Connect with us

BANTWAL

ಬಾಲಬಿಚ್ಚಿದ್ರೆ ಮಂಗ್ಳೂರಿಗೂ ಬುಲ್ಡೋಜರ್‌ ಮಾಡೆಲ್‌ ಬರುತ್ತೆ: ಸಿ.ಟಿ ರವಿ ಎಚ್ಚರಿಕೆ

Published

on

ಬಂಟ್ವಾಳ: ಅನಗತ್ಯವಾಗಿ ಬಾಲಬಿಚ್ಚಿದರೆ, ಮಂಗಳೂರಿಗೂ ಬುಲ್ಡೋಜರ್‌ ಮಾಡೆಲ್ ತರಬೇಕಾಗುತ್ತದೆ. ನಮಗೆ ಏನು ಭಯವಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.


‌ಬಂಟ್ವಾಳ ಮಂಡಲದ ‌ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಬಿ.ಸಿ.ರೋಡಿನ‌ ಸ್ಪರ್ಶಾ ಕಲಾಮಂದಿರದಲ್ಲಿ‌ ನಡೆದ ‘ನಾರಿ ಸಮ್ಮಾನ ದೇಶದ ಅಭಿಮಾನ’ ಸಮಾವೇಶದಲ್ಲಿ ಇಂದು ಭಾಗವಹಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡಲು ಮುಂದಾದರೆ ಯೋಗಿಯವರ ಬುಲ್ಡೋಜರ್ ಮಾಡೆಲ್ ಇಲ್ಲಿಗೂ ತರಲು ನಾವು ಸಿದ್ದರಿದ್ದೇವೆ ಎಂದರು.

ಎಂದು ಅಧಿಕಾರ ಕಳೆದುಕೊಂಡ ಕೆಲವು ರಾಜಕೀಯ ಪಕ್ಷಗಳು ಅಪಪ್ರಚಾರದ ಮೂಲಕ ದೇಶದಲ್ಲಿ ಅಶಾಂತಿ ಹಬ್ಬಿಲು ಪ್ರಯತ್ನ ಮಾಡುತ್ತಿದ್ದು , ಇದನ್ನು ಹತ್ತಿಕ್ಕಲು ಮೋದಿಯವರ ಸರಕಾರ ಶಕ್ತವಾಗಿದೆ.

ಅಧಿಕಾರ ಕಳೆದುಕೊಂಡ ರಾಜಕೀಯ ಪಕ್ಷಗಳಿಗೆ ಕೋಮುವಾದಿಯ, ಜಾತಿವಾದಿ, ಅಧಿಕಾರದ ಹುಚ್ಚು ಹಿಡಿದಿದೆ, ಕುಟುಂಬ ಗುಲಾಮಗಿರಿಯ ಭಟ್ಟಂಗಿಗಳಾಗಿದ್ದಾರೆ. ಆದರೆ ಅವರ ಹುಚ್ಚು ದೂರವಾಗಬೇಕಾದರೆ ಜನ ಇನ್ನೊಮ್ಮೆ ಸೋಲಿಸಬೇಕಾಗಿದೆ ಎಂದು ಅವರು ಹೇಳಿದರು.

ಹಗರಣಗಳ ಮೂಲಕ ದೇಶ ತಲೆತಗ್ಗಿಸುವ ಮಟ್ಟಕ್ಕೆ ತಲುಪಿದ ಕಷ್ಟ ಕರವಾದ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಯಾದ ಮೋದಿಯವರು ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ನೀಡಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾದರು.

ಜಾಗತಿಕವಾಗಿ ಮೋದಿಯವರ ಕಾರಣಕ್ಕೆ ದೇಶದ ಗೌರವ ಹೆಚ್ಚಾಗಿದೆ.
ನೂರಾರು ಯೋಜನೆಗಳನ್ನು ದೇಶಕ್ಕೆ ನೀಡಿದ ಬಿಜೆಪಿ ಯನ್ನು ವಿರೋಧಿಗಳು ಕೋಮುವಾದಿ ಬಣ್ಣ ಕಟ್ಟುತ್ತಾರೆ, ಇದು ನ್ಯಾಯನಾ? ಎಂದು ಅವರು ಪ್ರಶ್ನೆಸಿದರು. ಮೋದಿ ದುಡ್ಡು ಬೇಕು ಆದರೆ ಮೋದಿ ಆಗಲ್ಲವಾ? ಎಂದು ಕೇಳಿದರು.

