Connect with us

    DAKSHINA KANNADA

    ವಿಧಾನ ಪರಿಷತ್ ಉಪಚುನಾವಣೆ : ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

    Published

    on

    ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದು, ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವಿನ ನಗೆ ಬೀರಿದ್ದಾರೆ. 1600 ಮತಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

    ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ  ಅ. 21 ರಂದು ಚುನಾವಣೆ ನಡೆದಿತ್ತು.

    ಬೆಳಗ್ಗೆ 8 ಗಂಟೆಯಿಂದಲೇ ಮಂಗಳೂರಿನ ಸಂತ ಅಲೋಷಿಯಸ್ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಆರಂಭಗೊಂಡಿತ್ತು. ಬಿಜೆಪಿ– 3654, ಕಾಂಗ್ರೆಸ್– 1957 ಮತ್ತು ಎಸ್ಡಿಪಿಐ-195 ಮತಗಳನ್ನು ಪಡೆದಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುರತ್ಕಲ್ : ಸಮುದ್ರಪಾಲಾಗಿದ್ದ ಯುವಕನ ಶ*ವ ಪತ್ತೆ

    Published

    on

    ಸುರತ್ಕಲ್ : ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದ ಯುವಕನ ಶವ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ, 21 ವರ್ಷದ ಪ್ರಜ್ವಲ್ ಮೃ*ತ ಯುವಕ.

    ನಿನ್ನೆ ಸುರತ್ಕಲ್‌ ಸಮೀಪದ ಮುಕ್ಕ ರೆಡ್‌ ರಾಕ್‌ ಬಳಿಯ ಕಡಲ ಕಿನಾರೆಗೆ 8 ಜನ ಸ್ನೇಹಿತರು ವಿಹಾರಕ್ಕೆ ಬಂದಿದ್ದರು. ಸಮುದ್ರ ಕಿನಾರೆಯಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ವೇಳೆ ಜೋರಾಗಿ ಅಪ್ಪಳಿಸಿದ ಅಲೆಯಲ್ಲಿ ಪ್ರಜ್ವಲ್ ಕೊಚ್ಚಿಕೊಂಡು ಹೋಗಿದ್ದ. ಅಲೆಗಳ ಹೊಡೆತದಿಂದ ತಪ್ಪಿಸಿಕೊಂಡ ಇತರ ಯುವಕರು ತಮ್ಮ ಜೀ*ವ ಉಳಿಸಿಕೊಂಡಿದ್ದರು.

    ಇದನ್ನೂ ಓದಿ : ಬಿಗ್ ಬಾಸ್ ಮನೆಯ ರಾಜಕೀಯ ವಿಚಾರಿಸಲು ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

    ಈ ಬಗ್ಗೆ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಯುವಕನ ಶ*ವ ಪತ್ತೆಯಾಗಿದೆ.

    Continue Reading

    DAKSHINA KANNADA

    ಶಾಲಾ ಮಕ್ಕಳಿದ್ದ ರಿಕ್ಷಾಗೆ ಪಿಕಪ್ ವಾಹನ ಡಿ*ಕ್ಕಿ: ವಿದ್ಯಾರ್ಥಿನಿ ಸಾ*ವು

    Published

    on

    ಮಂಗಳೂರು: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ರಿಕ್ಷಾ ಮತ್ತು ಪಿಕಪ್ ನಡುವೆ ಅ*ಪಘಾತ ಸಂಭವಿಸಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾ*ವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಇಂದು(ಅ.24) ನಡೆದಿದೆ.


    ಬಡಕಬೈಲು ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ, 9 ವರ್ಷದ ಆಯಿಷಾ ವಹಿಬಾ ಮೃ*ತ ವಿದ್ಯಾರ್ಥಿನಿ.

    ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪಿಕಪ್ ವಾಹನ ಡಿ*ಕ್ಕಿ ಹೊಡೆದಿದೆ.

    ಪರಿಣಾಮ ಆಯಿಷಾ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃ*ತಪಟ್ಟಿದ್ದಾಳೆ. ರಿಕ್ಷಾದಲ್ಲಿದ್ದ ಇತರೆ ನಾಲ್ವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾ*ಯಗೊಂಡಿದ್ದಾರೆ. ರಿಕ್ಷಾ ಚಾಲಕನಿಗೂ ಗಾ*ಯವಾಗಿದೆ.

