LATEST NEWS
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ‘ಬುರ್ಖಾ ಬ್ಯಾನ್’ ಸರಕಾರದ ಆದೇಶ
ಮಂಗಳೂರು/ ಸ್ವಿಟ್ಜರ್ಲ್ಯಾಂಡ್ : ಹೆಚ್ಚಿನ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಾರೆ. ಇಸ್ಲಾಂ ಧರ್ಮದ ಆಚರಣೆ ಮತ್ತು ಸಂಪ್ರದಾಯದ ಭಾಗವಾಗಿ ಬುರ್ಖಾವನ್ನು ಗುರುತಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಧರಿಸಿಯೇ ಓಡಾಡುತ್ತಾರೆ. ಆದ್ರೆ ಫ್ರಾನ್ಸ್, ಚೀನಾ, ಡೆನ್ಮಾರ್ಕ್, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್ ಇತ್ಯಾದಿ ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧವನ್ನು ಹೇರಿವೆ. ಇದೀಗ ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್ ದೇಶವೂ ಕೂಡಾ ಸೇರ್ಪಡೆಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಜಾರಿಗೊಳಿಸಿದೆ.
ಸ್ವಿಟ್ಜರ್ಲ್ಯಾಂಡ್‌ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಾರ್ಟಿ ‘ಬುರ್ಖಾ ಬ್ಯಾ’ನ್ ಮಾಡಲು ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿತ್ತು. ಅಲ್ಲದೆ 2021 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿಯೂ ಬಹು ಸಂಖ್ಯೆಯ ಜನರು ಬುರ್ಖಾ ನಿಷೇಧದ ಪರವಾಗಿ ಓಟ್ ಹಾಕಿದ್ದರು. ಬುರ್ಖಾ ಮತ್ತು ಮುಖಗವಸುಗಳನ್ನು ನಿಷೇಧಿಸಬೇಕೆಂದು 51 ಪ್ರತಿಶತದಷ್ಟು ಜನರು ಬೆಂಬಲ ನೀಡಿದ್ದರು. ಇನ್ನೂ ಸ್ವಿಟ್ಜರ್ಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಎಲ್ಲದರ ನಡುವೆಯೂ ಇದೀಗ ಸರ್ಕಾರ ಅಧೀಕೃತವಾಗಿ ಬುರ್ಖಾ ನಿಷೇಧದ ಕಾನೂನನ್ನು ಜಾರಿಗೊಳಿಸಿದೆ.
ಜನವರಿ 1, 2024 ರಿಂದ ಈ ಕಠಿಣ ನಿಯಮ ಜಾರಿಯಾಗಲಿದ್ದು, ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್ ಫ್ರಾಂಕ್ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
LATEST NEWS
ವಾಮಚಾರಕ್ಕೆ ಇಟ್ಟ ತೆಂಗಿನಕಾಯಿ ಸೇವಿಸಿದ ಕಾಲೇಜು ಉಪನ್ಯಾಸಕ ; ಮುಂದೇನಾಯ್ತು ಗೊತ್ತಾ ??
ಮಂಗಳೂರು/ರಾಯಚೂರು: ವಾಮಾಚಾರಕ್ಕೆ ಬಳಸಿದ್ದ ತೆಂಗಿನಕಾಯಿಯನ್ನು ಉಪನ್ಯಾಸಕರೊಬ್ಬರು ತಿಂದ ಘಟನೆ ರಾಯಚೂರು ಪಟ್ಟಣದ ಮುದಗಲ್ಲ ರಸ್ತೆಯಲ್ಲಿನ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ನೋಡಿ ಭಯಪಡುವ ಈ ಕಾಲದಲ್ಲಿ ಉಪನ್ಯಾಸಕರೊಬ್ಬರು ಅದನ್ನು ತಿಂದು ಬಳಿಕ ಮೌಢ್ಯತೆ ಬಗೆಗೆ ಜಾಗೃತಿ ಮೂಡಿಸಿದರು.
ಅಶೋಕ ಸರಕಾರಿ ಕಾಲೇಜಿನ ಗೇಟಿಯಲ್ಲಿ ಯಾರೋ ತೆಂಗಿನಕಾಯಿ, ನಿಂಬೆ ಹಣ್ಣು, ಕುಂಕುಮವನ್ನಿಟ್ಟು ಹೋಗಿದ್ದರು. ಕಾಲೇಜಿನ ಸಮಯದಲ್ಲಿ ಅಲ್ಲಿಗೆ ಬಂದ ಉಪನ್ಯಾಸಕರು ಅದನ್ನು ನೋಡಿ ನಿಂಬೆಹಣ್ಣು ಕತ್ತರಿಸಿದ್ದು, ಅದರ ರಸ ಸವಿದರು. ತೆಂಗಿನಕಾಯಿ ಹೊಡೆದು ಎಲ್ಲಾ ಉಪನ್ಯಾಸಕ ಹಾಗೂ ಪ್ರಾಂಶುಪಾಲರು ತಿಂದು ಮೌಢ್ಯತೆಯ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.
