Connect with us

LATEST NEWS

ಭಟ್ಕಳದಲ್ಲಿ ಅಲೆಯ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಪಲ್ಟಿ : 7 ಮೀನುಗಾರರ ರಕ್ಷಣೆ

Published

on

ಭಟ್ಕಳ: ಉತ್ತರ ಕನ್ನಡದ ಮುರುಡೇಶ್ವರದ ಅರಬ್ಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಸ್ಸಾಗುವ ವೇಳೆ ದೋಣಿ ಸಮುದ್ರ ಅಲೆಗಳಿಗೆ ಸಿಕ್ಕಿ ಮಗುಚಿ ಬಿದ್ದ ಘಟನೆ ಸಂಭವಿಸಿದೆ. ಈ ಸಂದರ್ಭ ದೋಣಿಯಲ್ಲಿ 7 ಜನ ಮೀನುಗಾರರಿದ್ದು, ಎಲ್ಲಾ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಜನಾರ್ದನ ಪುರಸು ಹರಿಕಾಂತ ಗದ್ದೆಮನೆ ಎಂಬವರಿಗೆ ಸೇರಿದ ಜಲಗಂಗಾ ಗಿಲ್ ನೆಟ್ ದೋಣಿ ಮೀನುಗಾರಿಕೆ ತೆರಳಿತ್ತು.
ಮೀನುಗಾರಿಕೆ ಮುಗಿಸಿ ತಡದತ್ತ ಮರಳಿ ಬರುವ ವೇಳೆ ಸಮುದ್ರದ ಅಲೆಯ ರಭಸಕ್ಕೆ ದೋಣಿ ಮಗುಚಿದೆ.

ತಕ್ಷಣವೇ ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಹಾರಿ, ಮಗುಚಿದ ದೋಣಿಯ ಮೇಲೆ ಕುಳಿತುಕೊಂಡು ಸಹಾಯಕ್ಕಾಗಿ ಅಂಗಲಾಚಿದರು.

ತಕ್ಷಣವೇ ಕಾರ್ಯಪ್ರವೃತ್ತರಾದ ದಡದಲ್ಲಿದ್ದ ಇತರೆ ಮೀನುಗಾರರು, ಬೇರೊಂದು ಬೋಟ್ ಮೂಲಕ ತೆರಳಿ ಸಂಕಷ್ಟದಲ್ಲಿದ್ದ ಮೀನುಗಾರರ ಪ್ರಾಣ ರಕ್ಷಣೆ ಮಾಡಿದ್ದಾರೆ.

ಅಲೆಯ ಅಬ್ಬರಕ್ಕೆ ಸಿಲುಕಿದ ದೋಣಿ ಎಂಜಿನ್ ಹಾಗೂ ಮೀನುಗಾರಿಕೆಗೆ ಬಳಸುವ ಬಲೆ ಸೇರಿ ಸುಮಾರು 1,50,000 ರೂ. ಹಾನಿಯಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

Published

on

ಮಂಗಳೂರು : ‘ಬಿರುವೆರ ಕುಡ್ಲ‘ದ ಮುಖಂಡ ಉದಯ ಪೂಜಾರಿಯನ್ನು ತುಳಿಯಲು ಹೋಗಿ ಬಿಜೆಪಿ ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡಿತಾ ಇಂತಹ ಒಂದು ಪ್ರಶ್ನೆ ಸದ್ಯ ಸಾಮಾಜಿಕ‌ ಜಾಲತಾಣದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಸಲಿಯತ್ತು..!

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಾರಾಯಣ ಗುರು ವೃತ್ತವನ್ನು ನಿರ್ಮಾಣ ಮಾಡಿದ್ದು ‘ಬಿರುವೆರ ಕುಡ್ಲ‘ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತೀಶ್ ಕುಂಪಲ ಅವರ ಈ ಹೇಳಿಕೆ ಈಗ ‘ಬಿರುವೆರ ಕುಡ್ಲ’ದ ಮುಖಂಡ ಉದಯ ಪೂಜಾರಿ ಅವರಲ್ಲೂ ಅಸಮಾಧಾನ ಮೂಡಿಸಿದೆ.

ನಾರಾಯಣ ಗುರು ವೃತ್ತ

ಸತೀಶ್ ಕುಂಪಲ ಹೇಳಿದ್ದೇನು ?

