Connect with us

  FILM

  ಬಿಗ್ ಬಾಸ್ ರಾಪರ್ ಚಂದನ್ ಶೆಟ್ಟಿ – ನಿವೇದಿತಾ ದಂಪತಿ ಮಲ್ಪೆ ಬೀಚಲ್ಲಿ ನ್ಯೂ ಇಯರ್ ಸೆಲೆಬ್ರೇಷನ್..!

  Published

  on

  ಉಡುಪಿ : ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಮಲ್ಪೆ ಕಡಲ ಕಿನಾರೆಯಲ್ಲಿ ಸಾಕಷ್ಟು ಜನ ಸೇರಿದ್ದಾರೆ.ಕಡಲ ಕಿನಾರೆಯಲ್ಲಿ ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

  ರಾತ್ರಿ ಹತ್ತರ ಬಳಿಕ ಕರ್ಪ್ಯೂ ಇರುವ ಕಾರಣ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದರು.ಇದೇ ವೇಳೆ ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಉಡುಪಿಗೆ ಆಗಮಿಸಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

  ಮಲ್ಪೆ ಕಡಲಕಿನಾರೆಯಲ್ಲಿ ಚಂದನ್ ನಿವೇದಿತಾ 2021 ಕೊನೆ ದಿನವನ್ನು ಎಂಜಾಯ್ ಮಾಡುತ್ತಿದ್ದು, ಇಷ್ಟದ ಸೀ ಪುಡ್ ಸವಿದರು.‌ ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ಇಷ್ಟ. ಹೀಗಾಗಿ 2021 ನ್ನು ಬಿಳ್ಕೊಟ್ಟು 2022 ನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡೋಕೆ ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ ಎಂದು ತಮ್ಮ ಸಂತಸ ಹಂಚಿಕೊಂಡರು.

   

  FILM

  ಕನ್ನಡತಿ ಅದಿತಿ ಪ್ರಭುದೇವ ಮತ್ತೆ ಕಿರುತೆರೆಗೆ..! ಯಾವ ಶೋ?

  Published

  on

  ಬೆಂಗಳೂರು: ಕನ್ನಡದ ಹೆಮ್ಮೆಯ ನಟಿ ಅದಿತಿ ಪ್ರಭುದೇವ.. ಅಪ್ಪಟ ಕನ್ನಡತಿಯಾಗಿರುವ ಅದಿತಿ ಯಾಯಿಯಾದ ಬಳಿಕ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ಬಹುದೊಡ್ಡ ಬ್ರೇಕ್ ಬಳಿಕ ಅದಿತಿ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ.

  adithi prabhudeva-reality show

  ಹೌದು, ಕಿರುತೆರೆಯ ದಂಪತಿಗಾಗಿ ಇರುವ ರಿಯಾಲಿಟಿ ಶೋ ರಾಜಾ ರಾಣಿ ಯಲ್ಲಿ ಅದಿತಿ ಕಾಣಿಸಿಕೊಳ್ಳಲಿದ್ದಾರೆ.  ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಮುಗಿಸಿದೆ. ಚಿತ್ರ ನಟಿ ತಾರಾ ಹಾಗೂ ಸೃಜನ್‌ ಲೋಕೇಶ್ ಶೋ ನ ತೀರ್ಪುಗಾರರಾಗಿ ಮೋಡಿ ಮಾಡಿದ್ದರು. ಇದೀಗ ಇವರಿಬ್ಬರಿಗೂ ಅದಿತಿ ಪ್ರಭುದೇವ ಜೊತೆಯಾಗಲಿದ್ದಾರೆ. ನಿರೂಪಕಿ ಅನುಪಮಾ ಎರಡೂ ಸೀಸನ್‌ಗಳನ್ನು ನಿರೂಪಣೆ ಮಾಡಿದ್ದರು. ಇದೀಗ ‘ರಾಜ ರಾಣಿ ರೀಲೋಡೆಡ್’ ಎಂಬ ಶೀರ್ಷಿಕೆಯಲ್ಲಿ ಮೂರನೇ ಸೀಸನ್ ಆರಂಭವಾಗಲಿದ್ದು, ಇದರಲ್ಲಿ ಅದಿತಿ ಪ್ರಭುದೇವ ಸೇರಿಕೊಳ್ಳಲಿದ್ದಾರೆ. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ನಟಿ ಅದಿತಿ ಪ್ರಭುದೇವ ಸಿಹಿ ಸುದ್ದಿ ನೀಡಿದ್ದಾರೆ. ‘ರಾಜಾ ರಾಣಿ ಸೀಸನ್‌ 1’ ರಲ್ಲಿ ನೇಹಾ ಗೌಡ ಹಾಗೂ ಚಂದನ್‌ ವಿನ್ನರ್ಸ್‌ ಆಗಿದ್ದರು. ಸೀಸನ್-2 ರಲ್ಲಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ವಿಜೇತರಾಗಿದ್ದರು.

