Thursday, December 2, 2021

 ಅಮೇರಿಕಾದ ನ್ಯೂಜೆರ್ಸಿಯಲ್ಲಿ ಅನಿವಾಸಿ ಭಾರತೀಯ ದಂಪತಿ ಬರ್ಬರ ಹತ್ಯೆ: ಅನಾಥವಾದ ನಾಲ್ಕರ ಕಂದಮ್ಮ..!

ಮುಂಬೈ: ಅನಿವಾಸಿ ಭಾರತೀಯರಾದ ಬಾಲಾಜಿ ರುದ್ರಾವರ್ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್ (30)  ಅಮೇರಿಕಾದ ನ್ಯೂಜೆರ್ಸಿಯ ನಾರ್ಥ್ ಆರ್ಲಿಂಗ್ಟನ್ ನಲ್ಲಿರುವ ರಿವರ್ ವ್ಯೂ ಗಾರ್ಡನ್ ಸಂಕೀರ್ಣದಲ್ಲಿ  ಬರ್ಬರ ರೀತಿಯಲ್ಲಿ ಹತ್ಯೆಯಾಗಿದ್ದಾರೆ.

ಭಾರತೀಯ ಮೂಲದ ಟೆಕ್ಕಿ ಮತ್ತು ಆತನ ಗರ್ಭಿಣಿ ಪತ್ನಿ ಅನುಮಾನಾಸ್ಪದವಾಗಿ  ಅಮೆರಿಕದ ಮನೆಯಲ್ಲಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ದಂಪತಿ ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗಳು ಅಳುತ್ತಿರುವುದನ್ನು ನೋಡಿದ  ನೆರೆಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ನಾರ್ಥ್​ ಅರ್ಲಿಂಗ್ಟನ್​ ಅಪಾರ್ಟ್​ಮೆಂಟ್​ನಲ್ಲಿ ದಂಪತಿಯ ಮೃತದೇಹ ಚಾಕುವಿನಿಂದ  ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಬ್ಬರಿಗೂ ಹಲವು ಬಾರಿ ಹೊಟ್ಟೆಗೆ ಚಾಕುವಿನಿಂದ ಇರಿದಿರುವುದು ಸ್ಪಷ್ಟವಾಗಿದೆ.

ಮೃತರನ್ನು ಮಹಾರಾಷ್ಟ್ರ ಬೀಡ್ ಜಿಲ್ಲೆಯ ಅಂಬಾಜೋಗೈನ  ಬಾಲಾಜಿ ಭಾರತ್​ ರುದ್ರಾವರ್​ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್​ (30) ಎಂದು ಗುರುತಿಸಲಾಗಿದೆ.

ನ್ಯೂಜೆರ್ಸಿಯ ನಾರ್ಥ್​ ಅರ್ಲಿಂಗ್ಟನ್​ನಲ್ಲಿರುವ ರಿವರ್ ವ್ಯೂ ಗಾರ್ಡನ್ಸ್ ಸಂಕೀರ್ಣದ 21 ಗಾರ್ಡನ್​ ಟೆರೆಸ್​ ಅಪಾರ್ಟ್​ಮೆಂಟ್​ನಲ್ಲಿ ಮೃತದೇಹ ಪತ್ತೆಯಾಗಿವೆ.​

ಬುಧವಾರ ಮನೆಯ ಬಾಲ್ಕನಿಯಲ್ಲಿ ಮಗು ಅಳುವುದನ್ನು ನೋಡಿದ ನೆರೆಮನೆಯವರು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಲಿವಿಂಗ್​ ರೂಮ್​ನಲ್ಲಿ ದಂಪತಿ ಸತ್ತು ಬಿದ್ದಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾವು  ಸಂಭವಿಸಿರುವ ಬಗ್ಗೆ ಕೂಲಂಕುಷ ತನಿಖೆಗಾಗಿ  ಮೃತದೇಹ ಮರಣೋತ್ತರ ಪರೀಕ್ಷೆಗಾಗಿ  ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆದರೆ, ದಂಪತಿ ಮೃತದೇಹ ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ತನ್ನ  ಸೊಸೆ 7 ತಿಂಗಳ ಗರ್ಭಿಣಿ ಆಗಿದ್ದಳು. ನಾವು ಮತ್ತೊಮ್ಮೆ ಅಮೆರಿಕ ಪ್ರವಾಸ ಮಾಡಲು ಪ್ಲಾನ್​ ಮಾಡಿಕೊಂಡಿದ್ದೆವು. ಅಷ್ಟರಲ್ಲಿ ಮಗ ಮತ್ತು ಸೊಸೆ ಮೃತಪಟ್ಟಿದ್ದಾರೆ.

ಇಬ್ಬರು ಖುಷಿಯಾಗಿಯೇ ಇದ್ದರು ನೆರೆಮನೆಯವರೊಂದಿಗೂ ಚೆನ್ನಾಗಿಯೇ ಇದ್ದರು. ಆದರೆ, ಯಾಕೆ ಹೀಗಾಯಿತು ಎಂಬುದು ನಮಗೂ ತಿಳಿಯುತ್ತಿಲ್ಲ.

ಇಬ್ಬರ ಮೃತದೇಹ ಭಾರತಕ್ಕೆ ತಲುಪಲು ಸುಮಾರು 8 ರಿಂದ 10 ದಿನಗಳು ಆಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಮೊಮ್ಮಗಳು ಸದ್ಯ ನನ್ನ ಮಗನ ಸ್ನೇಹಿತನ ಮನೆಯಲ್ಲಿದ್ದಾಳೆ ಎಂದು ಮೃತನ ತಂದೆ ಮಾಹಿತಿ ನೀಡಿದ್ದಾರೆ.

ಐಟಿ ವೃತ್ತಿಪರನಾಗಿದ್ದ ಬಾಲಾಜಿ 2014ರ ಡಿಸೆಂಬರ್​ನಲ್ಲಿ ಮದುವೆ ಆದ ಬಳಿಕ 2015ರಲ್ಲಿ ಪತ್ನಿ ಜತೆ ಕೆಲಸಕ್ಕೆಂದು ಅಮೆರಿಕಕ್ಕೆ ತೆರಳಿದ್ದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...