Connect with us

LATEST NEWS

ಬ್ರ್ಯಾಂಡ್ ಮಂಗಳೂರು ಉತ್ತಮ ಪರಿಕಲ್ಪನೆ: ಕುಲದೀಪ್ ಆರ್ ಜೈನ್

Published

on

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದತೆ ಪ್ರತಿ ಬಿಂಬಿಸುವ ವರದಿಗೆ ನೀಡಲಾಗುವ ಬ್ರ್ಯಾಂಡ್‌ ಮಂಗಳೂರು ಪ್ರಶಸ್ತಿಯನ್ನು ಪತ್ರಿಕಾ ಮಾಧ್ಯಮ ವಿಭಾಗದಲ್ಲಿ ಹೊಸದಿಗಂತ ವರದಿಗಾರ ಸುರೇಶ್‌ ಡಿ.ಪಳ್ಳಿ ಮತ್ತು ದೃಶ್ಯ ಮಾಧ್ಯಮ ವಿಭಾಗದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗಾರ ಭರತ್‌ರಾಜ್‌ ಕೆ. ಸನಿಲ್‌ ಅವರಿಗೆ ಪ್ರದಾನ ಮಾಡಲಾಯಿತು.

ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪೊಲೀಸ್‌ ಕಮಿಷನರ್‌ ಕುಲದೀಪ್‌ ಆರ್  ಜೈನ್‌ ಕಾರ್ಯಕ್ರಮ ಉದ್ಘಾಟಿಸಿ ಮಂಗಳೂರಿನ  ನೈಜ  ಪರಂಪರೆಯನ್ನು ಸೌಹಾರ್ದ ತೆಯನ್ನು ಹೊರಜಗತ್ತಿಗೆ ತೆರೆದಿಡುವ ನಿಟ್ಟಿನಲ್ಲಿ ಬ್ರ್ಯಾಂಡ್ ಮಂಗಳೂರು ಉತ್ತಮ ಪರಿಕಲ್ಪನೆ.

ಪತ್ರಿಕಾ ದಿನಾಚರಣೆಯ ಜೊತೆ ವ್ಯಂಗ್ಯ ಚಿತ್ರ ಪ್ರದರ್ಶನ, ಜೊತೆಗೆ ವಿದ್ಯಾರ್ಥಿಗಳನ್ನು  ಪಾಲ್ಗೊಳ್ಳುವಂತೆ ಮಾಡಿರುವುದು ಶ್ಲಾಘನೀಯ  ಎಂದರು. ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾ ಧಿಕಾರಿ ಡಾ.ಸದಾನಂದ ಪೆರ್ಲ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನ೦ದಿಸಿದರು . ಸಮುದಾಯದ ಸಮಸ್ಯೆಗಳು  ರೈತರ ಜನ ಸಾಮಾನ್ಯರ ಬಗ್ಗೆ ಹೆಚ್ಚು ಗಮನಹ ರಿಸುವುದು  ಅಭ್ಯುದಯ ಪತ್ರಿಕೋದ್ಯಮದ  ಭಾಗ ಎಂದು ಡಾ.ಸದಾ ನಂದ ಪೆರ್ಲ ತಿಳಿಸಿದ್ದಾರೆ.

ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಅಭ್ಯುದಯ ಪತ್ರಿಕೋದ್ಯಮ ಮುಖ್ಯ ಗುರಿ.ಪತ್ರ ಕರ್ತರ ಗ್ರಾಮ ವಾಸ್ತವ್ಯ,ಕುಗ್ರಾಮ ಗುರುತಿಸುವಿಕೆ, ಸಮಾಜ ಮುಖಿ ಕೆಲಸಗಳು ಜನಸಾಮಾನ್ಯರ ಧ್ವನಿ ಯನ್ನು ರಾಜಕಾರಣಿಗಳಿಗೆ ತಲುಪಿಸು ವುದು ಅಭ್ಯುದಯ ಪತ್ರಿಕೋದ್ಯ ಮದ ಆಶಯವಾಗಿದೆ. ಅಭ್ಯುದಯ ಪತ್ರಿಕೋದ್ಯ ಮದ ವಿಷಯಗಳು  ಪ್ರಚಲಿತ ಮಾಧ್ಯಮ ಗಳಲ್ಲಿ ಅಗ್ರಸ್ಥಾನ ಪಡೆಯಬೇಕಾಗಿದೆ. ನಾವು ಓದುಗರ,ಕೇಳುಗರ ಅಭಿರುಚಿಯನ್ನು ಅಭಿವೃದ್ಧಿ ಪತ್ರಿಕೋದ್ಯಮದತ್ತ ಆಕರ್ಷಿ ಸುವಂತೆ ಮಾಡಬೇಕಾಗಿದೆ ಎಂದು ಸದಾನಂದ ಪೆರ್ಲ ತಿಳಿಸಿದ್ದಾರೆ.

