Connect with us

    LATEST NEWS

    ಸಹಕಾರ ಸಚಿವರ ಮಗನಿಗೆ ಬ್ಲಾಕ್‌ಮೇಲ್‌ ಪ್ರಕರಣ: ಕರಾವಳಿ ಮೂಲದ ಜ್ಯೋತಿಷಿ ಮಗ ವಶಕ್ಕೆ

    Published

    on

    ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಚಿವ ಸೋಮಶೇಖರ್ ಅವರ ಪುತ್ರ ನಿಶಾಂತ್ ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರನ್ನಾಧರಿಸಿ ಸಿಸಿಬಿ ಹಾಗೂ ಸೈಬರ್ ಪೊಲೀಸರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.


    ಇತರೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಭಟ್ ಬಂಧಿತ ಅರೋಪಿಯಾಗಿದ್ದು, ಸಚಿವ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್‌ನನ್ನು ಗೋವಾದಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಉತ್ತರ ಕರ್ನಾಟಕ ಮೂಲದ ಶಾಸಕಿಯೊಬ್ಬರ ಪುತ್ರಿಯೂ ಶಾಮೀಲಾಗಿರುವ ಮಾತು ಕೇಳಿ ಬರುತ್ತಿದೆ.


    ಬಂಧಿತ ಜ್ಯೋತಿಷಿಯಬ್ಬರ ಪುತ್ರ ರಾಹುಲ್ ಭಟ್ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಸೋಮಶೇಖರ್ ಅವರ ಆಪ್ತ ಸಹಾಯಕರ ಮೊಬೈಲ್ ಸಂಖ್ಯೆಗೆ ವಿದೇಶಿ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಸಂದೇಶ ರವಾನಿಸಲಾಗಿತ್ತು.

    ನಿಮ್ಮ ಪುತ್ರನ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡುತ್ತೇವೆ. ಇದನ್ನು ತಡೆಯಲು ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

    International news

    14 ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿದಾಯ !

    Published

    on

    ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಒಲಿಂಪಿಯನ್ ‘ಎಮ್ಮಾ ಮೆಕ್ ಕೀನ್’ ಸೋಮವಾರ ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ವಿದಾಯ ಘೋಷಿಸಿದ್ದಾರೆ.

    ಮೆಕ್ ಕಿಯಾನ್ ಮೂರು ಬೇಸಿಗೆ ಒಲಿಂಪಿಕ್ಸ್ ಗಳಲ್ಲಿ 14 ಒಲಿಂಪಿಕ್ ಪದಕಗಳ ಗೆದ್ದ ದಾಖಲೆಯನ್ನು ಹೊಂದಿದ್ದಾರೆ.

    ಇದನ್ನೂ ಓದಿ:ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
    ಇವರ ಪದಕಗಳ ಪಟ್ಟಿಯಲ್ಲಿ ಆರು ಚಿನ್ನದ ಪದಕಗಳು, ಮೂರು ಬೇಸಿಗೆ ಒಲಿಂಪಿಕ್ ಗಳಲ್ಲಿ ಪದಕ ಬಂದಿದೆ. ಇನ್ನೂ ಟೋಕಿಯೊ ಒಲಿಂಪಿಕ್ 2020ರಲ್ಲಿ, ಎಮ್ಮಾ ಏಳು ಪದಕ ಗೆಲ್ಲುವುದರೊಂದಿಗೆ ಒಂದೇ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

    Continue Reading

    LATEST NEWS

    ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್​ನ್ಯೂಸ್..!

    Published

    on

    ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಮಾಧಾನಕರ ಸುದ್ದಿ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಿದೆ. ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.

    ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

    ಬಿಪಿಎಲ್ ಕಾರ್ಡ್​ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.

    Continue Reading

    LATEST NEWS

    ಸುಳ್ಯ: ಅಂಗಡಿ ಮತ್ತು ಹೋಟೆಲ್‌ನ ಬೀಗ ಮುರಿದು ಕಳ್ಳತನ- ನಗದು ಹಣ ಕಳವು

    Published

    on

    ಸುಳ್ಯ: ಅಂಗಡಿ ಮತ್ತು ಹೋಟೆಲ್ ಗೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಣ ಕಳವುಗೈದ ಘಟನೆ ಕನಕಮಜಲು ಗ್ರಾಮದ ಕೋಡಿಯಲ್ಲಿ ನ.25ರಂದು ರಾತ್ರಿ ವರದಿಯಾಗಿದೆ.

    ಕೋಡಿಯಲ್ಲಿರುವ ಜಗನ್ನಾಥ ಅವರ ಅಂಗಡಿ ಹಾಗೂ ಅದರ ಹಿಂಬದಿಯಲ್ಲಿರುವ ಮೋಹನ ಅವರ ಮಾಲಕತ್ವದ ಶ್ರೀರಾಮ್ ಹೋಟೆಲಿಗೆ ಕಳ್ಳರು ನುಗ್ಗಿದ್ದು ಹಣ ಕಳವುಗೈದಿರುವುದಾಗಿ ತಿಳಿದುಬಂದಿದೆ .

    ಬೆಳಿಗ್ಗೆ ಹೋಟೆಲ್ ಮಾಲಕ ಮೋಹನ ಹಾಗೂ ಜಗನ್ನಾಥ ಅವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.ಕನಕಮಜಲ್ಲಿ ಕಳೆದ ಕೆಲವು ತಿಂಗಳಿನಿಂದ ಕಳ್ಳತ ಹಾವಳಿ ಜಾಸ್ತಿಯಾಗಿದ್ದು ಅವರನ್ನು ಮಟ್ಟ ಹಾಕಲು ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯ ಜನರು ದೂರಿದ್ದಾರೆ.

    Continue Reading

    LATEST NEWS

    Trending