“ನಾರಾಯಣ ಗುರು ವೃತ್ತ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಸಂಘರ್ಷ ಆಗಿತ್ತು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ದಿವಾಕರ್ ವೃತ್ತ ನಿರ್ಮಾಣದ ವಿಚಾರ ಪ್ರಸ್ತಾವಿಸಿದ್ದರು. ಮೇಯರ್ ಆಗಿದ್ದ ಪ್ರೇಮಾನಂದ ಶೆಟ್ಟಿ, ವೃತ್ತ ನಿರ್ಮಾಣದ ಬಗ್ಗೆ ಮೂಡಾದಿಂದ ಅನುದಾನ ಕೊಡಿಸಿದ್ದರು. ಮೂಡಾದ ಅಂದಿನ ಅಧ್ಯಕ್ಷರಾಗಿದ್ದ ರವಿಶಂಕರ್ ಮಿಜಾರ್ ಅನುದಾನ ನೀಡಿದ್ದರು. ಇನ್ನು ವೃತ್ತ ನಿರ್ಮಾಣದ ಬಗ್ಗೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿ ವಹಿಸಿದ್ದರು. ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದು ಇವರೆಲ್ಲರಿಗೂ ಸಾರ್ಥಕತೆ ತರಿಸಿದೆ” ಎಂದು ಹೇಳುವ ಮೂಲಕ ಇಲ್ಲಿ ‘ಬಿರುವೆರ ಕುಡ್ಲ‘ದ ಪಾತ್ರ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮೋದಿ ಅಭಿಮಾನಿ ಉದಯ ಪೂಜಾರಿ ..!

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಉದಯ ಪೂಜಾರಿ ಈ ಬಾರಿ ನ್ಯೂಟ್ರಲ್ ಆಗಿದ್ದರು. ಅಸಲಿಗೆ ನಳಿನ್ ಕುಮಾರ್ ಅವರ ಆಪ್ತರಾಗಿ, ಬಿಜೆಪಿಯ ಬೆಂಬಲಿಗರಾಗಿ, ಮೋದಿಯ ಅಭಿಮಾನಿಯೂ ಆಗಿದ್ದರು.

ನಳಿನ್ ಹಾಗೂ ವೇದವ್ಯಾಸ್ ಜೊತೆ ಉದಯ ಪೂಜಾರಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ತಮ್ಮದೇ ಸಮೂದಾಯದ ರಕ್ಷಿತ್ ಶಿವರಾಂ ಸ್ಪರ್ಧೆ ಮಾಡಿದ್ರೂ ಹರೀಶ್ ಪೂಂಜಾ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪಕ್ಷ ಹಾಗೂ ಮೋದಿಯ ಅಭಿಮಾನಿಯಾಗಿ ಜೊತೆಗೆ ತನ್ನ ಸಮಾಜದ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.

ಸಮಾಜಕ್ಕೆ ಅಂಬ್ಯಲೆನ್ಸ್ ಹಸ್ತಾಂತರ

ಆದರೆ ‘ಬಿರುವೆರ ಕುಡ್ಲ‘ದ ಉದಯ ಪೂಜಾರಿ ಸದ್ಯ ಬಿಜೆಪಿಗೆ ಬೇಡದವರಾಗಿದ್ದಾರೆ. ಆದರೆ ‘ಬಿರುವೆರ ಕುಡ್ಲ‘ ಸಂಘಟನೆಯ ಮೂಲಕ ಸಾಕಷ್ಟು ಬಡ ಜನರಿಗೆ ಸಹಾಯ ಮಾಡಿದ ಉದಯ ಪೂಜಾರಿ ಬೆನ್ನ ಹಿಂದೆ ಸಾವಿರಾರು ಬಿಲ್ಲವ ಯುವಕರ ಪಡೆ ಇದೆ ಅನ್ನೋದು ಬಿಜೆಪಿ ಮರೆತಿದೆ. ಆದರೆ ಇದು ರಾಜಕೀಯವಾಗಿ ಉದಯ ಪೂಜಾರಿ ಬೆಳೆಯಬಹುದು ಎಂಬ ಕಾರಣಕ್ಕೆ ಮೋದಿ ಅವರ ಭೇಟಿಯಿಂದ ಅವರನ್ನು ದೂರ ಇರಿಸಲಾಗಿತ್ತು ಅನ್ನೋದು ಈಗ ರಾಜಕೀಯವಾಗಿ ಚರ್ಚಿತದಲ್ಲಿದೆ.

ಸಮಾಜಿಕ ಜಾಲತಾಣದಲ್ಲಿ ಆಕ್ರೋಶ…!