ದೇಶವೇ ಮೊದಲು ಎಂಬ ನೀತಿಯನ್ನು ಅನುಸರಿಸಿದ ಬಿಜೆಪಿಗೆ ಜಾತಿ, ಭಾಷೆ, ಧರ್ಮದ ನೀತಿಯ ಮೂಲಕ ದೇಶವನ್ನು ಒಡೆದು ಹಾಕಿದ ರಾಜಕೀಯ ಪಕ್ಷಗಳು ಬುದ್ದಿ ಹೇಳಬೇಕಾದ ಅನಿವಾರ್ಯತೆ ಇಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಬಂಟ್ವಾಳದಲ್ಲಿ ಮಹಿಳಾ ಶಕ್ತಿ ಗಟ್ಟಿಯಾಗಿದೆ ಎನ್ನುವುದನ್ನು ಈ ದಿನದ ನಾರಿ ಸಮಾವೇಶ ತೋರಿಸಿಕೊಟ್ಟಿದೆ ಎಂದರು. ದೇಶಕ್ಕೆ ಮೋದಿಜಿ ಅನಿವಾರ್ಯ ಎಂಬುದನ್ನು ಮನೆಮನೆಗೆ ತಿಳಿಸುವ ಕಾರ್ಯ ಬಂಟ್ವಾಳದಲ್ಲಿ ನಡೆದಾಗ ಅದರಲ್ಲಿ ಮಹಿಳಾ‌ಶಕ್ತಿ ತುಂಬು ಆಸಕ್ತಿಯಿಂದ‌ ಭಾಗವಹಿಸಿತ್ತು ಎನ್ನುವುದನ್ನು ಸ್ಮರಿಸಿಕೊಂಡರು.
ಬಂಟ್ವಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ. ದೇವಪ್ಪ ಪೂಜಾರಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿಗಳಾದ, ಕಸ್ತೂರಿ ಪಂಜ, ಪೂಜಾ ಪೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಪ್ರಮುಖರಾದ ರಾಮದಾಸ್ ಬಂಟ್ವಾಳ, ಕೊರಗಪ್ಪ ನಾಯ್ಕ , ಸುಧೀರ್ ಶೆಟ್ಟಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು.

Click to comment

Leave a Reply

Your email address will not be published. Required fields are marked *

BANTWAL

Bantwala: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ- ಯುವಕ ಸಾವು..!

Published

on

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಯುವಕ ಮೃತಪಟ್ಟಿರುವ ಘಟನೆ ಫೆ. 25ರಂದು ಬಂಟ್ವಾಳ ತಾಲೂಕಿನ ಬಿ.ಸಿ ರೋಡಿನ ಕೈಕಂಬದಲ್ಲಿ ನಡೆದಿದೆ.

ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು ಆಲಡ್ಕದಲ್ಲಿ ವಾಸ್ತವ್ಯವಿದ್ದ  ಅಶ್ರಫ್ (32) ಮೃತ ಯುವಕ. ಕೈಕಂಬದಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ಅಶ್ರಫ್ ತಮ್ಮ ಸ್ಕೂಟರ್ ನಲ್ಲಿ ಅಂಗಡಿಗೆ ಬಿಡಲು ತೆರಳಿದ್ದರು. 5.30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಅವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡ ಅಶ್ರಫ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

Bantwala: ಇತಿಹಾಸದಲ್ಲೇ ಮೊದಲ ಬಾರಿಗೆ 25ನೇ ವಯಸ್ಸಿನ ಯುವಕ ನ್ಯಾಯಾಧೀಶ

Published

on

ಬಂಟ್ವಾಳ: ಕೇವಲ 25 ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಬರೆದು ಪಾಸ್ ಆದ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬ ದಾಖಲೆ ಬರೆದಿದ್ದಾರೆ.

