Connect with us

    BIG BOSS

    ಬಿಗ್‌ಬಾಸ್ ಮನೆಯ ನಾಯಕತ್ವ ಬದಲಾಯ್ತು! ಅಸಲಿ ಆಟ ಈಗ ಶುರುವಾಗುತ್ತಾ?

    Published

    on

    ಬಿಗ್​ ಬಾಸ್​ ಕನ್ನಡ ಸೀಸನ್​​ 11 ಭಾರೀ ಕುತೂಹಲದಿಂದ ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಹಂಸಾ ಮನೆಯ ಕ್ಯಾಪ್ಟನ್​ ಆಗುವ ಮೂಲಕ ಮನೆಯನ್ನು ಮುನ್ನಡೆಸಿಕೊಂಡು ಬಂದಿದ್ದರು. ಆದರೀಗ ನಾಯಕತ್ವ ಬದಲಾಗಿದೆ. ನರಕ ನಿವಾಸಿಯಾಗಿದ್ದ ಶಿಶಿರ್​ ನಾಯಕತ್ವ ವಹಿಸಿಕೊಂಡಿದ್ದಾರೆ.

    ಬಿಗ್​ ಬಾಸ್​​ ಮನೆಯಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಭಾಗಗಳಿದ್ದವು. ಆದರೀಗ ಎಲ್ಲ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸ್ವರ್ಗ ಮತ್ತು ನರಕದ ನಿವಾಸಿಯನ್ನು ಒಟ್ಟಿಗೆ ಜೀವಿಸುವಂತೆ ಮಾಡಿದ್ದಾರೆ. ಶಿಶಿರ್​ ನರಕದ ನಿವಾಸಿಯಾಗಿದ್ದು, ಇದೀಗ ಮನೆಯ ಕ್ಯಾಪ್ಟನ್​ ಆಗಿ ಬದಲಾಗಿದ್ದಾರೆ.

    ಮನೆಯ ನಾಯಕತ್ವಕ್ಕಾಗಿ ಶಿಶಿರ್​ಗೆ ಪೈಪೋಟಿಯಾಗಿ ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾದವ್​ ಸ್ಪರ್ಧೆ ನೀಡಿದ್ದರು. ಆದರೆ ಅದರಲ್ಲಿ ಶಿಶಿರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಇನ್ಮೇಲೆ ಮನೆಯ ಸ್ಪರ್ಧಿಗಳ ಆಟ ಹೇಗಿರಲಿದೆ ಎಂಬ ಕುತೂಹಲ ಎಲ್ಲರನ್ನು ಕೆರಳಿಸಿದೆ. ಅದರ ಜೊತೆಗೆ 2ನೇ ವಾರಂತ್ಯದಲ್ಲಿ ವಾರದ ಕಥೆ ಕಿಚ್ಚನ ಜೊತೆ ಹೇಗಿರಲಿದೆ? ಎಂಬ ಕುತೂಹಲವು ವೀಕ್ಷಕರಲ್ಲಿ ಹುಟ್ಟಿಕೊಂಡಿದೆ.

    BIG BOSS

    Bigg Boss ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ-ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ ಗೊತ್ತಾ..?

    Published

    on

    ಬಿಗ್​ಬಾಸ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದು ವಿಜಯ ದಶಮಿ ಸಂಭ್ರಮವಾದರೆ, ಮತ್ತೊಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್​​ ಅವರ ಮಾತುಗಳನ್ನು ಆಲಿಸಿಕೊಳ್ಳುವ ಕೌತುಕ. ಬಿಗ್​ಬಾಸ್ ಶುರುವಾಗಿ ಎರಡು ವಾರ ಕಳೆದು ಹೋಗಿದ್ದು, ಶನಿವಾರವಾದ ಇಂದು ರಾತ್ರಿ ಮತ್ತೆ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ.