ಉದಯ ಪೂಜಾರಿಯನ್ನು ತುಳಿಯಲು ಬಿಜೆಪಿ ನಾರಾಯಣ ಗುರುಗಳನ್ನೇಹೈಜಾಕ್ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡಿತಾ ಇದೆ. ಬಿರುವೆರ ಕುಡ್ಲದ ಶ್ರಮ ಹಾಗೂ ಕೊಡುಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಸಾಧನೆ ಅಂದಿದ್ದಾರೆ. ಹೇಗೆ ಹಿಂದುತ್ವವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಂಡಿದೋ ಅದೇ ರೀತಿ ಈಗ ಬಿಲ್ಲವ ಸಮೂದಾಯವನ್ನು ಬಳಸಲು ಹೊರಟಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಅಂದಿದ್ದ ನಾರಾಯಣಗುರುಗಳನ್ನು ಓಟಿಗಾಗಿ ಹೈಜಾಕ್ ಮಾಡಲು ಹೊರಟಿದೆ ಎಂದು ಚರ್ಚೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರವೀಣ್ ನೆಟ್ಟಾರು ತಾಯಿಯನ್ನು ಕರೆತಂದು ಪ್ರಧಾನಿಗೆ ಪರಿಚಯಿಸಿ ಬಿಲ್ಲವರನ್ನು ಓಲೈಸಲಾಗಿದೆ.  ಮತ್ತೊಂದೆಡೆ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಿ ಬಿಲ್ಲವರನ್ನು ಖುಷಿ ಪಡಿಸಿದೆ. ಆದರೆ ಬೆಳೆಯುತ್ತಿದ್ದ ಬಿಲ್ಲವ ನಾಯಕನನ್ನು  ಸೈಲೆಂಟ್ ಆಗಿ ಚಿವುಟಿ ಹಾಕುವ ಎಲ್ಲಾ ಪ್ಲ್ಯಾನ್ ಬಿಜೆಪಿಯಿಂದ ಆಗಿದೆ ಅನ್ನೋ ವಿಚಾರ ಚರ್ಚೆ ಆಗುತ್ತಿದೆ.

 

Continue Reading

DAKSHINA KANNADA

ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!

Published

on

ಮಂಗಳೂರು : ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ(16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರಾದ್ರೂ ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ.  ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಿ ಅವರಿಗೆ ಅಪರೂಪಕ್ಕೆ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಅವರ ಈ ಧಿಡೀರ್ ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

 

 

Continue Reading

LATEST NEWS

ಈ ಬೀಚ್‌ಗಳಿಗೆ ಬಟ್ಟೆ ಧರಿಸಿ ಹೋಗುವಂತಿಲ್ಲ…!

Published

on

ಮಂಗಳೂರು : ಸುಂದರವಾದ ಹಾಗೂ ಪ್ರವಾಸಿಗರನ್ನು ಸೆಳೆಯುವ ಬೀಚ್‌ಗಳು ಯಾವುದು ಅಂತ ಕೇಳಿದ್ರೆ ನಮ್ಮಲ್ಲಿ ನೆನಪಾಗೋದು ಗೋವಾದ ಬೀಚ್‌ಗಳು. ವಿದೇಶಿಯರು ಹೆಚ್ಚಾಗಿ ಬರೋ ಗೋವಾ , ಗೋಕರ್ಣ ಮೊದಲಾ ಬೀಚ್‌ ಹೋದವರಿಗೆ ಅಲ್ಲಿ ಬಿಕಿನಿಯಲ್ಲಿ ಕಾಣಿಸೋ ವಿದೇಶಿ ಮಹಿಳೆಯರು ಗಮನಸೆಳೆಯುತ್ತಾರೆ. ಆದ್ರೆ ಅಂತಹ ಬೀಚ್‌ಗಳ ಸಾಲಿನಲ್ಲಿ ಬರೋ ಕೆಲ ಬೀಚ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಬಟ್ಟೆನೇ ಹಾಕದೆ ತಿರುಗಾಡ್ತಾರೆ. ಇಂತಹ ಬೀಚ್‌ಗಳು ಬತ್ತಲೆ ಬೀಚ್ ಅಂತಾನೇ ಫೇಮಸ್‌. ಅಂತಹ ಬೀಚ್‌ಗಳು ಯಾವುದು ಅನ್ನೋ ಡಿಟೈಲ್ ಇಲ್ಲಿದೆ.

