Connect with us

    LATEST NEWS

    ಉಪ್ಪಿನಂಗಡಿ: ಪಾಸ್ ಇಲ್ಲವೆಂದು ವಿದ್ಯಾರ್ಥಿಯನ್ನು ಅರ್ಧದಲ್ಲೇ ಇಳಿಸಿದ ನಿರ್ವಾಹಕ

    Published

    on

    ಉಪ್ಪಿನಂಗಡಿ: ಇಲ್ಲಿನ ಖಾಸಗಿ ವಿದ್ಯಾ ಸಂಸ್ಥೆಯ ಹನ್ನೊಂದರ ಹರೆಯದ ವಿದ್ಯಾರ್ಥಿ ಮನೆಗೆ ತೆರಳುವ ಸಂದರ್ಭದಲ್ಲಿ ಬಸ್ ಪಾಸ್ ಹೊಂದಿರದ ಕಾರಣಕ್ಕೆ ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿಯನ್ನು ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆ ಬಗ್ಗೆ ಬಾಲಕನ ಹೆತ್ತವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

    ಉಪ್ಪಿನಂಗಡಿಯಿಂದ ಎಂದಿನಂತೆ ಕೊಣಾಲು ಗ್ರಾಮದಲ್ಲಿನ ನನ್ನ ಮನೆಗೆ ಹೋಗುವ ಸಲುವಾಗಿ ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆ ಎ19 ಎಫ್ 3276 ರನ್ನೇರಿದ್ದ ಈ ವಿದ್ಯಾರ್ಥಿಯು ಬಸ್ ನಿರ್ವಾಹಕ ಬಂದು ಬಸ್ ಪಾಸ್ ತೋರಿಸಲು ತಿಳಿಸಿದಾಗ, ಬಸ್ ಪಾಸ್ ತನ್ನ ಕಿಸೆಯಲ್ಲಿದೆ ಎಂದು ಭಾವಿಸಿ ಪಾಸಿಗಾಗಿ ಕಿಸೆಗೆ ಕೈ ಹಾಕಿದಾಗ ಬಸ್ ಪಾಸ್ ಇಲ್ಲದಿರುವುದು ವಿದ್ಯಾರ್ಥಿಯ ಗಮನಕ್ಕೆ ಬಂದಿದೆ. ಈ ವೇಳೆ ಬಸ್ ಪಾಸ್ ಕಳೆದುಕೊಂಡಿದ್ದೇನೆಂದು ಭಯಪಟ್ಟ ಬಾಲಕ ಬಸ್ ಪಾಸ್ ಇಲ್ಲದಿರುವುದರಿಂದ ಕಸಿವಿಸಿಗೊಂಡು ಕಂಗಾಲಾಗಿದ್ದ ವೇಳೆ, ಬಾಲಕನ ಮೇಲೆ ನಿರ್ದಯೆಯಿಂದ ವರ್ತಿಸಿದ ಬಸ್ ನಿರ್ವಾಹಕ ಆತನಲ್ಲಿ ಟಿಕೇಟ್ ಖರೀದಿಸಲು ಹಣವಿದೆಯೇ ಎಂದು ವಿಚಾರಿಸದೆ, ಪಾಸ್ ಇಲ್ಲದೆ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಆಜ್ಞಾಪಿಸಿ ಉಪ್ಪಿನಂಗಡಿ ಆತೂರು ಮಧ್ಯದ ರಸ್ತೆಯಲ್ಲಿ ಬಲವಂತವಾಗಿ ಆತನನ್ನು ಇಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಬಗ್ಗೆ ಆತನ ತಂದೆ ಮಹಾಬಲ ಎಂಬವರು ದ.ಕ. ಜಿಲ್ಲಾಧಿಕಾರಿಯವರಿಗೆ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಘಟನೆಯಿಂದ ತನ್ನ ಮಗನಿಗೆ ಮಾನಸಿಕ ಆಘಾತವುಂಟಾಗಿದ್ದು, ಸಾರ್ವಜನಿಕವಾಗಿ ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆಯಿಂದ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಆಪಾದಿಸಿದ್ದಾರೆ.

    BIG BOSS

    ಸ್ವರ್ಗವಾಸಿಗಳಿಗೆ ನರಕ ತೋರಿಸಿ ಆರಂಭದಲ್ಲೇ ನಾಮಿನೇಟ್ ಆದ ಚೈತ್ರಾ

    Published

    on

    ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗುತ್ತಿದೆ. ನರಕದಲ್ಲಿರುವ ಸ್ಪರ್ಧಿ ಚೈತ್ರಾ ಈಗಾಗಲೇ ಸ್ವರ್ಗವಾಸಿಗಳಿಗೆ ನರಕ ತೋರಿಸಿದ್ದಾರೆ.

    ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಇದೀಗ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಮತ್ತು ಏಕೈಕ ಸ್ಪರ್ಧಿಯಾಗಿದ್ದಾರೆ.

    ಚೈತ್ರಾ ಕುಂದಾಪುರ ಎಲಿಮಿನೇಶನ್‌ಗೆ ಸ್ವರ್ಗವಾಸಿಗಳು ಒಕ್ಕೊರಲಿನಿಂದ ಮತ ಹಾಕಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಇವರ ಆಟಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರ. ಪರ ವಿರೋಧಗಳಿದ್ದರೂ ಆಟದ ವಿಚಾರದಲ್ಲಿ ಚೈತ್ರಾ ಜನರಿಂದ ಹೆಚ್ಚಿನ ಮತ ಪಡೆಯುವ ಸಾಧ್ಯತೆಗಳಿವೆ.

    ಚೈತ್ರಾ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ಗವಾಸಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸ್ವರ್ಗವಾಸಿಗಳಿಗಿಂತ ನರಕವಾಸಿಗಳೇ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂತು.

    Continue Reading

    LATEST NEWS

    ‘ದಾಂಡಿಯಾ’ಕ್ಕೆ ಬ್ರೇಕ್‌..! ದುರ್ಗಾವಾಹಿನಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ..!

    Published

    on

    ಮಂಗಳೂರು: ನವರಾತ್ರಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಹಬ್ಬವನ್ನು ಆಚರಿಸಿಕೊಳ್ಳಲು ಜನರು ಬರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಹಬ್ಬದಲ್ಲಿ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ ಹಾಗೂ ಮಾದಕ ವಸ್ತುಗಳ ಸೇವನೆಯಂತಹ ಘಟನೆಗಳು ನಡೆಯುತ್ತಿದೆ ಎಂದು ವಿಹೆಚ್‌ಪಿ ಆರೋಪಿಸಿದೆ.

    ಕಳೆದ ವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ಜಾಗಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ ಘಟನೆ ಕೂಡಾ ನಡೆದಿದೆ. ದಾಂಡಿಯಾ ಹೆಸರಿನಲ್ಲಿ ಆಯೋಜಿಸಲಾಗುವ ಇಂತಹ ಕಾರ್ಯಕ್ರಮಗಳು ಸಂಘರ್ಷಕ್ಕೂ ಕಾರಣವಾಗುತ್ತಿದೆ. ದಾಂಡಿಯಾ ಅನ್ನೋದು ದೇವಿಯ ಹೆಸರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇಲ್ಲಿ ಅಸಭ್ಯ ನೃತ್ಯಕ್ಕೆ ಅವಕಾಶ ನೀಡಬಾರದು ಎಂದು ವಿಹೆಚ್‌ಪಿಯ ದುರ್ಗಾವಾಹಿನಿ ಸಂಘಟನೆ ಆಗ್ರಹಿಸಿದೆ.

    ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ಕಾರ್ಯಕ್ರಮ ಆಯೋಜನೆಯಿಂದ ಕೋಮು ಸೌಹಾರ್ದತೆ ಹಾಳಾಗುವ ಆತಂಕವನ್ನು ದುರ್ಗಾವಾಹಿನಿ ವ್ಯಕ್ತಪಡಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ಅಸಭ್ಯವಾಗಿ ನೃತ್ಯ ಮಾಡುವಂತಹ ದಾಂಡಿಯಾ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