  Read More..;  “ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ” ಎಂದ ನಟಿ ಅದಿತಿ ಪ್ರಭುದೇವ; ಏನದು ಗೊತ್ತಾ!? 

  ಇನ್ನೂ ಅದಿತಿ ಪ್ರಭುದೇವ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ಸದಾ ಒಂದಲ್ಲ ಒಂದು ಆರೋಗ್ಯಕರ  ಮಾಹಿತಿ ನೀಡುತ್ತಿದ್ದಾರೆ. ಅಡುಗೆ, ಆಯುರ್ವೇದ, ಹೀಗೆ ಆರೋಗ್ಯಕರ ಮಾಹಿತಿಯನ್ನು ನೀಡುವುದರೊಂದಿಗೆ ಜನರಿಗೆ ಇನ್ನೂ ಹತ್ತಿರವಾಗಿದ್ದಾರೆ. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಭುದೇವ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಮೀಸಲಿಟ್ಟಿದ್ದರು. ಇದೀಗ ಮತ್ತೆ ವೃತ್ತಿ ಜೀವನ ನಡೆಗೆ ಹೆಚ್ಚು ಫೋಕಸ್ ಮಾಡಿರುವ ಇವರು ‘ರಾಜ ರಾಣಿ ರೀಲೋಡ್’ ಸೀಸನ್ ಮೂಲಕ ಕಿರುತೆರೆ ಗೆ ವಾಪಸ್ ಆಗುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಹೊಸ ಸೀಸನ್ ಶುರುವಾಗಲಿದ್ದು ಅದಿತಿ ಪ್ರಭುದೇವ ಅವರು ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ.

  Continue Reading

  FILM

  ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರನಡೆದ ನಟಿ ನೇತ್ರಾ ಜಾಧವ್; ತೆಲಂಗಾಣದಲ್ಲಿ ಯಕ್ಷಗಾನ ಮೂಲಕ ಗಮನ ಸೆಳೆದ ನಟಿ!

  Published

  on

  ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಆರಂಭದಿಂದಲೂ ಜನಪ್ರಿಯವಾಗಿದೆ. ಹಿರಿಯ ನಟಿ ಸುಧಾರಾಣಿ ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಜಿತ್ ಹಂದೆ, ಚಂದನ ರಾಘವೇಂದ್ರ, ಲಾವಣ್ಯ ಮೊದಲಾದವರು ಧಾರಾವಾಹಿಯಲ್ಲಿ ಪಾತ್ರವಾಗಿದ್ದಾರೆ. ಧಾರಾವಾಹಿ ಅಂದ್ಮೇಲೆ ವಿಲನ್ ಇರಲೇಬೇಕಲಾ…ನಾಯಕಿ ಹೇಗೆ ಧಾರಾವಾಹಿಗಳಲ್ಲಿ ಮಿಂಚುತ್ತಾರೋ ಖಳನಾಯಕಿಯೂ ಅಷ್ಟೇ ಖ್ಯಾತರಾಗುತ್ತಾರೆ. ಹಾಗೆಯೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ‘ಶಾರ್ವರಿ’ ಪಾತ್ರ ಮಿಂಚುತ್ತಿದೆ.