    ಗಾ*ಯಾಳುಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಅಪಘಾತದಲ್ಲಿ ಮೃ*ತಪಟ್ಟ ಹಿನ್ನೆಲೆಯಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಸಾರಲಾಗಿದೆ.

    Continue Reading

    DAKSHINA KANNADA

    ಮಂಗಳೂರು – ನಿರೀಕ್ಷಣ ಮಂದಿರ ಆವರಣದಿಂದ ಅಕ್ರಮ ಮರ ಸಾಗಾಟ: ಪ್ರಕರಣ ದಾಖಲು

    Published

    on

    ಮಂಗಳೂರು: ಮಲ್ಲಿಕಟ್ಟೆ ಲೋಕೋಪಯೋಗಿ ನಿರೀಕ್ಷಣ ಮಂದಿರ ಆವರಣದ ಬೆಲೆಬಾಳುವ ಸಾಗುವಾನಿ, ದೇವದಾರು ಮರಗಳನ್ನು ಕಡಿದು ಸಾಗಿಸಿರುವ ಕುರಿತು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ(ಎನ್‌ಇಸಿಎಫ್‌) ನೀಡಿದ ದೂರಿನಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

    ನಿರೀಕ್ಷಣ ಮಂದಿರಕ್ಕೆ ಅಪಾಯವಿದೆ ಎಂದು ಹೇಳಿ ಲೋಕೋಪಯೋಗಿ ಇಲಾಖೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ 3 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರ ಕಡಿಯಲು ಅನುಮತಿ ನೀಡಲಾಗಿತ್ತು. ಆದರೆ ಇಲಾಖೆಯ ಅನುಮತಿ ಇಲ್ಲದೆ ದೇವದಾರು ಮರವನ್ನು ಸ್ಥಳದಿಂದ ಸಾಗಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮರ ಕಡಿಯಲು ಗುತ್ತಿಗೆ ಪಡೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್‌ ಲೋಬೋ ತಿಳಿಸಿದ್ದಾರೆ.

    ಮರ ಕಡಿಯುತ್ತಿರುವುದು ಎನ್‌ಇಸಿಎಫ್‌ ಸದಸ್ಯರೊಬ್ಬರ ಗಮನಕ್ಕೆ ಬಂದಿದ್ದು, ಮಂಗಳವಾರ ವಾಹನದಲ್ಲಿ ಮರ ಸಾಗಾಟ ಮಾಡುವ ವೇಳೆ ಅರಣ್ಯ ಸಂಚಾರ ದಳಕ್ಕೆ ಮಾಹಿತಿ ನೀಡಿದ್ದಾರೆ. ಮರ ಸಾಗಾಟದ ವಾಹನ ಹೊಯ್ಗೆ ಬಜಾರ್‌ನ ಇಲಾಖಾ ನಾಟ ಸಂಗ್ರಹಾಲಯದಲ್ಲಿರುವುದು ಪತ್ತೆಯಾಗಿದೆ. ವಾಹನವನ್ನು ಪರಿಶೀಲಿ ಸಿದಾಗ ಅದರಲ್ಲಿ ದೇವದಾರು ಜಾತಿಯ ಮರದ ಕಟ್ಟಿಗೆ ಇರುವುದು ಕಂಡು ಬಂದಿದೆ. ಚಾಲಕನಲ್ಲಿ ವಿಚಾರಿಸಿದಾಗ ಮರ ಸಾಗಾಟಕ್ಕೆ ಪರವಾನಿಗೆ ಇಲ್ಲ ಎಂದು ತಿಳಿಸಿದ್ದಾನೆ.

    ಬುಧವಾರ(ಅ.23) ಬೆಳಗ್ಗೆ ಅರಣ್ಯ ಸಂಚಾರಿ ದಳ ಅಧಿಕಾರಿಗಳು ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣ ಮಂದಿರಕ್ಕೆ ಭೇಟಿ ನೀಡಿದಾಗ 4 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರಗಳನ್ನು ಕಡಿದಿರುವುದು ಕಂಡು ಬಂದಿದೆ. ವಿವಿಧ ಅಳತೆಯ 24 ಸಾಗುವಾನಿ ದಿಮ್ಮಿಗಳನ್ನು ದಾಸ್ತಾನು ಇರಿಸಿರುವುದು ಕಂಡು ಬಂದಿದೆ.

    Continue Reading

    LATEST NEWS

    Trending