Thursday, October 21, 2021

ದಿಬ್ಬಣ ಹೊರಟು ಅರ್ಧ ದಾರಿಯಲ್ಲಿ ಕೈಕೊಟ್ಟ ವಧುವಿನ ಕಾರು…!ಮುಂದೇನಾಯ್ತು

ನಾಟಿಂಗ್ ಹ್ಯಾಮ್ ಶೈರ್: ತಮ್ಮ ಮದುವೆಯ ದಿನದ ಕ್ಷಣಗಳು ಸುಂದರವಾಗಿರಬೇಕು ಅಂತಾ ಹಲವರು ಕಲ್ಪಿಸಿಕೊಂಡಿರುತ್ತಾರೆ. ಇನ್ನು ಮದುವೆಗೆ ದಿಬ್ಬಣ ಹೊರಡುವಾಗವಂತೂ ವಧು ಯಾವ ರೀತಿ ಸಿದ್ಧಳಾಗಿರುತ್ತಾಳೆಂದರೆ ಅದನ್ನು ವರ್ಣಿಸಲು ಪದಗಳು ಸಾಲುವುದಿಲ್ಲ.

ಆದರೆ ದಿಬ್ಬಣ ಹೊರಡುವಾಗ ಕಾರು ಕೆಟ್ಟೋದರೆ ಏನು ಮಾಡುವುದು..? ಇಲ್ಲೊಬ್ಬಳು ವಧುವಿಗೂ ಇದೇ ಪರಿಸ್ಥಿತಿ ಎದುರಾಯ್ತು…ತನ್ನ ಹೆತ್ತವರೊಂದಿಗೆ ಚರ್ಚ್ ಗೆ ತೆರಳುತ್ತಿದ್ದ ಆಕೆಯ ಕಾರು 5 ಮೈಲುಗಳ ದೂರದ ನಂತರ ಇದ್ದಕ್ಕಿದ್ದಂತೆ ಕೆಟ್ಟು ನಿಂತಿದೆ.

ಇದರಿಂದ ಕಂಗೆಟ್ಟ ವಧು ಹಾಗೂ ಪೋಷಕರು ಏನು ಮಾಡುವುದು ಎಂದು ತೋಚದಾದರು. ಈ ವೇಳೆ ಆಪದ್ಭಾಂಧವನಂತೆ ಬಂದ ಟ್ರಾಫಿಕ್ ಪೊಲೀಸ್ ನೆರವಿಗೆ ಮುಂದಾದರು. ಕೂಡಲೇ ವಧು ಹಾಗೂ ಪೋಷಕರನ್ನು ವಿವಾಹ ನಡೆಯಲಿದ್ದ ಚರ್ಚ್ ಗೆ ಕರೆತಂದರು.

“ಪೊಲೀಸ್ ಮಾಡಿದ ಉಪಕಾರಕ್ಕೆ ಜೀವನದಲ್ಲೇ ನನಗೆ ನೆಮ್ಮದಿಯ ಕಣ್ಣೀರು ಬಂತು” ಅಂತಾ ವಧು ಹೇಳಿದ್ದಾಳೆ.

ಅಷ್ಟೇ ಅಲ್ಲ ಚರ್ಚ್ ಗೆ ತಲುಪಿದಾಗ ಪೊಲೀಸ್ ಬಳಿ ವಧು ಬೇಡಿಕೆಯಿಟ್ಟಿದ್ದಾಳೆ. ಅದು ಇಬ್ಬರೂ ಕೂಡ ಒಟ್ಟಿಗೆ ಒಳ ಪ್ರವೇಶಿಸಬೇಕೆಂಬುದಾಗಿತ್ತು.

ವಧುವಿನ ಬೇಡಿಕೆಗೊಪ್ಪಿದ ಟ್ರಾಫಿಕ್ ಪೊಲೀಸ್ ಸಮವಸ್ತ್ರಧಾರಿಯಾಗಿ ವಧುವಿನ ಜೊತೆಯಲ್ಲಿ ಒಳಾಂಗಣ ಪ್ರವೇಶಿಸಿದರು.

ಸದ್ಯ, ಈ ಫೋಟೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...