ಇದನ್ನೂ ಓದಿ : ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು!
ಇಂತಹ ಪ್ರಕರಣಗಳು ಮುದಗಪ್ಪ ರಸ್ತೆಗಳಲ್ಲಿ ಹೆಚ್ಚಾಗಿದೆ. ಮುಂಜಾನೆ ವಾಯುವಿಹಾರಕ್ಕೆಂದು ತೆರಳುವ ಜನರು ಯುವಕರು ಇಂತಹ ವಾಮಾಚಾರ ಪರಿಕರಗಳು ಎಲ್ಲೆಡೆ ಬಿದ್ದಿರುವುದನ್ನು ನೋಡಿ ಭಯಗೊಳ್ಳುತ್ತಾರೆ. ಇಂತಹ ಕೃತ್ಯ ದಿನೇ ದಿನೇ ಹೆಚ್ಚುತ್ತಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
LATEST NEWS
ಸಹೋದರನ ಜೊತೆಯಲ್ಲೇ ಸಂಬಂ*ಧ …! ಜೀ*ವಾಂತ್ಯಗೊಳಿಸಿದ ಪತಿ..!
ಮಂಗಳೂರು/ ಅಹಮದಾಬಾದ್ : ತನ್ನ ಪತ್ನಿ ಆಕೆಯ ಒಡಹುಟ್ಟಿದ ಸಹೋದರನ ಜೊತೆಯಲ್ಲಿ ಇರಬಾರದ ಪರಿಸ್ಥಿತಿಯಲ್ಲಿ ಇದ್ದುದ್ದನ್ನು ಕಂಡ ಪತಿಯೊಬ್ಬ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಅಹಮದಾಬಾದ್‌ನ ಡೋಲ್ಕಾ ಎಂಬಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ವ್ಯಕ್ತಿ ಜೀವಾಂ*ತ್ಯ ಮಾಡಿಕೊಂಡಿದ್ದಾನೆ. ಈ ವೇಳೆ ಆತ ತನ್ನ ಕೊನೆಯ ಪತ್ರ ಬರೆದಿಟ್ಟಿದ್ದು, ಅದರಲ್ಲಿ ತನ್ನ ಪತ್ನಿಗೆ ಮತ್ತು ಆಕೆಯ ಸಹೋದರನಿಗೂ ನಡುವೆ ಇರುವ ಸಂಬಂಧ ಬಿಡಿಸಿಟ್ಟಿದ್ದಾನೆ.
ಪತಿ – ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದರೂ ಆಗಾಗ ಸಹೋದರ ಬಂದು ಹೋಗುತ್ತಿದ್ದ. ಆದ್ರೆ ,ಒಡಹುಟ್ಟಿದ ಸಹೋದರನಾಗಿರುವ ಕಾರಣ ಯಾವುದೇ ಅನುಮಾನ ಬಂದಿರಲಿಲ್ಲ. ಆದ್ರೆ, ಮೂರು ತಿಂಗಳ ಹಿಂದೆ ಅಚಾನಕ್ ಆಗಿ ಮನೆಗೆ ಬಂದಾಗ ಪತ್ನಿ ತನ್ನದೇ ಸಹೋದರನ ತೆಕ್ಕೆಯಲ್ಲಿರುವುದನ್ನು ಪತಿ ಕಣ್ಣಾರೆ ಕಂಡಿದ್ದಾನೆ. ಈ ವೇಳೆ ಸಹೋದರನ ಜೊತೆ ಸೇರಿ ಪತ್ನಿ ತನಗೆ ಹ*ಲ್ಲೆ ನಡೆಸಿ ಜೀ*ವ ಬೆ*ದರಿಕೆ ಹಾಕಿದ್ದಾಗಿ ಬರೆದಿದ್ದಾನೆ.
ಇದನ್ನೂ ಓದಿ : ಪ್ರೇಯಸಿಯ ತಾಯಿಗಾಗಿ ಚಿನ್ನ ಕದ್ದಿದ್ದ ಡ್ಯಾನ್ಸ್ ಮಾಸ್ಟರ್ ಅರೆಸ್ಟ್
ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈ ಘಟನೆಯ ಬಳಿಕವೂ ಅವರಿಬ್ಬರು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಅ*ನೈತಿಕ ಸಂಬಂಧ ಮುಂದುವರೆಸಿದ್ದು, ಇದರಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ಈ ಘಟನೆ ನಂಬಲಸಾಧ್ಯವಾಗಿದ್ದು ಒಡಹುಟ್ಟಿದವರ ಈ ಅ*ನೈತಿಕ ಸಂಬಂಧದಿಂದ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
LATEST NEWS
ಬಂಪರ್ ಆಫರ್ ! 1444 ರೂ.ಗೆ ವಿಮಾನ ಪ್ರಯಾಣ…!