ಕರ್ನಾಟಕದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 25 ವಯಸ್ಸಿನ ಯುವಕನೊಬ್ಬ ನ್ಯಾಯಾಧೀಶರ ಪೀಠ ಅಲಂಕರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರಿನ ಅನಿಲ್ ಜಾನ್ ಸಿಕ್ವೇರಾ ಈ ಸಾಧನೆ ಮಾಡಿದ್ದಾರೆ. ಬರಿಮಾರಿನ ಕೃಷಿಕರಾದ ಎವೆರಸ್ಟ್‌ ಸಿಕ್ವೇರಾ ಹಾಗೂ ಐವಿ ಸಿಕ್ವೇರಾ ದಂಪತಿಯ ಪುತ್ರನಾದ ಅನಿಲ್ ಜಾನ್ ಸಿಕ್ವೇರಾ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರಿಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಬರಿಮಾರ್ ಸಂತ ಜೋಸೆಫರ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದ ಇವರು ಪ್ರೌಢ ಶಿಕ್ಷಣವನ್ನು ಮಾಣಿಯ ಕರ್ನಾಟಕ ಹೈಸ್ಕೂಲ್‌ನಲ್ಲಿ ಮುಗಿಸಿದ್ದರು. ಬಳಿಕ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಮುಗಿಸಿದ ಅನಿಲ್ ಜಾನ್ ಸಿಕ್ವೇರಾ ಮಂಗಳೂರಿನ ಎಸ್‌ಡಿಎಂ ‘ಲಾ’  ಕಾಲೇಜಿನಲ್ಲಿ ಬಿಬಿಎ, ಎಲ್ಎಲ್‌ಬಿ ಅಧ್ಯಯನ ಮಾಡಿದ್ದರು. ‘ಲಾ’ ಕಲಿಯುತ್ತಿದ್ದ ಸಮಯದಲ್ಲೇ ಮಂಗಳೂರು ವಕೀಲರ ಸಂಘದ ಜೊತೆಯಲ್ಲೂ ಗುರುತಿಸಿಕೊಂಡಿದ್ದ ಇವರು ಲಾ ಕಂಪ್ಲೀಟ್ ಆದ ಬಳಿಕ ವಕೀಲ ವೃತ್ತಿಯ ಜೊತೆಗೆ ನ್ಯಾಯಾಧೀಶ ಆಗುವ ಕನಸು ಕಂಡಿದ್ದರು. ಹೀಗಾಗಿ ನ್ಯಾಯವಾಧಿಗಳಾದ ದೀಪಕ್ ಡಿಸೋಜಾ,ನವೀನ್ ಪಾಯ್ಸ್ ಅವರ ಮಾರ್ಗದರ್ಶನ ಪಡೆದು ಪರೀಕ್ಷೆ ಬರೆದಿದ್ದಾರೆ. ಕಾಲೇಜು ದಿನಗಳಲ್ಲೇ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದ ಅನಿಲ್ ಜಾನ್ ಸಿಕ್ವೇರಾ ಅವರು ಹೈಸ್ಕೂಲ್ ಎಸ್‌ಪಿಎಲ್‌, ಕಾಲೇಜು ಪ್ರಸಿಡೆಂಟ್ ಆಗಿದ್ದು, 2022ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೋಲಿಕ್ ಯುತ್‌ ಮೂವ್‌ಮೆಂಟ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಕಳೆದ ವರ್ಷ ಹಾಸನದ ಸಕಲೇಶಪುರ ಮೂಲದ ವಿ.ಆರ್. ಅನುಷಾ ಅತ್ಯಂತ ಕಿರಿಯ ನ್ಯಾಯಾಧೀಶ ಪಟ್ಟ ಪಡೆದುಕೊಂಡಿದ್ದು, ಅದನ್ನು ಇದೀಗ ಮಂಗಳೂರಿನ ಅನಿಲ್ ಜಾನ್ ಸಿಕ್ವೇರಾ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅನಿಲ್ ಅವರ ಈ ಸಾಧನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

Continue Reading

BANTWAL

Bantwala:ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಕಾರು ಢಿಕ್ಕಿ..!

Published

on

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯಲ್ಲಿ ಹಾಕಿದ ಮಣ್ಣಿನ ಮೇಲೆ ಹತ್ತಿ ಮೈಲು ಕಲ್ಲಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಮಾಣಿ ಕಡೆಗೆ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮಣ್ಣಿನ ರಾಶಿ ಮೇಲೆ ಏರಿತ್ತು. ಈ ವೇಳೆ ಕಾರನ್ನು ನಿಯಂತ್ರಣಕ್ಕೆ ತರುವಲ್ಲಿ ಚಾಲಕ ಯಶಸ್ವಿ ಆದ ಕಾರಣ ದೊಡ್ಡ ಅನಾಹುತ ತಪ್ಪಿತ್ತು. ಆದರೆ ರಸ್ತೆ ಬದಿಯಲ್ಲಿದ್ದ ಮೈಲು ಕಲ್ಲಿಗೆ ಢಿಕ್ಕಿ ಹೊಡೆದು ಕಾರು ನಿಂತ ಕಾರಣ ಕಾರಿಗೆ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಕಾರು ಚಾಲಕನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರಯಾಗಿದ್ದು, ಕಾರು ನಿಯಂತ್ರಣ ತಪ್ಪಿದ ದೃಶ್ಯ ಕಂಡು ಬಂದಿದೆ.

Continue Reading

LATEST NEWS

Trending