LATEST NEWS
ಬುಲ್ಡೋಜರ್ ಕಾರ್ಯಾಚರಣೆಗೆ ಬ್ರೇಕ್ ಹಾಕಿದ ಸುಪ್ರೀಂ ಕೋರ್ಟ್
Published
2 months agoon
By
NEWS DESKಮಂಗಳೂರು/ನವದೆಹಲಿ: ದೇಶದ ಯಾವುದೇ ಭಾಗದಲ್ಲಿಯೂ ಅಕ್ಟೋಬರ್ 1 ರ ವರೆಗೆ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಇಂದು (ಸೆ.17) ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.
“ಬುಲ್ಟೋಜರ್ ಕಾರ್ಯಾಚರಣೆ ನಡೆಸಬಾರದು” ಎಂಬ ಆದೇಶಕ್ಕೆ ಪ್ರತಿರೋಧ ತೋರಿದ ಸಾಲಿಟರ್ ಜನರಲ್ ತು಼ಷಾರ್ ಮೆಹ್ತಾ ಅವರು “ಇದರಿಂದಾಗಿ ಬುಲ್ಡೋಜರ್ ಕಾರ್ಯಾಚರಣೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ” ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು.
ಅದಕ್ಕೆ ಸುಪ್ರೀಂ ಪೀಠದ ಜಸ್ಟೀಸ್ ಬಿಆರ್ ಗವಾಯಿ ಮತ್ತು ಜಸ್ಟೀಸ್ ಕೆವಿ ವಿಶ್ವನಾಥ್ “ಮುಂದಿನ ವಿಚಾರಣೆವರೆಗೆ (ಅ.1) ಕಾರ್ಯಾಚರಣೆ ಸ್ಥಗಿತಗೊಂಡರೆ ಆಕಾಶ ಕಳಚಿ ಬಿಳುವುದಿಲ್ಲ” ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಹೋದ ವರ್ಷ ನಡೆದ ವಿಚಾರಣೆಯಲ್ಲೂ ಬುಲ್ಡೋಜರ್ ಕಾರ್ಯಾಚರಣೆಯ ವಿರುದ್ದ ಸುಪ್ರೀಂ ಕೋರ್ಟ್ ನಿಗಾವಹಿಸಿತ್ತು. ಮುಂದಿನ ವಿಚಾರಣೆವರೆಗೆ ಸುಪ್ರೀಂ ಕೋರ್ಟ್ ಆಜ್ಞೆ ಇಲ್ಲದೆ ಬುಲ್ಡೋಜರ್ ಕಾರ್ಯಚರಣೆ ನಡೆಸುವಂತಿಲ್ಲ ಎಂಬುವುದಾಗಿ ತಿಳಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ಹಿನ್ನಲೆಯಲ್ಲಿ ಆರೋಪಿಯ ಸಂಪತ್ತಿನ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ ಪ್ರಕರಣದ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಇದನ್ನೂ ಓದಿ; 74 ರಿಂದ 75 ಕ್ಕೆ ಕಾಲಿಡುತ್ತಿರುವ ಸಾಧಕ; ವಿಶ್ವದ ನಂ.1 ಜನಪ್ರಿಯ ನಾಯಕನ ಹುಟ್ಟು ಹಬ್ಬದ ಸಂಭ್ರಮ
Baindooru
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
Published
19 seconds agoon
22/11/2024By
NEWS DESK2ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆಲಂಗಾಣದ ಸಾರಿಗೆ ಸಚಿವ ಪೊಣ್ಣಂ ಪ್ರಭಾಕರ್ ಮತ್ತು ಕುಟುಂಬದವರು ನ.21ರಂದು ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಚಿವರ ಜತೆಯಲ್ಲಿ ಪತ್ನಿ ಪ್ರಮೀಳಾ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೈಸೂರಿನ ಉದ್ಯಮಿ ಎಂ.ಕೆ.ಪೋತ್‌ರಾಜ್, ಉದ್ಯಮಿ ಕಲಬುರಗಿಯ ಸಂತೋಷ್ ಗುತ್ತೆದಾರ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಉಜಿರೆ, ಬೆಳ್ತಂಗಡಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ನವೀನ್ ಗೌಡ ಸವಣಾಲು, ಕಾಂಗ್ರೆಸ್ ಮುಖಂಡ ರಾಘವೇಂದ್ರ ಪೂಜಾರಿ ಮತ್ತಿತರಿದ್ದರು.
ಮಂಗಳೂರು/ಕೇರಳ: ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಮೃ*ತಪಟ್ಟ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದೆ. ಈ ಘಟನೆಗೆ ಸಹಪಾಠಿಗಳ ಪ್ರಚೋದನೆಯೇ ಕಾರಣವೆಂದು ಮೂವರು ಗೆಳತಿಯರನ್ನು ಬಂಧಿಸಲಾಗಿದೆ.