    Continue Reading

    LATEST NEWS

    ಗೋಮೂತ್ರ ಕುಡಿದರಷ್ಟೇ ಗಾರ್ಬಾ ಪೆಂಡಾಲ್‌ಗೆ ಎಂಟ್ರಿ..! ಬಿಜೆಪಿ ನಾಯಕನ ಹೇಳಿಕೆ

    Published

    on

    ಮಂಗಳೂರು/ ಇಂದೋರ್ :  ಉತ್ತರ ಭಾರತದಲ್ಲಿ ನವರಾತ್ರಿಯಲ್ಲಿ ನಡೆಯುವ ಗಾರ್ಬಾ ಸಂಭ್ರಮಕ್ಕೆ ಪೆಂಡಾಲ್ ಒಳಗೆ ಬರುವವರಿಗೆ ಗೋಮೂತ್ರ ಕುಡಿಸಬೇಕು ಎಂದು ಬಿಜೆಪಿಯ ಮುಖಂಡರೊಬ್ಬರು ಕರೆ ನೀಡಿದ್ದಾರೆ. ಹಿಂದೂಗಳಲ್ಲಿ ‘ಅಚಮಾನ’ದ ಮೂಲಕವೇ ಪೂಜೆಯನ್ನು ಪ್ರಾರಂಭ ಮಾಡುವುದು ಸಂಪ್ರದಾಯ. ಇದೇ ರೀತಿ ಅಚಮಾನ ಸಂಪ್ರದಾಯದಂತೆ ಗಾರ್ಬಾ ಸಂಭ್ರಮಕ್ಕೂ ಮೊದಲು ಪೆಂಡಲಾ ಪ್ರವೇಶದ್ವಾರದಲ್ಲೇ ಗೋಮೂತ್ರ ಸೇವಿಸಿದವರಿಗೆ ಮಾತ್ರ ಒಳಗೆ ಪ್ರವೇಶ ನೀಡಬೇಕು ಎಂದು ಬಿಜೆಪಿ ಮುಖಂಡ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

    ಸಾಂದರ್ಭಿಕ ಚಿತ್ರ

    ಇಂದೋರ್ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಅವರು ಈ ಹೇಳಿಕೆ ನೀಡಿದ್ದು, ಗಾರ್ಬಾ ಸಂಘಟಕರು ಗೋಮೂತ್ರವನ್ನು ‘ಅಚಮಾನ’ದ ರೀತಿಯಲ್ಲಿ ನೀಡಬೇಕು ಎಂದು ಕೋರಿದ್ದಾರೆ.

    ಈ ವಿಚಾರವಾಗಿ ಕೆಂಡಕಾರಿರುವ ಕಾಂಗ್ರೆಸ್ ಪಕ್ಷ, ಇದು ಕೇಸರಿ ಪಕ್ಷದ ಧ್ರುವೀಕರಣದ ಹೊಸ ತಂತ್ರ ಎಂದು ಬಣ್ಣಿಸಿದೆ. ಗೋಶಾಲೆಗಳ ದುಃಸ್ಥಿತಿಯ ಬಗ್ಗೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಹೀಗಾಗಿ ಈ ವಿಷಯವನ್ನು ರಾಜಕೀಯ ವಿಷಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

     ಇದನ್ನೂ ಓದಿ : ಇನ್ಸ್ಟಾಗ್ರಾಮ್ ಲವ್ – ಸೆಕ್ಸ್ – ದೋಖಾ; ಪೊಲೀಸ್ ಪೇದೆ ವಿರುದ್ಧ ಠಾಣೆ ಮೆಟ್ಟಿಲೇರಿದ ಯುವತಿ

    ಹಿಂದು ಸಂಪ್ರಾಯದ ಪ್ರಕಾರ ‘ಅಚಮಾನ’ ಅಂದರೆ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಶುದ್ಧೀಕರಣಕ್ಕಾಗಿ ಮಂತ್ರಗಳನ್ನು ಪಠಿಸುವಾಗ ನೀರನ್ನು ತೀರ್ಥ ರೂಪವಾಗಿ ಕುಡಿಯುವ ಪ್ರಕ್ರಿಯೆಯಾಗಿದೆ. ಆಧಾರ್ ಕಾರ್ಡ್‌ ಎಡಿಟ್ ಮಾಡಬಹುದಾದ್ರೂ, ಒಬ್ಬ ವ್ಯಕ್ತಿ ಹಿಂದೂ ಆಗಿದ್ದರೆ ಆತನ ಗೂಮೂತ್ರದ ‘ಆಚಮನ’ದ ನಂತರವೇ ಗಾರ್ಬಾ ಪೆಂಡಾಲ್ ಪ್ರವೇಶಿಸುತ್ತಾನೆ. ಹೀಗಾಗಿ ಯಾವ ಹಿಂದೂ ಕೂಡಾ ಇದನ್ನು ನಿರಾಕರಿಸುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ ಎಂದು ಚಿಂಟು ವರ್ಮಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ( ಈ ಸುದ್ದಿಯನ್ನು ಸಿಂಡಿಕೇಟೆಡ್‌ ಸುದ್ದಿ ಸಂಸ್ಥೆ ಪಿಟಿಐ ವರದಿಯನ್ನು ಆಧರಿಸಿ ಬರೆಯಲಾಗಿದೆ)

    Continue Reading

    LATEST NEWS

    Trending