Connect with us

    LATEST NEWS

    ಮೂಡಬಿದ್ರೆಯಲ್ಲಿ ಪಾಳು ಬಿದ್ದ ಕಟ್ಟಡದಲ್ಲಿ ಯುವಕ ಆತ್ಮಹತ್ಯೆ..!

    Published

    on

    ಮೂಡಬಿದ್ರೆಯಲ್ಲಿ ಪಾಳು ಬಿದ್ದ ಕಟ್ಟಡದಲ್ಲಿ ಯುವಕ ಆತ್ಮಹತ್ಯೆ..!

    ಮೂಡುಬಿದಿರೆ : ಯುವಕನೋರ್ವ ಡಿ.07 ರ ಸಂಜೆ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22) ಆತ್ಮಹತ್ಯೆ ಮಾಡಿಕೊಂಡ ಯುವಕ.                   ಈತ ಶಿರ್ತಾಡಿ ಪೇಟೆಯ ಔಷಧ ಮಳಿಗೆಯ ಉದ್ಯೋಗಿಯಾಗಿದ್ದು, ಕೆಲಸ ಮುಗಿದ ಬಳಿಕ ಸಂಜೆ ನಾಲ್ಕು ಗಂಟೆಗೆ ಮನೆಗೆ ಬಂದಿದ್ದ.

    ಬಳಿಕ ಮನೆ ಪರಿಸರದಲ್ಲಿ ಸುತ್ತಾಡಿ ಬರುವೆನೆಂದು  ಹೇಳಿ ಹೋಗಿದ್ದ. ರಾತ್ರಿ ವೇಳೆಗೆ ಸಂದೀಪ್ ಮನೆಗೆ ಮನೆಗೆ ಬಾರದಿರುವುದನ್ನು ಕಂಡು, ಮನೆಯವರು ಮನೆ ಸಮೀಪ ಹುಡುಕಾಡಿದಾಗ ಪಾಳು ಬಿದ್ದ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LATEST NEWS

    ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

    Published

    on

    ಮಂಗಳೂರು/ ಕೊಟ್ಟಾಯಂ : ಗೂಗಲ್ ಮ್ಯಾಪ್ ನಿಂದ ಜನರಿಗೆ ಬಹಳಷ್ಟು ಉಪಯೋಗ ಆಗುತ್ತದೆ. ಜನರು ಗೂಗಲ್ ಆ್ಯಪ್ ನಂಬಿ ಪ್ರಯಾಣ ಬೆಳೆಸುವುದಿದೆ. ಆದರೆ, ಇದರಿಂದ ಎಡವಟ್ಟು ಕೂಡಾ ಆಗಿದ್ದಿದೆ. ಗೂಗಲ್ ಮ್ಯಾಪ್ ನಂಬಿ ಪ್ರಾ*ಣಕ್ಕೆ ಕು*ತ್ತು ಬಂದ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.


    ಹೈದರಾಬಾದ್‌ನ ಪ್ರವಾಸಿಗರ ತಂಡವೊಂದು ಕೇರಳಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ಹೊರಟಿತ್ತು. ಶುಕ್ರವಾರ ತಡರಾತ್ರಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಅಲಪ್ಪುಳ ಕಡೆಗೆ ಹೋಗುತ್ತಿದ್ದರು. ಇವರು ಗೂಗಲ್ ಮ್ಯಾಪ್ ನಂಬಿದ್ದರು. ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿ ಸೀದಾ ಕಾರನ್ನು ಹಳ್ಳದೊಳಗೆ ಇಳಿಸಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನೆರವಿಗೆ ಧಾವಿಸಿದ್ದು, ನಾಲ್ವರು ಪ್ರಾಣಾ*ಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

    ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯು ಭಾರಿ ಮಳೆಯಿಂದಾಗಿ ಹೊಳೆಯಿಂದ ತುಂಬಿ ಹರಿದು ನೀರಿನಿಂದ ಆವೃತವಾಗಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ನಂಬಿ ಡ್ರೈವಿಂಗ್ ಮಾಡಿದ್ದಾರೆ. ಪರಿಣಾಮ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದೆ.

    ಮುಳುಗುತ್ತಿದ್ದ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಕೇರಳದಲ್ಲಿ ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ವೈದ್ಯರು ಗೂಗಲ್ ಮ್ಯಾಪ್ ನಂಬಿ ಪ್ರಯಾಣ ಮಾಡಿದ ಪರಿಣಾಮ ಕಾರು ಸಮೇತ ನದಿಗೆ ಬಿದ್ದು ಪ್ರಾ*ಣ ಕಳೆದುಕೊಂಡಿದ್ದರು.

    Continue Reading

    FILM

    ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

    Published

    on

    ಬೆಂಗಳೂರು : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣ ಇಡೀ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಮಾಪಕನಾಗಿ ಭಾರಿ ಯಶಸ್ಸನ್ನು ಬಾಚಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಯಾಕೆ ಸೌಂದರ್ಯ ಜಗದೀಶ್ ಇಂತಹ ನಿರ್ಧಾರ ಕೈಗೊಂಡ್ರು ಅನ್ನೋ ಪ್ರಶ್ನೆಯೊಂದು ಹುಟ್ಟುಕೊಂಡಿತ್ತು. ಇದೀಗ ಡೆ*ತ್ ನೋಟ್ ಸಿಕ್ಕಿರುವ ಬಗ್ಗೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ತಿಳಿಸಿದ್ದಾರೆ. ಈ ಡೆ*ತ್ ನೋಟ್ ಮೂಲಕ ಕೆಲವೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.


