Connect with us

LATEST NEWS

ರಸ್ತೆ ಅಪಘಾತಕ್ಕೆ ಬಲಿಯಾದ ಬಿಜೆಪಿ ಮುಖಂಡ ಗೋಪ ಪೂಜಾರಿ

Published

on

ಸ್ಕೂಟಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಸಿಬಂದಿ, ಬಿಜೆಪಿ ಮುಖಂಡ 68 ವರ್ಷ ಪ್ರಾಯದ ಗೋಪ ಪೂಜಾರಿ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ- ಮಂಗಳೂರು ರಸ್ತೆಯ ಕಟಪಾಡಿ ಮೂಡುಬೆಟ್ಟು ಬಳಿ ನಡೆದಿದೆ.

 

ಉಡುಪಿ :ಸ್ಕೂಟಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಸಿಬಂದಿ, ಬಿಜೆಪಿ ಮುಖಂಡ 68 ವರ್ಷ ಪ್ರಾಯದ ಗೋಪ ಪೂಜಾರಿ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ- ಮಂಗಳೂರು ರಸ್ತೆಯ ಕಟಪಾಡಿ ಮೂಡುಬೆಟ್ಟು ಬಳಿ ನಡೆದಿದೆ.

ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಗೋಪ ಪೂಜಾರಿ ಅವರು ಅಕ್ಟೋಬರ್‌ 26ರಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ- ಮಂಗಳೂರು ರಸ್ತೆಯಲ್ಲಿ ಸ್ಕೂಟಿ ಚಲಾಯಿಸಿಕೊಂಡು ಕಾಪು ಕಡೆಗೆ ಸಂಚರಿಸುತ್ತಿದ್ದಾಗ ಕಟಪಾಡಿ ಮೂಡುಬೆಟ್ಟು ಬಳಿ ಅವರ ಸ್ಕೂಟಿಗೆ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒದಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.  ಐಸಿಯು ವಿಭಾಗದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಅವರು ನವೆಂಬರ್‌ 13ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾಗಿದ್ದ ಕಾರನ್ನು ಪೊಲೀಸರು ಬ್ರಹ್ಮಾವರದಲ್ಲಿ ಪತ್ತೆ ಹಚ್ಚಿ ಕಾರು ಮತ್ತು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Click to comment

Leave a Reply

Your email address will not be published. Required fields are marked *

FILM

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ಬಾಸ್​​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಯಿಂದ ಆಚೆ ಬಂದ ಬಳಿಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಸದ್ಯ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಸಂಗೀತಾ ಶೃಂಗೇರಿ ಅವರ ಕುಟುಂಬ್ಥರು ಸಖತ್​ ಬ್ಯುಟಿಫುಲ್​ ಆಗಿರೋ ಸ್ಥಳದಲ್ಲಿ ಕೇಕ್​ ಕಟ್​ ಮಾಡಿಸಿದ್ದಾರೆ. ಇನ್ನು, ಚಾರ್ಲಿ ನಟಿಯ ಹುಟ್ಟು ಹಬ್ಬಕ್ಕೆ ಈ ಬಾರಿಯ ಬಿಗ್​ಬಾಸ್​ ಸ್ಫರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ ಭಾಗಿಯಾಗಿದ್ದರು. ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರ್ತ್​ಡೇ ಸೆಲೆಬ್ರೇಷನ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ಫೋಟೋದಲ್ಲಿ ನಟಿ ನೀಲಿ ಬಣ್ಣ ಡೇಸ್​ನಲ್ಲಿ ಸಖತ್​ ಕ್ಯೂಟ್​ ಆಗಿ ಮಿಂಚಿದ್ದಾರೆ.

ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಶೇರ್​ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕಮೆಂಟ್​ ಮಾಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಶೇರ್​ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Continue Reading

LATEST NEWS

ನಡುರಸ್ತೆಯಲ್ಲೇ ಬ್ಲಾಸ್ಟ್ ಆದ ರಾಯಲ್ ಎನ್‌ಫೀಲ್ಡ್‌.! ಪೊಲೀಸ್ ಸೇರಿ 10 ಮಂದಿ ಗಂಭೀರ

Published

on

ಹೈದರಾಬಾದ್/ಮಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್‌ ರಸ್ತೆಯಲ್ಲೇ ಹೊತ್ತಿ ಉರಿದು ಬ್ಲಾಸ್ಟ್‌ ಆಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್‌ಗೆ ಬೆಂಕಿ ತಗುಲಿದ್ದು ಅದನ್ನು ಆರಿಸಲು ಜನರು ಮುಂದಾದ ಜನರು ಗಂಭೀರ ಗಾಯಗೊಂಡಿದ್ದಾರೆ.

