BELTHANGADY
ಬೆಳ್ತಂಗಡಿ: ಹೆಬ್ಬಾವನ್ನು ನುಂಗಿದ ಬೃಹತ್ ಕಾಳಿಂಗ ಸರ್ಪ
ಬೆಳ್ತಂಗಡಿ : ಬೃಹತ್ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲ್ಯದಲ್ಲಿ ನಡೆದಿದೆ.
ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ನುಂಗಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಉರಗ ರಕ್ಷಕ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಹೆಬ್ಬಾವನ್ನು ನುಂಗಿದ್ದ ಕಾಳಿಂಗ ಸರ್ಪ ನಂತರ ಹೆಬ್ಬಾವನ್ನು ತನ್ನ ಹೊಟ್ಟೆಯಿಂದ ಹೊರಹಾಕಿದೆ.
ಆ ಬಳಿಕ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಆದರೆ ಕಾಳಿಂಗ ಸರ್ಪದ ದಾಳಿಗೆ ತುತ್ತಾದ ಹೆಬ್ಬಾವು ಪ್ರಾಣವನ್ನು ಬಿಟ್ಟಿದ್ದು ಅರಣ್ಯ ಇಲಾಖೆಯವರು ಮಣ್ಣು ಮಾಡಿದರು.
BELTHANGADY
ಬೆಳ್ತಂಗಡಿ: ದನಗಳ ಅಕ್ರಮ ಸಾಗಾಟ ಪತ್ತೆ: ನಾಲ್ವರ ಬಂಧನ
ಬೆಳ್ತಂಗಡಿ: ತಾಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆ ಹಚ್ಚಿರುವ ಬೆಳ್ತಂಗಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಎರಡು ಪಿಕಪ್ ವಾಹನಗಳು ಹಾಗೂ ಐದು ದನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ(24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ(30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ ( 36) ಹಾಗೂ ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಲವಂತಿಗೆ ಗ್ರಾಮದ ಕಜಕೆ ಎಂಬಲ್ಲಿ ಎಳನೀರು ಕಡೆಯಿಂದ ಬರುತ್ತಿದ್ದ ಎರಡು ಪಿಕಪ್ ವಾಹನಗಳನ್ನು ತಡೆದು ಪರಿಶೀಲಿಸಿದಾಗ ಐದು ದನಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿ ಇದ್ದವರ ಬಳಿ ದನಗಳ ಸಾಗಾಟಕ್ಕೆ ಯಾವುದೇ ಪರವಾನಿಗೆಗಳು ಇಲ್ಲದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
BELTHANGADY
ಗಾಂಜಾ ಸಾಗಾಟ ಪ್ರಕರಣ: ಓರ್ವ ಆರೋಪಿ ಸೆರೆ
ಮಂಗಳೂರು ನಗರಕ್ಕೆ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಪತ್ತೆ ಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು, ಈ ಸಂಬಂಧ ಓರ್ವನನ್ನು ಬಂಧಿಸಿ ಆತನಿಂದ 1 ಲಕ್ಷ ರೂ. ಮೌಲ್ಯದ 4 ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಸಹಿತ ಒಟ್ಟು 1,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿಯ ಕುಕ್ಕೇಡಿಯ ಗೋಳಿಯಂಗಡಿ ನಿವಾಸಿ ಅಬುತಾಹಿರ್ ಯಾನೆ ಅನ್ವರ್ (25) ಬಂಧಿತ ಆರೋಪಿ. ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್‌ನಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ನರೇಂದ್ರ, ಎಎಸ್‌ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ, ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
BELTHANGADY
ಬೆಳ್ತಂಗಡಿ : ತಲೆ ಮೇಲೆ ದಾರಂದ ಬಿದ್ದು ಬಾಲಕಿ ಸಾ*ವು
ಬೆಳ್ತಂಗಡಿ: ತಲೆ ಮೇಲೆ ದಾರಂದ ಬಿದ್ದು ಬಾಲಕಿ ಸಾ*ವನ್ನಪ್ಪಿರುವ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾದ ಕೊರಲೆ ಎಂಬಲ್ಲಿ ನಡೆದಿದೆ.
ಇಲ್ಲಿನ ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿ ಪುತ್ರಿ, ಕೇರ್ಯಾ ಸರಕಾರಿ ಶಾಲೆಯ 1 ನೇ ತರಗತಿಯ ಅಲ್ಪಿಯಾ (6) ಮೃ*ತ ಬಾಲಕಿ.
ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲು ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಿಸಿದ್ದರು. ಈ ಸಂದರ್ಭದಲ್ಲಿ ಮಗು ಅದರ ಪಕ್ಕದಲ್ಲಿ ಆಟವಾಡುತ್ತಿರುವಾಗ ದಾರಂದವು ಆಯಾ ತಪ್ಪಿ ಮಗುವಿನ ತಲೆಗೆ ಬಿದ್ದು ಗಂಭೀರ ಗಾಯಗೊಂಡಿತು. ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮಗು ಸಾ*ವನ್ನಪ್ಪಿದೆ ಎನ್ನಲಾಗಿದೆ. ಕೇರ್ಯ ಮಸೀದಿಯಲ್ಲಿ ದಫನ ಅಂ*ತ್ಯ ಸಂ*ಸ್ಕಾ*ರ ನಡೆಯಿತು. ಜಮಾತ್ ಅಧ್ಯಕ್ಷರ ರಶೀದ್ ಕುಂಡಡ್ಕ ಮತ್ತು ಜಮಾತ್ ಶಿಕ್ಷಕರು ಉಪಸ್ಥಿತರಿದ್ದರು.
- BIG BOSS4 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS7 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS5 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS6 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