Connect with us

LATEST NEWS

ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯಲ್ಲಿ ಇಂದಿನಿಂದ ಇತಿಹಾಸದಲ್ಲಿ ಕಂಡು ಕೇಳರಿಯದ ಆಫರ್‌..

Published

on

ಉಡುಪಿ: ಉಡುಪಿಯ ಜನಪ್ರಿಯ ಹಾಗೂ ಕರಾವಳಿಯ ಜವಳಿ ಪ್ರಿಯರ ಅಚ್ಚುಮೆಚ್ಚಿನ ಪ್ರಸಿದ್ದ “ಜಯಲಕ್ಷ್ಮೀ ಸಿಲ್ಕ್ಸ್, ಉದ್ಯಾವರ ಕಳೆದ ಹಲವು ವರ್ಷಗಳಿಂದ ಉತ್ತಮ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದು, ಗ್ರಾಹಕರ ನೆಚ್ಚಿನ ಶಾಪಿಂಗ್ ತಾಣವಾಗಿದೆ.

ಮಾನ್ಸೂನ್ ನಲ್ಲಿ ತನ್ನ ಗ್ರಾಹಕರಿಗಾಗಿ ಇಂದಿನಿಂದ ವಿಶೇಷ ದರ ಕಡಿತದ ಆಫರ್ ನೀಡುತ್ತಿದೆ. ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಜವುಳಿ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ, ಮದುವೆ ಸೀರೆಗಳ, ಹಾಗೂ ಎಲ್ಲಾ ವಯೋಮಾನದವರ ವಸ್ತ್ರಗಳ ಭಂಡಾರವೇ ಇದ್ದು ಗ್ರಾಹಕರು ತಮ್ಮ ಇಚ್ಚೆಯ ಬಟ್ಟೆಯನ್ನು ಖರೀದಿಸಬಹುದಾಗಿದೆ.

ಈ ಬಾರಿಯ ಮಾನ್ಸೂನ್ ಕೊಡುಗೆಯಲ್ಲಿ ಈ ಹಿಂದೆ ಎಲ್ಲೂ ಇರದ ವಿಶೇಷ ದರ ಕಡಿತ ಆಫರ್ ಗಳನ್ನು ವಸ್ತ್ರಗಳ ಖರೀದಿಗೆ ನೀಡಲಾಗುತ್ತಿದೆ.
ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 9,999 ರೂಪಾಯಿಗೆ ಯಾವುದೇ ಬ್ರ್ಯಾಂಡಡ್ ಬಟ್ಟೆಗಳನ್ನು ಖರೀದಿಸಿದರೇ ಬ್ರ್ಯಾಂಡ್ ನಲ್ಲಿ ಉಲ್ಲೇಖಿಸಿದ ಕೊಡುಗೆಗಳಲ್ಲದೇ ಜಯಲಕ್ಷ್ಮೀ ಸಿಲ್ಕ್ಸ್ ವತಿಯಿಂದ ರೂಪಾಯಿ. 2,999 ರೂ. ಬ್ಯಾಗ್ ಕೇವಲ 149 ರೂಪಾಯಿಗೆ ನಿಮ್ಮ ಕೈ ಸೇರಲಿದೆ. ಈ ಬಂಪರ್ ಆಫರ್ ನಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ತನ್ನ ಎಲ್ಲಾ ಗ್ರಾಹಕರಿಗಾಗಿ ಬ್ರ್ಯಾಂಡೆಡ್ ಒಳ ಉಡುಪುಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.


ಜಾಕಿ, ಗ್ಯಾಲಕ್ಸಿ, ವ್ಯಾನ್ ಹುಸೇನ್, ವಿಐಪಿ, ರಾಮ್ ರಾಜ್, ಜೂಲಿಯಟ್, ಮಾಚೋ, ಲಕ್ಸ್ ಕೋಝಿ ವಿ ಸ್ಟಾರ್ , ಸೂಪರ್ ಸೋಕ್ಸ್, ಕ್ರೋಕೊಡೈಲ್ ಮೊದಲಾದ ಬ್ರ್ಯಾಂಡೆಡ್ ನ 7000 ರೂ. ಹಾಗೂ ಅದಕ್ಕೂ ಹೆಚ್ಚಿನ ಮೊತ್ತದ ಖರೀದಿಗೆ 2,499 ರೂ ಮೌಲ್ಯದ ವೈಲ್ಡ್ ಕ್ರಾಫ್ಟ್ ಬ್ರ್ಯಾಂಡ್ ನ ಬ್ಯಾಕ್ ಪ್ಯಾಕ್ ಬ್ಯಾಗ್ ಕೇವಲ 99 ರೂಪಾಯಿಗೆ ನಿಮಗೆ ಸಿಗುತ್ತೆ.