royal enfield

ಬೈಕ್‌ಗೆ ತಗುಲಿದ್ದ ಬೆಂಕಿಯನ್ನು ಅಲ್ಲಿ ನೆರೆದಿದ್ದ ಜನರು ಆರಿಸುವಲ್ಲಿ ತೊಡಗಿದ್ದರು. ನೀರು, ಮರಳು ಹಾಕಿ ಬೆಂಕಿ ಆರಿಸಲು ಕಸರತ್ತು ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿ ಬ್ಲಾಸ್ಟ್ ಆಗಿದೆ. ಇದರಿಂದ ಪಕ್ಕದಲ್ಲಿದ್ದ ಬೇರೆ ಗಾಡಿಗಳಿಗೂ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ. ಘಟನೆಯಿಂದ ಅಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಒತ್ರೆಗೆ ದಾಖಲಿಸಲಾಗಿದೆ.

Continue Reading

DAKSHINA KANNADA

ಇಂತಹ ವಿಷಕಾರಿ ಗಿಡಗಳನ್ನು ಯಾವತ್ತೂ ನೀವು ಮನೆಯಲ್ಲಿ ಇಡಬೇಡಿ!!

Published

on

ಮಂಗಳೂರು: ನಮ್ಮ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಅರಳುವ ಹೂವುಗಳು ಮತ್ತು ನಮ್ಮ ಮುಖದಲ್ಲಿ ನಗು ತರುವ ಸಾಕು ಪ್ರಾಣಿಗಳನ್ನು ನಾವು ಪ್ರೀತಿಸುತ್ತೇವೆ. ಆದ್ಧರಿಂದ ಅವರಿಬ್ಬರನ್ನೂ ಉಳಿಸಲು ಮತ್ತು ಸಂತೋಷದ ಶಕ್ತಿಯನ್ನು ಕಾಪಾಡಿಕೊಳ್ಳಲು ಇಲ್ಲಿ ನಾವು ನಿಮ್ಮ ಸಾಕು ಪ್ರಾಣಿಗಳಿಗೆ ಹಾನಿಕಾರಕವಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಈ ಸಸ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅದು ವಿಷಕಾರಿ ಗಿಡ. ಅಂತಹ ಸಸ್ಯಗಳನ್ನು ಯಾವತ್ತೂ ನಿಮ್ಮ ಮನೆಯಲ್ಲಿ ಇಡಬೇಡಿ.

ಲೋಳೆ ಸರ

ಅಲೋವೆರಾ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅದು ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ. ಸಸ್ಯವನ್ನು ಸೇವಿಸಿದರೆ ಸಾಕುಪ್ರಾಣಿಗಳಿಗೆ ತುಂಬಾ ವಿಷಕಾರಿಯಾಗಬಹುದು ಮತ್ತು ವಾಂತಿ, ಅತಿಸಾರ ಮತ್ತು ನಡುಕವನ್ನು ಉಂಟುಮಾಡಬಹುದು.

ಪೊಥೋಸ್

ಪೋಥೋಸ್ ಜನಪ್ರಿಯ ಒಳಾಂಗಣ ಸಸ್ಯವಾಗಿದ್ದು ಅದು ಗಾಳಿಯನ್ನು ಶುದ್ದೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅವುಗಳನ್ನು ಇಟ್ಟುಕೊಳ್ಳುವುದರ ಸಮಸ್ಯೆಯೆಂದರೆ ಎಲೆಗಳು ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಹೊಂದಿರುತ್ತವೆ. ಇದು ಸಾಕು ಪ್ರಾಣಿಗಳ ಬಾಯಿ ಮತ್ತು ಜೀರ್ಣಾಂಗವನ್ನು ಕೆರಳಿಸಬಹುದು.

ಹಾವಿನ ಗಿಡ

ನಮ್ಮ ಸುತ್ತಲಿನ ಗಾಳಿಯನ್ನು ಶುದ್ದೀಕರಿಸಲು ಸಹಾಯ ಮಾಡುವ ಮತ್ತು ಬೆಳೆಯಲು ತುಂಬಾ ಸುಲಭವಾದ ಮತ್ತೊಂದು ಉತ್ತಮ ಸಸ್ಯವೆಂದರೆ ಸ್ನೇಕ್ ಸಸ್ಯ. ಆದರೆ ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ಜಾಗರೂಕರಾಗಿರಿ. ಹಾವಿನ ಸಸ್ಯಗಳು ಸಪೋನಿನ್‌ಗಳನ್ನು ಹೊಂದಿರುತ್ತವೆ. ಇದು ಸಾಕುಪ್ರಾಣಿಗಳಲ್ಲಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.