ಸಂಪೂರ್ಣ ಬೆತ್ತಲಾಗಿ ಜನರು  ಸೆಲೆಬ್ರೇಟ್ ಮಾಡೋ ಸಾಕಷ್ಟು ಉತ್ಸವಗಳ ವಿದೇಶಗಳಲ್ಲಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಬೀಚ್‌ಗಳಲ್ಲೂ ಬೆತ್ತಲಾಗಿ ತಿರುಗಾಡೋ ಸಂಸ್ಕೃತಿಯನ್ನು ವಿದೇಶದ ಹಲವು ದೇಶಗಳಲ್ಲಿ ನಾವು ಕಾಣಬಹುದಾಗಿದೆ. ಅಂತಹ ಬೀಚ್‌ಗಳ ಲಿಸ್ಟ್ ಇಲ್ಲಿದೆ.

1. ಲುಕಾಟ್ ಬೀಚ್:

ಇಲ್ಲಿ ಬಟ್ಟೆ ಧರಿಸದೇ ಪೂರ್ಣವಾಗಿ ಬೆತ್ತಲೆ ದೇಹದಿಂದ ಅಲ್ಲಿಯ ಪ್ರಕೃತಿಯನ್ನು ಜನರು ಆನಂದಿಸುತ್ತಾರೆ. ಈ  ಬೀಚ್ ಫ್ರಾನ್ಸ್‌ ದೇಶದಲ್ಲಿದ್ದು ಈ ಬೀಚ್‌ ಹೆಸರು ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಈ ಕಡಲತೀರದಲ್ಲಿ ನಗ್ನತೆಗೆ ಯಾವುದೇ ಮಿತಿ ಇಲ್ಲ. ಇಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು ಮತ್ತು ಯಾರೂ ಯಾರನ್ನೂ ಗಮನಿಸೋದಿಲ್ಲ ಅನ್ನೋದೇ ವಿಶೇಷ.

2. ವಲಾಲ್ಟಾ ಬೀಚ್:

ಕ್ರೊಯೇಷಿಯಾದ ವಲಾಲ್ಟಾ ತುಂಬಾ ಸ್ವಚ್ಛವಾದ ಕಡಲತೀರವಾಗಿದ್ದು,ಈ ಬೀಚ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್ ಅಲ್ಲದೆ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಬಟ್ಟೆ ಇಲ್ಲದೆ ಸಮುದ್ರದಲ್ಲಿ ಮೋಜು ಮಸ್ತಿ ಮಾಡುತ್ತಾರೆ.

3. ಬೆಲ್ಲೆವ್ಯೂ ಬೀಚ್:

ಡೆನ್ಮಾರ್ಕ್‌ನ ಬೆಲ್ಲೆವ್ಯೂ ಬೀಚ್ ಪ್ರಪಂಚದ ಪ್ರಸಿದ್ಧ ಬೆತ್ತಲೆ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಯಾರೂ ಹೇಗೆ ಬೇಕಾದ್ರೂ ಇರಬಹುದು. ಆದರೆ ಅನ್ಯರಿಗೆ ಯಾವುದೇ ತೊಂದರೆ ಮಾಡುವಂತಿಲ್ಲ. ಇಲ್ಲಿಯ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

4. ಕಾರ್ನಿಗ್ಲಿಯಾ ಬೀಚ್:

ಇಟಲಿಯು ಕಾರ್ನಿಗ್ಲಿಯಾ ಬೀಚ್ ಕಡಲತೀರಗಳಿಗೆ ಪ್ರಸಿದ್ಧಿಯಾಗಿದೆ. ಈ ಕಡಲತೀರವನ್ನು ತಲುಪಲು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸ್ನಾನ ಮಾಡುವುದನ್ನು ಕಾಣಬಹುದು.

5. ಕೇಪ್ ಡಿ ಎಗ್ಡೆ ಬೀಚ್:

ಫ್ರಾನ್ಸ್‌ನ ಕ್ಯಾಪ್ ಡಿ’ಆಗ್ಡೆ ಬೀಚ್‌ಗೆ ಬಟ್ಟೆ ಇಲ್ಲದೆ ಹೋಗಬೇಕು. ಬೆತ್ತಲೆಯಾಗಿ ಹೋಗಿ ಅಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ನಿಮ್ಮ ಮೈಮೇಲೆ ಬಟ್ಟೆ ಇದ್ದರೆ ಬೀಚ್ ಗಾರ್ಡ್ ಗಳು ನಿಮ್ಮನ್ನು ತಡೆಯಬಹುದು. ಆದ್ದರಿಂದ ನೀವು ವಿವಸ್ತ್ರಗೊಳ್ಳಬೇಕು.

Continue Reading

LATEST NEWS

Trending