ಬಸ್ ಟಿಕೆಟ್ ದರದಲ್ಲಿ ವಿಮಾನ ಟಿಕೆಟ್ ನೀಡುವ ಬಂಪರ್ ಆಫರ್ ಅನ್ನು ಏರ್ ಇಂಡಿಯಾ ಘೋಷಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಶ್ ಸೇಲ್ ಆರಂಭಿಸಲಾಗಿದೆ. ಈ ವಿಶೇಷ ಮಾರಾಟದ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಈ ಸೇಲ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ರೂ.1444ಕ್ಕೆ ವಿಮಾನ ಪ್ರಯಾಣ ಮಾತ್ರವಲ್ಲ ಮುಂದಿನ ವರ್ಷ ಏಪ್ರಿಲ್‌ವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೋಸ್ ಮಾರಾಟದ ಟಿಕೆಟ್‌ಗಳ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಫ್ಲ್ಯಾಶ್ ಸೇಲ್ ನಲ್ಲಿ ನವೆಂಬರ್ 13ರವರೆಗೆ ವಿಮಾನ ಟಿಕೆಟ್ ಬುಕ್ ಮಾಡಲು ಏರ್ ಇಂಡಿಯಾ ಅವಕಾಶ ಕಲ್ಪಿಸಿದೆ. ಈ ವಿಶೇಷ ಮಾರಾಟದ ಮೂಲಕ ನೀವು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಈ ತಿಂಗಳ 19 ರಿಂದ ಮುಂದಿನ ವರ್ಷ ಏಪ್ರಿಲ್ 30 ರವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಬಹುದು.
ಸಮಯವು ಆರು ತಿಂಗಳವರೆಗೆ ಇರುತ್ತದೆ. ಈ ಚಳಿಗಾಲದಲ್ಲಿ ಹಾಗೂ ಮುಂದಿನ ಬೇಸಿಗೆಯಲ್ಲಿ ಪ್ರವಾಸ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲೈಟ್ ದರಗಳ ಭಾಗವಾಗಿ, ಎಕ್ಸ್‌ಪ್ರೆಸ್ ಲೈಟ್ ಮೂಲಕ ವಿಮಾನ ಪ್ರಯಾಣವು ವಿಶೇಷ ರಿಯಾಯಿತಿಗಳೊಂದಿಗೆ ರೂ.1444 ಆಗಿರುತ್ತದೆ. ಅಲ್ಲದೆ, ನೀವು ಕೆಲವು ಮಾರ್ಗಗಳಲ್ಲಿ ಎಕ್ಸ್‌ಪ್ರೆಸ್ ಮೌಲ್ಯದ ಕೊಡುಗೆಯ ಮೂಲಕ ರೂ.1599 ಕ್ಕೆ ಟಿಕೆಟ್‌ಗಳನ್ನು ಪಡೆಯಬಹುದು.
airindiaexpress.com ನಲ್ಲಿ ಲಾಗ್ ಇನ್ ಮಾಡುವವರಿಗೆ ಶೂನ್ಯ ಅನುಕೂಲಕರ ಶುಲ್ಕವನ್ನು ಏರ್ ಇಂಡಿಯಾ ಘೋಷಿಸಿದೆ. ಸಾಮಾನು ಸರಂಜಾಮುಗಳಿಗೂ ವಿಶೇಷ ಶುಲ್ಕ ವಿಧಿಸಲಾಗುತ್ತದೆ. ಎಕ್ಸ್‌ಪ್ರೆಸ್ ಲೈಟ್ ದರಗಳಲ್ಲಿ 3 ಕೆಜಿಯವರೆಗಿನ ಹೆಚ್ಚುವರಿ ಲಗೇಜ್ ಭತ್ಯೆಯನ್ನು ಸಾಗಿಸಬಹುದು. 15 ಕೆಜಿಗಿಂತ ಹೆಚ್ಚು ಇದ್ದರೆ ರೂ. 1000 ಪಾವತಿಸಬೇಕು.
- LATEST NEWS6 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM7 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS4 days ago
ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
- LATEST NEWS3 days ago
ಇಂಜಿನ್ – ಕೋಚ್ ನಡುವೆ ಅಪ್ಪಚ್ಚಿಯಾದ ರೈಲ್ವೆ ಉದ್ಯೋಗಿ
Raju
11/11/2024 at 3:49 PM
Super 💯
Vasantha kumar
11/11/2024 at 7:45 PM
Very good decision
Khan
11/11/2024 at 8:37 PM
You don’t have other Indian news?showing as if Indian government has done.