    ತಮ್ಮ ಪತಿಯ ನಿಧ*ನಕ್ಕೆ ಅವರ ಬಿಸ್ ನೆಸ್ ಪಾರ್ಟ್ನರ್ ಗಳಾಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ಕಾರಣ ಎಂದು ರೇಖಾ ಆರೋಪಿಸಿದ್ದಾರೆ.
    ಸೌಂದರ್ಯ ಜಗದೀಶ್ ಇಹಲೋಕ ತ್ಯಜಿಸಿದ ಕಾರಣ ಸೌಂದರ್ಯ ಜಗದೀಶ್ ಅವರಿಗೆ ಆದ ನಷ್ಟ ಹಾಗೂ ಮೋಸ ಎಂಬುದಾಗಿ ರೇಖಾ ಹೇಳಿದ್ದಾರೆ.

    ಡೆ*ತ್ ನೋಟ್ ನಲ್ಲಿ ಏನಿತ್ತು? ರೇಖಾ ಆಪಾದನೆ ಏನು?

    ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯಲು ವಾರ್ಡ್ ರೋಬ್ ತೆಗೆದಾಗ ಡೆ*ತ್ ನೋಟ್ ಸಿಕ್ಕಿದೆ ಎಂದಿದ್ದಾರೆ.

    ಸುರೇಶ್‌ ಹಾಗೂ ಹೊಂಬಣ್ಣ ಮತ್ತು ಸೌಂದರ್ಯ ಜಗದೀಶ್ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕಂಪನಿಯು ಲಾಭದಲ್ಲಿದ್ದರೂ ನಷ್ಟದಲ್ಲಿದೆ ಎಂದು ಸುಳ್ಳು ಹೇಳಿ ತಮ್ಮ ಪತಿ ಜಗದೀಶ್‌ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಇಷ್ಟೇ ಅಲ್ಲದೇ, ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
    ತಮಗೆ ತುಂಬ ಕಾಟ, ಕಿರುಕುಳ ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು ಎಂದಿದ್ದಾರೆ.

    ನಮಗೂ ಬೆದರಿಕೆ ಇದೆ ಎಂದ ರೇಖಾ

    ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ ಎಂದಿರುವ ಅವರು, ಹುಲಿ ರೀತಿ ಇದ್ದ ಅವರನ್ನೇ ಕೊನೆ ಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು. ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ನನಗೆ ಆ ಭಯ ಇದೆ.
    ಪತಿ ಸೌಂದರ್ಯ ಜಗದೀಶ್‌ ಆತ್ಮಹ*ತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್‌ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್‌ ಮಾಡಿದ್ದರು. ಅವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆ*ತ್‌ನೋಟ್‌ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್‌ ಪತ್ನಿ ರೇಖಾ ಆರೋಪಿಸಿದ್ದಾರೆ.

    ಇದನ್ನೂ ಓದಿ : ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್‌ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್

    ಸದ್ಯಕ್ಕೆ ರೇಖಾ ಜಗದೀಶ್ ಅವರು ನೀಡಿದ ಡೆ*ತ್ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪಾರ್ಟ್ನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಮೇಲೆ ಎಫ್ ಐ ಆರ್ ದಾಖಲಾಗಿದೆ.

    ಏ.14ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಸೌಂದರ್ಯ ಜಗದೀಶ್ ಜೀವಾಂತ್ಯಗೊಳಿಸಿದ್ದರು. ಇದರಿಂದ ಇಡೀ ಚಿತ್ರರಂಗ ಶಾಕ್ ಗೆ ಒಳಗಾಗಿತ್ತು. ಇದಾದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅವರ ಇಚ್ಛೆಯಂತೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಅಂತ್ಯಕ್ರಿ*ಯೆ ನೆರವೇರಿಸಲಾಗಿತ್ತು.

    Continue Reading

    DAKSHINA KANNADA

    ಗುಂಡಿಗೆ ಬಿದ್ದು ಅಟೋ ಚಾಲಕ ಸಾವು..! MCC ಅಧಿಕಾರಿಗಳ ಮೇಲೆ FIR..!

    Published

    on

    ಮಂಗಳೂರು:  ಶುಕ್ರವಾರ ತಡರಾತ್ರಿಯಲ್ಲಿ ಅಟೋ ರಿಕ್ಷಾವೊಂದು ಕೊಟ್ಟಾರ ಬಳಿಯಲ್ಲಿನ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಚಾಲಕ ಮೃ*ತ ಪಟ್ಟ ಘಟನೆ ನಡೆದಿದೆ.

    ಅಟೋ ರಿಕ್ಷ ಚಾಲಕ ದೀಪಕ್ ಆಚಾರ್ಯ ಎಂಬವರು ಅಟೋ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು. ರಾತ್ರಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಅಟೋ ಚಾಲಕ ರಸ್ತೆಯಲ್ಲಿದ್ದ ಗುಂಡಿಯನ್ನು ಗಮನಿದೆ ಅಟೋ ಸಹಿತ ಗುಂಡಿಗೆ ಬಿದ್ದಿದ್ದರು. ಕೊಟ್ಟಾರದ ಯಮುನಾ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ ಬಳಿ ಈ ದುರ್ಘಟನೆ ನಡೆದಿದ್ದು ಚಾಲಕ ದೀಪಕ್ ಆಚಾರ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    Read More; ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

    ಈ ಬಗ್ಗೆ ಹೇಮಲತಾ ಎಂಬವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ದೀಪಕ್ ಆಚಾರ್ಯ ಅವರ ಸಾವಿಗೆ ಕಾರಣ ಎಂದು ದೂರಿದ್ದಾರೆ. ರಸ್ತೆಯಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದೇ ಇದ್ದ ಕಾರಣ ಮಳೆಯಲ್ಲಿ ಈ ಅಪಘಾತವಾಗಿದ್ದು , ಜೀವ ಹಾನಿಗೆ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

    Continue Reading

    LATEST NEWS

    Trending