಜ್ಜಾಗಿದೆ. ಅ*ಪಘಾತದ ದೊಡ್ಡ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಪೊಲೀಸ್ ತಂಡಗಳು ಕೂಡ ಅ*ಪಘಾತ ಸ್ಥಳಕ್ಕೆ ತಲುಪಿವೆ.

    LATEST NEWS

    ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಆರ್.ನಾರಾಯಣ್ ವಿ*ಧಿವಶ

    Published

    on

    ಮಂಗಳೂರು/ತುಮಕೂರು : ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ನಾರಾಯಣ್ ವಿ*ಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

    ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಡಿ.12) ಚಿಕಿತ್ಸೆ ಫಲಿಸದೆ ಕೊ*ನೆಯುಸಿರೆಳೆದಿದ್ದಾರೆ. ಆರ್.ನಾರಾಯಣ್ ಅವಿವಾಹಿತರಾಗಿದ್ದು, ತುಮಕೂರಿನ ರೈಲ್ವೇ ನಿಲ್ದಾಣದ ಸಿಎಸ್‌ಐ ಲೇ ಔಟ್‌ನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ : ಪುಷ್ಪರಾಜ್‌ಗೆ ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ನಟ

    ನಾರಾಯಣ್ ತುಮಕೂರಿನ ಬೆಳ್ಳಾವಿ ಕ್ಷೇತ್ರದಿಂದ 3 ಬಾರಿ(1989, 1994, 1999) ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ದಿ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

     

    Continue Reading

    LATEST NEWS

    ಇಂದಿಗೂ ಅಚ್ಚಳಿಯದೇ ಉಳಿದಿದೆ ವಿನೋದ್ ಕಾಂಬ್ಳಿಯವರ ಈ ದಾಖಲೆ !

    Published

    on

    ಮಂಗಳೂರು/ಮುಂಬೈ: ಸಚಿನ್ ತೆಂಡುಲ್ಕರ್ ಸ್ನೇಹಿತ, ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಸುದ್ದಿಯಲ್ಲಿರುವ ಪ್ರಮುಖರಾಗಿದ್ದಾರೆ. ಕ್ರಿಕೆಟ್ ಆಡುವ ಕಾಲದಲ್ಲಿ ಪ್ರತಿಭಾನ್ವಿತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ವಿನೋದ್ ಕಾಂಬ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ.

    ಈ ಪೈಕಿ ಆ ಒಂದು ರೆಕಾರ್ಡ್ ಮುರಿಯಲು ಇದುವರೆಗೂ ಯಾವ ಕ್ರಿಕೆಟಿಗನಿಗೂ ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೇ ಯಶಸ್ವಿ ಜೈಸ್ವಾಲ್ ಕಾಂಬ್ಲಿಯವರ ದಾಖಲೆ ಸಮೀಪ ಬಂದಿದ್ದರಾದರೂ ಬ್ರೇಕ್ ಮಾಡಲು ಸಾಧ್ಯವಾಗಿರಲಿಲ್ಲ.

    ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡುಲ್ಕರ್ ಇಬ್ಬರೂ ಶಿವಾಜಿ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಕೋಚ್ ರಮಾಕಾಂತ್ ಅರ್ಚೆಕರ್ ಅವರ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್ ಅಭ್ಯಾಸ ನಡೆಸಿದ್ದರು.

    ಇತ್ತೀಚೆಗೆ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗ ವಿನೋದ್ ಕಾಂಬ್ಳಿಯನ್ನು ಗಮನಿಸಿದ ಸಚಿನ್ ಮಾತನಾಡಿಸಲು ಬಂದಿದ್ದಾರೆ. ಮೊದಲು ಕಾಂಬ್ಳಿಗೆ, ಸಚಿನ್ ತೆಂಡೂಲ್ಕರ್ ರವರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆ ನಂತರ ಸ್ಥಳಿಯರ ನೆರವಿನಿಂದ ಗುರುತು ಹಿಡಿದರು.

    ಆಗ ವಿನೋದ್ ಕಾಂಬ್ಳಿಯನ್ನು ಗಮನಿಸಿದ ಜನ, ಕಾಂಬ್ಲಿ ಅವರ ಬದುಕು ತುಂಬಾ ದುಸ್ತರವಾಗಿದೆ ಎನ್ನುವುದು ಮೇಲ್ನೋಟಕ್ಕೆ ಭಾಸವಾಗುತ್ತಿತ್ತು.

    ಭಾರತ ಕ್ರಿಕೆಟ್ ತಂಡಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ ವಿನೋದ್ ಕಾಂಬ್ಳಿ, ಆಡಿದ 7 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಈ ಪೈಕಿ ಎರಡು ದ್ವಿಶತಕಗಳು ಸೇರಿದೆ.