ಜಯಲಕ್ಷ್ಮೀ ಸಿಲ್ಕ್ಸ್ ಕರ್ನಾಟಕ ಕರಾವಳಿಯ ಸುಪ್ರಸಿದ್ಧ ಬಟ್ಟೆ ಮಳಿಗೆ. ತಮ್ಮ ಲಕ್ಷಾಂತರ ಗ್ರಾಹಕರಿಗೆ ವರ್ಷಂಪ್ರತಿ ವಿನೂತನ ಮತ್ತು ಆಕರ್ಷಕ ಅಲ್ಲದೇ ಉತ್ತಮ ಗುಣಮಟ್ಟದ ಬಟ್ಟೆ ಬರೆಗಳನ್ನು ಅತೀ ಕಡಿಮೆ ದರದಲ್ಲಿ ನೀಡುತ್ತಾ ಬಂದಿದೆ.

ಹೀಗಾಗಿ ಗ್ರಾಹಕರು ತಡ ಮಾಡದೇ ಜಯಲಕ್ಷ್ಮೀ ಸಿಲ್ಕ್ಸ್ , ಉದ್ಯಾವರ ಇಲ್ಲಿಗೆ ಬಂದು ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಎಲ್ಲೂ ಇರದ, ಇನ್ನೆಂದು, ಇನ್ನಾವುದೇ ಮಳಿಗೆ ನೀಡದ ಅಮೋಘ ಆಫರ್ ಗಳನ್ನು ಜಯಲಕ್ಷ್ಮೀ ಸಿಲ್ಕ್ಸ್ ನೀಡುತ್ತಿದ್ದು ಗ್ರಾಹಕರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.

ನೆನಪಿಡಿ..ಬ್ರ್ಯಾಂಡ್ ಗಳಲ್ಲಿ ಉಲ್ಲೇಖಿಸಿದ ಆಫರ್ ಗಳೊಂದಿಗೆ ವಿಶೇಷವಾಗಿ ನಿಮ್ಮ ನೆಚ್ಚಿನ ಜಯಲಕ್ಷ್ಮೀ ಸಿಲ್ಕ್ಸ್ ಕೂಡ ಆಕರ್ಷಕ ಆಫರ್ ಗಳನ್ನು ನೀಡುತ್ತಿದೆ.

LATEST NEWS

ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

Published

on

ಕಾರ್ಕಳ : ಭಾರೀ ಸೆಕೆಯಿಂದಾಗಿ ಮನೆಯೊಳಗಡೆ ಮಲಗಲಾಗದೇ ಮನೆ ಟೆರೇಸ್ ಮೇಲೆ ಮಲಗಲು ಹೋಗಿದ್ದ ಶಿಕ್ಷಕ ಗಾಢ ನಿದ್ದೆಯಲ್ಲಿ ಉರುಳಿ ಬಿದ್ದು ಸಾ*ವನ್ನಪ್ಪಿದ ಘಟನೆ ಅಜೆಕಾರು ಕುಮೇರಿಯಲ್ಲಿ ನಡೆದಿದೆ. ಸುಂದರ ನಾಯ್ಕ(55) ಇಹಲೋಕ ತ್ಯಜಿಸಿದ ಶಿಕ್ಷಕ.