ಪತ್ರಕರ್ತರು ತೆರೆದ ಕಣ್ಣುಗಳಿಂದ ನಮ್ಮ ಸುತ್ತ ಮುತ್ತಲಿನ ಸಮಾಜವನ್ನು ನೋಡಬೇಕು ಆಗ ಮಾತ್ರ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ರಂಗಕ್ಕೆ ಮಾನ್ಯತೆ ದೊರೆಯಬಹುದು. ಮಹಾತ್ಮ ಗಾಂಧೀಜಿ ಅಭ್ಯುದಯ ಪತ್ರಿಕೋದ್ಯಮದ  ದೊಡ್ಡ ಹರಿಕಾ ರರಾಗಿದ್ದರು. ದೇಶ ಸೇವೆ, ಜನರ ಸೇವೆಗೆ ಒತ್ತು ನೀಡುವುದು ಅಭ್ಯುದಯ ಪತ್ರಿಕೋದ್ಯಮದ  ಗುರಿಯಾಗಿದೆ ಎಂದು ಸದಾನಂದ ಪೆರ್ಲ ತಿಳಿಸಿದ್ದಾರೆ.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್, ಜಿಲ್ಲಾ ವಾರ್ತಾಧಿಕಾರಿ ರವಿರಾಜ್, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್‌, ರಾಜ್ಯ ಸಮಿತಿ ಸದಸ್ಯ ಜಗನ್ನಾಥ್‌ ಶೆಟ್ಟಿ ಬಾಳ, ರಾಜ್ಯ ಸಮಿತಿ ನಾಮ ನಿರ್ದೇಶಿತ  ಸದಸ್ಯ ಇಬ್ರಾಹಿ ಅಡ್ಕಸ್ಥಳ,ಮಂಗಳೂರು ಪ್ರೆಸ್ ಕ್ಲಬ್ ನ  ನಿಕಟಪೂರ್ವ  ಅಧ್ಯಕ್ಷ ಅನ್ನು ಮಂಗಳೂರು, ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಮತ್ತು ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಪ್ರಶಸ್ತಿ ವಿಜೇತರ ಸನ್ಮಾನ ಪತ್ರ ವಾಚಿಸಿ ದರು.ಮಹಮ್ಮದ್‌ ಆರಿಫ್‌  ಕಾರ್ಯಕ್ರಮ ನಿರೂ ಪಿಸಿದರು.ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಸಿಬ್ಬಂದಿ ಪೂವಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

*ಪತ್ರಿಕಾ ದಿನಾಚರಣೆ ಯ ಅಂಗವಾಗಿ ಪತ್ರಿಕಾ ಭವನದಲ್ಲಿ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಜಾನ್ ಚಂದ್ರ ನ್  ಅವರ ವ್ಯಂಗ್ಯ ಚಿತ್ರ, ರೇಖಾಚಿತ್ರ ಗಳ ಪ್ರದರ್ಶನವನ್ನು ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಉದ್ಘಾಟಿಸಿದರು.

DAKSHINA KANNADA

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆ

Published

on

ಮಂಗಳೂರು: ಮಂಗಳೂರು ಸೊಬೆಸ್ಟಿಯನ್ ಹಾಲ್ ನಲ್ಲಿ ನಡೆದ  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯಲ್ಲಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ  ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಕರುಣಾಕರ್ ಕಾನಂಗಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾಗಿ ರಮೇಶ್ ಕಲಾ ಶ್ರೀ ಮಂಗಳೂರು, ಜಯಕರ್ ಸುವರ್ಣ ಉಡುಪಿ, ಜೊತೆ ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್ ಮುಲ್ಕಿ, ಹೆರಿಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್ ಕಾಪು, ರಮೇಶ್ ಹೊಸಬೆಟ್ಟು ಸುರತ್ಕಲ್, ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಮೂಡಬಿದ್ರಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಂದಾಪುರ, ಭಾರದ್ವಾಜ್ ಬೆಳ್ತಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ ಮಾಧ್ಯಮ ಕಾರ್ಯದರ್ಶಿ ಹರೀಶ್ ರಾವ್ ಆಯ್ಕೆಯಾಗಿದ್ದಾರೆ.