    ಸ್ಪರ್ಧಿಗಳ ಕಿತ್ತಾಟ, ಬಿಗ್​​ಬಾಸ್​ ಕೊಟ್ಟ ಟಾಸ್ಕ್​, ಗೇಮ್ ಎಲ್ಲವನ್ನೂ ನೋಡಿ ಸರಿ ತಪ್ಪುಗಳ ಬಗ್ಗೆ ಮಾತಾಡಿಕೊಳ್ತಿದ್ದ ಅಭಿಮಾನಿಗಳು ಇಂದು ಸುದೀಪ್​ ಪ್ರತಿಕ್ರಿಯೆ ಹೇಗಿರುತ್ತದೆ? ಸ್ಪರ್ಧಿಗಳ ಜೊತೆ ಹೇಗೆ ಮಾತುಕತೆ ನಡೆಸ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಗ್​​ಬಾಸ್​ ಕಿಚ್ಚ ಸುದೀಪ್ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸ್ತಾರೆ ಅನ್ನೋದ್ರ ಬಗ್ಗೆ ಪ್ರೊಮೋದಲ್ಲಿ ಚಿಕ್ಕದಾಗಿ ರಿವೀಲ್ ಮಾಡಿದ್ದಾರೆ.

    25 ಸೆಕೆಂಡ್ ಇರುವ ವಿಡಿಯೋದಲ್ಲಿ ದೊಡ್ಮನೆಯ ಸ್ವರ್ಗ, ನರಕ ಒಂದಾಗಿದೆ. ರೂಲ್ಸ್​ ಬ್ರೇಕ್, ತಪ್ಪಿನ ಲೆಕ್ಕಾಚಾರಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬೇಕು ಎಂಬ ಸಂದೇಶವನ್ನು ಬಿಗ್​ಬಾಸ್ ನೀಡಿದ್ದಾರೆ. ಹೀಗಾಗಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಕುತೂಹಲ ಹೆಚ್ಚಿಸಿದೆ.

    Continue Reading

    BIG BOSS

    ಬಿಗ್ ಬಾಸ್ ಮನೆಯ ಸ್ವರ್ಗ ನರಕ ಇನ್ನಿಲ್ಲ.. ಕಾರಣ ಏನು ಗೊತ್ತಾ ?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡು ಎರಡು ವಾರ ಕಳೆದಿದೆ. ಇದೇ ಎರಡು ವಾರದಲ್ಲಿ ಬಿಗ್​ಬಾಸ್​ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.

    ಹೌದು, ಸೆಪ್ಟೆಂಬರ್ 29ರಂದು ಬಹಳ ಅದ್ಧೂರಿಯಾಗಿ ಬಿಗ್​ಬಾಸ್​ ಓಪನಿಂಗ್ ಪಡೆದುಕೊಂಡಿತ್ತು. ಆದರೆ ಇದೀಗ ಬಿಗ್​ಬಾಸ್​ ಮನೆ ಪೂರ್ತಿಯಾಗಿ ಬದಲಾಗಿ ಬಿಟ್ಟಿದೆ. ಇಷ್ಟು ದಿನ ನರಕ ಸ್ವರ್ಗ ಎಂಬ ಎರಡು ಕಾನ್ಸೆಪ್ಟ್​ಗಳನ್ನು ಒಳಗೊಂಡಿತ್ತು. ಆದರೆ ಬಿಗ್​ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿ ಬಿಟ್ಟಿದೆ.

    ನರಕದ ಮನೆಯನ್ನೇ ಬಿಗ್​ಬಾಸ್ ತಂಡ ಒಡೆದು ಹಾಕಿದೆ. ಮಹಿಳಾ‌‌ ಆಯೋಗ ಎಂಟ್ರಿ ಬೆನ್ನಲ್ಲೇ ನರಕವನ್ನು ಡೆಮಾಲಿಷ್​ ಮಾಡಲಾಗಿದೆ. ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಸಂಬಂಧ ಬಿಗ್​ಬಾಸ್​ ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಮಹಿಳಾ ಆಯೋಗವು 5 ದಿನದ ಡೆಡ್ ಲೈನ್ ಕೊಟ್ಟಿತ್ತು. ಅದರಂತೆ ಇಂದಿನ ಎಪಿಸೋಡ್​​ನಲ್ಲಿ ಬಿಗ್​ಬಾಸ್​ ತಂಡ ಬಿಗ್​ ಮನೆಗೆ ಹೋಗಿ ನರಕದ ಬೇಲಿ ತೆರವು ಮಾಡಿದ್ದಾರೆ.