ಸುಂದರ ಅವರು ಆಶ್ರಯ ನಗರದ ನಿವಾಸಿಯಾಗಿದ್ದು, ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಸೆಕೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದ ಇವರನ್ನು ಮನೆ ಮಂದಿ ಬೆಳಿಗ್ಗೆ 6:30ಕ್ಕೆ ಎಬ್ಬಿಸಲೆಂದು ಹೋದಾಗ ಇವರು ಟೆರೇಸ್‌ನಿಂದ ಕೆಳಕ್ಕೆ ಬಿದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃ*ತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮೃತ ಶಿಕ್ಷಕ ಸುಂದರ್ ನಾಯ್ಕ್ ಪತ್ನಿ ಪುತ್ರಿಯರನ್ನು ಅಗಲಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ಗಳ ಹಗಲು ದರೋಡೆ..! ಏನಿದು ಘಟನೆ?

Published

on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸೇರಿದಂತೆ ಆಸುಪಾಸಿನ ಜನತೆಗೆ ಸರಕಾರಿ ಬಸ್ಸು ಸಿಬ್ಬಂದಿ ಹಗಲು ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಕ್ಕೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಡುವ ಸರಕಾರಿ ಬಸ್ ಸಿಬ್ಬಂದಿ ಹಗಲು ದರೋಡೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಏಪ್ರಿಲ್ 28ರಂದು ಹುಬ್ಬಳ್ಳಿ ಕಡೆಯ ದಂಪತಿ ಕುಕ್ಕೆ ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ‌ಗೆ ಹೋಗುವ ಸಲುವಾಗಿ ಬಿಎಂಟಿಸಿಯ KA 57 F 3463 ನಂಬರಿನ ಬಸ್ಸಿಗೆ ಹತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಬಸ್ ಹೋಗುತ್ತದೆ ಎಂದು ಬಸ್ಸಿನ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ಈ ಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಮತ್ತು ಬಸ್ಸಿನ ಸಿಬ್ಬಂದಿ ಹೇಳಿದ್ದನ್ನೇ ನಂಬಿದ ಹುಬ್ಬಳ್ಳಿ ಈ ದಂಪತಿ ಬೆಂಗಳೂರು ಮಹಾನಗರ ಪಾಲಿಕೆಯ ಡಿಪೋ ನಂಬರ್‌2ರ ಈ ಸರಕಾರಿ ಬಸ್ ಹತ್ತಿದ್ದಾರೆ. ಬಸ್ಸಿನ ನಿರ್ವಾಹಕ ಮಹಿಳೆಗೆ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಎಂಬುದಾಗಿ ಉಚಿತ ಟಿಕೆಟ್ ನೀಡಿದ್ದೂ, ಜೊತೆಯಲ್ಲಿ ಇದ್ದ ಪತಿ ಮತ್ತು ಮಕ್ಕಳಿಂದ 150 ರೂಪಾಯಿ ಹಣ ಪಡೆದು ಟಿಕೆಟ್ ನೀಡಿಲ್ಲ ಎನ್ನಲಾಗಿದೆ. ಇಷ್ಟು ಹಣ ಪಡೆದು ಇವರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕೈಕಂಬ ಎಂಬಲ್ಲಿ ಬಸ್ಸಿಂದ ಇಳಿಸಿ ಹೋಗಿದ್ದಾರೆ. ನಂತರದಲ್ಲಿ ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸುಮಾರು ಆರು ಕಿಲೋ ಮೀಟರ್ ದೂರ ನಡೆದು ಕುಕ್ಕೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣ ತಲುಪಿದ್ದಾರೆ. ನಂತರದಲ್ಲಿ ಸ್ಥಳೀಯರಲ್ಲಿ ತಮಗಾದ ಅನ್ಯಾಯದ ಬಗ್ಗೆ ಕಣ್ಣೀರಿಟ್ಟು ಇಂತಹ ಬಸ್ಸ್‌ಗಳ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

subrahmanya

ಇಂತಹ ಘಟನೆಗಳು ಈ ಭಾಗದಲ್ಲಿ ಪದೇಪದೇ ಮರುಕಳಿಸುತ್ತಿದ್ದೂ,ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಸಹಾ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮುಂದೆ ಓದಿ..;ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಆದುದರಿಂದ ಈ ಭಾಗದಲ್ಲಿ ನಡೆಯುವ ಈ ಹಗಲು ದರೋಡೆಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ರೈಲು ಬಳಕೆದಾರರ ವೇದಿಕೆ ನೆಟ್ಟಣ ಸಂಘವು ಆಗ್ರಹಿಸಿದೆ.

