Thursday, February 9, 2023

ಭಾರತದ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ನವದೆಹಲಿ: ಭಾರತೀಯ ಮೂಲದ ಯುವಕರಿಗೆ ಯುಕೆಯಲ್ಲಿ ಕೆಲಸ ಮಾಡಲು ಅನುವಾಗುವಂತೆ ಬ್ರಿಟನ್ ಪ್ರಧಾನಿ ಸುನಕ್‌ ಅವರು ಪ್ರತಿವರ್ಷ 3,000 ವೀಸಾಗಳಿಗೆ ಅನುಮೋದನೆ ನೀಡಿದ್ದಾರೆ.


‘ಹೊಸ ಯುಕೆ ಇಂಡಿಯಾ ಯಂಗ್‌ ಪ್ರೊಫೆಷನಲ್‌ ಸ್ಕೀಮ್’ ಅಡಿಯಲ್ಲಿ ಈ ಹೊಸ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತವಾಗಲಿದೆ ಎಂದು ಬ್ರಿಟಿಷ್‌ ಸರ್ಕಾರ ಹೇಳಿದೆ.

ಇದರಿಂದ ಪ್ರತಿ ವರ್ಷವೂ 18ರಿಂದ 30 ವರ್ಷದೊಳಗಿನ ಪದವಿ ಪಡೆದ ಭಾರತೀಯ ನಾಗರಿಕರಿಗೆ ಬ್ರಿಟನ್‌ಗೆ ಭೇಟಿ ನೀಡಲು ಎರಡು ವರ್ಷಗಳವರೆಗೆ ಕೆಲಸ ಮಾಡಲು ಅನುವು ಮಾಡುತ್ತದೆ.

18ರಿಂದ 30 ವರ್ಷ ವಯಸ್ಸಿನ ಪದವಿ ಪಡೆದ ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಬ್ರಿಟನ್‌ಗೆ ಬರಲು ಹಾಗೂ ಎರಡು ವರ್ಷಗಳ ಕಾಲ ಕೆಲಸ ಮಾಡಲು 3,000 ವೀಸಾಗಳನ್ನು ನೀಡಲಾಗುತ್ತದೆ ಎಂದು ಬ್ರಿಟನ್‌ ಪ್ರಧಾನಿ ಕಚೇರಿ ಟ್ವೀಟ್‌ ಮಾಡಿದೆ.

ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ 2,942 ವೀಸಾ ನೀಡಿದ ಪಾಕಿಸ್ತಾನ ಯುತ್‌ ಮೊಬಿಲಿಟಿ ಸ್ಕೀಮ್‌ಗಿಂತ ಭಿನ್ನವಾಗಿ ಯಾವುದೇ ಅರ್ಹತೆ ಅಥವಾ ಇಂಗ್ಲಿಷ್‌ ಭಾಷೆಯ ಅವಶ್ಯಕತೆ ಇರಲ್ಲ.

ಯುವ ವೃತ್ತಿಪರರು ಈ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ ಉನ್ನತ ಶಿಕ್ಷಣಕ್ಕೆ ಸಮಾನವಾದ ಡಿಪ್ಲೊಮಾ ಅಥವಾ ಪದವಿಯನ್ನು ಪಡೆದಿರಬೇಕು ಎಂದು ಹೇಳಿದೆ.

ವೀಸಾ ಪಡೆಯಲು ಬ್ರಿಟನ್‌ನಲ್ಲಿ ಉದ್ಯೋಗದಾತರಿಂದ ಕೆಲಸದ ಆಫರ್‌ ಲೆಟರ್‌ ಅಗತ್ಯವಿರುತ್ತದೆ. ಆದ್ಯಾಗೂ ವೀಸಾಗೆ ಅರ್ಹತೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

ವೀಸಾ ನಿಯಮಗಳು ಇನ್ನೂ ಅಂತಿಮವಾಗಿಲ್ಲದ್ದರಿಂದ ಲಕ್ಷಾಂತರ ಭಾರತೀಯ ಪ್ರಜೆಗಳು ಅರ್ಹತೆಗಳನ್ನು ಪೂರೈಸುವ ಮೂಲಕ ಈ ವೀಸಾಗೆ ಅರ್ಹರಾಗುವ ಸಾಧ್ಯತೆ ಇದೆ. ಇಲ್ಲಿ ಲಾಟರಿ ಮೂಲಕವೂ ಆಯ್ಕೆಯಾಗುವ ಸಾಧ್ಯತೆ ಇದೆ.

 

LEAVE A REPLY

Please enter your comment!
Please enter your name here

Hot Topics

ಸುರತ್ಕಲ್ ‌ಫಾಝಿಲ್ ಕೊಲೆ ಆರೋಪಿಯಿಂದ ಹಣಕ್ಕಾಗಿ ಬೆದರಿಕೆ: ಉಳ್ಳಾಲ ಠಾಣೆಯಲ್ಲಿ ‌ಪ್ರಕರಣ ದಾಖಲು

ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದೆ.ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ...

ಸುರತ್ಕಲ್ ವ್ಯಾಪ್ತಿಯಲ್ಲಿ ಲಘು ಅಪಘಾತ: ಇತ್ತಂಡಗಳ ಮಧ್ಯೆ ಹೊಯ್‌ಕೈ- ಮಾತಿನ ಚಕಮಕಿ..!

ಮಂಗಳೂರು : ಮಂಗಳೂರು ಹೊವಲಯದ  ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ ಎಂಬಲ್ಲಿ ಬುಧವಾರ ರಾತ್ರಿ ಬೈಕ್- ಕಾರ್ ನಡುವೆ ಲಘು ಅಪಘಾತ ಸಂಭವಿಸಿದ್ದು, ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲ ಕಾಲ...

ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ: 15,000 ದಾಟಿದ ಮೃತರ ಸಂಖ್ಯೆ-ಏರುತ್ತಲೇ ಇದೆ ಸಾವಿನ ಲೆಕ್ಕ..!

ಟರ್ಕಿ: ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000ಕ್ಕೆ ಏರಿಕೆಯಾಗಿ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆ.ಈ ಅಂಕಿ...