ಅಮ್ಮು ಸಜೀವ್ (21) ಮೃ*ತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪಠಾಣಪುರಂ ನಿವಾಸಿ ಅಲೀನಾ, ಚಂಗನಾಶ್ಶೇರಿ ನಿವಾಸಿ ಅಕ್ಷಿತಾ ಮತ್ತು ಕೊಟ್ಟಾಯಂ ನಿವಾಸಿ ಅಂಜನಾ ಬಂಧಿತ ಆರೋಪಿಗಳು ಎನ್ನಲಾಗಿದೆ. ಚುಟ್ಟಿಪಾರ ಎಸ್‌ಎಸ್‌ಇ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಅಮ್ಮು ನವೆಂಬರ್ 15 ರಂದು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಬಿದ್ದು ಸಾ*ವನ್ನಪ್ಪಿದ್ದರು. ಆದರೆ ಆಕೆ ಆ*ತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದು, ಸಹಪಾಠಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
ಅಮ್ಮು ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇದ್ದು, ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ನುಚ್ಚನೂರು ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನಿಖೆ ಆಗಬೇಕು. ಸಾ*ವಿನಲ್ಲಿ ನಿಗೂಢತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಕಿರುಕುಳವೇ ಮಗಳ ಸಾ*ವಿಗೆ ಕಾರಣ ಎಂದು ಕುಟುಂಬಸ್ಥರು ವಾದಿಸಿದ್ದಾರೆ. ಸದ್ಯ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್.
Baindooru
ಕಾಸರಗೋಡು: ಮಹಿಳಾ ಪೊಲೀಸ್‌ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
Published
11 minutes agoon
22/11/2024By
NEWS DESK2ಕಾಸರಗೋಡು: ಪೋಲೀಸ್ ಉದ್ಯೋಗದಲ್ಲಿರುವ ಪತ್ನಿಯನ್ನು ಸ್ವತಃ ಪತಿಯೇ ಅಟ್ಟಾಡಿಸಿ ಕೊಚ್ಚಿ ಕೊಲೆಗೈದು, ಪತ್ನಿಯ ಅಪ್ಪನಾದ ಮಾವನನ್ನೂ ಕೊಲೆಗೆಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಗಡಿಯಲ್ಲೇ ನಡೆದಿದೆ.
ಕಾಸರಗೋಡು ಜಿಲ್ಲೆಯ ಚಂದೇರ ಪೋಲೀಸ್ ಠಾಣಾ ಸಿಪಿಒ ಉದ್ಯೋಗಿ ದಿವ್ಯಶ್ರೀ ಎಂಬಾಕೆ ತನ್ನ ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಈಕೆ ಕೊಲೆ ನಡೆಯುವಾಗ ತಡೆಯಲು ಬಂದ ಆಕೆಯ ತಂದೆ ವಾಸು ಎಂಬವರ ಕೊರಳು, ಹೊಟ್ಟೆಗೆ ಕತ್ತಿ ಇರಿತ, ಕಡಿತಗಳ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ನ.21) ಮುಸ್ಸಂಜೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿ ರಾಜೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿಯರಾದ ರಾಜೇಶ ಮತ್ತು ದಿವ್ಯಶ್ರೀ ಕಳೆದ ಕೆಲ ಸಮಯಗಳಿಂದ ಒಟ್ಟಿಗೆ ಬದುಕುತ್ತಿರಲಿಲ್ಲ. ಅವರ ದಾಂಪತ್ಯದಲ್ಲಿ ಸಮಸ್ಯೆಗಳಿದ್ದ ಕಾರಣ ಈರ್ವರೂ ಬೇರೆಯೇ ವಾಸಿಸುತ್ತಿದ್ದರು. ಗುರುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಳೆಂದು ತಿಳಿದೇ ಬಂದ ಆರೋಪಿ ಆಕೆಯನ್ನು ಆಕ್ರಮಿಸಿ, ಓಡಿಸಿ ಕೊಲೆಗೈದನೆಂದೂ, ಈ ವೇಳೆ ತಡೆಯಲು ಬಂದ ಮಾವನನ್ನೂ ಆಕ್ರಮಿಸಿ ಕೊಲೆಗೆತ್ನಿಸಿದನೆಂದೂ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತ ಪೋಲೀಸ್ ಉದ್ಯೋಗಿ ದಿವ್ಯಶ್ರೀಯ ಪತಿ ರಾಜೇಶನನ್ನು ಪೋಲೀಸರು ಬಂಧಿಸಿದ್ದಾರೆ.
LATEST NEWS
ವಾಟ್ಸಾಪ್ ಗ್ರೂಪ್ ನೋಡಿ ಪತ್ನಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಪತಿ..!
ಎಚ್ಚರ!! ಪ್ರೀತಿ ಪಾತ್ರರ ಸಾವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂತ್ಯಸಂಸ್ಕಾರ
ಮಾರ್ಚ್ 14 ರಿಂದ ಐಪಿಎಲ್ ಆರಂಭ
ಮಂಗಳೂರು: ಟ್ರಾಯ್ನಿಂದ ಕರೆ; 1.71 ಕೋ.ರೂ ವಂಚನೆ
ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್ ಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