    ಇನ್ನು, ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ 7 ಮಂದಿ ಬಿಗ್​ಬಾಸ್​ ನರಕಕ್ಕೆ ಸೇರಿದ್ದರು. ಉಳಿದ 10 ಮಂದಿ ಸ್ವರ್ಗಕ್ಕೆ ಸೇರಿದ್ದರು. ನರಕದಲ್ಲಿ ಇರೋ ಸ್ಪರ್ಧಿಗಳಿಗೆ ಸರಿಯಾದ ಊಟ ನೀಡುತ್ತಿರಲಿಲ್ಲ. ಜೊತೆಗೆ ಶೌಚಾಲಯದ ಸಮಸ್ಯೆ ಕೂಡ ಇದೆ ಅಂತ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಹೇಳುತ್ತಿದ್ದರು. ಈಗ ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್​ ಪಡೆದುಕೊಂಡಿದೆ. ಇಂದಿನ ಎಪಿಸೋಡ್​ನಲ್ಲಿ ಏನೆಲ್ಲಾ ಆಯ್ತು ಅಂತ ಗೊತ್ತಾಗಲಿದೆ.

    Continue Reading

    BIG BOSS

    ಕನ್ನಡ ಮರೆತ ಸ್ಪರ್ಧಿಗಳು.. ಮೌನಕ್ಕೆ ಶರಣಾದ್ರ ಬಿಗ್‌ಬಾಸ್ ?

    Published

    on

    ‘ಬಿಗ್ ಬಾಸ್’ನಲ್ಲಿ ಹಲವು ಮೂಲ ನಿಯಮಗಳು ಇವೆ. ಅದನ್ನು ಮೀರಿ ಯಾರು ನಡೆದುಕೊಳ್ಳುವಂತಿಲ್ಲ. ನಿದ್ದೆ ಮಾಡಿದರೆ ಅದು ನಿಯಮ ಬ್ರೇಕ್ ಮಾಡಿದಂತೆಯೇ. ಆಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಅದೇ ರೀತಿ ಮತ್ತೊಂದು ನಿಯಮ ಇದೆ. ಆದರೆ, ಈ ನಿಯಮವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಬಿಗ್ ಬಾಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಎಷ್ಟೇ ಇಂಗ್ಲಿಷ್ ಬಳಕೆ ಆದರೂ ಬಿಗ್ ಬಾಸ್ ಮಾತನಾಡುತ್ತಿಲ್ಲ, ಎಚ್ಚರಿಕೆಯನ್ನೂ ನೀಡುತ್ತಿಲ್ಲ. ಬಿಗ್ ಬಾಸ್ ಕಡೆಯಿಂದ ಮೌನವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಲಾಯರ್ ಜಗದೀಶ್ ಅವರು ಹೆಚ್ಚೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಅವರು 10 ಸಾಲುಗಳನ್ನು ಹೇಳಿದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದ್ದು ಇಂಗ್ಲಿಷ್ ಇರುತ್ತದೆ. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಎನಿಸುತ್ತಿದೆ. ಅವರಿಗೆ ಕನ್ನಡ ಮಾತನಾಡೋಕೆ ಬರುತ್ತದೆ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    ಕೇವಲ ಜಗದೀಶ್ ಮಾತ್ರವಲ್ಲ ಐಶ್ವರ್ಯಾ ಸೇರಿ ಮೊದಲಾದವರು ಇಂಗ್ಲಿಷ್ ಪದ ಬಳಕೆ ಮಾಡುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ ಕುಂದಾಪುರ ಸೇರಿದಂತೆ ಕೆಲವೇ ಕೆಲವರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುವ ಜಗದೀಶ್ ಅವರೇ ಇಂಗ್ಲಿಷ್​ನಲ್ಲಿ ಮಾತನಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    Continue Reading

    LATEST NEWS

    Trending