Continue Reading

LATEST NEWS

ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?

Published

on

ಮಹಾರಷ್ಟ್ರ: ಅಪ್ರಾಪ್ತ ಬಾಲಕಿಯೊಬ್ಬಳು ಎರಡು ಬಾರಿ ಅಕ್ರಮ ಗರ್ಭ ಧರಿಸಿ ಇದೀಗ ತನ್ನ ಪೋಷಕರ ವಿರುದ್ಧ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಷ್ಟ್ರದಲ್ಲಿ ನಡೆದಿದೆ. ಹೌದು, 17 ವರ್ಷದ ಬಾಲಕಿಯೊಬ್ಬಳು ಬೇರೆ ಬೇರೆ ಯುವಕರಿಂದ ಎರಡು ಬಾರಿ ಗರ್ಭ ಧರಿಸಿದ್ದಾಳೆ.

pregnant

ಮೊದಲಾಗಿ ಅಕ್ರಮ ಸಂಬಂಧ ಹೊಂದಿದ್ದ ಪುರುಷನಿಂದ ಗರ್ಭ ಧರಿಸಿದ್ದಳು. ಈ ಮಗುವನ್ನು ಪೋಷಕರು ತನಗರಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಬಾಲಕಿ ಪೋಷಕರು ಸೇರಿದಂತೆ ಶಿಕ್ಷಕರು, ವಕೀಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮುಂದೆ ಓದಿ..; 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ಪೋಷಕರು ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ವಕೀಲರ ನೇತೃತ್ವದಲ್ಲಿ ಕೆಲವು ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದ್ದಾರೆ.  7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಿದ್ದು, ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಇನ್ನು ಹೆರಿಗೆ ಆದ ಆರು ತಿಂಗಳ ಬಳಿಕ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದ್ದಾಳೆ. ಈ ವೇಳೆ ಆತ ಅವಳನ್ನು ವರಿಸಳು ಸಿದ್ಧನಾಗಿದ್ದೇನೆ ಎಂದು ಹೇಳುತ್ತಾನೆ. ಆದರೆ ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. , ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆ ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತಾಗಿ ಪ್ರಶ್ನಿಸಿದಕ್ಕೆ ಅಜ್ಜಿ ಮನೆಗೆ ಕಳುಹಿಸಿದ್ದಾರೆ. ಇನ್ನು ಅಲ್ಲಿ ಈ ಬಾಲಕಿಗೆ 23ವರ್ಷದ ಯುವಕನ ಜೊತೆ ಮದುವೆ ಫಿಕ್ಸ್ ಮಾಡಲಾಗಿತ್ತು.  ಈ ವೇಳೆ ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಾಳೆ. ಬಳಿಕ ಬಾಲಕಿ ಮತ್ತೊಮ್ಮೆ ಗರ್ಭ ಧರಿಸುತ್ತಾಳೆ. ಅಷ್ಟಾಗಲೇ ವಿವಾಹ ನಿಶ್ಚಯವಾಗಿದ್ದ ಹುಡುಗನಿಗೆ ಇವಳ ಮೊದಲ ಮಗುವಿನ ಕುರಿತಾಗಿ ತಿಳಿದು ಇವಳನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಬಳಿಕ ಅಜ್ಜಿ ಮನೆಯಿಂದ ಹೊರಟು ಬರ್ತಾಳೆ. ಪರಿಚಯಸ್ಥರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಪೋಷಕರು ಎರಡನೇ ಮಗವನ್ನೂ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದು ಈ ನಿಟ್ಟಿನಲ್ಲಿ ಬಾಲಕಿ ಪೊಲೀಸ್ ಮೆಟ್ಟಿಲೇರಿದ್ದಾಳೆ. ಇನ್ನು ಪೊಲೀಸರು ಮಾರಾಟ ಮಾಡಿದ್ದ ಹೆಣ್ಣು ಮಗುವನ್ನು ಹುಡುಕಲು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

 

 

Continue Reading

LATEST NEWS

Trending