ZZ ಸಸ್ಯ

ZZ ಸಸ್ಯಗಳು ತುಂಬಾ ಕಡಿಮೆ ನಿರ್ವಹಣೆಯನ್ನು ಹೊಂದಿವೆ ಮತ್ತು ಯಾರು ಬೇಕಾದರೂ ಬೆಳೆಸಬಹುದು. ಆದರೆ, ZZ ಸಸ್ಯದ ರಸವು ವಿಷಕಾರಿ ಪದಾರ್ಥಗಳು ಮತ್ತು ಉದ್ರೇಕಕಾರಿಗಳನ್ನು ಹೊಂದಿರುತ್ತದೆ. ಅದು ಮನುಷ್ಯರು ಅಥವಾ ಪ್ರಾಣಿಗಳು ಸೇವಿಸಿದರೆ, ಸುಟ್ಟಗಾಯಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂಕ ಕಬ್ಬಿನ ಗಿಡ

ಡೈಫೆನ್‌ ಬಾಚಿಯಾ ಅಥವಾ ಮೂಕ ಕಬ್ಬನ್ನು ಉಲ್ಲೇಖಿಸಿದಂತೆ, ವಿಶೇಷವಾಗಿ ಸಾಕುಪ್ರಾಣಿಗಳಿಗೆ ಹೆಚ್ಚು ವಿಷಕಾರಿ ಸಸ್ಯವಾಗಿದೆ. ಮೂಕ ಕಬ್ಬಿನ ಎಲೆಗಳನ್ನು ಅಗಿಯುವುದು ಅಥವಾ ರುಚಿ ನೋಡುವುದು ಕಿರಿಕಿರಿ, ವಾಂತಿ ಮತ್ತು ನುಂಗಲು ತೊಂದರೆ ಉಂಟುಮಾಡಬಹುದು. ಇದನ್ನು ಪಶುವೈದ್ಯರು ಮಾತ್ರ ಚಿಕಿತ್ಸೆ ಮಾಡಬಹುದು.

ರಬ್ಬರ್ ಸಸ್ಯ

ರಬ್ಬರ್ ಸಸ್ಯಗಳು ಒಳಾಂಗಣದಲ್ಲಿ ಇರಿಸಿಕೊಳ್ಳಲು ಉತ್ತಮವಾದ ಮತ್ತೊಂದು ಸೆಟ್, ಆದರೆ ದುರದೃಷ್ಟವಶಾತ್ ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಹಾಗಲ್ಲ. ರಬ್ಬರ್ ಸಸ್ಯವು ಫಿಸಿನ್ ಮತ್ತು ರಬ್ಬರ್ ಟ್ರೀ ಲ್ಯಾಟೆಕ್ಸ್ ಎಂದು ಕರೆಯಲ್ಪಡುವ ವಿಷವನ್ನು ಹೊಂದಿರುತ್ತದೆ. ಇದು ಎಲೆಗಳನ್ನು ಅಗಿಯಲು ಅಥವಾ ನುಂಗಲು ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಿದೆ.

ಲಿಲ್ಲಿಗಳು

ಲಿಲ್ಲಿಗಳು ಸುಂದರವಾಗಿದ್ದರೂ, ಬೆಕ್ಕುಗಳಿಗೆ ಹೆಚ್ಚು ವಿಷಕಾರಿ ಮತ್ತು ಸಣ್ಣ ಪ್ರಮಾಣದಲ್ಲಿ ಮೂತ್ರಪಿಂಡ ವೈಫಲ್ಯವನ್ನು ಉಂಟುಮಾಡಬಹುದು. ಸಸ್ಯದ ಎಲ್ಲಾ ಭಾಗಗಳು, ಪರಾಗ ಮತ್ತು ಹೂದಾನಿಗಳಿಂದ ನೀರು ಸೇರಿದಂತೆ, ತಿಂದರೆ ಅಥವಾ ಕುಡಿದರೆ ಹಾನಿಕಾರಕವಾಗಬಹುದು.

Continue Reading

LATEST NEWS

Trending