ಈ ಚುನಾವಣಾ ಪ್ರಕ್ರಿಯೆಯನ್ನು ಎಸ್ ಕೆಪಿಎ ಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ಅವರು ನಡೆಸಿಕೊಟ್ಟರು.

 

Continue Reading

DAKSHINA KANNADA

ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನ-ಇಬ್ಬರು ಅರೆಸ್ಟ್..!

Published

on

ಉಳ್ಳಾಲ: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಯನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಸಿಗ್ರೌಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ತಿಕಟ್ಟೆ ಆಝಾದನಗರದ ಫಝಲ್ ಮತ್ತು ಮುಕ್ಕಚ್ಚೇರಿ ಕಡಪ್ಪುರ ದ ಸಮೀರ್ ಎಂಬವರನ್ನು ಬಂಧಿಸಲಾಗಿದೆ.

ಈ ಇಬ್ಬರು ಉಳ್ಳಾಲ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ 14ಗ್ರಾಂ ಎಂಡಿಎಂಎ ಮಾರಾಟ ಮಾಡಲು ಯತ್ನಿಸುವ ಸಂದರ್ಭ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸಿ, 14 ಗ್ರಾಂ ಎಂಡಿಎಂಎ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿಯಿಂದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ, ಪಿಎಸ್ಐ ಶೀತಲ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಕ್ಬರ್, ಅಶೋಕ್, ಮಂಜು, ವೆಂಕಟೇಶ್ ಭಾಗವಹಿಸಿದ್ದರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

Continue Reading

bangalore

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಡೇಟ್ ಚೇಂಜ್…!

Published

on

ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾದ ಸೈಡ್ ಬಿ ಅಕ್ಟೋಬರ್​ 20ರ ಬದಲಿಗೆ ಅಕ್ಟೋಬರ್​ 27ರಂದು ರಿಲೀಸ್​ ಆಗಲಿದೆ.

 

ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರತಂಡ ಮೊದಲೇ ಘೋಷಿಸಿದಂತೆ ಅಕ್ಟೋಬರ್ 20ಕ್ಕೆ ಬಿಡುಗಡೆ ಆಗಬೇಕಿತ್ತು.

ಆದ್ರೆ ಅಕ್ಟೋಬರ್ 20ಕ್ಕೆ ಸಪ್ತ ಸಾಗರದಾಚೆ ಸಿನೆಮಾ ರಿಲೀಸ್ ಆಗುತ್ತಿಲ್ಲ.

ಸೈಡ್ ಬಿ ಪಾರ್ಟ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಭಾರೀ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳು, ಪರಭಾಷೆಯ ಚಿತ್ರಗಳ ಹಾವಳಿಯಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಬದಲಾಗಿದೆ.

ಹೀಗಾಗಿ ಚಿತ್ರತಂಡ ಅಕ್ಟೋಬರ್ 27ಕ್ಕೆ ಪಾರ್ಟ್ ಬಿ ರಿಲೀಸ್ ಮಾಡುವ ಘೋಷಣೆಯನ್ನು ಮಾಡಿದೆ.

ಹೌದು ..ಅಕ್ಟೋಬರ್​ 20ರ ಬದಲಿಗೆ ಅಕ್ಟೋಬರ್​ 27ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ರಿಲೀಸ್​ ಆಗಲಿದೆ.

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ನೆಲದಲ್ಲೂ ಸದ್ದು ಮಾಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ ಅತ್ಯುತ್ತಮ ಪ್ರತಿಕ್ರಿಯೆನ್ನು ಕಂಡಿದೆ.

ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.

ಫೈನಲಿ ಜನ ಕಾತುರದಿಂದ ಕಾಯುತ್ತಿರುವ ಸಪ್ತ ಸಾಗರದಾಚೆ ಸಿನೆಮಾದ ಪಾರ್ಟ್ ಬಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ಬಿಡುಗಡೆಗೆ ಸಿದ್ದವಾಗಿದೆ.

 

Continue Reading

LATEST NEWS

Trending