  ‘ಶಾರ್ವರಿ’ ಪಾತ್ರದಲ್ಲಿ ನಟಿಸಿದ್ದ ನೇತ್ರಾ ಜಾಧವ್ ಗಮನ ಸೆಳೆದಿದ್ದರು. ಆದರೆ, ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ತನ್ನ ಅಭಿನಯದಿಂದ ಗಮನ ಸೆಳೆಯುತ್ತಿದ್ದ ಸಹಜ ಸುಂದರಿ ನೇತ್ರಾ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜಾಗಕ್ಕೆ ಸಪ್ನ ದೀಕ್ಷಿತ್ ಆಗಮಿಸಿದ್ದಾರೆ.

  ಗಮನ ಸೆಳೆದ ಯಕ್ಷಗಾನ ನೃತ್ಯ:


  ಶ್ರೀರಸ್ತು ಶುಭಮಸ್ತು ಧಾರಾವಾಹಿಯಿಂದ ಹೊರಬಂದ ನೇತ್ರಾ ತೆಲಂಗಾಣದ ಶೋವೊಂದರಲ್ಲಿ ಮಿಂಚಿದ್ದಾರೆ. ಅವರು ಯಕ್ಷಗಾನ ನೃತ್ಯ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನೃತ್ಯದ ವೀಡಿಯೋ ಹಂಚಿಕೊಂಡಿದ್ದಾರೆ. ತೆಲಂಗಾಣದಲ್ಲಿ ಕರ್ನಾಟಕದ ನೃತ್ಯ ಶೈಲಿಯನ್ನು ಪ್ರದರ್ಶನ ಮಾಡಲು ಬಹಳ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ : ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

  ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ನಟಿಸಿದ್ದಾರೆ. ತೆಲುಗು ಧಾರಾವಾಹಿ ‘ರಾವೋಯಿ ಚಂದಮಾಮ’ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಗಮನ ಸೆಳೆದಿದ್ದಾರೆ.

  ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೊದಲು ನೇತ್ರಾ ‘ರಥಸಪ್ತಮಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಸುಧಾರಾಣಿಯವರ ತಂಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ವಿರುದ್ಧ ಖಳನಾಯಕಿ ಪಾತ್ರದಲ್ಲಿ ಅವರು ಜನಮನ ಗೆದ್ದಿದ್ದರು.

  ಇದೀಗ ಧಾರಾವಾಹಿ ತೊರೆದಿದ್ದು, ಅವರು ಮುಂದೆ ಧಾರಾವಾಹಿಯಲ್ಲಿ ನಟಿಸುತ್ತಾರಾ? ಅವರ ಮುಂದಿನ ಯೋಜನೆ ಏನು? ಅನ್ನೋದನ್ನು ಕಾದು ನೋಡಬೇಕಿದೆ.

  Continue Reading

  FILM

  ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಸ್ವಾಗತ್ ಬಾಬು ನಿಧ*ನ

  Published

  on

  ಬೆಂಗಳೂರು : ಕನ್ನಡದ ಖ್ಯಾತ ನಿರ್ಮಾಪಕ, ವಿತರಕ ಸ್ವಾಗತ್‌ ಬಾಬು ಇಹಲೋಕ ತ್ಯಜಿಸಿದ್ದಾರೆ. ಅವರು ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

  ಅವರು ಹಲವು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅಲ್ಲದೇ, ಅವರು ವಿತರಣೆ ಮಾಡಿದ ಸಿನಿಮಾಗಳು ಗಮನ ಸೆಳೆದಿವೆ. ಸ್ವಾಗತ್‌ ಬಾಬು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

  ಇದನ್ನೂ ಓದಿ : ಪೆನ್ ಡ್ರೈವ್ ಕೇಸ್: ಕೊನೆಗೂ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ! ಪ್ರಕರಣದ ಬಗ್ಗೆ ಹೇಳಿದ್ದೇನು?

  ‘ಚಂದ್ರಮುಖಿ ಪ್ರಾಣಸಖಿ’, ‘ಶ್ರೀರಸ್ತು ಶುಭಮಸ್ತು’, ‘ಸ್ಮೈಲ್’ ಮುಂತಾದ ಸಿನಿಮಾಗಳಿಗೆ ಅವರು ಬಂಡವಾಳ ಹಾಕಿದ್ದರು. ಈ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದವು.

  Continue Reading

  LATEST NEWS

  Trending