    ವಿನೋದ್ ಕಾಂಬ್ಳಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದರು. ವಿನೋದ್ ಕಾಂಬ್ಳಿ ಕೇವಲ 14 ಇನ್ನಿಂಗ್ಸ್ ಗಳನ್ನಾಡಿ 1000 ರನ್ ಪೂರೈಸಿದ್ದರು.

    ಇದನ್ನೂ ಓದಿ: ಅತ್ಯಾ*ಚಾರದ ಕುರಿತು ಜಾಗೃತಿ ಮೂಡಿಸಲು ಹೊರಟ್ಟಿದವರಿಗೆ ಟ್ರಕ್ ಡಿಕ್ಕಿ; ಇಬ್ಬರ ಸಾವು, ಮೂವರಿಗೆ ಗಾಯ

    ಇತ್ತೀಚೆಗಷ್ಟೇ ಯಶಸ್ವಿ ಜೈಸ್ವಾಲ್ 16 ಟೆಸ್ಟ್ ಇನ್ನಿಂಗ್ಸ್ ಗಳನ್ನಾಡಿ 1000 ರನ್ ಪೂರೈಸಿದ್ದಾರೆ. ಆದರಿಂದ ಇಂದಿಗೂ ವಿನೋದ್ ಕಾಂಬ್ಳಿಯವರ ಈ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ.

    ವಿನೋದ್ ಕಾಂಬ್ಳಿ ಭಾರತದ ಪರ 1991ರಲ್ಲಿ ಏಕದಿನ ಕ್ರಿಕೆಟ್ ಮೂಲಕ ಪಾದಾರ್ಪಣೆ ಮಾಡಿದರು. 2000ನೇ ಇಸವಿಯಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.

    ಕಾಂಬ್ಳಿಯವರು ಭಾರತದ ಪರ 104 ಏಕದಿನ ಹಾಗೂ 17 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆಡಿದ 17 ಟೆಸ್ಟ್ ಪಂದ್ಯಗಳ ಪೈಕಿ ವಿನೋದ್ ಕಾಂಬ್ಳಿ 54.20 ಬ್ಯಾಟಿಂಗ್ ಸರಾಸರಿಯಲ್ಲಿ 4 ಶತಕ ಹಾಗೂ 14 ಅರ್ಧಶತಕ ಸಹಿತ 2477 ರನ್ ಸಿಡಿಸಿದ್ದರು.

    Continue Reading

    FILM

    ಪುಷ್ಪರಾಜ್‌ಗೆ ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ನಟ

    Published

    on

    ಮಂಗಳೂರು/ಹೈದರಾಬಾದ್ : ಅತ್ತ ಪುಷ್ಪ 2  ದೇಶದಾದ್ಯಂತ ಕಮಾಲ್ ಮಾಡುತ್ತಿದ್ದರೆ, ಇತ್ತ ಅಲ್ಲು ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಇದೀಗ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪುಷ್ಪ 2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ನಡೆದ ಸಾ*ವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಹೈದರಾಬಾದ್‌ನಲ್ಲಿ ಡಿ.4 ರಂದು ಪುಷ್ಪ 2 ಪ್ರೀಮಿಯರ್ ಶೋ ವೇಳೆ 35 ವರ್ಷದ ಮಹಿಳೆ ಸಾ*ವನ್ನಪ್ಪಿದ್ದು, ಆಕೆಯ 8 ವರ್ಷದ ಮಗ ಗಾ*ಯಗೊಂಡಿದ್ದ. ಈ ಬಗ್ಗೆ ಮಹಿಳೆಯ ಕುಟುಂಬ ಸದಸ್ಯರು ಡಿ.5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಇದೀಗ ಅಲ್ಲು ಅರ್ಜುನ್ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿ, ಅರ್ಜಿಯ ವಿಲೇವಾರಿಗೆ ಬಾಕಿ ಉಳಿದಿರುವ ಪ್ರಕ್ರಿಯೆ ಮತ್ತು ಬಂಧನಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಮೃ*ತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

    ಇದನ್ನೂ ಓದಿ : ಅಯ್ಯಪ್ಪ ಸ್ವಾಮಿ ಮಹಿಮೆ ; ಮಾಲೆ ಹಾಕುತ್ತಿದ್ದಂತೆ ಮಾತನಾಡೇ ಬಿಟ್ಟ ಮೂಕ
    ಸದ್ಯ ಪುಷ್ಪ 2 ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಹಿಂದೆ ಬಿದ್ದಿಲ್ಲ. ಸಾವಿರ ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಚಿತ್ರದಲ್ಲಿದ್ದಾರೆ.

    Continue Reading

    LATEST NEWS

    Trending